ಬರ್ಸಪಾರ ಕ್ರೀಡಾಂಗಣದಲ್ಲಿ ಚೊಚ್ಚಲ ಟೆಸ್ಟ್ ಆಡಲು ಭಾರತ ತಯಾರಿ
Barsapara Cricket Stadium: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ನವೆಂಬರ್ 22 ರಿಂದ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಅಂದರೆ ಟೀಮ್ ಇಂಡಿಯಾ ಇಲ್ಲಿ ಬಿಳಿ ಜೆರ್ಸಿ ಧರಿಸಿ ಆಡುತ್ತಿರುವುದು ಇದೇ ಮೊದಲು.
ಬೆಂಗಳೂರು :
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ ತಂಡವು 30 ರನ್ಗಳಿಂದ ಜಯಗಳಿಸಿತು. ಈ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯವು ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶೇಷ ಎಂದರೆ, ಈ ಮೈದಾನವು ಇನ್ನೂ ಟೆಸ್ಟ್ ಪಂದ್ಯವನ್ನು ಆಯೋಜಿಸಿಲ್ಲ, ಮತ್ತು ಟೀಮ್ ಇಂಡಿಯಾ (Indian Cricket Team) ಇಲ್ಲಿ ಬಿಳಿ ಜೆರ್ಸಿ ಧರಿಸಿ ಆಡುತ್ತಿರುವುದು ಇದೇ ಮೊದಲು. ಈ ಗುವಾಹಟಿ ಕ್ರೀಡಾಂಗಣದಲ್ಲಿ ಭಾರತ ತಂಡವು ಟಿ20 ಅಂತರರಾಷ್ಟ್ರೀಯ ಮತ್ತು ಏಕದಿನ ಪಂದ್ಯಗಳನ್ನು ಆಡಿದೆ. ಆದ್ದರಿಂದ, ಎಲ್ಲರ ಕಣ್ಣುಗಳು ಪಿಚ್ ಮೇಲೆ ಇದೆ.
ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿಪಿಚ್ ಬ್ಯಾಟಿಂಗ್ಗೆ ಸೂಕ್ತ:
ಕೋಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿನ ನಂತರ, ಪಿಚ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹೀಗಾಗಿ ಈ ಪಿಚ್ ಯಾವರೀತಿ ವರ್ತಿಸುತ್ತದೆ, ಭಾರತಕ್ಕೆ ಸಹಕಾರಿ ಆಗುತ್ತ ಎಂಬುದು ನೋಡಬೇಕಿದೆ. ಇದರ ಮಧ್ಯೆ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯನ್ನು 1-1 ಡ್ರಾದಲ್ಲಿ ಕೊನೆಗೊಳಿಸಲು ಪ್ರಯತ್ನಿಸಲಿದೆ. ಸೋತರೆ ಸರಣಿ ಕಳೆದುಕೊಳ್ಳಲಿದೆ. ನವೆಂಬರ್ 22 ರಿಂದ ಎರಡನೇ ಟೆಸ್ಟ್ ಆರಂಭವಾಗಲಿದೆ.
ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಸೀಮಿತ ಓವರ್ಗಳ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದ್ದು, ಪಿಚ್ ಬಗ್ಗೆ ನೋಡುವುದಾದರೆ, ಇದು ಬ್ಯಾಟಿಂಗ್ಗೆ ಹೆಚ್ಚು ಸೂಕ್ತವೆಂದು ಕಂಡುಬಂದಿದೆ. 6 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 8 ಶತಕಗಳು ದಾಖಲಾಗಿವೆ. ಆದ್ದರಿಂದ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಅನ್ನು ನಿರೀಕ್ಷಿಸಬಹುದು.
ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಟ್ಟು 6 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ:
ಭಾರತ ತಂಡವು ಇಲ್ಲಿ ಇದುವರೆಗೆ 4 ಟಿ 20 ಅಂತರರಾಷ್ಟ್ರೀಯ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದೆ. ಈ 6 ಪಂದ್ಯಗಳಲ್ಲಿ, ಟೀಮ್ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದೆ, ಆದರೆ 2 ಪಂದ್ಯಗಳಲ್ಲಿ ಸೋತಿದೆ. ಇದಲ್ಲದೆ, ಮಳೆಯಿಂದಾಗಿ ಒಂದು ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ತಂಡವು 2023 ರಲ್ಲಿ ಕೊನೆಯ ಬಾರಿಗೆ ಇಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು, ಇದರಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳಿಂದ ಸೋಲನ್ನು ಎದುರಿಸಬೇಕಾಯಿತು.
ಗುವಾಹಟಿಯಲ್ಲಿರುವ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣವನ್ನು 2012 ರಲ್ಲಿ ನಿರ್ಮಿಸಲಾಯಿತು, ಇದರಲ್ಲಿ 2017 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ 20 ಅಂತರರಾಷ್ಟ್ರೀಯ ಪಂದ್ಯದ ರೂಪದಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಾಯಿತು, ಇದರಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳಿಂದ ಏಕಪಕ್ಷೀಯ ಸೋಲನ್ನು ಎದುರಿಸಬೇಕಾಯಿತು.
ಇನ್ನಷ್ಟು ಓದಿರಿ:
IND vs SA: ಸೌತ್ ಆಫ್ರಿಕಾ ತಂಡಕ್ಕೆ ಮಾರಕ ವೇಗಿ ಎಂಟ್ರಿ