<?= $pageTitle ?>
Logo
ಮುಖಪುಟ ಓದುವುದು ಕೇಳು
Corporate

ಕರ್ನಾಟಕದ ಕಲಬುರಗಿ ರೊಟ್ಟಿ ಈಗ ಅಂತರರಾಷ್ಟ್ರೀಯ ಬ್ರಾಂಡ್

ಕರ್ನಾಟಕದ ಕಲಬುರಗಿ ರೊಟ್ಟಿ ಈಗ ಅಂತರರಾಷ್ಟ್ರೀಯ ಬ್ರಾಂಡ್
Summary: Kalaburagi Rotti is now being exported to the US and Australian markets, giving the local traditional food a global lead. This development is opening up new global opportunities for the Karnataka food industry.

Belagavi News:

ಕಲಬುರ್ಗಿ ಜಿಲ್ಲೆಯ ಪ್ರಸಿದ್ಧ "ಕಲಬುರ್ಗಿ ರೊಟ್ಟಿ" ಇದೀಗ ಜಾಗತಿಕ ಮಟ್ಟಕ್ಕೆ ಕಾಲಿಟ್ಟಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುತ್ತಿರುವ ಈ ಸಂಪ್ರದಾಯಿಕ ಆಹಾರವನ್ನು ಈಗ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿದೆ.

ಮೊದಲ ರಫ್ತು ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಪ್ರತಿ ತಿಂಗಳು ಸಾವಿರಾರು ರೊಟ್ಟಿಗಳನ್ನು ವಿದೇಶಗಳಿಗೆ ಕಳುಹಿಸುವ ಯೋಜನೆ ಜಾರಿಗೆ ಬಂದಿದೆ. ಇದರಿಂದ ವಿದೇಶದಲ್ಲಿರುವ ಕನ್ನಡಿಗರಿಗೆ ತಮ್ಮ ಊರಿನ ಸಾಂಪ್ರದಾಯಿಕ ರುಚಿಯನ್ನು ಸವಿಯುವ ಅವಕಾಶ ಸಿಕ್ಕಿದೆ.

ಈ ಯೋಜನೆಯಿಂದ ಗ್ರಾಮೀಣ ಮಹಿಳೆಯರಿಗೆ ಹೊಸ ಆರ್ಥಿಕ ಶಕ್ತಿ ದೊರೆಯುತ್ತಿದ್ದು, ಅವರು ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದಾರೆ. ಸರ್ಕಾರದ ನೆರವು ಮತ್ತು ತಂತ್ರಜ್ಞಾನದ ಬಳಕೆಯಿಂದ ಈ ಯೋಜನೆ ಯಶಸ್ವಿಯಾಗಿ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದೆ.

ಕಲಬುರಗಿ ರೊಟ್ಟಿ ಈಗ ಜಿಲ್ಲೆಯ ಸಾಂಸ್ಕೃತಿಕ ಗುರುತಾಗಿದ್ದು, ಸ್ಥಳೀಯ ಆಹಾರ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮುನ್ನಡೆ ಸಿಗುತ್ತಿರುವ ಮಹತ್ವದ ಬೆಳವಣಿಗೆ ಇದಾಗಿದೆ.

ಕಲಬುರಗಿ ಜಿಲ್ಲೆಯ ಪ್ರಸಿದ್ಧ ಸಾಂಪ್ರದಾಯಿಕ ಆಹಾರ "ಕಲಬುರ್ಗಿ ರೊಟ್ಟಿ" ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಅಮೆರಿಕ ಮತ್ತು ಆಸ್ಟ್ರೇಲಿಯಾಗೆ ಪ್ರತಿ ತಿಂಗಳು ಕಲಾ 10,000 ರೊಟ್ಟಿಗಳ ರಫ್ತು ಹಾಗೂ ಕೆನಡಾ ಗೆ 5,000 ರೊಟ್ಟಿಗಳ ರಫ್ತು ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ.

ಈ ಕುರಿತು ಸಚಿವ ಪ್ರಿಯಾಂಕ ಖರ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಈ ಮಹತ್ವಾಕಾಂಕ್ಷಿ ಯೋಜನೆಯ ಹಿಂದೆ ಜಿಲ್ಲೆಯ ನೂರಕ್ಕೂ ಹೆಚ್ಚು ಸ್ಥಳಿಯ ಸ್ವಸಹಾಯ ಸಂಘಗಳು ಹಾಗೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರ ಶ್ರಮ ಅಡಗಿದೆ.

ಕಳೆದ ಎರಡು ವರ್ಷಗಳಿಂದ ಸರ್ಕಾರ ಈ ಯೋಜನೆಗೆ ವಿಶೇಷ ಬೆಂಬಲ ನೀಡುತ್ತಿದ್ದು, 150ಕ್ಕೂ ಹೆಚ್ಚು ರೊಟ್ಟಿ ತಯಾರಿಕಾ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗಿದೆ. ಇದರ ಜೊತೆಗೆ ಉತ್ಪನ್ನದ ಗುಣಮಟ್ಟವನ್ನು ಜಾಗತಿಕ ಮಾನದಂಡಗಳಿಗೆ ತಕ್ಕಂತೆ ರೂಪಿಸಲು ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬ್ರಾಂಡಿಂಗ್ ಗೆ ವಿಶೇಷವನ್ನು ನೀಡಲಾಗಿದೆ.

ಈ ಕ್ರಮಗಳಿಂದ ಕಲಬುರಗಿ ರೊಟ್ಟಿ ಈಗ ಕೇವಲ ಸ್ಥಳೀಯ ಆಹಾರವಾಗಿರದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಕರ್ನಾಟಕ ಫುಡ್ ಬ್ರಾಂಡ್ ಆಗಿ ಬೆಳೆಯುತ್ತಿದೆ. ವಿದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರು ತಮ್ಮ ಊರಿನ ರುಚಿಯನ್ನು ಸವಿಯಲು ಈ ರೊಟ್ಟಿ ಪ್ರಮುಖ ಆಯ್ಕೆಯಾಗಿ ಪರಿಣಮಿಸಿದೆ.

ಇದೇ ವೇಳೆ ಕಲಬುರಗಿ ರೊಟ್ಟಿ ಈಗ ಸ್ವಿಗ್ಗಿ, ಜೋಮ್ಯಾಟೊ, ಮತ್ತು ಅಮೆಜಾನ್ ಸೇರಿದಂತೆ ಪ್ರಮುಖ ಇ ಕಾಮರ್ಸ್ ಮತ್ತು ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಗಳಲ್ಲಿಯೂ ಲಭ್ಯವಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಸೃಷ್ಟಿಯಾಗಿದೆ.

ಈ ಯೋಜನೆಯಿಂದ ಗ್ರಾಮೀಣ ಮಹಿಳೆಯರಿಗೆ ಸ್ಥಿರ ಆದಾಯ, ಉದ್ಯೋಗಾವಕಾಶ ಮತ್ತು ಆರ್ಥಿಕ ಸ್ವಾವಲಂಬನೆ ದೊರೆತಿದ್ದು, ಗ್ರಾಮೀಣ ಆರ್ಥಿಕತೆಗೆ ದೊಡ್ಡ ಉದ್ದೇಶ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read:

ಮಂಗಳೂರಿನಲ್ಲಿ ಭಾರಿ ಉದ್ಯೋಗ ಮೇಳ: ನಿರುದ್ಯೋಗಿಗಳಿಗೆ ನೇರ ನೇಮಕಾತಿ ಅವಕಾಶ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online