belagavi news:
ಬೆಳಗಾವಿ: ಕಪಿಲೇಶ್ವರ ದೇವಸ್ಥಾನದ ಆವರಣದಲ್ಲಿರುವ ಹೊಂಡದಲ್ಲಿ ಇಬ್ಬರು ಬಾಲಕರು ಮುಳುಗಿರುವ ಘಟನೆ ನಡೆದಿದೆ. ಘಟನೆ ನಂತರ ತಕ್ಷಣವೇ ಸ್ಥಳೀಯರು ಹಾಗೂ ಸಂಬಂಧಿತ ತಂಡಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು ಬಾಲಕರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.
ಬೆಳಗಾವಿಯಲ್ಲಿ ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರ ನೀರಿನಲ್ಲಿ ಮುಳುಗು ಶೋಧ ಕಾರ್ಯಾಚರಣೆ ಬೆಳಗಾವಿ ನಗರದಲ್ಲಿ ಇಂದು ಬೆಳಗ್ಗೆ ದುರಂತ ಘಟನೆ ನಡೆದಿದೆ. ಕಪಿಲೇಶ್ವರ ದೇವಸ್ಥಾನದ ಆವರಣದಲ್ಲಿರುವ ಹೊಂಡದಲ್ಲಿ ಈಜಲು ಹೋದ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ.
ಮುಳುಗಿದ ಬಾಲಕರನ್ನು ಶಿವಾಜಿ ನಗರದ ಶಿವಂ ಪರಶುರಾಮ್ ಸುಂಡಿಕರ್ (7) ಮತ್ತು ಶಹಪುರ್ ಜೇಡ ಗಲ್ಲಿಯ ಪರಶುರಾಮ್ ರಾಜು ನೀಲಜಕರ್ (11) ಎಂದು ಗುರುತಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎಸ್ ಡಿ ಆರ್ ಎಫ್ ಸಿಬ್ಬಂದಿ ಆಗಮಿಸಿ ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕ ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಲ್ಕು ಮುತ್ತು ಕೊಟ್ಟು ಹೋಗಿದ್ದ -ತಂದೆಯ ಆಕ್ರಂದನ: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಬೆಳೆಗೆ 9 ಗಂಟೆ ಸುಮಾರಿಗೆ ಹೊಂಡದಲ್ಲಿ ಈಜಲು ಈ ಮಕ್ಕಳು ಹೋಗಿದ್ದರು. ಆದರೆ ನೀರಲ್ಲಿ ಮುಳುಗಿರುವುದು ಅವರ ತಂದೆ ತಾಯಿಗೆ ಬರ ಸಿಡಿಲು ಬಡಿದಂತಾಗಿದೆ. ಬೆಳಗ್ಗೆ ಹೋಗುವಾಗ ನನ್ನ ಮುಖಕ್ಕೆ 4 ಮುತ್ತು ಕೊಟ್ಟು ಹೋಗಿದ್ದ ಎಂದು ಮಗನ ನೆನೆದು ತಂದೆ ಕಣ್ಣೀರು ಹಾಕುತ್ತಿದ್ದುದು ಹೃದಯ ಕಳಕುವಂತಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ್ ತಾಲೂಕಿನ ಐತ್ತೂರು ಗ್ರಾಮದ ಅರಬ್ಬಿ ತೋಡು ಪ್ರದೇಶದಲ್ಲಿ ನದಿಯಲ್ಲಿ ಸ್ನಾನಕ್ಕಿಳಿದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾ ಪತಿಯಾದ ವ್ಯಕ್ತಿಯನ್ನು ಮರ್ದಾಳ ನಿವಾಸಿ ರಕ್ಷಿತ್ (26) ಎಂದು ಗುರುತಿಸಲಾಗಿದೆ. ಅವರು ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸ್ತವಿದ್ದು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಶೋಧ ಕಾರಚರಣೆಯನ್ನು ಮುಂದುವರಿಸಿದ್ದಾರೆ.
ಇದೇ ವೇಳೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದ ಮತ್ತೊಂದು ಭೀಕರ ದುರಂತ ಎಲ್ಲರ ಮನ ಕಲಕಿದೆ. ನರ್ಮದಾ ನದಿಯ ಬರಗಿ ಅಣೆಕಟ್ಟಿನಲ್ಲಿ ಪ್ರವಾಸಿ ದೋಣಿ ಮುಳುಗಿ 9 ಮಂದಿ ಸಾವನ್ನಪ್ಪಿದ್ದಾರೆ. ಅಕಸ್ಮಾತ್ ಬೀಸಿದ್ದ ಬಿರುಗಾಳಿಯಿಂದ ಸುಮಾರು 40 ಪ್ರಯಾಣಿಕರಿದ್ದ ಧೋಣಿ ಮಗುಚಿ ಬಿದ್ದಿದ್ದು, ಘಟನೆಯ ಬಳಿಕ ತಕ್ಷಣ ರಕ್ಷಣಾ ಕಾರ್ಯಚರಣೆ ಆರಂಭಿಸಲಾಯಿತು. ಈ ವೇಳೆ 22 ಜನರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಬಾರ್ಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಸಿಕ್ಕ ತಾಯಿ ಮಗುವಿನ ಮೃತದೇಹಗಳು ಮನ ಕಲುಕುವ ದೃಶ್ಯವಾಗಿತ್ತು.
Also Read: