belagavi news:
ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ ಹೇಗಿದೆ:
ಪಂಚಾಂಗ:
ದಿನಾಂಕ:1-5-2026
ವಾರ :ಶುಕ್ರವಾರ
ಸಂವತ್ಸರ: ಶ್ರೀ ಪರಾಭವನಾಮ
ಆಯನ: ಉತ್ತರಾಯಣ
ಪಕ್ಷ : ಪೂರ್ಣಿಮಾ
ತಿಥಿ: ಪೂರ್ಣಿಮಾ
ನಕ್ಷತ್ರ: ಸ್ವಾತಿ
ಸೂರ್ಯೋದಯ: ಮುಂಜಾನೆ 05:56 ಗಂಟೆಗೆ
ಅಮೃತಕಾಳ ಬೆಳಗ್ಗೆ 7:31ರಿಂದ 09:06ರವರೆಗೆ
ದುರ್ಮುಹೂರ್ತ: ಬೆಳಗ್ಗೆ 08:20 ರಿಂದ 09:08 ಮತ್ತು ಮಧ್ಯಾಹ್ನ 02:44 ರಿಂದ 3:32ರ ತನಕ
ರಾಹುಕಾಲ: ಬೆಳಗ್ಗೆ 10:40 ರಿಂದ 12:15ರವರೆಗೆ
ಸೂರ್ಯಾಸ್ತ: ಸಂಜೆ 6:33 ಗಂಟೆಗೆ
ಶುಕ್ರವಾರದ ರಾಶಿ ಭವಿಷ್ಯ:
ಮೇಷ ರಾಶಿ: ನೀವು ಇಂದು ನಿಮ್ಮ ನೋಟ ಹಾಗೂ ನಿಮ್ಮ ಸಾಮರ್ಥ್ಯಗಳಿಗೆ ಪ್ರತಿಯೊಬ್ಬರ ಗಮನ ಸೆಳೆಯುತ್ತಿರಿ. ನಿಮ್ಮನ್ನು ನೀವು ನಮೋತ್ಸಾಹಗೊಳಿಸಲು ನೀವು ಅತ್ಯುತ್ತಮ ಪ್ರಯತ್ನ ನಡೆಸಬೇಕು ನೀವು ಪಡೆದ ಶಕ್ತಿಯಿಂದ ನೀವು ಸಾಕಷ್ಟು ಸಾಧನೆ ಮಾಡುತ್ತೀರಿ.
ವೃಷಭ ರಾಶಿ: ವೃಷಭ ರಾಶಿಯವರು ಇಂದು ಅತ್ಯಂತ ದೃಢವಾದ ಅಥವಾ ಅತಿಯಾದ ಬೇಡಿಕೆಯಿಂದ ವರ್ತಿಸಲು ಸೂಕ್ತ ದಿನವಲ್ಲ. ಸಂಘರ್ಷ ಗಳು, ವಾದ ವಿವಾದಗಳು ಮತ್ತು ಬಿಕ್ಕಟ್ಟುಗಳಿಂದ ದೂರವಿರುವುದು ಉತ್ತಮ. ತಿಕಾಟವನ್ನು ತಪ್ಪಿಸದೆ ಮುಂದುವರೆದರೆ ನೀವು ಹಿಂದೆ ಸರಿಯುವ ಪರಿಸ್ಥಿತಿ ಎದುರಾಗಬಹುದು. ಇದರಿಂದ ಮುಖಭಂಗ ಹಾಗೂ ಆತ್ಮ ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಆದ್ದರಿಂದ ಜಾಗೃತಿಯಿಂದ ನಡೆದುಕೊಳ್ಳುವುದು ಅಗತ್ಯ.
ಮಿಥುನ ರಾಶಿ: ಇಂದು ನೀವು ನಿಮ್ಮ ಹೃದಯಕ್ಕೆ ಹತ್ತಿರವಿರುವ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಇಷ್ಟಪಡುತ್ತೀರಿ ಇತರರ ಕಷ್ಟಗಳಲ್ಲಿ ನೆರವಾಗುವ ಮನೋಭಾವ ಹೆಚ್ಚಾಗಿದ್ದು ಈ ಪ್ರಕ್ರಿಯೆಯಲ್ಲಿ ನೀವು ಸ್ವಾತಂತ್ರ್ಯವನ್ನು ಅನುಭವಿಸುತ್ತಿರಿ. ನಿಮ್ಮ ಸೇವಾ ಶಕ್ತಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿ ನೀವು ಇಂದು ಅನಗತ್ಯ ಸನ್ನಿವೇಶಗಳನ್ನು ಎದುರಿಸಬಹುದು. ಇದರ ಫಲಿತಾಂಶದಿಂದ ಸಂಕಟ ಅನುಭವಿಸುತ್ತೀರಿ. ಆದರೂ ನೀವು ನಿಮ್ಮ ಕುಶಲತೆಯಿಂದ ಅದರಿಂದ ಹೊರ ಬರುತ್ತೀರಿ ಯಶಸ್ಸು ಸುಲಭವಾಗಿ ಪಡೆಯುವುದದಲ್ಲ ಎಂದು ನೆನಪಿನಲ್ಲಿರಿಸಿಕೊಳ್ಳಿ ಅದಕ್ಕೆ ಕಠಿಣ ಪರಿಶ್ರಮ ಅಗತ್ಯ.
ಸಿಂಹ ರಾಶಿ: ಹಳೆಯ ಪರಿಚಯಗಳನ್ನು ನವೀಕರಿಸಲು ಮತ್ತು ಹೊಸ ಬಾಂಧವ್ಯಗಳನ್ನು ಮಾಡಿಕೊಳ್ಳಲು ಇದು ಒಳ್ಳೆಯ ದಿನವಾಗಿದೆ. ನಿಮ್ಮ ಮಿತ್ರರು ಹಾಗೂ ಬಂಧುಗಳ ಬಹುಶಃ ಇಂದು ನಿಮ್ಮನ್ನು ಭೇಟಿ ಮಾಡುತ್ತಾರೆ. ನಿಮ್ಮ ಮನೆಯನ್ನು ಆನಂದದ ಭಾವನೆ ತುಂಬಿರುತ್ತದೆ. ನಿಮ್ಮ ಅತಿಥಿಗಳಿಗೆ ನೀವು ಅದ್ದೂರಿ ಕಾರ್ಯಕ್ರಮ ನೀಡುತ್ತೀರಿ.
ಕನ್ಯಾ ರಾಶಿ: ತರ್ಕ ಮತ್ತು ಭಾವನೆಗಳು ಇಂದು ನಿಮ್ಮ ಸಂಬಂಧಗಳಲ್ಲಿ ಪ್ರಮುಖ ಪ್ರಭಾವ ಬೀರುವ ಸಾದ್ಯತೆ ಇದೆ ಭಾವನಾತ್ಮಕವಾಗಿ ನೀವು ಸ್ವಲ್ಪ ಅನುಮಾನ ಭಾವವನ್ನು ಅನುಭವಿಸಬಹುದು ಮತ್ತು ಇಂದು ನಿಮ್ಮ ಭಾವನೆಗಳು ಹಾಗೂ ನೀವು ವಾಸ್ತವವಾಗಿ ನಿರೀಕ್ಷಿಸಿದ್ಧ ಸಂಗತಿಗಳ ನಡುವೆ ಗೊಂದಲ ಉಂಟು ಮಾಡಬಹುದು.
ತುಲಾ ರಾಶಿ: ನಿಮ್ಮಲ್ಲಿನ ಭಾವಾತಿರೇಕ ಮುಂಬಧಿಗೆ ಬರುತ್ತದೆ. ನೀವು ಇಂದು ಮಾಡುವ ಕೆಲಸದಲ್ಲಿ ನಿಷ್ಠೆ ಅಥವಾ ಕುಟುಂಬಕ್ಕೆ ಬದ್ಧತೆ ಎಲ್ಲದರಲ್ಲೂ ನೀವು ಕಾಣ ಪಡೆಯುತ್ತೀರಿ. ವ್ಯಾಪಾರದಲ್ಲಿ ನೀವು ಶ್ರೇಷ್ಠವಾದದನ್ನು ನೀಡುವ ಮೂಲಕ ಸ್ಪರ್ಧೆ ಒಡ್ಡುತ್ತೀರಿ ಹಾಗೂ ನೀವು ಮಾಡುವುದರಲ್ಲಿ ಶ್ರೇಷ್ಠರಾಗುತ್ತಿರಿ.
ವೃಶ್ಚಿಕ ರಾಶಿ: ಇಂದು ನಿಮ್ಮ ನಕ್ಷತ್ರಗಳು ಹಣದ ಅತಿಯಾದ ಖರ್ಚಿನ ಸೂಚನೆ ನೀಡುತ್ತಿದೆ. ವಿಶೇಷವಾಗಿ ಇಂದು ನಿಮ್ಮ ಪ್ರೀತಿ ಪಾತ್ರರಿಗಾಗಿ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ. ಹಣಕ್ಕಿಂತ ಪ್ರೀತಿ ಪಾತ್ರರ ಸಂತೋಷವೇ ಮುಖ್ಯವೆಂದು ನೀವು ಭಾವಿಸಬಹುದು. ಹೊರಗಡೆ ಪ್ರವಾಸ ಅಥವಾ ಸುತ್ತಾಡಕ್ಕೆ ಕರೆದೊಯ್ಯುವ ಮೂಲಕ ಅವರನ್ನು ಆಶ್ಚರ್ಯ ಗೊಳಿಸಲು ನೀವು ವಿಶೇಷ ಪ್ರಯತ್ನ ಮಾಡಬಹುದು.
ಧನು ರಾಶಿ: ಧನು ರಾಶಿಯವರು ಇಂದು ನೀವು ಬಾಲ್ಯದ ನೆನಪುಗಳಲ್ಲಿ ಮುಳುಗಿ ಹೋಗುತ್ತಿರಿ. ನೀವು ದಿಢೀರ್ ರಜೆ ಪೆದುಕೊಂಡು ನಗರದ ಹೊರವಲಯಕ್ಕೆ ಟ್ರೀಟ್ ಮಾಡಬಹುದು ಅಲ್ಲದೆ ಹಳೆಯ ಮಿತ್ರರ ಬಳಿಗೆ ಹೋಗುವುದು ನಿಮ್ಮ ಅನುಭವ ಉತ್ತಮ ಪಡಿಸುತ್ತದೆ.
ಮಕರ ರಾಶಿ: ಕೆಲಸದಲ್ಲಿ ಪುರಸ್ಕಾರಗಳು ನಿಮಗಾಗಿ ಕಾದಿವೆ ಮತ್ತು ಸಾಮಾನ್ಯವಾಗಿ ಕಂಡುಬರುವಂತೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ಸಂಪತ್ತಿನ ಕುರಿತು ಅಸಮಾಧಾನ ಅಥವಾ ಈರ್ಷ್ಯೆ ವ್ಯಕ್ತಪಡಿಸುವುದಿಲ್ಲ. ಬದಲಾಗಿ ಅವರು ಪೂರ್ಣ ಬೆಂಬಲ ನೀಡುವ ಸಾಧ್ಯತೆ ಇದೆ ಆದರೆ ವೃತ್ತಿ ಬದಲಾವಣೆಯನ್ನು ಬಯಸುವವರು ಸ್ವಲ್ಪ ಕಾಲ ಕಾಯುವುದು ಉತ್ತಮ ಏಕೆಂದರೆ ಇದು ಸೂಕ್ತ ಸಮಯವಾಗಿರದೆ ಇರಬಹುದು.
ಕುಂಭ ರಾಶಿ: ಕುಂಭ ರಾಶಿಯವರು ಇಂದು ಸರ್ವ ಶಕ್ತನು ನಿಮಗೆ ನೋವಿನ ಜೊತೆಗೆ ಹೊರೆ ನೀಡಿದರೆ, ಅದೇ ವೇಳೆ ಸಂತೋಷದ ಅನುಭವಗಳನ್ನು ನೀಡುತ್ತಾರೆ ನೀವು ಇಂದು ಮಾಡಬೇಕಾದ ಕೆಲಸಗಳ ಪಟ್ಟಿಯಿಂದ ದಿನವನ್ನು ಆರಂಭಿಸುತ್ತಿರಿ ಮತ್ತು ಅದೃಷ್ಟವಶಾತ್ ಅವುಗಳನ್ನು ಒಂದರ ನಂತರ ಒಂದರಂತೆ ಯಶಸ್ವಿಯಾಗಿ ಪೂರ್ಣಗೊಳಿಸುವ ಸಾಧ್ಯತೆ ಇದೆ.
ಮೀನ ರಾಶಿ: ನೀವು ನಿಮ್ಮ ದೈನಂದಿನ ದಿನಾಚರಣೆಯನ್ನು ಸರಿಯಾಗಿ ಸಂಘಟಿಸಲು ಪ್ರಯತ್ನಿಸುತ್ತಿರಿ ಆದರೆ ಗ್ರಹಗಳ ಅಸಮತೋಲನದಿಂದಾಗಿ ಇಂದು ಕೆಲವು ಕೆಲಸಗಳನ್ನು ನಿರೀಕ್ಷಿಸಿದಂತೆ ಯಶಸ್ವಿಯಾಗಿ ಮುಗಿಸಲು ಕಷ್ಟವಾಗಬಹುದು. ಆದ್ದರಿಂದ ತಾಳ್ಮೆಯಿಂದ ಇರುವುದು ಮತ್ತು ವಿಷಯಗಳನ್ನು ಸ್ವಾಭಾವಿಕವಾಗಿ ನಡೆಯಲು ಬಿಡುವುದು ಉತ್ತಮ. ಬದಲಾವಣೆಯ ಆವೇಶವನ್ನು ನಿಯಂತ್ರಿಸುವುದು ಸಹ ಉಪಯುಕ್ತವಾಗುತ್ತದೆ.
Also Read: