<?= $pageTitle ?>
Logo
ಮುಖಪುಟ ಓದುವುದು ಕೇಳು
Technology

FASTag ಹೊಸ ನಿಯಮ ಜಾರಿಗೆ!

FASTag ಹೊಸ ನಿಯಮ ಜಾರಿಗೆ!
Summary: ವಾಹನ ಸವಾರರೇ ಗಮನಿಸಿ! 🚨 ಪಾಸ್ಟ್ ಟ್ಯಾಗ್ ಹೊಸ ರೋಡ್ ನಿಯಮ ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಫೈನ್, ಟೋಲ್ ಸಮಸ್ಯೆ, ಪ್ರಯಾಣದ ತೊಂದರೆ ಎದುರಾಗಬಹುದು! ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಹೊಸ FASTag ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.
belagavi news:
ಫಾಸ್ಟ್ ಟ್ಯಾಗ್ ಹೊಸ ನಿಯಮಗಳು ಯಾವುವು? ಯಾವ ತಪ್ಪು ಮಾಡಿದರೆ ದಂಡ ಬೀಳಬಹುದು? FASTag ಸರಿಯಾಗಿ ಕೆಲಸ ಮಾಡದಿದ್ದರೆ ಏನು ಮಾಡಬೇಕು? ಎಂಬ ವಾಹನ ಸವಾರರು ಈ ಮಾಹಿತಿಯನ್ನು ಸಂಪೂರ್ಣವಾಗಿ ತಪ್ಪದೇ ತಿಳಿದುಕೊಳ್ಳಿ.

FASTag New Rule: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಗ್ರಹಕ್ಕೆ ಅನುಕೂಲ ವಾಗುವಂತೆ ಕೇಂದ್ರ ಸರ್ಕಾರ FASTag ಬಳಕೆದಾರರಿಗೆ ಹೊಸ ನಿಯಮ ಜಾರಿಗೆ ಗೊಳಿಸಿದ್ದಾರೆ. ಈ ವ್ಯವಸ್ಥೆಯ ಮೂಲಕ ಟೋಲ್ ಪ್ಲಾಜಾಗಳಲ್ಲಿ ವಿಳಂಬ, ದಂಡ ಹಾಗೂ ಹೆಚ್ಚುವರಿ ಶುಲ್ಕವನ್ನು ಆಟೋಮೆಟಿಕ್ ಆಗಿ ಸಂಗ್ರಹಿಸ ಲಾಗುತ್ತಿದೆ.

ಆದರೆ ಪಾಸ್ಟ್ಯಾಗ್ ಬಂದ ನಂತರವೂ ಟೋಲ್ ಗೇಟ್ ಗಳಲ್ಲಿನ ಸಂಚಾರ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿಯದ ಕಾರಣ ಕೇಂದ್ರ ಇತ್ತೀಚಿಗೆ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಏನಿದು ಹೊಸ ನಿಯಮ ? ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವರ್ಗೆ ಇದೊಂದು ದೊಡ್ಡ ಎಚ್ಚರಿಕೆ ಎಂದು ಕರೆಯಬಹುದು. ನಿರ್ಲಕ್ಷ್ಯ ವಹಿಸಿದ್ದರೆ ಅನಿವಾರ್ಯವಾಗಿ ಸಮಸ್ಯೆ ಎದುರಾಗಬೇಕಾಗುತ್ತದೆ.

ಈ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ.
ಏಪ್ರಿಲ್ 1 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಮಾರ್ಗಗಳು ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಲಾಗಿದೆ. ಇನ್ನು ಮುಂದೆ ವಾಹನ ಚಾಲಕರು ತಮ್ಮ ಟೋಲ್ ಶುಲ್ಕವನ್ನು ಪಾಸ್ಟ್ ಟ್ಯಾಗ್ ಮತ್ತು ಯುಪಿಐ ಅಪ್ಲಿಕೇಶನ್ ಗಳ ಮೂಲಕ ಮಾತ್ರ ಪಾವತಿಸ ಬೇಕಾಗುತ್ತದೆ. ವಾಹನ ಸವಾರರು ಪಾಸ್ಟ್ ಟ್ಯಾಗ್ ಮೂಲಕ ಟೋಲ್ ಪ್ಲಾಜಾಗಳಲ್ಲಿ ಹಣ ಪಾವತಿಸುತ್ತಾರೆ.

ಅದೇ ರೀತಿ ಫಾಸ್ಟ್ ಟ್ಯಾಗ್ ಇಲ್ಲದವರು UPI ಮೂಲಕ ಹಣ ಪಾವತಿಸುತ್ತಾರೆ. ಯುಪಿಐ ಇಲ್ಲದವರು ಟೋಲ್ ಶುಲ್ಕವನ್ನು ನಗದು ರೂಪದಲ್ಲಿಯೂ ಪಾವತಿ ಸುತ್ತಾರೆ ಸಮಸ್ಯೆ ಉದ್ಬವಿಸುವುದು ಇಲ್ಲೇ. ಹೆದ್ದಾರಿಗಳಲ್ಲಿ ಪ್ರಯಾಣವು ಯಾವುದೇ ಅಡೆತಡೆಗಳಿಲ್ಲದೆ ವೇಗವಾಗಿ ಮತ್ತು ಸುಗಮವಾಗಿರುವುದು ಖಚಿತಪಡಿಸಿಕೊಳ್ಳಲು ನಗದು ಪಾವತಿಗಳನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗಾಗಲೇ ಆದೇಶಗಳನ್ನು ಹೊರಡಿಸಿದೆ. ನಗದು ಪಾವತಿಯಿಂದಾಗಿ ಬಹಳಷ್ಟು ಸಮಯ ವ್ಯರ್ಥವಾಗುತ್ತಿದೆ. ಇಂದು ಸಂಚಾರ ಗೆ ಕಾರಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಟೋಲ್ ಗೇಟ್ ಗಳಲ್ಲಿ ನಗದು ಪಾವತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಕೇಂದ್ರ ನಿರ್ಧರಿಸಿದೆ. ಈ ನಿರ್ಧಾರ ಏಪ್ರಿಲ್ 1, 2026 ರಿಂದ ದೇಶಾದ್ಯಂತದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ.

