belagavi news
ಶನಿವಾರದಂದು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಅಂತಿಮ ತೀರ್ಮಾನ ತೆಗೆದು ಕೊಂಡು ಘೋಷಿಸಲಾಗಿದೆ. ಭಾರತ ಮೇಲಿನ ಸುಂಕವನ್ನು 18%ಕ್ಕೆ ಇಳಿಕೆ ಮಾಡಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಪರಸ್ಪರ ಪ್ರಯೋಜನಕಾರಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಒಪ್ಪಿಗೆ ನೀಡಿರುವುದಾಗಿ ಅಮೆರಿಕ ಮತ್ತು ಭಾರತ ಸಂತೋಷವಾಗಿದೆ ಎಂದು ಎರಡು ದೇಶಗಳು ಬಿಡುಗಡೆ ಮಾಡಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿದುಬಂದಿದೆ.ಎರಡು ದೇಶಗಳ ನಡುವಿನ ಒಪ್ಪಂದದ ಪ್ರಕಾರ ಬಾರತವೂ ಅಮೆರಿಕಾದ ಎಲ್ಲಾ ಕೈಗಾರಿಕಾ ಸರಕುಗಳು ಮತ್ತು ವನ ಧಾನ್ಯಗಳು, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿಸಿದೆ, ಹಣ್ಣುಗಳು ಮತ್ತು ಪಶು ಆಹಾರಕ್ಕಾಗಿ ಕೆಂಪು ಸೋರ್ಗಮ್,ದಿನ ನಿಮಗೆ ಸೋಯಾಬಿನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಗಳು ಮತ್ತು ಹೆಚ್ಚುವರಿ ಉತ್ಪನ್ನಗಳನ್ನು ಮತ್ತು ಎಲ್ಲಾ ವ್ಯಾಪಾರದ ಉತ್ಪನ್ನಗಳನ್ನು ಅಮೆರಿಕನ್ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುತ್ತದೆ ಎಂದು ಭಾರತವು ತಿಳಿಸಿದೆ.
ಫೆಬ್ರುವರಿ 13,2025 ರಂದು ಪ್ರಾರಂಭಿಸಿದ ದೊಡ್ಡ ಪ್ರಮಾಣದ ಅಮೆರಿಕ ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗೆ ದೇಶಗಳ ಪದ್ಧತಿಯನ್ನು ಪುನರ್ ಎಚ್ಚರಿಸುತ್ತದೆ ಎಂದು ತಿಳಿಸಲಾಗಿದೆ. ಭಾರತದ ಮೇಲಿನ ಸುಂಕವನ್ನು ಕಡಿಮೆ ಮಾಡಿದ್ದರಿಂದ ಭಾರತದ ಉದ್ಯೋಗಿಗಳಿಗೆ ಅಂದರೆ ಪ್ಲಾಸ್ಟಿಕ್ ಮತ್ತು ರಬ್ಬರ್ ,ಸಾವಯವ ರಾಸಾಯನಿಕಗಳು, ಜವಳಿ ಮತ್ತು ಉಡುಪುಗಳು ಚರ್ಮ ಮತ್ತು ಪಾದರಕ್ಷೆಗಳು ಗೃಹಾಲಂಕಾರ, ಕುಶಲಕರ್ಮಿ ಉತ್ಪನ್ನಗಳು ಇನ್ನು ಹಲವಾರು ಯಂತ್ರೋಪಕರಣಗಳ ರಫ್ತುಗಳನ್ನು ಹೆಚ್ಚಿಸಲು ಭಾರತಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ.
ಮಧ್ಯಂತರ ಒಪ್ಪಂದದ ಯಶಸ್ವಿ ತೀರ್ಮಾನಕ್ಕೆ ಒಳಪಟ್ಟ ರತ್ನಗಳು ,ವಜ್ರಗಳು ಮತ್ತು ವಿಮಾನ ಭಾಗಗಳು ಔಷಧಿಗಳು ,ಜನರಿಕ್ ಸೇರಿದಂತೆ ವ್ಯಾಪಕ ಶ್ರೇಣಿಯ ಸರಕುಗಳ ಮೇಲಿನ ಸುಂಕಗಳು ಶೂನ್ಯತೆ ಇಳಿಯುತ್ತವೆ. ಇದರಿಂದ ಮೇಕ್ ಇನ್ ಇಂಡಿಯಾ ಮತ್ತು ಭಾರತದ ರಫ್ತಿನಲ್ಲಿ ಭಾರತಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಯು ಎಸ್ ವೈದ್ಯಕೀಯ ಸಾಧನೆಗಳ ವ್ಯಾಪಾರಕ್ಕೆ ದೀರ್ಘಕಾಲದ ಅಡೆತಡೆಗಳು ಇದ್ದವು ಅವುಗಳನ್ನು ಪರಿಹರಿಸಿಕೊಳ್ಳಲು ಭಾರತವು ಒಪ್ಪಿಕೊಂಡಿದೆ. 191 ಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ದ್ವಿಪಕ್ಷಿಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸುಂಕವಿಲ್ಲದ ಅಡೆತಡೆಗಳನ್ನು ಇಬ್ಬರು ಸೇರಿ ಬಗೆಹರಿಸಿಕೊಳ್ಳುತ್ತಾರೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿ ತಿಳಿದುಬಂದಿದೆ.
ಕಾಳಜಿಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುವ ಪ್ರಾಮುಖ್ಯತೆಯನ್ನು ಗುರುತಿಸಿ ಅಮೇರಿಕಾದ ಆಹಾರ ಮತ್ತು ಕೃಷಿ ಉತ್ಪನ್ನಗಳ ವ್ಯಾಪಕ ವ್ಯಾಪಾರಕ್ಕೆ ಬಹಳ ಕಾಲದ ಸುಂಕ ವಿಲ್ಲದ ಅಡೆತಡೆಗಳನ್ನು ಪರಿಹರಿಸಲು ಭಾರತವು ಈಗ ಒಪ್ಪಿಕೊಂಡಿದೆ. ವಿಮಾನ ಮತ್ತು ವಿಮಾನದ ಭಾಗಗಳು ಅಮೂಲ್ಯವಾದ ಲೋಹಗಳು, ಕೋ ಕಿಂಗ್, ಕಲ್ಲಿದ್ದರನ್ನು ಖರೀದಿಸಲು ತಂತ್ರಜ್ಞಾನ ಉತ್ಪನ್ನಗಳನ್ನು ತೀರ್ಮಾನಿಸಲು ಕೈಗೊಳ್ಳಲಾಗಿದೆ ಎಂದು ಅಮೇರಿಕಾ ತಿಳಿಸಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತವು 5 ಶತಕೋಟಿ ಯುಎಸ್ ಡಾಲರ್ ಮೂಲದ ಯು ಎಸ್ ಇಂಧನ ಉತ್ಪನ್ನಗಳನ್ನು ಖರೀದಿಸುವುದಾಗಿ ಅಮೆರಿಕ ಹೇಳಿಕೆಯನ್ನು ತಿಳಿಸಿದೆ.
ಎರಡು ದೇಶಗಳ ಜಂಟಿ ಹೇಳಿಕೆಯಲ್ಲಿ ಎರಡು ದೇಶಗಳು ಒಪ್ಪಿಕೊಂಡ ಸುಂಕವನ್ನು ಯಾವುದೇ ಬದಲಾವಣೆ ಗಳಿಲ್ಲದೆ ಎರಡು ದೇಶಗಳು ಅದಕ್ಕೆ ಬದ್ಧರಾಗಿದ್ದೇವೆ ಎಂದು ಅವುಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಮೂರನೇ ವ್ಯಕ್ತಿಗಳ ಮಾರುಕಟ್ಟೆಯೇತರ ನೀತಿಗಳನ್ನು ಬಗೆಹರಿಸಲು ಪೂರಕವಾದ ಕ್ರಮಗಳ ಮೂಲಕ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಮತ್ತು ನಾವಿನ್ಯತೆಯನ್ನು ಹೆಚ್ಚಿಸಲು ಆರ್ಥಿಕ ಭದ್ರತಾ ಜೋಡಣೆಯನ್ನು ಬಲಪಡಿಸಲು ಹಾಗೂ ಆಮದು ರಫ್ತುಗಳ ಹೂಡಿಕೆ ಮತ್ತು ನಿಯಂತ್ರಣಗಳ ಮೇಲಿನ ಸರ್ಕಾರವನ್ನು ಎರಡು ದೇಶಗಳ ನಡುವೆ ಒಪ್ಪಂದದ ವಾಗಿದೆ ಎಂದು ಜಂಟಿ ಹೇಳಿಕೆ ಸ್ಪಷ್ಟಪಡಿಸಿದೆ.
ಪರಸ್ಪರ ಪ್ರಯೋಜನಕಾರಿ BTA ತೀರ್ಮಾನಿಸುವ ದೃಷ್ಟಿಯಿಂದ ಇಬ್ಬರು ಸಮವಾಗಿ ಕಾರ್ಯಗತಗೊಳಿಸುತ್ತಾರೆ ಮತ್ತು ಮಧ್ಯಂತರ ಒಪ್ಪಂದವನ್ನು ಕೊನೆಗೊಳಿಸುವಂತ ಕೆಲಸ ಮಾಡಲಾಗುತ್ತದೆ ಎಂದು ಜಂಟಿ ಹೇಳಿಕೆಯು ತಿಳಿಸಿದೆ. ಡೇಟಾ ಕೇಂದ್ರಗಳಲ್ಲಿ ಬಳಸುವ ಇತರೆ ಸರಕುಗಳು ಮತ್ತು ಗ್ರಾಫಿಕ್ ಸಂಸ್ಕರಣ ಘಟಕಗಳ ಸೇರಿದಂತೆ ತಂತ್ರಜ್ಞಾನ ಉತ್ಪನ್ನಗಳಲ್ಲಿ ಭಾರತ ಮತ್ತು ಅಮೆರಿಕ ಹೆಚ್ಚಿನ ಪ್ರಮಾಣದ ವ್ಯಾಪಾರವನ್ನು ಹೆಚ್ಚಿಸುತ್ತದೆ ಎಂದು ಜಂಟಿ ಹೇಳಿಕೆಯು ತಿಳಿಸಿದೆ.
ಇನ್ನಷ್ಟು ಓದಿರಿ:
ವ್ಯಾಪಾರ ಒಪ್ಪಂದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಜಾಗತಿಕ ಮೆಚ್ಚುಗೆ - ಪ್ರಧಾನಿ ಮೋದಿ