<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

Mumbai Heavy Rain: ಮ್ಯಾನ್ ಹೋಲ್ ಗೆ ಬಿದ್ದು ವ್ಯಕ್ತಿ ಸಾವು

Mumbai Heavy Rain: ಮ್ಯಾನ್ ಹೋಲ್ ಗೆ ಬಿದ್ದು ವ್ಯಕ್ತಿ ಸಾವು
Summary: Mumbai Heavy Rain: Heavy rain in Mumbai has disrupted normal life. A man has drowned after falling into a manhole. Roads are flooded in many places. Flood-like conditions have also been created around the homes of prominent Bollywood actors, and the Meteorological Department has warned of more rain. Full details are here.

Belagavi News:

ಮುಂಬೈ, ಮಹಾರಾಷ್ಟ್ರ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತಗೂಳಿಸಿದೆ. ಮಳೆಯ ನಡುವೆ ನಡೆದ ದುರಂತ ಘಟನೆಯಲ್ಲಿ, ಸಾಕಿನಾಕ ಪ್ರದೇಶದಲ್ಲಿ ತೆರೆದಿದ್ದ ಮ್ಯಾನ್ ಹೋಲ್ ಗೆ ಬಿದ್ದು 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ನಗರದಲ್ಲಿನ ನಾಗರಿಕ ಸುರಕ್ಷತೆ ಮತ್ತು ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಮೃತರನ್ನು ಅಸ್ಲಾಂ ಶೇಖ್ (55) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮ್ಯಾನ್ ಹೋಲ್ ನ ಮುಚ್ಳಳವನ್ನು ತೆರೆಯಲಾಗಿದ್ದರೂ, ಆ ಸ್ಥಳದಲ್ಲಿ ಸೂಕ್ತ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಲಗಳನ್ನು ಅಳವಡಿಸಿರಲ್ಲಿಲ್ಲ. ಪರಿಣಾಮವಾಗಿ ಭಾರಿ ಮಳೆಯಾ ನಡುವೆ ಮ್ಯಾನ್ ಹೋಲ್, ಕಾಣದೆ ಅಸ್ಲಾಂ ಶೇಕ್ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಆದರೆ ರಕ್ಷಣಾ ಕಾರ್ಯಚರಣೆ ಆರಂಭವಾಗಲು ಮೂರು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಏಣಿಯ ಸಹಾಯದಿಂದ ಅವರನ್ನು ಹೊರತೆಗೆದಲು ಪ್ರಯತ್ನಿಸಿದರು, ಆರಂಭಿಕ ಕಾರ್ಯಚರಣೆ ಯಶಸ್ವಿಯಾಗಲಿಲ್ಲ.

ಮುಂಬೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಈ ದುರಂತದ ಬಳಿಕ ಮಳೆಗಾಲದಲ್ಲಿ ತೆರೆದಿರುವ ಮ್ಯಾನ್ ಹೋಲ್ ಗಳು ಮತ್ತು ನಾಗರಿಕ ಸುರಕ್ಷತಾ ಕ್ರಮಗಳ ಕುರಿತು ಸ್ಥಳಿಯ ಆಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶಾಸಕ ದಿಲೀಪ್ ಲಾಂಡೆ ಘಟನೆಗೆ ತೀರುವ ಆಕ್ರೋಶ ವ್ಯಕ್ತಪಡಿಸಿದ್ದು. ಮ್ಯಾನ್ ಹೋಲ್ ನ ಮುಚ್ಚಳ ಏಕೆ ತೆರೆದಿತ್ತು ಎಂಬುದನ್ನು ಪೊಲೀಸರು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಮುನ್ಸಿಪಲ್ ಕಾರ್ಪೊರೇಷನ್ ನ ನಿರ್ಲಕ್ಷ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ವರ್ಷದ ಚರಂಡಿ ಸ್ವಚ್ಛತಾ ಕಾಮಗಾರಿ ಚುನಾವಣಾ ನೀತಿ ಸಂಹಿತೆ, ಬಿಬಿಎಂಪಿ ಚುನಾವಣೆ ಹಾಗೂ ಬಜೆಟ್ ಪ್ರಕ್ರಿಯೆ ಸೇರಿದಂತೆ ಹಲವು ಕಾರಣಗಳಿಂದ ವಿಳಂಬವಾಗಿದೆ ಎಂದು ದಿಲೀಪ್ ಲಾಂಡೆ ಆರೋಪಿಸಿದ್ದಾರೆ. "ಈ ಬಾರಿ ಶೇ.50ರಷ್ಟು ಕಾಮಗಾರಿಯೋ ಪೂರ್ಣಗೊಂಡಿಲ್ಲ ಎಂದು ಈ ಹಿಂದೆಯೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆ." ಎಂದು ಅವರು ತಿಳಿಸಿದ್ದಾರೆ.

ಅನ್ನೋಂದೆಡೆ, ನಿರಂತರ ಮಳೆಯಿಂದ ಮುಂಬೈ ನಗರದ ಹಲವು ರಸ್ತೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಭಾರಿ ಮಳೆಯ ಪರಿಣಾಮ ಬಾಲಿವುಡ್ ನ ಹಿರಿಯ ನಟ್ಟ ಅಮಿತಾಭ್ ಬಚ್ಚನ್ ಅವರು ಜುಹುವಿನ 'ಜನಕ್' ಬಂಗಲೆ ಸುತ್ತಮುತ್ತ ಹಾಗೂ ನಟ ಅಜಯ್ ದೇವಗನ್ ಅವರ ಅಪಾರ್ಟ್ಮೆಂಟ್ ಅವರಣದಲ್ಲೂ ನೀರು ನುಗ್ಗಿದ್ದೆ. ಈ ದೃಶ್ಯಗಳನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂಬೈನಲ್ಲಿ ಮಳೆಯ ತೀವ್ರತೆಯನ್ನು ಬಿಂಬಿಸುತ್ತಿವೆ.

ಭಾರತೀಯ ಹವಾಮಾನ ಇಲಾಖೆ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆಯ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದ್ದು, ನಾಗರೀಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online