Belagavi news:
ಕೆಡಿ ಚಿತ್ರದ ಬಿಡುಗಡೆ ವಿಳಂಬದ ಬಗ್ಗೆ ಹೆಚ್ಚಿಸುತ್ತಿರುವ ಚರ್ಚೆಗಳ ನಡುವೆ, ನಟ ಸುದೀಪ್ ನಿರ್ದೇಶಕ ಪ್ರೇಮ್ ಪರವಾಗಿ ನಿಂತು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಿನಿ ವಲಯದಲ್ಲಿ ಕೆಡಿ ತಡವಾಗುತ್ತಿರುವುದಕ್ಕೆ ವಿವಿಧ ಕಾರಣಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ, ಈ ಬಗ್ಗೆ ಸುದೀಪ್ ನೀಡಿದ ಪ್ರತಿಕ್ರಿಯೆ ಗಮನ ಸೆಳೆಯುತ್ತಿದೆ.
ಸಿನಿಮಾ ತಡವಾಗಲು ಪ್ರಮುಖ ಕಾರಣ ಗುಣಮಟ್ಟದ ಮೇಲೆ ಹೆಚ್ಚು ಗಮನ ಹರಿಸುತ್ತಿರುವುದೇ ಎಂದು ಹೇಳಲಾಗಿದೆ. ಪ್ರೇಮ ಅವರು ಪ್ರಾಜೆಕ್ಟ್ ಅನ್ನು ದೊಡ್ಡ ಮಟ್ಟದಲ್ಲಿ ತಯಾರಿಸಲು ಪ್ರಯತ್ನಿಸುತ್ತಿದ್ದು, ಪ್ರತಿ ಅಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದರಿಂದ ಸಮಯ ತೆಗೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಅನಗತ್ಯ ಟೀಕೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿ, ಸುದೀಪ್ ಅವರು ನಿರ್ದೇಶಕರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಚಿತ್ರತಂಡ ಯಾವುದೇ ರೀತಿಯ ತುರ್ತು ನಿರ್ಧಾರಗಳನ್ನು ಕೈಗೊಳ್ಳದೆ, ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ಚಿತ್ರ ನೀಡುವ ಉದ್ದೇಶದಿಂದ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಪ್ರೇಮ್ ಅವರ ಕೆಲಸದ ಶೈಲಿಯನ್ನು ಮೆಚ್ಚಿಕೊಂಡ ಸುದೀಪ್, ಸಿನಿಮಾ ತಡವಾಗಿದ್ದರೂ ಅಂತಿಮ ಫಲಿತಾಂಶ ಉತ್ತಮವಾಗಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಕೊನೆಗೂ ಎಪ್ರಿಲ್ 30ರಂದು ತೆರೆಗೆ ಬರಲು ಸಜ್ಜಾಗಿದೆ. ಬಹಳ ದಿನಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಚಿತ್ರ, ಇದೀಗ ರಿಲೀಸ್ ಡೇಟ್ ಘೋಷಣೆಯಿಂದ ಸಿನಿಪ್ರೇಕ್ಷಕರಲ್ಲೇ ಉತ್ಸಾಹವನ್ನು ಮೂಡಿಸಿದೆ.
ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೆಡಿ ಸಿನಿಮಾ ಸೆಟ್ಟೇರಿದ ಬಳಿಕ ಸಾಕಷ್ಟು ಸಮಯ ಕಳೆದಿದ್ದರಿಂದ, ಚಿತ್ರದ ವಿಳಂಬದ ಬಗ್ಗೆ ಹಲವು ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ ಇದೀಗ ಅಧಿಕೃತವಾಗಿ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಆ ಎಲ್ಲಾ ಊಹಾಪೂಹಗಳಿಗೆ ತೆರೆ ಬಿದ್ದಿದೆ. ಚಿತ್ರದ ನಿರ್ಮಾಣ ಪ್ರತಿಕ್ರಿ ಭಾರಿ ಗುಣಮಟ್ಟದಲ್ಲಿ ನಡೆದಿದ್ದು, ತಾಂತ್ರಿಕವಾಗಿ ಹಾಗೂ ದೃಶ್ಯ ವೈಭವದ ದೃಷ್ಟಿಯಿಂದ ಹೆಚ್ಚಿನ ಸಮಯ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ. ಯಪ್ಪಾ ಇದೇ ಕಾರಣಕ್ಕೆ ಸಿನಿಮಾ ತಡವಾದರೂ, ಉತ್ತಮ ಗುಣಮಟ್ಟದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.
ಈ ನಡುವೆ, ನಟ ಸುದೀಪ್ ಕೂಡ ಪ್ರೇಮ್ ಅವರ ಕೆಲಸದ ಶೈಲಿಗೆ ಬೆಂಬಲ ಸೂಚಿಸಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ. 'ಕೆಡಿ' ಎಸ್ ಎಸ್ ಎಲ್ ಸಿ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆಯಾಗಿ ಕೆಡಿ ಸಿನಿಮಾ ವಿಳಂಬವಾಗಿದ್ದೇಕೆ ಎಂಬ ಪ್ರಶ್ನೆಗೆ ಇದೀಗ ಕಷ್ಟನೇ ಸಿಕ್ಕಿದೆ. ಸುದೀಪ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಂಡಕ್ಕೆ ಹಲೋ ಕಾರಣಗಳಿಗೆ ಎಂದು ಹೇಳಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ಈ ಬಹು ನಿರೀಕ್ಷಿತ ಚಿತ್ರದ ನಿರ್ಮಾಣ ಪ್ರತಿಕ್ರಿಯೆಯಲ್ಲಿ ಭಾರಿ ಮಟ್ಟದ ಸೆಟ್ ನಿರ್ಮಾಣ ಪ್ರಮುಖ ಕಾರಣವಾಗಿದ್ದು, ಅದಕ್ಕಾಗಿ ಹೆಚ್ಚು ಸಮಯ ತೆಗೆದುಕೊಂಡಿದೆ. ಜೊತೆಗೆ ನಟ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾದ ಕೆಲಸವೂ ಸಮಕಾಲದಲ್ಲಿ ನಡೆಯುತ್ತಿದ್ದುದರಿಂದ ಕೆಡಿ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಹಂತಗಳಲ್ಲಿ ವಿಳಂಬ ಉಂಟಾಗಿದೆ ಎಂದು ತಿಳಿಸಿದರು.
ನಿರ್ದೇಶಕ ಪ್ರೇಮ್ ದೊಡ್ಡ ಮಟ್ಟದಲ್ಲಿ ಸಿನಿಮಾನ ನಿರ್ಮಾಣಕ್ಕೆ ಮುಂದಾಗಿದ್ದು, ಪ್ರತಿಯೊಂದು ಅಂಶದಲ್ಲೂ ಗುಣಮಟ್ಟ ಕಾಪಾಡಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆ ಅನಿವಾರ್ಯವಾಗಿ ಚಿತ್ರ ಬಿಡುಗಡೆ ತಡವಾದರೂ, ಅಂತಿಮ ಫಲಿತಾಂಶ ಪ್ರೇಕ್ಷಕರಿಗೆ ಮೆಚ್ಚುಗೆ ತರುವಂತಿರುತ್ತದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ತಾಂತ್ರಿಕ ಸವಾಲುಗಳು, ಸೆಟ್ ನಿರ್ಮಾಣ ಹಾಗೂ ಇತರೆ ಚಿತ್ರಗಳ ಕೆಲಸಗಳ ನಡುವೆ ಕೆಡಿ ಸಿನಿಮಾ ವಿಳಂಬವಾಗಿದ್ದು ಇದೀಗ ಬಿಡುಗಡೆಗೆ ಸಜ್ಜಾಗಿರುವುದನ್ನು ಸಿಮಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ.
Also Read: