<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಜರ್ಮನಿನಲ್ಲಿ ಭಾರತೀಯ ಸಮುದಾಯದ ಮಹತ್ವದ ಹೆಜ್ಜೆ : ಹೊಸ ಒಕ್ಕೂಟ ಸ್ಥಾಪನೆ

ಜರ್ಮನಿನಲ್ಲಿ ಭಾರತೀಯ ಸಮುದಾಯದ ಮಹತ್ವದ ಹೆಜ್ಜೆ : ಹೊಸ ಒಕ್ಕೂಟ ಸ್ಥಾಪನೆ
Summary: Indian organizations in Germany are coming together to form a new federation. This step is aimed at further strengthening the cultural and social ties between India and Germany.

belagavi news:

ಜರ್ಮನಿ ನಲ್ಲಿ ನೆಲೆಸಿರುವ ಭಾರತೀಯ ಸಮುದಾಯವನ್ನು ಒಂದೇ ವೇದಿಕೆಗೆ ತರಲು ಮಹತ್ವದ ಹೆಜ್ಜೆಯಾಗಿ 'ಇಂಡಿಯಾ ಫೆಡರೇಶನ್ ಆಫ್ ಜರ್ಮನಿ' ಅಧಿಕೃತವಾಗಿ ಸ್ಥಾಪಿಸಲಾಗಿದೆ.

ಜರ್ಮನಿಯ ಸ್ಟಟ್ ಗಾರ್ಟ್ ನಲ್ಲಿ ನಡೆದ ಈ ಆರಂಭ ಕಾರ್ಯಕ್ರಮದಲ್ಲಿ ಪ್ರಮುಖ ಆವಿಷ್ಕಾರಕಿ ಹಾಗೂ ನೈತಿಕ ಎಐ ತಜ್ಞ ಚಿತ್ರಾ ವಿಶ್ವನಾಥ್ ನೇತೃತ್ವ ವಹಿಸಿದ್ದಾರೆ. ಜರ್ಮನಿಯ ವಿವಿಧ ನಗರಗಳಲ್ಲಿ ವಾಸಿಸುತ್ತಿರುವ ಮೂರು ಲಕ್ಷಕ್ಕೂ ಹೆಚ್ಚು ಭಾರತೀಯರ ಧ್ವನಿಯಾಗಿ ಈ ಒಕ್ಕೂಟ ಕಾರ್ಯನಿರ್ವಹಿಸುವ ಗುರಿ ಹೊಂದಿದೆ.

ಐಎಫ್ ಜಿ ಸಂಸ್ಥೆಯ ಪ್ರಮುಖ ಉದ್ದೇಶ ಭಾರತ ಮತ್ತು ಜರ್ಮನಿ ನಡುವಿನ ಸಂಸ್ಕೃತಿಕ ಸಾಮಾಜಿಕ ಹಾಗೂ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು. ಎರಡು ದೇಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಮೂಲಕ ದ್ವಿಪಕ್ಷಿಯ ಬಾಂಧವ್ಯಕ್ಕೆ ಹೊಸ ಚೈತನ್ಯ ನೀಡುವುದೇ ಇದರ ಪ್ರಮುಖ ಧ್ಯೇಯವಾಗಿದೆ.

Sponsored

ಈ ಹೊಸ ಒಕ್ಕೂಟದ ಮೂಲಕ ಜರ್ಮನಿಯಲ್ಲಿರುವ ಭಾರತೀಯ ಸಮುದಾಯದ ಸಮಸ್ಯೆಗಳು, ಅವಕಾಶಗಳು ಹಾಗೂ ಸಹಕಾರದ ಮಾರ್ಗಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಯೋಜಿಸಲಾಗಿದೆ. ಜೊತೆಗೆ ಶಿಕ್ಷಣ, ಉದ್ಯಮ, ಸಂಸ್ಕೃತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ನಿರೀಕ್ಷೆ ಇದೆ.

IFG ಆರಂಭವೂ ಯುರೋಪಿನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸಂಘಟಿತ ಶಕ್ತಿಗೆ ಹೊಸ ದಿಕ್ಕು ನೀಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಜರ್ಮನಿನಲ್ಲಿರುವ ಭಾರತೀಯ ಸಮುದಾಯವನ್ನು ಒಂದೇ ಸೂರಿನಡಿ ತರಲು ಮಹತ್ವದ ಹೆಜ್ಜೆಯಾಗಿ 'ಇಂಡಿಯಾ ಫೆಡರೇಶನ್ ಆಫ್ ಜರ್ಮನಿ' ಅಧಿಕೃತವಾಗಿ ಸ್ಥಾಪಿಸಲಾಗಿದೆ. ಜರ್ಮನಿಯ 16 ಫೆಡರಲ್ ರಾಜ್ಯಗಳಲ್ಲಿರುವ ನೂರಕ್ಕೂ ಹೆಚ್ಚು ಭಾರತೀಯ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಈ ಒಕ್ಕೂಟ ಸ್ಥಾಪಿಸಲಾಗಿದೆ.

' Bundesverband der Indischen Vereinigungen e.V.' ಎಂಬ ಅಧಿಕೃತ ಹೆಸರಿನೊಂದಿಗೆ ನೊಂದಾಯಿಸಲ್ಪಟ್ಟ ಈ ಸಂಸ್ಥೆ, ಜರ್ಮನಿಯ ವಾಸಿಸುತ್ತಿರುವ ಭಾರತೀಯ ಸಮುದಾಯದ ಸಾಮೂಹಿಕ ಧ್ವನಿಯಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದೆ.

Sponsored

ಪ್ರಸ್ತುತ ಜರ್ಮನಿಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಜನರು ವಾಸಿಸುತ್ತಿದ್ದು, ಅವರು ದೇಶದ ಆರ್ಥಿಕತೆಗೆ ವಾರ್ಷಿಕ ಸುಮಾರು 15 ಬಿಲಿಯನ್ ಯುರೋ (ಸುಮಾರು 1.66 ಲಕ್ಷ ಕೋಟಿ ರೂಪಾಯಿ) ಕೊಡುಗೆ ನೀಡುತ್ತಿದ್ದಾರೆ. ಈ ಬೃಹತ್ ಸಮುದಾಯದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಕೇಂದ್ರ ವೇದಿಕೆಯಾಗಿ IFG ಕಾರ್ಯನಿರ್ವಹಿಸಲಿದೆ.

ಈ ಸಂದರ್ಭದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸಲರ್ Friedrich Merz ಅವರ ನಾಯಕತ್ವದಲ್ಲಿ ಭಾರತ ಮತ್ತು ಜರ್ಮನಿ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ಒಕ್ಕೂಟವು ಎರಡು ದೇಶಗಳ ನಡುವೆ ಸಾಂಸ್ಕೃತಿಕ ಹಾಗೂ ಆರ್ಥಿಕ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.

28 ವರ್ಷಗಳ ಪಯಣ ಮತ್ತು ಚಿತ್ರ ವಿಶ್ವನಾಥ್ ಅವರ ಕಥೆಯನ್ನು ನೋಡುವುದಾದರೆ:

ಈ ಐತಿಹಾಸಿಕ ಘೋಷಣೆಯ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿರುವ IFG ನೇತೃತ್ವ ವಹಿಸಿರುವ ಚಿತ್ರಾ ವಿಶ್ವನಾಥ್ , 28 ವರ್ಷಗಳ ಹಿಂದೆ ನವೆಂಬರ್ ತಿಂಗಳ ಚಳಿಗಾಲದಲ್ಲಿ ಕೇವಲ ಆತ್ಮವಿಶ್ವಾಸ ಮತ್ತು ಭಾರತೀಯ ಮೌಲ್ಯಗಳನ್ನು ಹೊತ್ತು ಜರ್ಮನಿಗೆ ಕಾಲಿಟ್ಟ ತಮ್ಮ ಪಯಣವನ್ನು ನೆನಪಿಸಿಕೊಂಡಿದ್ದಾರೆ.

Sponsored

ಅವರು ಜರ್ಮನಿಯಲ್ಲಿನ ಅಂತರಾಷ್ಟ್ರೀಯ ಮಾಸ್ಟರ್ಸ್ ಪದವಿ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಆರಂಭಿಸಿದ್ದರು. ನಂತರ ಜರ್ಮನಿಯ ಪ್ರತಿಷ್ಠಿತ Bosch ಸಂಸ್ಥೆಯಲ್ಲಿ 25 ವರ್ಷಗಳ ಕಾಲ ಯಶಸ್ವಿಯಾಗಿ ವೃತ್ತಿ ಜೀವನ ನಡೆಸಿದ್ದಾರೆ.

ತಮ್ಮ ಪತಿ ಮಂಜುನಾಥ್ ಗುಬ್ಬಿ ಅವರೊಂದಿಗೆ ಕಳೆದ 27 ವರ್ಷಗಳಿಂದ ಜರ್ಮನಿಯಲ್ಲಿ ನೆಲೆಸಿರುವ ಅವರು, ತಮ್ಮ ಕುಟುಂಬವನ್ನು ಕಟ್ಟಿಕೊಂಡು, ಮಕ್ಕಳನ್ನು ಜರ್ಮನ್ ಶಿಕ್ಷಣ ವ್ಯವಸ್ಥೆಯಲ್ಲಿ ಬೆಳೆಸುತ್ತಲೇ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ.

ಈ ಹೊಸ ಒಕ್ಕೂಟವು ಯುರೋಪಿನಲ್ಲಿ ಭಾರತೀಯ ಸಮುದಾಯದ ಸಂಘಟಿತ ಶಕ್ತಿಗೆ ಹೊಸ ದಿಕ್ಕು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತ ಮತ್ತು ಜರ್ಮನಿ ಎರಡು ತಾಯ್ನಾಡುಗಳ ಸೇವೆಗಾಗಿ ಮಾರ್ಚ್ ತಿಂಗಳಿಂದಲೇ ಹೊಸ ಸಾಮಾಜಿಕ ಜವಾಬ್ದಾರಿಯನ್ನು ಕೈಗೊಂಡಿರುವ ಚಿತ್ರಾ ವಿಶ್ವನಾಥ್ ಅವರು ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಒಗ್ಗೂಡಿಸುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Sponsored

ಇಂಡಿಯಾ ಫೆಡರೇಶನ್ ಆಫ್ ಜರ್ಮನಿ ಮೂಲಕ ಸಿದ್ದಾರ್ಥ್ ಮುಗ್ಧಲ್ ನೇತೃತ್ವದಲ್ಲಿ ತಂಡದೊಂದಿಗೆ ಸೇರಿ ಅವರು ಯುರೋಪಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಒಂದೇ ವೇದಿಕೆಗೆ ತರಲು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಚಿತ್ರಾ ವಿಶ್ವನಾಥ್, "ಇದು ಕೇವಲ ಒಂದು ಸಂಸ್ಥೆಯಲ್ಲ, ಇದೊಂದು ಚಳುವಳಿ. ಜಾಗತಿಕ ಭವಿಷ್ಯವು ಸಹಭಾಗಿತ್ವ ಮತ್ತು ಪರಸ್ಪರ ಸಂಪರ್ಕದ ಮೇಲೆ ನಿಂತಿದೆ. ಅನಿವಾಸಿ ಭಾರತೀಯರು ಇದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ" ಎಂದು ಹೇಳಿದ್ದಾರೆ.

ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಸಮುದಾಯವನ್ನು ಸಂಘಟಿತವಾಗಿ ಪ್ರತಿನಿಧಿಸುವ ಈ ಹೊಸ ಒಕ್ಕೂಟವು, ಎರಡು ದೇಶಗಳ ನಡುವಿನ ಸಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ.

ಈ ಒಕ್ಕೂಟದ ಸ್ಥಾಪನೆಯೂ ಜರ್ಮನಿಯಲ್ಲಿ ಭಾರತದ ಹೆಮ್ಮೆಯನ್ನು ಹೆಚ್ಚಿಸಿರುವುದರ ಜೊತೆಗೆ, ಭವಿಷ್ಯದಲ್ಲಿ ಭಾರತ ಜರ್ಮನಿ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ವ್ಯಕ್ತವಾಗಿದೆ.

Sponsored

Also Read:

ಬೆಳಗಾವಿಯಲ್ಲಿ ಭಾರೀ ದಾಳಿ: ಕಂಟ್ರಿ ಪಿಸ್ತೂಲ್ ತಯಾರಿ ಜಾಲ ಪತ್ತೆ, 13 ಮಂದಿ ಅರೆಸ್ಟ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online