<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಹವಾಮಾನ ಎಚ್ಚರಿಕೆ : ಮೇ ಮಧ್ಯ ಭಾಗದಲ್ಲಿ ಮುಂಗಾರು ಎಂಟ್ರಿ ಸೂಚನೆ

ಹವಾಮಾನ ಎಚ್ಚರಿಕೆ : ಮೇ ಮಧ್ಯ ಭಾಗದಲ್ಲಿ ಮುಂಗಾರು ಎಂಟ್ರಿ ಸೂಚನೆ
Summary: Amidst the sunshine, there is some cool news. The prediction that monsoon rains may enter in mid-May has increased curiosity in the weather community. The expectation of this rain, which will give a break to the intensity of summer, will give people a cool relief.

Belagavi news:

ದೇಶದಲ್ಲಿ ತೀವ್ರ ಬಿಸಿಲಿನ ಹೊಡೆತ ಮುಂದುವರೆದಿರುವ ನಡುವೆಯೇ ಹವಾಮಾನ ಇಲಾಖೆ ಸಂತಸದ ಮುನ್ಸೂಚನೆ ನೀಡಿದೆ. ಈ ಬಾರಿ ನೈರುತ್ಯ ಮುಂಗಾರು ಅವಧಿಗಿಂತ ಮುಂಚಿತವಾಗಿ ಅಂಡಮಾನ್ ಸಮುದ್ರದ ಭಾಗಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಮುಂಗಾರು ಸಾಮಾನ್ಯ ಕಿಂತ ಬೇಗ ಚಾಲನೆ ಆರಂಭಿಸಬಹುದಾಗಿ ಹವಾಮಾನ ಇಲಾಖೆ ಅಂದಾಜು ಮಾಡಿದ್ದು, ಮೇ ಕೊನೆಯ ವಾರದಲ್ಲಿ ಕೇರಳ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಸೂಚಿಸಿದೆ. ಇದು ದೇಶದ ಹಲವು ಭಾಗಗಳಲ್ಲಿ ತೀವ್ರ ಬೇಸಿಗೆ ತಾಪಮಾನಕ್ಕೆ ತಾತ್ಕಾಲಿಕ ವಿರಾಮ ನೀಡುವ ನಿರೀಕ್ಷೆ ಮೂಡಿಸಿದೆ.

ಆದರೆ ಈ ಬಾರಿಯ ಮಳೆ ಮಾದರಿಯ ಮೇಲೆ ಎಲ್ ನೀನೋ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹವಾಮಾನ ಸ್ಥಿತಿ ಮಳೆಯ ಪ್ರಮಾಣ ಮತ್ತು ಹಂಚಿಕೆಯಲ್ಲಿ ವ್ಯತ್ಯಾಸ ಉಂಟು ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Sponsored

ಮುಂಗಾರು ಆರಂಭದ ನಿಖರ ದಿನಾಂಕ ಮತ್ತು ಅದರ ತೀವ್ರತೆ ಕುರಿತು ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಪದ್ಯಕ್ಕೆ ಮುಂಗಾರು ಬೇಗನೆ ದೇಶಕ್ಕೆ ಪ್ರವೇಶಿಸುವ ಮುನ್ಸೂಚನೆ ಜನರಲ್ಲಿ ಆಶಾಭಾವ ಮೂಡಿಸಿದೆ.

ದೇಶದಲ್ಲಿ ತೀವ್ರ ಬಿಸಿಲಿನ ಹೊಡೆತ ಮುಂದುವರೆದಿರುವ ನಡುವೆಯೂ ಹವಾಮಾನ ಇಲಾಖೆ ನೈರುತ್ಯ ಮುಂಗಾರು ಕುರಿತು ಮಹತ್ವದ ಮುನ್ಸೂಚನೆ ನೀಡಿದೆ. ಈ ಬಾರಿ ಮುಂಗಾರು ಮಾರುತವು ಸಾಮಾನ್ಯ ಅವಧಿಗಿಂತ ಮುಂಚಿತವಾಗಿಯೇ ದೇಶಕ್ಕೆ ಪ್ರವೇಶಿಸುವ ಸಾಧ್ಯತೆ ಇರುವುದಾಗಿ ತಿಳಿಸಲಾಗಿದೆ.

ಐಎಂಡಿ ಮಾಹಿತಿಯ ಪ್ರಕಾರ, ಮುಂಗಾರು ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವೇಶಿಸಲಿದೆ. ಮೇ 14ರಿಂದ ಮೇ 16ರ ನಡುವೆ ಈ ಪ್ರದೇಶಕ್ಕೆ ಮುಂಗಾರು ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ನಂತರ ಮುಂಗಾರು ವೇಗ ಪಡೆದು, ಸಾಮಾನ್ಯವಾಗಿ ಜೂನ್ 1ರಂದು ಕೇರಳ ಕರಾವಳಿಗೆ ಅಪಳಿಸುವ ಬದಲು ಈ ಬಾರಿ ಮೇ ಕೊನೆ ವಾರದಲ್ಲಿ ಪ್ರವೇಶಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಈ ಬಾರಿ ಮಳೆಯ ಪ್ರಮಾಣದಲ್ಲೂ ಬದಲಾವಣೆ ಕಾಣುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಮೇ ತಿಂಗಳಲ್ಲಿ ದೇಶದ ಹಲವು ಭಾಗಗಳಲ್ಲಿ ವಾಡಿಕೆ ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಇದು ಕೃಷಿ ಚಟುವಟಿಕೆಗಳಿಗೆ ಆರಂಭಿಕ ಹಂತದಲ್ಲಿ ಅನುಕೂಲಕರವಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Sponsored

ಆದರೆ ಈಶಾನ್ಯ ಪೂರ್ವ ಮತ್ತು ಕೇಂದ್ರ ಭಾರತ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ವಾಡಿಕೆ ಎಷ್ಟೇ ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ನೀರಿನ ಲಭ್ಯತೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದರ ಜೊತೆಗೆ ದೇಶದ ಬಹುತೇಕ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ಉತ್ತರ ಭಾರತ ಮತ್ತು ಹಿಮಾಚಲದ ತಪ್ಪಲಿನ ಪ್ರದೇಶಗಳಲ್ಲಿ ಹಿಟ್ ವೇವ್ ಪರಿಣಾಮ ತೀವ್ರವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಏಪ್ರಿಲ್ ತಿಂಗಳಲ್ಲಿ ದಕ್ಷಿಣಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದರೆ, ಇತರ ಭಾಗಗಳಲ್ಲಿ ಕನಿಷ್ಠಪಮಾನ ಮಟ್ಟದಲ್ಲಿ ಇತ್ತು.

ಮುಂಗಾರು ಬೇಗನೆ ಆರಂಭವಾಗುವ ಈ ಮುನ್ಸೂಚನೆ ಜನರಲ್ಲಿ ಆಶಾಭಾವನೆ ಮೂಡಿಸಿದರು, ಮಳೆಯ ಹಂಚಿಕೆ ಮತ್ತು ಹವಾಮಾನ ಅಸ್ಥಿರತೆಯ ಬಗ್ಗೆ ಎಚ್ಚರಿಕೆಯಿಂದ ಇರವ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ದೇಶದಲ್ಲಿ ತೀವ್ರ ಬಿಸಿಲಿನ ನಡುವೆಯೂ ಮುಂಗಾರು ಕುರಿತ ಹೊಸ ಹವಾಮಾನ ಮುನ್ಸೂಚನೆ ಗಮನ ಸೆಳೆಯುತ್ತಿದೆ. ಅವಮಾನ ಇಲಾಖೆ ಪ್ರಕಾರ ಈ ಬಾರಿ ಮುಂಗಾರು ಮಳೆಯ ಮೇಲೆ ಎಲ್ ನಿನೋ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

Sponsored

ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ ನಿನೋ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ನೈರುತ್ಯ ಮುಂಗಾರು ಮಳೆಯ ಸ್ವರೂಪ ಹಾಗೂ ಪ್ರಮಾಣದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇದರ ಪರಿಣಾಮವಾಗಿ ಈ ವರ್ಷ ಒಟ್ಟಾರೆ ಮಳೆಯ ಪ್ರಮಾಣ ವಾಡಿಕೆ ಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಅಂದಾಜು ವ್ಯಕ್ತವಾಗಿದೆ.

ಈ ಪರಿಸ್ಥಿತಿ ಕೃಷಿ ಕ್ಷೇತ್ರಕ್ಕೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆಯ ಅಸಮತೋಲನದಿಂದಾಗಿ ಹಲೋ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗುವ ಭೀತಿ ಇದೆ. ವಿಶೇಷವಾಗಿ ಕೃಷಿ ಅವಲಂಬಿತ ಪ್ರದೇಶಗಳಲ್ಲಿ ಬೆಳೆಯೋಜನೆ ಹಾಗೂ ನೀರಿನ ನಿರ್ವಹಣೆ ಕುರಿತು ಮುನ್ನೆಚ್ಚರಿಕೆ ಅಗತ್ಯವಾಗಿದೆ ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ.

ಅದೇ ವೇಳೆ, ಕೆಲವು ಭಾಗಗಳಲ್ಲಿ ಅಲ್ಪಾವಧಿ ಭಾರಿ ಮಳೆ ಆಗುವ ಸಾಧ್ಯತೆಯೂ ಇರುವುದರಿಂದ ಪ್ರವಾಹ ಹಾಗೂ ಜಲ ಜಮಾವಣಿ ಪರಿಸ್ಥಿತಿಗೂ ಎಚ್ಚರಿಕೆ ನೀಡಲಾಗಿದೆ. ಮಳೆಯ ಹಂಚಿಕೆ ಅಸಮಾನವಾಗುವ ಸಾಧ್ಯತೆ ಇರುವುದರಿಂದ ರಾಜ್ಯಗಳು ಮತ್ತು ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.

ಹವಾಮಾನ ಇಲಾಖೆ ನೀಡಿರುವ ಈ ಮುನ್ಸೂಚನೆಯ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಯೋಜನೆಗಳನ್ನು ಮರು ಪರಿಶೀಲಿಸುವುದು ಹಾಗೂ ನೀರಿನ ಸಂರಕ್ಷಣೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಸಾರ್ವಜನಿಕರೂ ಸಹ ಹವಾಮಾನ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸೂಚಿಸಲಾಗಿದೆ.

Sponsored

Also Read:

ಬೆಳಗಾವಿಯಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದುರ್ಘಟನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online