<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

IPL ಶೈಲಿಯಲ್ಲಿ 'ಕೆಪಿಎಲ್' : ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗಕ್ಕೆ ಸಕಲ ಸಿದ್ಧತೆ .

IPL ಶೈಲಿಯಲ್ಲಿ 'ಕೆಪಿಎಲ್' : ಆಂಧ್ರಪ್ರದೇಶದಲ್ಲಿ ಕೋಳಿ ಕಾಳಗಕ್ಕೆ ಸಕಲ ಸಿದ್ಧತೆ .
Summary: ಸಂಕ್ರಾಂತಿ ಬಂತು ಎಂದರೆ ಸಾಕು ಈ ಬಾರಿಯ ಸಂಕ್ರಾಂತಿ ಹಿನ್ನೆಲೆಯಲ್ಲಿ ಕರಾವಳಿ ಆಂಧ್ರ ಸೇರಿದಂತೆ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಕಾಳಗಕ್ಕೆ ಭಾರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಂದ್ಯ Cockfight Premier League ಎಂದು ಹೆಸರಿಸಲಾಗಿದೆ .
belagavi news:

ಐಪಿಎಲ್ ಮಾದರಿಯಲ್ಲಿ ಈ ಕೋಳಿ ಕಾಳಗವನ್ನು ಆಯೋಜಿಸಲಾಗಿದ್ದು, ಎಲ್‌ಇಡಿ ಪರದೆ, ಫ್ಲಡ್‌ಲೈಟ್ಸ್​, ಐಷಾರಾಮಿ ವ್ಯವಸ್ಥೆಯಿಂದ ಹಿಡಿದು ಔತಣಕೂಟ, ಡ್ರೋನ್ ಕ್ಯಾಮೆರಾ, ಕ್ಯಾರವಾನ್‌, ಬೃಹತ್ ಮಳೆ ನಿರೋಧಕ ಶಾಮಿಯಾನಗಳು, ಮನರಂಜನೆಗಾಗಿ ಜರ್ಮನ್ ಹ್ಯಾಂಗರ್‌, ಸಾವಿರಾರು ಜನರು ಕುಳಿತು ವೀಕ್ಷಿಸಲು ಗ್ಯಾಲರಿ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಇಲ್ಲಿ ಮಾಡಿಕೊಳ್ಳಲಾಗಿದೆ. ಒಂದು ಕ್ರಿಕೆಟ್​ ಪಂದ್ಯದ ಆಯೋಜನೆಗೆ ಬೇಕಾದ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳಲಾಗುತ್ತದೆಯೋ ಹಾಗೆಯೇ ಕೋಳಿ ಕಾಳಗಕ್ಕೂ ಸಕಲ ಸಿದ್ಧತೆ ಮಾಡಿಕೊಂಡಿರುವುದು ಗಮನಾರ್ಹ.
ಕೋಳಿ ಕಾಳಗಗಳ ವ್ಯವಸ್ಥೆ: ಈ ಬಾರಿಯ ಸಂಕ್ರಾಂತಿಗೆ ಹಿಂದಿನದ್ದಕ್ಕೆ ಹೋಲಿಸಿದರೆ ಕೋಳಿ ಕಾಳಗದ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 150 ರಿಂದ 200 ಕಾಳಗಗಳ ಅಖಾಡಗಳನ್ನು ತೆರೆಯಲಾಗಿತ್ತು. ಈ ಬಾರಿ ಈ ಸಂಖ್ಯೆ 450ಕ್ಕೆ ಏರಿದೆ. ಭೀಮವರಂನಿಂದ ತಾಡೇಪಲ್ಲಿಗುಡೆಮ್‌ಗೆ ಹೋಗುವ ಮಾರ್ಗದಲ್ಲಿ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ 18ಕ್ಕೂ ಹೆಚ್ಚು ಬೃಹತ್ ಕೋಳಿ ಕಾಳಗಗಳ ಅಖಾಡಗಳು ಸಿದ್ಧವಾಗಿವೆ. 5 ರಿಂದ 10 ಎಕರೆಗಳಲ್ಲಿ ಕಾಳಗಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು 2 ರಿಂದ 3 ಎಕರೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಉದ್ಯಾನ ಮತ್ತು ಮುಖ್ಯ ರಸ್ತೆಗಳ ಬಳಿಯ ಬಡಾವಣೆಗಳಲ್ಲಿ ಕಾಳಗಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೊನಸೀಮಾ ಜಿಲ್ಲೆಯ ಪ್ರತಿ ಮಂಡಲದಲ್ಲಿ ಸಣ್ಣ ಮತ್ತು ಬೃಹತ್​ ಐದಾರು ಕಾಳಗದ ಅಖಾಡಕ್ಕೆ ತಯಾರಿ ನಡೆದಿದೆ. ಆದರೆ, ಕಾಳಗಕ್ಕೆ ಪರವಾನಗಿ ನೀಡುವುದು ಸ್ಥಳೀಯ ಪ್ರತಿನಿಧಿಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ ಕೊನಸೀಮಾ ಜಿಲ್ಲೆಯಲ್ಲೇ ಈ ಬಾರಿ 200 ಕೋಳಿ ಕಾಳಗದ ಅಖಾಡಗಳು ಸಿದ್ಧಗೊಂಡಿವೆ. ಕಾಳಗಕ್ಕೆ ಹೆಸರುವಾಸಿಯಾದ ಭೀಮಾವರಂ ಮತ್ತು ಉಂಡಿಯಲ್ಲಿ ಹತ್ತಾರು ಕೋಳಿ ಕಾಳಗ ತಾಣಗಳು ತೆರೆದಿವೆ
ವಿಶೇಷ ಟೆಂಟ್‌ಗಳು ಸಿದ್ಧ: ಪ್ರತಿ ವರ್ಷದಂತೆ ಈ ವರ್ಷವೂ ಎರಡು ತೆಲುಗು ರಾಜ್ಯಗಳ (ತೆಲಂಗಾಣ-ಆಂಧ್ರ) ಜೊತೆಗೆ, ಕರ್ನಾಟಕದ ಬಳ್ಳಾರಿ, ಕಲಬುರಗಿ, ಮತ್ತು ತಮಿಳುನಾಡಿನ ಕೆಲವು ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನರು ಈ ಕೋಳಿ ಕಾಳಗಳ ಪಂದ್ಯಗಳನ್ನು ವೀಕ್ಷಿಸಲು ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಂದ್ಯಗಳು ನಡೆಯಲಿರುವ ಪ್ರದೇಶಗಳಲ್ಲಿ ಹೋಟೆಲ್ ಕೊಠಡಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಭೀಮವರಂ, ಎಲೂರು, ತಡೆಪಲ್ಲಿಗುಡೆಮ್ ಮತ್ತು ತನುಕು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ಹೋಟೆಲ್‌ಗಳು, ಲಾಡ್ಜ್‌ಗಳು, ಮದುವೆ ಮಂಟಪಗಳು ಮತ್ತು ವಿಲ್ಲಾಗಳು ಲಭ್ಯವಿರುವ ಫಂಕ್ಷನ್ ಹಾಲ್‌ಗಳು ಬುಕ್ ಮಾಡಲಾಗುತ್ತಿದೆ. ಭೀಮವರಂನಲ್ಲಿರುವ ಹೆಚ್ಚಿನ ಹೋಟೆಲ್ ಕೊಠಡಿಗಳನ್ನು ಒಂದು ವರ್ಷದ ಹಿಂದೆಯೇ ಬುಕ್ ಮಾಡಲಾಗಿದೆ. ಅವರು 3 ದಿನಗಳವರೆಗೆ ಪ್ರತಿ ಕೋಣೆಗೆ 30,000 ರಿಂದ 50,000 ರೂ.ಗಳವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಖಾಲಿ ಇರುವ ಮನೆಗಳು ಮತ್ತು ಕೊಠಡಿಗಳನ್ನು ಸಹ ಬಾಡಿಗೆಗೆ ನೀಡಲಾಗುತ್ತಿದೆ. ಕೊನಸೀಮಾ ಜಿಲ್ಲೆಯ ಮುರಮಲ್ಲ, ಐ. ಪೋಲವರಂ ಮಂಡಲದಲ್ಲಿ ಯಾವುದೇ ಹೋಟೆಲ್‌ ಹಾಗೂ ಲಾಡ್ಜ್‌ಗಳು ಇಲ್ಲದ ಕಾರಣ, ಅತಿಥಿಗಳ ವಸತಿಗಾಗಿ ವಿಶೇಷವಾಗಿ ಟೆಂಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ: ಮೂಲಗಳ ಮಾಹಿತಿ ಪ್ರಕಾರ ಸಂಕ್ರಾಂತಿಯ ಮೂರು ದಿನಗಳಲ್ಲಿ ಕೋಳಿ ಕಾಳಗದಲ್ಲಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ. ಪ್ರತಿ ಮೈದಾನದಲ್ಲಿ ಪ್ರತಿದಿನ ಅಂದಾಜು 25 ರಿಂದ 40 ಪಂದ್ಯಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಮೈದಾನಗಳು 5 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳವರೆಗೆ ಬೆಟ್ಟಿಂಗ್‌ಗಳನ್ನು ಒಳಗೊಂಡಿರುತ್ತದೆ. ಕೆಲವಡೆ ಅದು ಲಕ್ಷ ರೂ.