<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಯುಕೆ ಪ್ರಧಾನಿ ಹುದ್ದೆಗೆ ಗುಡ್ ಬೈ ಹೇಳಿದ ಕೀರ್ ಸ್ಟಾರ್ಮರ್ ?

ಯುಕೆ ಪ್ರಧಾನಿ ಹುದ್ದೆಗೆ ಗುಡ್ ಬೈ ಹೇಳಿದ ಕೀರ್ ಸ್ಟಾರ್ಮರ್ ?
Summary: Keir Starmer has announced his resignation as UK Prime Minister, marking another major turning point in British politics. He has decided to leave office just two years after his historic election victory in 2024. The decision comes amid growing discontent with the administration, internal party pressure and electoral setbacks.

BELAGAVI NEWS :

UK PM Keir starmer Resigns : ಬ್ರಿಟನ್ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ, ಕೀರ್ ಸ್ಟಾರ್ಮರ್ ರಾಜೀನಾಮೆ.

ತೀವ್ರ ರಾಜಕೀಯ ಮತ್ತು ಆರ್ಥಿಕ ಒತ್ತಡದ ನಡುವೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿಗೆ ಭರ್ಜರಿ ಗೆಲುವು ತಂದು ಕೊಟ್ಟಿದ್ದ ಸ್ಟಾರ್ಮರ್, ಕೇವಲ ಎರಡು ವರ್ಷಗಳಲ್ಲೇ ಅಧಿಕಾರ ತ್ಯಜಿಸುವ ಪರಿಸ್ಥಿತಿಗೆ ತಲುಪಿರುವುದು ಬ್ರಿಟಿಷ್ ರಾಜಕೀಯದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿದೆ. ವರದಿಗಳ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಬ್ರಿಟಿಷ್ ಪ್ರಧಾನಿಯಾಗಿದ್ದಾರೆ.

ದೇಶದಲ್ಲಿ ಜೀವನ ವೆಚ್ಚ ಏರಿಕೆ, ಆರ್ಥಿಕ ಬೆಳವಣಿಗೆಯ ಮಂದಗತಿ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಸಾರ್ವಜನಿಕ ಅಸಮಾಧಾನ ಹೆಚ್ಚಾಗಿತ್ತು. ಇತ್ತೀಚಿನ ಸ್ಥಳೀಯ ಚುನಾವಣೆಗಳಲ್ಲಿ ಲೇಬರ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಪಕ್ಷದೊಳಗೆ ನಾಯಕತ್ವ ಬದಲಾವಣೆಗೆ ಒತ್ತಾಯಗಳು ಜೋರಾಗಿದ್ದವು. ಹಲವಾರು ಸಚಿವರ ರಾಜೀನಾಮೆಗಳು ಮತ್ತು ಸಂಸದರ ಅಸಮಾಧಾನ ಸ್ಟಾರ್ಮರ್ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು.

ರಾಜೀನಾಮೆ ಘೋಷಿಸುವ ವೇಳೆ ಸ್ಟಾರ್ಮರ್, "ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ದೇಶದ ಹಿತಾಸಕ್ತಿಗಾಗಿ" ಎಂದು ಹೇಳಿ ತಮ್ಮ ಆಡಳಿತದ ಸಾಧನೆಗಳನ್ನು ಸಮರ್ಥಿಸಿಕೊಂಡರು. 2024ರಲ್ಲಿ ಲೇಬರ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ತಮ್ಮ ದೊಡ್ಡ ಸಾಧನೆ ಎಂದು ಅವರು ಉಲ್ಲೇಖಿಸಿದರು. ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕ ಪ್ರಧಾನಿಯಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಮುಂದಿನ ಪ್ರಧಾನಿಯಾಗುವ ಸ್ಪರ್ಧೆಯಲ್ಲಿ Andy Burrham ಪ್ರಮುಖ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. Wes Streeting ಸೇರಿದಂತೆ ಹಲವಾರು ನಾಯಕರು ಬರ್ನ್ ಹ್ಯಾಮ್ ಅವರಿಗೆ ಬೆಂಬಲ ಸೂಚಿಸಿರುವುದಾಗಿ ವರದಿಯಾಗಿದೆ. ಲೇಬರ್ ಪಕ್ಷದ ನಾಯಕತ್ವ ಚುನಾವಣೆಯ ಬಳಿಕ ಹೊಸ ಪ್ರಧಾನಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಲಂಡನ್ ನ ಪ್ರಧಾನಿ ಅಧಿಕೃತ ನಿವಾಸ '10 ಡೌನಿಂಗ್ ಸ್ಟ್ರೀಟ್' ನ ಹೊರಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, "ಮುಂದಿನ ಚುನಾವಣೆಗೆ ಪಕ್ಷವನ್ನು ಮುನ್ನಡೆಸಲು ನಾನು ಸರಿಯಾದ ವ್ಯಕ್ತಿ ಎಂದು ನನ್ನ ಪಕ್ಷ ಕೇಳುತ್ತಿದ್ದ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತೇನೆ" ಎಂದು ಭಾವುಕರಾಗಿ ನುಡಿದರು.

ರಾಜೀನಾಮೆಗೆ ಪ್ರಮುಖ ಕಾರಣಗಳೇನು?

ಪ್ರಧಾನಿ Keir Starmer ಅವರ ರಾಜೀನಾಮೆಯ ಹಿಂದೆ ಬಂದೆ ಒಂದು ಕಾರಣವಲ್ಲ. ರಾಜಕೀಯ, ಆರ್ಥಿಕ ಹಾಗೂ ಪಕ್ಷದೊಳಗಿನ ಹಲವು ಅಂಶಗಳ ಒತ್ತಡಗಳು ಕೆಲಸ ಮಾಡಿವೆ. ಕಳೆದ ಕೆಲವು ತಿಂಗಳುಗಳಿಂದ ಸರ್ಕಾರದ ಜನಪ್ರಿಯತೆ ಕುಸಿಯುತ್ತಿದ್ದರೆ, ಲೇಬಲ್ ಪಕ್ಷದೊಳಗೂ ನಾಯಕತ್ವದ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿದ್ದವು.

ಆಂಟಿ ಬರ್ನ್ ಹ್ಯಾಮ್ ಸವಾಲು:

ಮ್ಯಾಂಚೆಸ್ಟರ್ ನ ಮಾಜಿ ಮೇಯರ್ Andy Burnham ಇತ್ತೀಚಿಗೆ ರಾಷ್ಟ್ರೀಯ ರಾಜಕೀಯಕ್ಕೆ ಮರಳಿದ ಬಳಿಕ ಲೇಬರ್ ಪಕ್ಷದೊಳಗೆ ಹೊಸ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದ್ದರು. ಪಕ್ಷದ ಅನೇಕ ಸಂಸದರು ಹಾಗೂ ಕಾರ್ಯಕರ್ತರು ಬರ್ನ್ ಹ್ಯಾಮ್ ಅವರನ್ನು ಭವಿಷ್ಯದ ನಾಯಕನಾಗಿ ನೋಡಲಾರಂಬಿಸಿದರು. ಇದರ ಪರಿಣಾಮವಾಗಿ ಸ್ಟಾರ್ಮರ್ ಅವರ ನಾಯಕತ್ವದ ಮೇಲೆ ಪ್ರಶ್ನೆಗಳು ಎದ್ದವು. ಪಕ್ಷದೊಳಗಿನ ಈ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಟಾರ್ಮರ್ ಅವರ ನಾಯಕತ್ವದ ಮೇಲೆ ಪ್ರಶ್ನೆಗಳು ಎದ್ದವು.

ಆರ್ಥಿಕ ಬಿಕ್ಕಟ್ಟು ಮತ್ತು ಜೀವನ ವೆಚ್ಚ ಏರಿಕೆ:

ಬ್ರಿಟನ್ ನಲ್ಲಿ ಜೀವನ ವೆಚ್ಚದ ಸಂಕಷ್ಟ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಆಹಾರ ಪದಾರ್ಥಗಳು, ಇಂಧನ, ಮನೆ ಬಾಡಿಗೆ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗಿದ್ದವು.ಜನರ ಖರೀದಿ ಸಾಮರ್ಥ್ಯ ಕುಸಿಯುತ್ತಿದ್ದರು,

ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ ಎಂಬ ಟೀಕೆಗಳು ಕೇಳಿ ಬಂದವು.

ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂ ಸಾರ್ವಜನಿಕ ಸೇವೆಗಳ ಸುಧಾರಣೆಯ ಭರವಸೆಯನ್ನು ಸಹಕಾರಗೊಳಿಸುವಲ್ಲಿ ಸರಕಾರ ಹಿನ್ನಡೆ ಅನುಭವಿಸಿತು.ಇದರ ಪರಿಣಾಮವಾಗಿ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಗಿದ್ದು, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಅವಕಾಶ ದೊರೆಯಿತು.

ಪಕ್ಷದೊಳಗಿನ ಅಸಮಾಧಾನ:

ಲೇಬರ್ ಪಕ್ಷದ ಕೆಲ ಸಂಸದರು ಸರ್ಕಾರದ ಕಾರ್ಯವೈಕರಿ ಮತ್ತು ನೀತಿಗಳ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಪಕ್ಷದ ಜನತೆಯನ್ನು ಉಳಿಸಿಕೊಳ್ಳಲು ನಾಯಕತ್ವ ವಿಫಲವಾಗಿದೆ ಎಂದು ಅಭಿಪ್ರಾಯವು ವ್ಯಕ್ತವಾಗಿತ್ತು. ಕೆಲವು ಪ್ರಮುಖ ನಾಯಕರ ಬೆಂಬಲ ಕುಗ್ಗಿದ್ದರಿಂದ ಸ್ವಾರ್ಮರ್ ಅವರ ರಾಜಕೀಯ ಸ್ಥಿತಿ ಮತ್ತಷ್ಟು ದುರ್ಬಲವಾಯಿತು.

ಇದರ ಪಕ್ಷಗಳ ಪೈಪೋಟಿ : ಬ್ರಿಟನ್ ನಲ್ಲಿ ಗ್ರೀನ್ ಪಾರ್ಟಿ ಮತ್ತು ರಿಫಾರ್ಮ್ ಯುಕೆ ಪಕ್ಷಗಳು ಜನಪ್ರಿಯತೆ ಗಳಿಸುತ್ತಿದ್ದು, ಲೇಬರ್ ಪಕ್ಷದ ಅಸ್ತಿತ್ವಕ್ಕೆ ದಕ್ಕೆ ತರುತ್ತಿದ್ದವು. ಇದರಿಂದಾಗಿ ಪಕ್ಷದ ಉಳಿವಿಗೆ ನಾಯಕತ್ವ ಬದಲಾವಣೆ ಅನಿವಾರ್ಯವಾಯಿತು.

ಬ್ರಿಟನ್ ರಾಜಕೀಯದಲ್ಲಿ ಭೂಕಂಪ : ಪ್ರಧಾನಿ ಕೀರ್ ಸ್ಪಾರ್ಮರ್ ರಾಜೀನಾಮೆ, ಮುಂದಿನ ನಾಯಕ ಯಾರು?

ಬ್ರಿಟನ್ ಪ್ರಧಾನಿ ಹಾಗೂ ಲೇಬರ್, ಪಕ್ಷದ ನಾಯಕ Keir stormer ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದು, ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಎರಡು ವರ್ಷಗಳ ಹಿಂದೆ ಭರ್ಜರಿ ಚುನಾವಣಾ ಗೆಲುವಿನೊಂದಿಗೆ ಅಧಿಕಾರಕ್ಕೇರಿದ ಸ್ವಾರ್ಮರ್ ,ಘಟನೆಗೆ ಪಕ್ಷದೊಳಗಿನ ಒತ್ತಡ ಮತ್ತು ಇತ್ತೀಚಿನ ರಾಜಕೀಯ ಹಿನ್ನಡೆಯ ನಡುವೆ ಈ ನಿರ್ಧಾರ ಕೈಗೊಂಡಿದ್ದಾರೆ. ಅವರು ಹೊಸ ನಾಯಕ ಆಯ್ಕೆಯಾಗುವವರೆಗೆ ಮಧ್ಯಂತರ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ

ತಮ್ಮ ಸಾಧನೆಗಳನ್ನು ಸಮರ್ಥಿಸಿಕೊಂಡ ಸ್ಪಾರ್ಮರ್:

ರಾಜಿನಾಮೆ ಭಾಷಣದಲ್ಲಿ ಸ್ಪಾರ್ಮರ್ ತಮ್ಮ ಆಡಳಿತದ ಸಾಧನೆಗಳನ್ನು ಉಲ್ಲೇಖಿಸಿದರು.

"ಆರು ವರ್ಷಗಳ ಹಿಂದೆ ನಾನು ಲೇಬರ್ ಪಕ್ಷದ ಜವಾಬ್ದಾರಿ ವಹಿಸಿಕೊಂಡಾಗ ಪಕ್ಷ ಮುಗಿದೆ ಹೋಯಿತು ಎಂದು ಹಲವರು ಭಾವಿಸಿದ್ದರು. ಆದರೆ ಕಠಿಣ ಪರಿಶ್ರಮದಿಂದ ನಾವು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದೆವು. ನಮ್ಮ ಆಡಳಿತದಲ್ಲಿ ವೇತನಗಳು ವೇಗವಾಗಿ ಏರಿಕೆ ಕಂಡವು,ಪ್ರಮುಖ ಕಾರ್ಮಿಕ ಸುಧಾರಣೆಗಳನ್ನು ಜಾರಿಗೆ ತಂದೇವು ಹಾಗೂ ಲಕ್ಷಾಂತರ ಜನರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಿದ್ದೆವು" ಎಂದು ಅವರು ಹೇಳಿದರು.

ಮುಂದಿನ ಪ್ರಧಾನಿ ಯಾರು?

ಸ್ವಾರ್ಮರ್ ರಾಜೀನಾಮೆಯ ಬಳಿಕ ಲೇಬರ್ ಪಕ್ಷದ ನಾಯಕತ್ವ ಸ್ಪರ್ಧೆ ಈಗ ಕೇಂದ್ರಬಿಂದುವಾಗಿದೆ.ಸದ್ಯಕ್ಕೆ ಪ್ರಮುಖ ಸ್ಪರ್ಧಿಗಳಲ್ಲಿ ಮುಂಚೂಣಿಯಲ್ಲಿರುವವರು:

Andy Burnham:

ಗ್ರೇಟರ್ ಮ್ಯಾಂಚೆಸ್ಟರ್ ಮೇಯರ್ ಆಗಿರುವ ಬರ್ನ್ ಹ್ಯಾಮ್ ಅವರಿಗೆ ಪಕ್ಷದ ಸಂಸದರ ಬಲವಾದ ಬೆಂಬಲವಿದೆ.ಹಲವಾರು ವಿಶ್ಲೇಷಕರು ಅವರನ್ನು ಮುಂದಿನ ಪ್ರಧಾನಿಯಾಗಿ ನೋಡುತ್ತಿದ್ದಾರೆ.

wes Streeting:

ಆರಂಭದಲ್ಲಿ ನಾಯಕತ್ವ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದ್ದರೂ, ಸ್ಟ್ರೀಟಿಂಗ್ ಈಗ ಬರ್ನ್ ಹ್ಯಾಮ್ ಅವರಿಗೆ ಬೆಂಬಲ ಘೋಷಿಸಿರುವುದರಿಂದ ಅವರ ಸ್ಪರ್ಧಿಸುವ ಸಾಧ್ಯತೆ ಕಡಿಮೆಯಾಗಿದೆ.

ಜಾಗತಿಕ ಗಮನ ಸೆಳೆದ ರಾಜೀನಾಮೆ:

ಈ ರಾಜೀನಾಮೆ ಕೇವಲ ಬ್ರಿಟನ್ ಒಳ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಇರಾನ್-ಅಮೇರಿಕಾ ಉದ್ವಿಗ್ನತೆಯ ನಡುವೆಯೇ ಬ್ರಿಟನ್ ನಲ್ಲಿ ನಾಯಕತ್ವ ಬದಲಾವಣೆ ನಡೆಯುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣ ವಾಗಿದೆ. ಹೊಸ ನಾಯಕ ಬ್ರಿಟನ್ ವಿದೇಶಾಂಗ ನೀತಿ, ಯುರೋಪ್ ಜೊತೆಗಿನ ಸಂಬಂಧಗಳು ಹಾಗೂ ಜಾಗತಿಕ ಭದ್ರತಾ ವಿಚಾರಗಳಲ್ಲಿ ಯಾವ ರೀತಿಯ ನಿಲುವು ತಾಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

Also Read:

ವರ್ಚುಯಲ್ ಮೂಲಕ ಕೋರ್ಟ್ ಗೆ ಹಾಜರಾದ ಅಲ್ಲು ಅರ್ಜುನ್; ಕಾಲ್ತುಳಿತ ಪ್ರಕರಣದ ವಿಚಾರಣೆ ಮುಂದೂಡಿಕೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online