<?= $pageTitle ?>
Logo
ಮುಖಪುಟ ಓದುವುದು ಕೇಳು
Sports

ಪಿವಿ ಸಿಂಧು ಮತ್ತೆ ಫೈನಲ್ ಗೆ ಎಂಟ್ರಿ : ಜಪಾನ್ ಓಪನ್ ನಲ್ಲಿ ಯುಫೀ ವಿರುದ್ಧ ಐತಿಹಾಸಿಕ ಗೆಲವು

ಪಿವಿ ಸಿಂಧು ಮತ್ತೆ ಫೈನಲ್ ಗೆ ಎಂಟ್ರಿ : ಜಪಾನ್ ಓಪನ್ ನಲ್ಲಿ ಯುಫೀ ವಿರುದ್ಧ ಐತಿಹಾಸಿಕ ಗೆಲವು
Summary: Indian shuttler PV Sindhu has entered the final of the Japan Open Super 750 badminton tournament with a brilliant performance. Sindhu, who has achieved a significant victory over the Chinese player after seven years, is now ready to enter the title round. Sindhu is aiming for another historic victory in this match that has created huge expectations among fans.

BELAGAVI NEWS :

ಜಪಾನ್ ಓಪನ್ ನಲ್ಲಿ ಪಿವಿ ಸಿಂಧು ಇತಿಹಾಸ : ಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್

ಟೋಕಿಯೋ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಜಪಾನ್ ಓಪನ್ ಸೂಪರ್ 750 ಬ್ಯಾಟ್ಮಿಟನ್ ಟೂರ್ನಮೆಂಟ್ ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.

ಸೆಮಿ ಫೈನಲ್ ಪಂದ್ಯದಲ್ಲಿ ಸಿಂಧು ವಿಶ್ವದ ನಾಲ್ಕನೇ ಶ್ರೇಯಾಂಕಿತೆ ಹಾಗೂ ಮಾಜಿ ಒಲಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಯುಫೀ ವಿರುದ್ಧ ಸೆಣಸಿದರು. ಮೊದಲ ಗೇಮ್ ನಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ನಡೆಯಿತು. ಆದರೆ, ತಮ್ಮ ಅನುಭವ ಮತ್ತು ಆಕ್ರಮಣಕಾರಿ ಆಟದ ಮೂಲಕ ಸಿಂಧು 21-19 ಅಂತರದಲ್ಲಿ ಮೊದಲ ಗೇಮ್ ಗೆದ್ದು ಮುನ್ನಡೆ ಸಾಧಿಸಿದರು.

ಎರಡನೇ ಗೇಮ್ ನಲ್ಲೂ ಸಿಂಧೂ ತಮ್ಮ ಪ್ರಭಾವಿ ಆಟವನ್ನು ಮುಂದುವರಿಸಿ 15 -10 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಈ ವೇಳೆ ಚೆನ್ ಯುಫೀ ಸ್ನಾಯು ಸೆಳೆತಕ್ಕೆ ಒಳಗಾಗಿ ಪಂದ್ಯದಿಂದ ಹಿಂದೆ ಸರಿಯಬೇಕಾಯಿತು. ಇದರೊಂದಿಗೆ ಸಿಂಧೂ ಫೈನಲ್ ಗೆ ಲಗ್ಗೆ ಇಟ್ಟರು.

ಈ ಗೆಲುವಿನೊಂದಿಗೆ ಜಪಾನ್ ಓಪನ್ ಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್ ಎಂಬ ವಿಶೇಷ ಸಾಧನೆಯನ್ನು ಪಿವಿ ಸಿಂಧೂ ಮಾಡಿದ್ದಾರೆ. ಫೈನಲ್ ನಲ್ಲಿ ಸಿಂಧು, ಅಕಾನೆ ಯಮಗುಚಿ ಮತ್ತು ಇಂಡೋನೇಷ್ಯಾದ ಪುತ್ರಿ ಕುಸುಮ ವರ್ಧಾನಿ ನಡುವಿನ ಎರಡನೇ ಸೆಮಿ ಫೈನಲ್ ವಿಜೇತರನ್ನು ಎದುರಿಸಲಿದ್ದಾರೆ.

7 ವರ್ಷಗಳ ಬಳಿಕ ಯುಫೀ ವಿರುದ್ಧ ಸಿಂಧೂಗೆ ಗೆಲುವು : ಎರಡು ವರ್ಷಗಳ ನಂತರ BWF ವರ್ಲ್ಡ್ ಟೂರ್ ಫೈನಲ್ ನಲ್ಲಿ ಕಣ್ಣಕಿಳಿದ ಭಾರತದ ತಾರೆ

ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಪಿವಿ ಸಿಂಧು ಸಾಧಿಸಿದ ಗೆಲುವು ವಿಶೇಷ ಮಹತ್ವ ಪಡೆದುಕೊಂಡಿದೆ. ಚೀನಾದ ಮಾಜಿ ಒಲಂಪಿಕ್ಸ್ ಚಾಂಪಿಯನ್ ಚೆನ್ ಯುಫೀ ವಿರುದ್ಧ ಸಿಂಧು ಸುಮಾರು ಏಳು ವರ್ಷಗಳ ಬಳಿಕ ಗೆಲುವು ಸಾಧಿಸಿದ್ದಾರೆ.

ಚೆನ್ ಯುಫೀ ವಿರುದ್ಧ ಸಿಂಧು ಅವರ ಕೊನೆಯ ಗೆಲುವು 2019ರ ವಿಶ್ವ ಚಾಂಪಿಯನ್ಶಿಪ್ ನಲ್ಲಿ ದಾಖಲಾಗಿತ್ತು. ಇದೀಗ ಜಪಾನ್ ಓಪನ್ ಸೆಮಿ ಫೈನಲ್ ನಲ್ಲಿ ಮತ್ತೊಮ್ಮೆ ಯುಫೀ ಅವರನ್ನು ಮಣಿಸುವ ಮೂಲಕ ಸಿಂಧು ತಮ್ಮ ಶ್ರೇಷ್ಠ ಆಟವನ್ನು ಪ್ರದರ್ಶಿಸಿದ್ದಾರೆ.

ಎರಡು ವರ್ಷಗಳ ಬಳಿಕ ಪ್ರಮುಖ ಫೈನಲ್ ನಲ್ಲಿ ಸಿಂಧು

ಈ ಗೆಲುವಿನೊಂದಿಗೆ ಪಿವಿ ಸಿಂಧು ಸುಮಾರು ಎರಡು ವರ್ಷಗಳ ನಂತರ BWF ವರ್ಲ್ಡ್ ಟೂರ್ ಫೈನಲ್ ಗೆ ಪ್ರವೇಶಿಸಿದ್ದಾರೆ. 2024ರಲ್ಲಿ ನಡೆದ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಮೆಂಟ್ ನಲ್ಲಿ ಚಾಂಪಿಯನ್ ಆಗಿದ್ದ ಸಿಂಧು, ಇದೀಗ ಮತ್ತೊಂದು ಮಹತ್ವದ ಪ್ರಶಸ್ತಿಯತ್ತ ಹೆಜ್ಜೆ ಇಟ್ಟಿದ್ದಾರೆ.

ಪ್ರಸ್ತುತ ಸಿಂಧೂ ಈ ಋತುವಿನ ಮೊದಲ ಪ್ರಶಸ್ತಿ ಗೆಲ್ಲುವ ಅಂತರದಲ್ಲಿದ್ದು, ದೀರ್ಘ ಸಮಯದ ಬಳಿಕ BWF ಸೂಪರ್ 750 ಮಟ್ಟದಲ್ಲಿ ಚಾಂಪಿಯನ್ ಪಟ್ಟಕ್ಕೆ ಇರುವ ಅವಕಾಶ ಹೊಂದಿದ್ದಾರೆ. ಅಭಿಮಾನಿಗಳು ಸಿಂಧು ಅವರ ಫೈನಲ್ ಪ್ರದರ್ಶನದತ್ತ ಕುತೂಹಲದಿಂದ ಕಾಯುತ್ತಿದ್ದಾರೆ.

ಜಪಾನ್ ಓಪನ್ ನಲ್ಲಿ ಸಿಂಧುಗೆ ಕ್ವಾರ್ಟರ್ ಫೈನಲ್ ನಲ್ಲಿ ವಾಕ್ ಓವರ್ : ಸೆಮಿ ಫೈನಲ್ ಗೆ ಸುಲಭ ಪ್ರವೇಶ

ಪಿವಿ ಸಿಂಧು ಜಪಾನ್ ಓವರ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಕ್ವಾರ್ಟರ್ ಫೈನಲ್ ಹಂತದಲ್ಲಿ ವಾಕ್ ಓವರ್ ಪಡೆಯುವ ಮೂಲಕ ಸೆಮಿ ಫೈನಲ್ ಗೆ ಪ್ರವೇಶಿಸಿದರು.

ಕ್ವಾರ್ಟರ್ ಫೈನಲ್ ಪಂದ್ಯಕೂ ಮುನ್ನ ಮಾಜಿ ವಿಶ್ವ ಚಾಂಪಿಯನ್ ನವೋಮಿ ಓಕುಹರಾ ಅವರು ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಸರಿದರು. ಇದರ ಪರಿಣಾಮ ಸಿಂಧೂ ಯಾವುದೇ ಪಂದ್ಯ ಆಡದೆ ನೇರವಾಗಿ ಸೆಮಿ ಫೈನಲ್ ಗೆ ಅರ್ಹತೆ ಪಡೆದರು.

ಇದಕ್ಕೂ ಮೊದಲು ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು ಚೀನಾದ ಹಾನ್ ಯು ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಕೇವಲ 35 ನಿಮಿಷಗಳಲ್ಲಿ ನಡೆದ ಪಂದ್ಯದಲ್ಲಿ 21-16, 21-14 ಅಂತರದ ಗೆಲುವು ದಾಖಲಿಸಿ ಸಿಂಧು ಮತ್ತು ಪ್ರಭಾವಿ ಪ್ರದರ್ಶನ ಮುಂದುವರಿಸಿದ್ದರು.

ಜಪಾನ್ ಓಪನ್ ನಲ್ಲಿ ಸಿಂಧು ಅವರ ಆತ್ಮವಿಶ್ವಾಸದ ಆಟ ಮುಂದುವರೆದಿದ್ದು, ಇದೀಗ ಫೈನಲ್ ಪ್ರವೇಶಿಸುವ ಮೂಲಕ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online