ವರೆಗೂ ಬಂದು ನಿಲ್ಲುವುದುಂಟು. ಆ ಮಟ್ಟದಲ್ಲಿ ಬೆಟ್ಟಿಂಗ್‌ಗೆ ಸಿದ್ಧರಿರುವವರು ಮಾತ್ರ ಇಲ್ಲಿಗೆ ಬರಬೇಕೆಂದು ಕೆಲವೆಡೆ ಕೆಲವು ಸಂಘಟಕರು ಮೊದಲೇ ಕೆಲವು ಸೂಚನೆಗಳನ್ನು ನೀಡುವುದುಂಟು. ನಗದು ಹಣಕಾಸಿನ ವ್ಯವಹಾರ ಹೆಚ್ಚು. ಹಾಗಾಗಿ ಹಣವನ್ನು ಎಣಿಸಲು ಯಂತ್ರಗಳು ಮತ್ತು ವಿಶೇಷ ಸಿಬ್ಬಂದಿಯನ್ನು ಸಹ ವ್ಯವಸ್ಥೆ ಮಾಡಲಾಗಿದೆ. ತಮ್ಮ ತಮ್ಮ ಮನೆಯಲ್ಲಿ ವಿಶೇಷವಾಗಿ ಬೆಳೆಸಿದ ಕೋಳಿಗಳನ್ನು ಇಲ್ಲಿಗೆ ಮಾರಾಟಕ್ಕೆ ತರಲಾಗುತ್ತದೆ. ಅವುಗಳ ಬೆಲೆ 2 ಲಕ್ಷದಿಂದ 4 ಲಕ್ಷದವರೆಗೆ ಇರುತ್ತದೆ. ಈಡನ್ ಗಾರ್ಡನ್ಸ್, ವಾಂಖೇಡೆ, ಚೆಪಾಕ್ ಮತ್ತು ಚಿನ್ನಸ್ವಾಮಿಯಂತಹ ದೊಡ್ಡ ಕ್ರೀಡಾಂಗಣಗಳ ಮಾದರಿಯಲ್ಲಿ ಕೋಳಿಗಳ ಕಾಳಗ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ಆಯಾಮಗಳಿಂದ ಗಮನ ಸೆಳೆಯುತ್ತಿದೆ. ಪಶ್ಚಿಮ ಗೋದಾವರಿ, ಎಲೂರು, ಕೊನಸೀಮಾ ಮತ್ತು ಕೃಷ್ಣ ಜಿಲ್ಲೆಗಳ ಜೊತೆಗೆ, ಈ ವರ್ಷ, ಎನ್‌ಟಿಆರ್, ಬಾಪಟ್ಲಾ, ಕಾಕಿನಾಡ, ಅನಕಪಲ್ಲಿ, ಭೀಮವರಂ, ಉಂಡಿ, ಸೀಸಾಲಿ, ಅಕಿವೀಡು, ಯಲಮಂಚಿಲಿ, ಕಲಗಂಪುಡಿ, ದುಗ್ಗಿರಾಲ, ಮಿರ್ಜಾಪುರಂ, ಮುರಮಲ್ಲ ಜಿಲ್ಲೆಗಳಲ್ಲಿಯೂ ಕೋಳಿ ಕಾಳಗಕ್ಕೆ ಭರದ ಸಿದ್ಧತೆ ನಡೆದಿದೆ. ಇನ್ನು ಕೆಲವಡೆ ಸಾರ್ವಜನಿಕ ಪ್ರತಿನಿಧಿಗಳು ಸ್ವತಃ ಕೋಳಿ ಕಾಳಗದ ವ್ಯವಸ್ಥೆಗೆ ಮುಂದಾಗಿದ್ದಾರೆ. ಐಪಿಎಲ್ ಮೀರಿಸುವಷ್ಟು ಸಿದ್ಧತೆ ನಡೆದಿದ್ದರಿಂದ ಸುದ್ದಿಗೆ ಗ್ರಾಸವಾಗಿದೆ.ವೀಕ್ಷಿಸಲು ವ್ಯವಸ್ಥೆ: ಒಂದು ಕಾಲದಲ್ಲಿ ಮೈದಾನದಲ್ಲಿ ಕೋಳಿ ಕಾಳಗಗಳು ನಡೆಯುತ್ತಿದ್ದವು. ಈಗ ಚಿತ್ರಣ ಸ್ವಲ್ಪ ಬದಲಾಗಿದ್ದರಿಂದ ಅದಕ್ಕೆ ತಕ್ಕಂತೆ ರೂಪುರೇಷೆ ಮಾಡಿಕೊಳ್ಳಲಾಗುತ್ತಿದೆ. ಕೋಳಿಗಳ ಕಾಲುಗಳಿಗೆ ಗಾಯವಾಗದಂತೆ ತಡೆಯಲು ಸಂಶ್ಲೇಷಿತ ಕ್ರೀಡಾಂಗಣಗಳನ್ನು ಸಿದ್ಧಪಡಿಸಲಾಗಿದೆ. 4-5 ಸಾವಿರ ಜನರು ಏಕಕಾಲದಲ್ಲಿ ಕುಳಿತು ಕಾಳಗವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಸಂಘಟಕರು ವಿಶೇಷ ಟೋಕನ್‌ಗಳನ್ನು ನೀಡುತ್ತಿದ್ದಾರೆ. ಟೋಕನ್ ಹೊಂದಿರುವವರಿಗೆ ಮಾತ್ರ ಒಳಗೆ ಅವಕಾಶವಿದೆ. ಸಂಘಟಕರು ಸ್ವತಃ ಅವರಿಗೆ ಆಹಾರ ಮತ್ತು ತಂಪು ಪಾನೀಯಗಳನ್ನು ಒದಗಿಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ.

ಇನ್ನಷ್ಟು ಓದಿರಿ:
IND VS NZ 1ST ODI : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online