be;agavi news :
ಇಸ್ಲಾಮಾಬಾದ್, ಜುಲೈ 3: ಗಡಿಯಾಚೆಗಿನ ಭಯೋತ್ಪಾದನೆಗೆ ದಾಳಿಯ ಮೂಲಕ ಪ್ರಚೋದನೆ ನೀಡಿದ ಪಾಕಿಸ್ತಾನಕ್ಕೆ ಭಾರತವು 'ಆಪರೇಷನ್ ಸಿಂಧೂರ್' ಹಾಗೂ ಸಿಂಧೂ ಜಲ ಒಪ್ಪಂದದ ಕುರಿತ ತನ್ನ ಕಠಿಣ ನಿಲುವಿನ ಮೂಲಕ ರಾಜತಾಂತ್ರಿಕ ಹಾಗೂ ತಂತ್ರಾತ್ಮಕವಾಗಿ ತೀವ್ರ ಒತ್ತಡ ಹೇಳಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಭಾರತವು ಸಿಂಧೂ ನದಿ ನೀರಿನ ಹಂಚಿಕೆಯ ಕುರಿತು ಗಂಭೀರ ನಿಲುವು ತೆಗೆದುಕೊಂಡ ಬಳಿಕ ಪಾಕಿಸ್ತಾನ ತೀವ್ರ ಜಲಕ್ಷಾಮದ ಸಂಕಷ್ಟವನ್ನು ಎದುರಿಸುತ್ತಿದೆ. ಗಡಿ ಆಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೂ ನೀರಿನ ಹಂಚಿಕೆಯ ಕುರಿತು ಯಾವುದೇ ಸಡಲಿಕೆ ನೀಡುವುದಿಲ್ಲ ಎಂದು ಭಾರತದ ಸ್ಪಷ್ಟ ಸಂದೇಶವು ಇಸ್ಲಾಮಾಬಾದ್ ನಲ್ಲಿ ಆತಂಕವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು ರಾಜತಾಂತ್ರಿಕ ಒತ್ತಡವನ್ನು ಕಡಿಮೆ ಮಾಡಲು ಚೀನಾವನ್ನು ಮಧ್ಯಪ್ರವೇಶಕ್ಕೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಸೂಚಿಸುತ್ತವೆ. ಆದರೆ ತಜ್ಞರ ಅಭಿಪ್ರಾಯದಂತೆ, ಆರ್ಥಿಕ ಹಿತಾಸಕ್ತಿಗಳು ಹಾಗೂ ಸಿಂಧೂ ಜಲ ಒಪ್ಪಂದದಲ್ಲಿ ಚೀನಾಗೆ ನೇರ ಪಾತ್ರವಿಲ್ಲದ ಕಾರಣ ಅದರ ಮಧ್ಯ ಪ್ರವೇಶ ಅಸಂಭವವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬೆಳವಣಿಗೆಗಳು ಭಾರತ ಪಾಕಿಸ್ತಾನ ಜಲ ಸಂಬಂಧಗಳಲ್ಲಿ ಹೊಸ ಒತ್ತಡವನ್ನು ಸುರಕ್ಷಿಸಿದ್ದು, ದಕ್ಷಿಣ ಏಷ್ಯಾದ ಜಿಯೋ ಪೊಲಿಟಿಕಲ್ ಸಮತೋಲನದ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಭಾರತ-ಪಾಕಿಸ್ತಾನ ಜಲ ವಿವಾದದ ನಡುವೆ ಪಾಕಿಸ್ತಾನವು ಚೀನಾವನ್ನು ಒಳಗೊಂಡ ಹೊಸ ರಾಜತಾಂತ್ರಿಕ ತಂತ್ರವನ್ನು ಮುಂದೂಡುತ್ತಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಹಿರ್ ಅಂದ್ರಾಬಿ ಇತ್ತೀಚಿಗೆ ನೀಡಿದ ಹೇಳಿಕೆ ಈ ಚರ್ಚೆಗೆ ಮತ್ತಷ್ಟು ತೀವ್ರತೆ ನೀಡಿದೆ.
ಅಂದ್ರಾಬಿ ಅವರ ಪ್ರಕಾರ, ಹಿಮಾಲಯ ಪ್ರದೇಶದಿಂದ ಉದ್ಭವಿಸುವ ನದಿಗಳು ಕೇವಲ ಭಾರತ ಮತ್ತು ಪಾಕಿಸ್ತಾನಕ್ಕೆ ಸೀಮಿತವಾಗಿಲ್ಲ,"ಇಡೀ ಮಾನವ ಕುಲದ ಹಂಚಿಕೆಯ ಸಂಪತ್ತು" ಎಂದು ಹೇಳಿದ್ದಾರೆ. ಸಿಂಧೂ ನದಿಯಿಂದ ಹಿಡಿದು ಮೆಕಾಂಗ್ ನದಿವರೆಗೆ ಹರಿಯುವ ವಿಶಾಲ ನದಿ ವ್ಯವಸ್ಥೆಯನ್ನು ಪ್ರಾದೇಶಿಕ ಮಾತ್ರವಲ್ಲ, ಜಾಗತಿಕ ನೀರಿನ ಪರಂಪರೆಯ ಭಾಗವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹೇಳಿಕೆಯ ಮೂಲಕ ಪಾಕಿಸ್ತಾನವು ನೀರಿನ ಬಿಕ್ಕಟ್ಟಿನ ವಿಷಯವನ್ನು ದ್ವಿಪಕ್ಷಿಯ ಚೌಕಟ್ಟಿನಿಂದ ಹೊರ ತೆಗೆದು ಅಂತರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯುವ ಯತ್ನ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಶೇಷವಾಗಿ ಚೀನಾದಲ್ಲಿ ಹುಟ್ಟುವ ಪ್ರಮುಖ ನದಿ ವ್ಯವಸ್ಥೆಗಳ ಉಲ್ಲೇಖದ ಮೂಲಕ ಈ ಜಲವಿವಾದದಲ್ಲಿ ಚೀನಾವನ್ನು ಪ್ರಮುಖ ಪಾಲುದಾರನಾಗಿ ಚಿತ್ರಿಸಲು ಇಸ್ಲಾಮಬಾದ್ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ತಜ್ಞರ ಅಭಿಪ್ರಾಯದಂತೆ, ಈ ರೀತಿಯ ನಿಲುವು ಭಾರತವನು ಜಾಗತಿಕ ವೇದಿಕೆಯಲ್ಲಿ ರಾಜತಾಂತ್ರಿಕವಾಗಿ ಒತ್ತಡಕ್ಕೆ ಒಳಪಡಿಸುವ ತಂತ್ರವಾಗಿರಬಹುದು. ಆದರೆ ಭಾರತ - ಪಾಕಿಸ್ತಾನ ಜಲ ಸಂಬಂಧಗಳು ಈಗಾಗಲೇ ದ್ವಿಪಕ್ಷ ಒಪ್ಪಂದಗಳು ಮತ್ತು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನ ಆಧಾರದ ಮೇಲೆ ನಿಯಂತ್ರಿತವಾಗಿರುವುದರಿಂದ, ಈ ಹೊಸ ವಾದವು ಇನ್ನೂ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಚೀನಾವನ್ನು ಎಳೆಯಲು ಪಾಕಿಸ್ತಾನದ ಪ್ರಮುಖ ಕಾರಣಗಳು:
ಪಾಕಿಸ್ತಾನದ ಕೃಷಿ ಹಾಗೂ ಕುಡಿಯುವ ನೀರಿನ ಮೂಲವಾಗಿ ಸಿಂಧೂ ನದಿ ವ್ಯವಸ್ಥೆ ಅತ್ಯಂತ ಪ್ರಮುಖವಾಗಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನೀರಿನ ಲಭ್ಯತೆಯ ಕುಸಿಯುವುದರಿಂದ ದೇಶದಲ್ಲಿ ತೀವ್ರ ಜಲ ಸಂಕಷ್ಟ ಉಂಟಾಗಿದೆ ಎಂದು ವರದಿಯಾಗಿದೆ. ಈ ಪರಿಸ್ಥಿತಿಯಲ್ಲಿ ಭಾರತವು ತನ್ನ ಜಲ ನೀತಿ ಹಾಗೂ ಸಿಂಧೂ ಜಲ ಒಪ್ಪಂದದ ಕುರಿತು ಕಟ್ಟುನಿಟ್ಟಿನ ನಿಲುವು ತಾಳಿರುವುದರಿಂದ ಪಾಕಿಸ್ತಾನ ರಾಜ ತಾಂತ್ರಿಕವಾಗಿ ಒತ್ತಡಕ್ಕೆ ಒಳಗಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಚುನಾವಣೆ ಈ ವಿವಾದದಲ್ಲಿ ಒಳಪಡಿಸಿ ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ, ಚೀನಾ ತನ್ನ ಪರವಾಗಿ ಮಾತನಾಡಿ ಮಧ್ಯ ಪ್ರವೇಶ ಮಾಡಲಿ ಎಂಬುವುದು ಇಸ್ಲಾಮಾಬಾದ್ ನ ರಾಜತಾಂತ್ರಿಕ ಆಶಯವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಪಾಕಿಸ್ತಾನದ ಯತ್ನಕ್ಕೆ ಚೀನಾ ತಡೆ ಏಕೆ ?
ಪಾಕಿಸ್ತಾನ ಮತ್ತು ಚೀನಾ ನಡುವಿನ ದೀರ್ಘಕಾಲದ ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧಗಳು ಇದ್ದರೂ, ಈ ಜಲವಿವಾದದಲ್ಲಿ ಚೀನಾದ ನೇರ ಮಧ್ಯಪ್ರವೇಶ ಅಸಂಬವ ಎಂದು ವಿಶ್ಲೇಷಕರು ಹೇಳುತ್ತಾರೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳಲ್ಲಿ ಎರಡು ದೇಶಗಳು ಸಹಭಾಗಿಯಾಗಿದ್ದರು, ಈ ವಿಚಾರದಲ್ಲಿ ಚೀನಾವನ್ನು ಎಳೆಯಲು ಇರುವ ಅಡ್ಡಿಗಳಲ್ಲಿ ಪ್ರಮುಖವಾದವು
ಮೊದಲನೆಯದಾಗಿ, ಸಿಂಧೂ ಜಲ ಒಪ್ಪಂದವು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷಿಯ ಒಪ್ಪಂದವಾಗಿರುವುದರಿಂದ ಚೀನಾಗೆ ಅದರಲ್ಲಿ ಯಾವುದೇ ಕಾನೂನು ಅಥವಾ ಒಪ್ಪಂದಾತ್ಮಕ ಪಾತ್ರವಿಲ್ಲ.
