Belagavi news:
ಗಂಧದ ನಾಡಿನ ಪರಿಮಳದ ಪ್ರತೀಕವಾದ ಮೈಸೂರ್ ಸ್ಯಾಂಡಲ್ ಸೋಪ್ ಇದೀಗ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಾರಿ ಕ್ರಿಸ್ ಸೃಷ್ಟಿಸಿದೆ. ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ ನಿರ್ಮಿಸುವ ಈ ಪ್ರಸಿದ್ಧ ಚಂದನ ಸೋಪ್ , ಕರ್ನಾಟಕಕ್ಕಿಂತ ನೆರೆ ರಾಜ್ಯಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವುದು ಗಮನಾರ್ಹ. ನೈಸರ್ಗಿಕ ಚಂದನದ ಸುಗಂಧ, ಪ್ರೀಮಿಯಂ ಗುಣಮಟ್ಟ ಮತ್ತು ಗ್ರಾಹಕರ ಹೆಚ್ಚುತ್ತಿರುವ ವಿಶ್ವಾಸದಿಂದ ಬೇಡಿಕೆ ಏರಿಕೆ ಕಂಡಿದೆ. ಈ ಟ್ರೆಂಡ್ ನ ಹಿಂದಿರುವ ಪ್ರಮುಖ ಕಾರಣಗಳು ಮತ್ತು ಮಾರಾಟಕ್ಕೆ ವಿಶ್ಲೇಷಣೆಯನ್ನು ತಿಳಿಯಿರಿ.
ಈ ಪ್ರಸಿದ್ಧ ಚಂದನ ಸೋಪ್ ಕರ್ನಾಟಕದಲ್ಲಿ ಹುಟ್ಟಿಕೊಂಡಿದ್ದರು, ಇತ್ತೀಚಿನ ಮಾರುಕಟ್ಟೆ ಪ್ರವೃತ್ತಿಗಳ ಪ್ರಕಾರ ನೆರೆ ರಾಜ್ಯಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವುದು ಗಮನ ಸೆಳೆಯುತ್ತಿದೆ. ಚಂದನದ ನೈಸರ್ಗಿಕ ಗುಣಗಳು, ದೀರ್ಘಕಾಲ ಉಳಿಯುವ ಸುಗಂಧ ಮತ್ತು ಪ್ರೀಮಿಯಂ ಬ್ರಾಂಡ್ ಇಮೇಜ್ ಕಾರಣದಿಂದ ಮೈಸೂರ್ ಸ್ಯಾಂಡಲ್ ಸೋಪ್ ಗೆ ಬೇಡಿಕೆ ಹೆಚ್ಚುತ್ತಿದೆ. ವಿಶೇಷವಾಗಿ ಆಂಧ್ರ ಮತ್ತು ತೆಲಂಗಾಣ ನಗರ ಪ್ರದೇಶಗಳಲ್ಲಿ ಗ್ರಾಹಕರು ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿರುವುದು ಮಾರಾಟದ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಆನ್ ಲೈನ್ ಮಾರುಕಟ್ಟೆ, ಇ-ಕಾಮರ್ಸ್ ವೇದಿಕೆಗಳು ಮತ್ತು ಉಡುಗೊರೆ ಸಂಸ್ಕೃತಿ ಕೂಡ ಬೆಳವಣಿಗೆಗೆ ಉತ್ತೇಜನ ನೀಡಿವೆ. ಜೊತೆಗೆ, ಚಂದನದ ಆರೋಗ್ಯಕರ ಗುಣಗಳ ಬಗ್ಗೆ ಅರಿವು ಹೆಚ್ಚಿಸುತ್ತಿರುವುದರಿಂದ ಗ್ರಾಹಕರು ಈ ಉತ್ಪನ್ನ ದತ್ತ ಹೆಚ್ಚು ಆಕರ್ಷಿತರಾಗಿದ್ದಾರೆ.
