belagavi news :
'ಪೆದ್ದಿ ನಿಮ್ಮ ಹೃದಯದಲ್ಲಿ ಉಳಿಯಲಿದೆ' ಎಂದು ಚಿತ್ರ ತಯಾರಿಕರು ಭರವಸೆ ನೀಡಿದ್ದಾರೆ.
ವಿಶ್ವ ಪ್ರತಿಷ್ಠಿತ ಆಸ್ಕರ್ ವೇದಿಕೆ ತಲುಪಿದ್ದ ರಾಮ್ ಚರಣ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ಪೆದ್ದಿ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ್ ನಿಗದಿಯಾಗಿದೆ. ಇತ್ತೀಚೆಗಷ್ಟೇ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಘೋಷಿಸಿತ್ತು.
ಸ್ಯಾಂಡಲ್ ವುಡ್ ನ ಕೆಜಿಎಫ್ ಸ್ಟಾರ್ ಯಶ್ ಅಭಿನಯದ Toxic: A Fairy Tale for Grown-Ups ಸಿನಿಮಾ ಬಿಡುಗಡೆಯಾಗಬೇಕಿದ್ದ ದಿನವೇ, ರಾಮ್ ಚರಣ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರವು ತೆರೆ ಕಾಣಲಿದೆ. ಜೂನ್ 4ರಂದು ಶಿವಣ್ಣ ಪ್ರಮುಖ ಪಾತ್ರದಲ್ಲಿರುವ ಪೆದ್ದಿ ಭರ್ಜರಿ ಎಂಟ್ರಿ ಕೊಡಲಿದ್ದು. ಇನ್ನೊಂದು ವಾರದಲ್ಲಿ ಟ್ರೇಲರ್ ರಿವಿಲ್ ಆಗಲಿದೆ ಎಂದು ಚಿತ್ರತಂಡ ಎಂದು ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಪೆದ್ದಿ ಚಿತ್ರದ ತಂಡವು ರಾಮಚರಣ್ ಅವರನ್ನು ಒಳಗೊಂಡ ಹೊಸ ಪೋಸ್ಟರ್ ಹಂಚಿಕೊಂಡಿದ್ದು, " ಪೆದ್ದಿ ನಿಮ್ಮ ಹೃದಯದಲ್ಲಿ ಉಳಿಯಲಿದೆ. ಮೇ 18ರಂದು ಟ್ರೇಲರ್ ಅನಾವರಣವಾಗಲಿದೆ. ಜೂನ್ 4ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಪೆದ್ದಿ ಬಿಡುಗಡೆ ಯಾಗಲಿದೆಂದು ಪ್ರೀಮಿಯರ್ ಶೋ ನಡೆಯಲಿದೆ" ಎಂದು ಪ್ರಕಟಿಸಿದೆ.
Also Read: