belagavi news:
ಐಪಿಎಲ್ 2026ರ 48ನೇ ಪಂದ್ಯವು ಇಂದು ದೆಹಲಿ ಕ್ಯಾಪಿಟಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಈ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡು ತಂಡಗಳಿಗೆ ಪ್ಲೇ ಆಫ್ ಅವಕಾಶಗಳನ್ನು ಬಲಪಡಿಸಲು ಅತ್ಯಂತ ನಿರ್ಣಾಯಕ ವಾಗಿದೆ.
ಪ್ರಸ್ತುತ ಎರಡು ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದು ಗೆಲುವು ಪಡೆದ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆಯಲಿದೆ. ಸಿಎಸ್ಕೆ ಗೆದ್ದರೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ, ದೆಹಲಿಗೆದ್ದರೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ, ದೆಹಲಿ ಗೆದ್ದರೆ ಆರನೇ ಸ್ಥಾನಕ್ಕೆ ಏರುತ್ತದೆ. ಎರಡು ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಉತ್ತಮ ಫಾರ್ಮ್ ನಲ್ಲಿವೆ.
DC Vs CSK ಪಿಚ್ ವರದಿ: ದೆಹಲಿ ಮತ್ತು ಚೆನ್ನೈ ನಡುವಿನ ಇಂದು ನಡೆಯಲಿರುವ ಪಂದ್ಯ ಅರುಣ್ ಜಟ್ಲಿ ಕ್ರೀಡಾಂಗಣದ ನಾಲ್ಕನೇ ಪಿಚನಲ್ಲಿ ನಡೆಯಲಿದೆ. ಈ ಋತು ವಿನಲ್ಲಿ ಈ ಪಿಚ್ಚಿನಲ್ಲಿ ಯಾವುದೇ ಪಂದ್ಯಗಳು ಆಡಲಾಗಿಲ್ಲ. ಕಳೆದ ಎರಡು ಋತುಗಳಲ್ಲಿ ಇಲ್ಲಿ 5 ಪಂದ್ಯಗಳು ನಡೆದಿದ್ದು, ಮೊದಲ ಬ್ಯಾಟಿಂಗ್ ಮಾಡಿದ ತಂಡವು ಮೂರು ಬಾರಿ ಗೆಲುವು ಸಾಧಿಸಿದೆ. ಈ ಪಿಚ್ ಬ್ಯಾಟಿಂಗ್ ಸ್ನೇಹಿತ ಇದ್ದು,200+ ರನ್ ಸ್ಕೋರ್ ಗಳಿಗೂ ಅವಕಾಶ ನೀಡಬಹುದಾಗಿದೆ.
ಮುಖಾಮುಖಿ ದಾಖಲೆ: ಐಪಿಎಲ್ 2026 ರ ಈ ಸೀಸನ್ ನಲ್ಲಿ ದೆಹಲಿ ಕ್ಯಾಪಿಟಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ. ಈ ಋತುವಿನಲ್ಲಿ ಚೆನ್ನೈನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಸಿಎಸ್ಕೆ 23 ರನ್ ಗಳಿಂದ ಜಯಶಾಲಿಯಾಯಿತು. ಎರಡು ತಂಡಗಳ ನಡುವೆ ಒಟ್ಟು 32 ಪಂದ್ಯಗಳು ನಡೆದಿದ್ದು, ಅದರಲ್ಲಿ ಚೆನ್ನೈ 20 ಪಂದ್ಯಗಳನ್ನು ಗೆದ್ದಿದ್ದು, ದೆಹಲಿ 12 ಬಾರಿ ಜಯ ಸಾಧಿಸಿದೆ. ಕಳೆದ 5 ಮುಖಾಮುಖಿ ಪಂದ್ಯಗಳಲ್ಲಿ ಸಿಎಸ್ಕೆ ಮೂರು ಬಾರಿ ಗೆಲುವು ಸಾಧಿಸಿದೆ.
ಲೈವ್ ಸ್ಟ್ರೀಮಿಂಗ್ ಮಾಹಿತಿ: ದೆಹಲಿ ಕ್ಯಾಪಿಟಲ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2026 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ವೀಕ್ಷಿಸಬಹುದು. ಮೊಬೈಲ್ ನಲ್ಲಿ ಪಂದ್ಯವನ್ನು ಜಿಯೋ hostar ಮೂಲಕ ಲೈಫ್ ನೋಡಬಹುದು.
ಸಂಭಾವ್ಯ ತಂಡ ದೆಹಲಿ ಕ್ಯಾಪಿಟಲ್: ಅಕ್ಷರ್ ಪಟೇಲ್, ಪಾತುಮ ನಿಸ್ಸಾಂಕ, ಕೆ.ಎಲ್.ರಾಹುಲ್, ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶ, ಸಮೀರ್ ರಿಜ್ವಿ/ಟಿ. ನಟರಾಜನ್, ವಿಪ್ರಜ್ ನಿಗಮ್/ಆಕೀಬ್ ನಬಿ, ಮಿಚೆಲ್ ಸ್ಟಾರ್ಕ್, ಲುಂಗಿ ಇನ್ಗಿಡಿ, ಕುಲದೀಪ್ ಯಾದವ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ :
ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಊರ್ವಿಲ್ ಪಟೇಲ್/ಸರ್ಫ್ ರಾಜ ಖಾನ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಜೇಮಿ ಓವರ್ಟನ್, ಪ್ರಶಾಂತ ವೀರ /ಅಕೇಲ್ ಹೊಸೈನ್ ನೂರ್ ಅಹಮದ್, ಅನ್ಶೂಲ ಕಾಂಬೋಜ್, ಆಕಾಶ್ ಮದ್ವಾಲ್/ಗುರ್ಜ್ ಪ್ನಿತ್ ಮುಖೇಶ್ ಚೌದರಿ.
ಹವಾಮಾನ ವರದಿ :
ಇಂದಿನಿಂದ ದೆಹಲಿ ಚೆನ್ನೈ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ, ಹಗುರ ಮಳೆಯಾಗುವ ನಿರೀಕ್ಷೆ ಇದೆ. ದೆಹಲಿಯಲ್ಲಿ ಇಂದು ತಾಪಮಾನವು 20 °C ಇಂದ ರಿಂದ 33 °C ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Also Read:
UAE ನಲ್ಲಿ ಅಡಗಿ ಕುಳಿತಿದ್ದ ಅಪರಾಧಿ ಭಾರತಕ್ಕೆ! CBI ಕಾರ್ಯಾಚರಣೆ ಯಶಸ್ವಿ