ಈ ನಿರ್ಧಾರ ಜಾರಿಗೆ ಬಂದರೆ ಫಾಸ್ಟ್ ಟ್ಯಾಗ್ ಮತ್ತು ಯುಪಿಐ ಇಲ್ಲದಕ್ಕೆ ಕೇವಲ ನಗದು ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಚಾಲಕರು ಟೋಲ್ ಗೇಟ್ ಗಳಲ್ಲಿ ತೊಂದರೆ ಎದುರಿಸ ಬೇಕಾಗುತ್ತದೆ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

ವಾಹನ ಚಾಲಕರು ಹೀಗೆ ಮಾಡಿದರೆ ಯಾವುದೇ ತೊಂದರೆ ಇಲ್ಲ:

ಹೆದ್ದಾರಿಗಳಲ್ಲಿ ಪ್ರಯಾಣಿಸುವವರು ತೊಂದರೆಗಳನ್ನು ಎದುರಿಸದೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಮೊದಲು ವಾಹನ ಚಾಲಕರು ತಮ್ಮ ಅಸ್ತಿತ್ವದಲ್ಲಿರುವ ಪಾಸ್ಟ್ ಟ್ಯಾಗ್ ನವೀಕರಿಸಬೇಕು ಅದೇ ರೀತಿ ತಮ್ಮ ಫಾಸ್ಟ್ ಟ್ಯಾಗ್ KYC ವಿವರಗಳನ್ನು ನವೀಕರಿಸಬೇಕು.

ಮನೆಯಿಂದ ಹೊರಡುವ ಮೊದಲು ಫಾಸ್ಟ್ ಟ್ಯಾಗ್ ವ್ಯಾಲೆಟ್ ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದ್ದೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಸಾಕಷ್ಟು ಮೊತ್ತವಿಲ್ಲದಿದ್ದರೆ ರಿಚಾರ್ಜ್ ಮಾಡಿ.

ಫಾಸ್ಟ್ ಟ್ಯಾಗ್ ಹೊಂದಿದ್ದರೆ ತುರ್ತು ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು UPI ಮೂಲಕ ಪಾವತಿಗಳನ್ನು ಮಾಡಲು ಸಹ ನೀವು ಸಿದ್ಧರಾಗಿರಬೇಕು.
ನಿಮ್ಮ FASTag ಬ್ಯಾಲೆನ್ಸ್ ತಿಳಿಯುವುದು ಹೇಗೆ? ಟೋಲ್ ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಾರ್ಯನಿರ್ವಹಿಸಲು ಅದರಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಬೇಕು ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗುತ್ತವೆ ಅದರಿಂದ ಈ ವಿಧಾನಗಳಲ್ಲಿ ಬ್ಯಾಲೆನ್ಸ್ ಪರಿಶೀಲಿಸಿ.

ಆ್ಯಪ್ ಮೂಲಕ ಸುಲಭವಾಗಿ...

ನೀವು ನಿಮ್ಮ ಮೊಬೈಲ್ ನಲ್ಲಿ Google Play Store ನಿಂದ "MY FASTag ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು ಮತ್ತು FASTag ಮೊತ್ತವನ್ನು ಸರಳವಾಗಿ ತಿಳಿಯಿರಿ.

ನೀವು ನಿಮ್ಮ FASTag ಖಾತೆ ವಿವರಗಳೊಂದಿಗೆ ಈ ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕಾಗುತ್ತದೆ..

ಲಾಗಿನ್ ಆದ ನಂತರ ನೀವು ನಿಮ್ಮ FASTag ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು.

ಮಿಸ್ಡ್ ಕಾಲ್ ಮೂಲಕ:
ನೀವು ನಿಮ್ಮ FASTag ಬ್ಯಾಲೆನ್ಸ್ ಅನ್ನು ಮಿಸ್ಡ್ ಕಾಲ್ ಮೂಲಕವೂ ಪರಿಶೀಲಿಸಬಹುದು.

ಆದರೆ ನಿಮ್ಮ ಫೋನ್ ಸಂಖ್ಯೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಿಪೇಯ್ಡ್ ವ್ಯಾಲೆಟನಲ್ಲಿ ನೋಂದಾಯಿಸಿಕೊಳ್ಳಬೇಕು.

ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 96868 64852 ಗೆ ಮಿಸ್ಡ್ ಕಾಲ್ ನೀಡಿ.

ನಿಮ್ಮ ಪ್ರಸ್ತುತ FASTag ಬ್ಯಾಲೆನ್ಸ್ ತೋರಿಸುವ ಸಂದೇಶವು ನಿಮ್ಮ ಫೋನ್ನಲ್ಲಿ ಕಾಣಿಸಿಕೊಳ್ಳುತ್ತದೆ.


ಇನ್ನಷ್ಟು ಓದಿರಿ:
ಐಪಿಎಲ್ ಗು ಮೊದಲೇ ಆರ್ಸಿಬಿ ತಂಡಕ್ಕೆ ದೊಡ್ಡ ಆಘಾತ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online