ಎರಡನೆಯದಾಗಿ, ಚೀನಾ ತನ್ನ ಸ್ವಂತ ಜಲ ಹಾಗೂ ಪ್ರಾದೇಶಿಕ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಇಂಥ ಸಂವೇದನಾಶೀಲ ದಕ್ಷಿಣ ಏಷ್ಯಾ ವಿವಾದಗಳಲ್ಲಿ ನೇರವಾಗಿ ತೊಡಗಿಕೊಳ್ಳುವುದು ತಪ್ಪಿಸುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಈ ಕಾರಣಗಳಿಂದ, ಪಾಕಿಸ್ತಾನದ ಚೀನಾವನ್ನು ಒಳಗೊಳ್ಳುವ ರಾಜತಾಂತ್ರಿಕ ತಂತ್ರವು ಪ್ರಾಯೋಗಿಕವಾಗಿ ಸೀಮಿತ ಪರಿಣಾಮವನ್ನೇ ಹೊಂದಬಹುದು ಎಂದು ಹೇಳಲಾಗುತ್ತಿದೆ.
ಅಮೇರಿಕಾದ ಇತ್ತೀಚಿನ ಸುಂಕ ನೀತಿಗಳಿಂದಾಗಿ ಭಾರತ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧಗಳು ಸುಧಾರಿಸುತ್ತಿವೆ. ಹೀಗಾಗಿ ಭಾರತವನ್ನು ಎದುರು ಹಾಕಿಕೊಳ್ಳಲು ಚೀನಾ ಬಯಸುವುದಿಲ್ಲ.
ಸಿಂಧು ಜಲ ಒಪ್ಪಂದದಲ್ಲಿ ಚೀನಾಗೆ ಪಾತ್ರವಿಲ್ಲ:
ಐತಿಹಾಸಿಕ ಸಿಂಧೂ ಜಲ ಒಪ್ಪಂದವು ಕೇವಲ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಇದರಲ್ಲಿ ಚೀನಾಗೆ ಯಾವುದೇ ಕಾನೂನಾತ್ಮಕ ಅಥವಾ ಒಪ್ಪಂಧಾತ್ಮಕ ಪಾತ್ರವಿಲ್ಲ. ಈ ಕಾರಣದಿಂದ,ಈ ವಿವಾದದಲ್ಲಿ ಚೀನಾದ ನೇರ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಅಂತರಾಷ್ಟ್ರೀಯ ನೀತಿ ತಜ್ಞರು ಅಭಿಪ್ರಾಯಪಡುತ್ತಾರೆ.
ಭಾರತದ ನಿಲುವು ಅತ್ಯಂತ ಸ್ಪಷ್ಟ:
ಭಾರತವು ಸಿಂಧೂ ಜಲ ಹಂಚಿಕೆ ವಿಚಾರದಲ್ಲಿ ತನ್ನ ನಿಲುವನ್ನು ಮೊದಲಿನಿಂದಲೂ ಸ್ಪಷ್ಟಪಡಿಸಿದೆ. "ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಎಂಬ ತನ್ನ ದೀರ್ಘಕಾಲದಲ್ಲಿ ನಿಲುವನ್ನು ಪುನರುಚ್ಚರಿಸುತ್ತಾ, ಗಡಿಯಾಚೆಗಿನ ಭಯೋತ್ಪಾದನೆ ಸಂಪೂರ್ಣವಾಗಿ ನಿಲ್ಲುವವರೆಗೆ ಯಾವುದೇ ಜಲ ಸಹಕಾರದಲ್ಲಿ ಸಡಿಲಿಕೆ ನೀಡಲಾಗುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸಿಂಧೂ ನದಿ ನೀರಿನ ಬಳಕೆಯ ಹಕ್ಕನ್ನು ಕಾಯ್ದಿರಿಸಿಕೊಂಡು, ಈ ನೀತಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಮಳೆ ಹಾಗೂ ಪ್ರಭಾವದಿಂದ ಕೆಲವು ನೀರಿನ ಅರಿವು ಪಾಕಿಸ್ತಾನಕ್ಕೆ ತಾತ್ಕಾಲಿಕ ನೆರವು ನೀಡಿದರು, ಭಾರತದ ಈ ಜಲ ನೀತಿ ಪಾಕಿಸ್ತಾನದ ರಾಜಕೀಯ ಹಾಗೂ ಆಡಳಿತ ವಲಯಗಳಲ್ಲಿ ಆತಂಕವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.