<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಒಂದು ಪಕ್ಷ ಆಡಳಿತದಲ್ಲಿದ್ದಾಗ ವಿರೋಧ ಸ್ವಾಭಾವಿಕ: ಗೃಹ ಸಚಿವ ಪರಮೇಶ್ವರ್ ಹೇಳಿಕೆ

ಒಂದು ಪಕ್ಷ ಆಡಳಿತದಲ್ಲಿದ್ದಾಗ ವಿರೋಧ ಸ್ವಾಭಾವಿಕ:  ಗೃಹ ಸಚಿವ ಪರಮೇಶ್ವರ್ ಹೇಳಿಕೆ
Summary: Home Minister Parameshwar has said that the opposition is natural when one party is in power. He opined that criticism and counter-criticism between the ruling and opposition parties in politics is a part of democracy and should be seen as a normal reaction.

Belagavi News:

ತುಮಕೂರು: ಒಂದು ಪಕ್ಷ ಆಡಳಿತದಲ್ಲಿದೆ ಎಂದರೆ ಅದನ್ನು ವಿರೋಧಿಸುವ ಮನಸ್ಥಿತಿ ವಿರೋಧ ಪಕ್ಷದಲ್ಲಿ ಇದ್ದೇ ಇರುತ್ತದೆ. ಸರ್ಕಾರದ ಪರ ಹಾಗೂ ವಿರೋಧ ಚರ್ಚೆ ಕೇಳಿ ಬರುತ್ತಿರುತ್ತವೆ. ಈ ನಡೆವೆಯೂ ನಾವು ಒಂದೊಳ್ಳೆಯ ಆಡಳಿತ ಕೊಡಬೇಕಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ನಾವು ನುಡಿದಂತೆ ನಡೆದಿದ್ದೇವೆ: ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಜನ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. "ನಾವು ಜನಪರವಾಗಿದ್ದೇವೆ, ಬಡವರ ಪರವಾಗಿ ಕೆಲಸ ಮಾಡುತಿದ್ದೇವೆ. ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇಡೀ ಕರ್ನಾಟಕದ ಜನರಿಗೆ ನಾವು ಜನಪರ ಆಡಳಿತ ನೀಡುತ್ತಿದ್ದೇವೆ ಎಂಬ ಸಂದೇಶ ಹೋಗಬೇಕು. ಘೋಷಣೆ ಮಾಡಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಅನುಷ್ಠಾನಗೊಳಿಸಿದ್ದೇವೆ," ಎಂದು ಹೇಳಿದರು.

ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಕುರಿತು ಚಿಂತನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಜೊತೆಗೆ, 1.50 ಲಕ್ಷ ಜನರಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮವನ್ನು ಯಾರನ್ನು ಒತ್ತಾಯಿಸದೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. "ಇದು ಜನ ವಿರೋಧಿ ಕಾರ್ಯಕ್ರಮವಲ್ಲ, ಜನರನ್ನು ಒತ್ತಾಯಿಸಿ ಕರೆತರುತ್ತಾರೆ ಎಂಬ ಆರೋಪ ಸರಿಯಲ್ಲ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ," ಎಂದು ಅವರು ಹೇಳಿದರು.

ಇದೇ ವೇಳೆ ತುಮಕೂರು ವಿಚಾರಕ್ಕೂ ಸ್ಪಷ್ಟನೆ ನೀಡಿದವರು,"ತುಮಕೂರು ಒಂದೇ ಪರಿಕಲ್ಪನೆ ಮಾತ್ರ, ನಾನು ತುಮಕೂರಿನ ಹೆಸರು ಬದಲಾಯಿಸಬೇಕು ಎಂದು ಹೇಳಿಲ್ಲ. ತುಮಕೂರಿನ ಹೆಸರು ಅಥವಾ ವಿಸ್ತೀರ್ಣ ಬದಲಾಗುವುದಿಲ್ಲ. ಅದೇ ಆಗಿರುತ್ತದೆ." ಎಂದು ಹೇಳಿದರು. ತುಮಕೂರನ್ನು ಬೆಂಗಳೂರಿನ ಭಾಗವಾಗಿ ಪ್ರೋತ್ಸಾಹಿಸಿದರೆ ಹೆಚ್ಚು ಹೂಡಿಕೆ ಆಕರ್ಷಿಸಬಹುದು ಮತ್ತು ನಗರ ಅಭಿವೃದ್ಧಿ ವೇಗವಾಗುತ್ತದೆ ಎಂಬ ಉದ್ದೇಶ ಮಾತ್ರ ಇದೆ ಎಂದು ಅವರು ವಿವರಿಸಿದರು.

ಬಡವರು, ರೈತರು, ಕಾರ್ಮಿಕರು ಮತ್ತು ಶೋಷಿತರ ಸ್ವಾಭಿಮಾನ ಪೂರ್ಣ ಬದುಕಿಗಾಗಿ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 2 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ ಸಂಭ್ರಮದ ಅಂಗವಾಗಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತ ಸಹಯೋಗದಲ್ಲಿ ಜೂನಿಯರ್ ಕಾಲೇಜ್ ಮಂಗಳವಾರ ನಡೆದ ಕಾಂಗ್ರೆಸ್ ಸರ್ಕಾರದ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆದಿರುವ ₹682 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಕೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಜೊತೆಗೆ ಕಂದಾಯ ಇಲಾಖೆಯ ಹಕ್ಕು ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ, ಸರ್ಕಾರ ಕೈಗೊಂಡಿರುವ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Also Read:

ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿಗೆ ತರಾಟೆ: ಬಾದಾಮಿಯಲ್ಲಿ ಘಟನೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online