ಇನ್ನೊಂದೆಡೆ, ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಮಾರುಕಟ್ಟೆ ಮತ್ತು ವಿವಿಧ ಪರ್ಯಾಯ ಉತ್ಪನ್ನಗಳ ಲಭ್ಯತೆ ಮಾರಾಟದ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಆದರೂ, ಮೈಸೂರ್ ಸ್ಯಾಂಡಲ್ ಸೋಪ್ ತನ್ನ ಪರಂಪರೆ, ಗುಣಮಟ್ಟ ಮತ್ತು ವಿಶ್ವಾಸದಿಂದ ದೇಶದಾದ್ಯಂತ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದೆ.
ಕರ್ನಾಟಕದ ಹೆಮ್ಮೆಯ ಐಕಾನಿಕ್ ಬ್ರಾಂಡ್ ಆಗಿರುವ ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ ಇತ್ತೀಚಿಗೆ ಗಮನಾರ್ನ ಬೆಳವಣಿಗೆ ಸಾಧಿಸಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಮೈಸೂರು ರಾಜ್ಯರ ಕಾಲದಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಇಂದು ಬಹು ಮುಖ್ಯ ಉದ್ಯಮವಾಗಿ ಬೆಳೆದಿದ್ದು, ಅದರ ವಾರ್ಷಿಕ ವಹಿವಾಟು 2,000 ಕೋಟಿ ರೂಪಾಯಿಗೆ ತಲುಪಿದೆ. ರಾಜ್ಯವಾರು ಮಾರಾಟದ ವಿವರ ನೀಡಿದ ಸಚಿವರು, ಕರ್ನಾಟಕ ಮತ್ತು ಗೋವಾದಲ್ಲಿ ಶೇ. 14ರಷ್ಟು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಶೇ. 45ರಷ್ಟು ಹಾಗೂ ದೆಹಲಿಯಲ್ಲಿ ಶೇ. ಆರರಷ್ಟು ಮಾರಾಟವಾಗುತ್ತಿದೆ ಎಂದು ಹೇಳಿದರು. ಇಂಟರ್ನ್ಯಾಷನಲ್ ಇದರಿಂದ ನೆರೆ ರಾಜ್ಯಗಳಲ್ಲಿ ಮೈಸೂರ್ ಸ್ಯಾಂಡಲ್ ಭಾರಿ ಬೇಡಿಕೆ ಇದೆ ಎಂಬುದು ಸ್ಪಷ್ಟವಾಗಿದೆ.
ಇ-ಕಾಮರ್ಸ್ ಕ್ಷೇತ್ರದಲ್ಲೂ ಕೆ.ಎಸ್.ಡಿ.ಎಲ್ ದೊಡ್ಡ ಸಾಧನೆ ಮಾಡಿದ್ದು, ಹಿಂದೊಮ್ಮೆ 0 ಮಟ್ಟದಲ್ಲಿದ್ದ ಆನ್ಲೈನ್ ವ್ಯವಹಾರ ಈಗ 500 ಕೋಟಿ ಏರಿಕೆಯಾಗಿದೆ. ಡೀಲರ್ ನೆಟ್ ವರ್ಕ್ ನ್ನು 471 ರಿಂದ 1 ಸಾವಿರಕ್ಕೂ ಹೆಚ್ಚು ವಿಸ್ತರಿಸಿರುವುದು ಮಾರಾಟದ ಏರಿಕೆಗೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ ಸಂಸ್ಥೆ ತಿಂಗಳಿಗೆ 20-30 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ.
ಈ ಯಶಸ್ಸಿಗೆ ಸಂಸ್ಥೆಯ ಕಾರ್ಮಿಕರು ಸಿಬ್ಬಂದಿ ಮತ್ತು ಅಧ್ಯಕ್ಷರಾದ ಸಿ.ಎಸ್ ನಂದಗೌಡ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶಂಶಿಸಿದರು. ಒಟ್ಟಾರೆ, ಗಂಧದ ನಾಡಿನ ಈ ಬ್ರಾಂಡ್ ದೇಶಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.
Also Read:
ರಾಜ್ಯ ಟಾಪರ್ ಬೃಂದಾಗೆ ಭರ್ಜರಿ ಸನ್ಮಾನ್: ಕೋಟ ಶ್ರೀನಿವಾಸ್ ಪೂಜೇರಿ ಅಭಿನಂದನೆ!