ಕರ್ನಾಟಕ ರಾಜ್ಯದಲ್ಲಿ 6,000 ಗ್ರಾಮ ಪಂಚಾಯತಿಗಳಿಗೆ "ಮಹಾತ್ಮ ಗಾಂಧಿ"ಹೆಸರು ನೀಡಬೇಕೆಂಬ ಸಲಹೆ ಸರ್ಕಾರಕ್ಕೆ ನೀಡಲಾಗಿದೆ. ಈ ಸಲಹೆ ಕಾಂಗ್ರೆಸ್ ಪಕ್ಷದ ತೀರ್ಮಾನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮುಂದಿನ ಬಜೆಟ್ ನಲ್ಲಿ ಈ ಕ್ರಮವನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ಹೆಸರಿಡುವ ಯೋಜನೆಯ ಉದ್ದೇಶ ಗ್ರಾಮೀಣಾಭಿವೃದ್ಧಿ, ಸ್ಥಳೀಯ ಆಡಳಿತಕ್ಕೆ ಪ್ರಾಮುಖ್ಯತೆ ಹಾಗೂ ಮಹಾತ್ಮ ಗಾಂಧಿಯ ತತ್ವಗಳನ್ನು ಜನಸಾಮಾನ್ಯರಿಗೆ ಹತ್ತಿರ ತರುವುದಾಗಿದೆ ಎಂದು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ರಾಜ್ಯ ಬಜೆಟ್ ನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡುವ ಕುರಿತು ಘೋಷಣೆ ಮಾಡುವುದಾಗಿ ತಿಳಿಸಿದರು. ಅವರು ಇಂದು ರಾಜ್ಯ ಕಾಂಗ್ರೆಸ್ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿವಿಜಿ ರಾಮ್ ಜಿ ಯೋಜನೆ ಕುರಿತಂತೆ ತಮ್ಮ ವಾಗ್ಮಿತಿಯನ್ನು ವ್ಯಕ್ತಪಡಿಸಿದರು."ನರೇಗಾಗೆ ತಿದ್ದುಪಡಿ ತಂದು, ವಿವಿಜಿ ರಾಮ್ ಜಿ ಯೋಜನೆ ಜಾರಿಗೊಳಿಸಿರುವುದನ್ನು ನಾವು ಖಂಡಿಸುತ್ತಿದ್ದೇವೆ"ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರ ಉಲ್ಲೇಖ :
1. "ವಿಬಿಜಿ ರಾಮ ಜಿ ಕಾಯ್ದೆ ದುರುದ್ದೇಶ ಪೂರ್ವಕ, ರಾಮ್ ಬರುವಂತೆ ವಿಬಿಜಿ ರಾಮ್ ಜಿ ಹೆಸರಿಟ್ಟಿದ್ದಾರೆ, ಆದರೆ ಅಲ್ಲಿ ದಶರಥರಾಮ ಇಲ್ಲ, ಸೀತಾರಾಮ ಇಲ್ಲ, ಕೌಶಲ್ಯ ರಾಮ ಇಲ್ಲ".
2. "ಮನಮೋಹನ್ ಸಿಂಗ್ ಅವರು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾಯ್ದೆಗಳನ್ನು ರೂಪಿಸಿದ್ದರು. ಬಡವರು, ಮಹಿಳೆಯರಿಗೆ ವಿವಿಧ ಕಾರ್ಯಕ್ರಮ ರೂಪಿಸುವುದರಲ್ಲಿ ಕೇಂದ್ರೀತವಾದ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತದೆ. ಆದರೆ ಬಿಜೆಪಿಯವರು ಅದನ್ನು ನಾಶ ಮಾಡುತ್ತಾರೆ".
3. "ಹಳ್ಳಿಗಾಡಿನಲ್ಲಿ ಯಾವ ಉದ್ಯೋಗ ಸಿಗದಂತೆ ಮಾಡಿ, ಗ್ರಾಮೀಣ ಜನರ ಹಕ್ಕುಗಳನ್ನು ಕಡಿಮೆ ಮಾಡಲಾಗಿದೆ", ಎಂದು ಸಿಎಂ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಈ ಧಾರ್ಮಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಕುರಿತು ಎಲ್ಲಾ ಯೋಜನೆಗಳು ಸಾಮಾಜಿಕ ನ್ಯಾಯ, ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಕಡೆ ಗಮನಹರಿಸುತ್ತವೆ ಎಂದು ಸಾರಿದರು.
ನರೇಗಾ ದುರ್ಬಲಗೊಳಿಸುವ ಸಂಚು :
ನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಹಿಂದೆ ಆರ್ ಎಸ್ ಎಸ್ ಮಾರ್ಗದರ್ಶನದ ಬಿಜೆಪಿ ರಾಜಕೀಯ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ಫ್ರೀಡಂ ಪಾರ್ಕ್ ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,"ಬಡವರಿಗೆ ಹಣಕಾಸು ಸಿಗಬಾರದು, ಬಡವರು ಸೇವಕರಾಗಿಯೇ ಇರಬೇಕೆಂಬ ಮನಸ್ಥಿತಿಯೇ ಬಿಜೆಪಿ-ಆರ್ ಎಸ್ ಎಸ್ ಗಳ ಬಯಕೆ"ಎಂದು ಕಿಡಿ ಕಾರಿದರು.
"ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರು ತಮ್ಮ ಗ್ರಾಮದಲ್ಲೇ ಉದ್ಯೋಗ ಪಡೆಯಲು ನರೇಗಾ ಅವಕಾಶ ನೀಡಿತು. ಆದರೆ ಈಗ ಗ್ರಾಮ ಪಂಚಾಯತಿಗಳಿಗೆ ನೀಡಿದ ಅಧಿಕಾರ ಕಸಿದು, ದಿಲ್ಲಿಗೆ ವರ್ಗಾಯಿಸಲಾಗಿದೆ. ಪಂಚಾಯಿತಿಗಳಿಗೆ ಕೆಲಸ ಯಾವುದು ನಡೆಯಬೇಕು ಎಂಬುದನ್ನು ಈಗ ದಿಲ್ಲಿಯೇ ತೀರ್ಮಾನಿಸುತ್ತಿದೆ. ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯಿತಿಗಳಲ್ಲಿ ಕೆಲಸ ಸಿಗುತ್ತದೆ. ದಿಲ್ಲಿಯವರು ಹೇಳಿದಂತೆ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ", ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ,"ಕೂಲಿ ಇಲ್ಲ, ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಟ್ಟ ಮಹತ್ವದ ಯೋಜನೆ ನರೇಗಾ. ಇದು ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರದ ಸಾಧನೆ. ವಿಶ್ವ ಬ್ಯಾಂಕ್ ಕೂಡ ನರೇಗಾ ಯೋಜನೆಗೆ ಅತ್ಯುತ್ತಮ ಯೋಜನೆ ಎಂಬ ಪ್ರಮಾಣ ಪತ್ರ ನೀಡಿತ್ತು", ಎಂದು ನೆನಪಿಸಿದರು.
"ಇಂದು ಗಾಂಧಿ ಹೆಸರನ್ನು ತೆಗೆದುಹಾಕಿ, ನರೇಗಾ ಯೋಜನೆಗೆ ಹೊಸ ರೂಪ ನೀಡಿ, ಅದರ ಮೂಲ ಆತ್ಮವನ್ನೇ ಬದಲಾಯಿಸಿದ್ದಾರೆ. ಇದು ಬಡವರ ವಿರೋಧಿ ನೀತಿಯ ಸ್ಪಷ್ಟ ಉದಾಹರಣೆ", ಎಂದು ಡಿಸಿಎಂ ಕಿಡಿಕಾರಿದರು. ಕಾಂಗ್ರೆಸ್ ನಾಯಕರ ಈ ಹೇಳಿಕೆಗಳು ಗ್ರಾಮೀಣ ಉದ್ಯೋಗ, ಪಂಚಾಯತ್ ಸ್ವಾಯತ್ತತೆ ಮತ್ತು ಸಾಮಾಜಿಕ ನ್ಯಾಯದ ಕುರಿತಂತೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ನರೇಗಾ ರಕ್ಷಣೆಗಾಗಿ ಜೈಲಿಗೂ ಸಿದ್ಧ :
ನರೇಗಾ ಯೋಜನೆ ವಿರುದ್ಧ ಕೇಂದ್ರ ಸರ್ಕಾರ ತರುತ್ತಿರುವ ತಿದ್ದುಪಡಿ ಹಾಗೂ ಹೊಸ ಕಾಯ್ದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,"ಬಿಜೆಪಿಯವರು ಗ್ರಾಮೀಣ ಜನರಿಗೆ ರೋಗ ತರುತ್ತಿದ್ದಾರೆ. ನರೇಗಾ ಉಳಿಸಲು ನಾವು ಜೈಲಿಗೆ ಹೋಗೊದಕ್ಕೂ ಸಿದ್ಧ ಇದ್ದೇವೆ. ಸಚಿವರೆಲ್ಲರೂ ಜೈಲಿಗೆ ಹೋಗುತ್ತೇವೆ", ಎಂದು ಘೋಷಿಸಿದರು. ಫ್ರೀಡಂ ಪಾರ್ಕ್ ನಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅವರು ಈ ಮಾತುಗಳನ್ನು ಹೇಳಿದರು.
ಈ ವೇಳೆ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲು ತೀವ್ರ ವಾಗ್ದಾಳಿ ನಡೆಸಿದರು."ಕುಮಾರಸ್ವಾಮಿ ಏನೋ ಮಾತಾಡ್ತನೆ, ಬರಲಿ ಚರ್ಚೆಗೆ. ನಾನು ಚರ್ಚೆಗೆ ಸಿದ್ದ ಇದ್ದೇನೆ. ಒಬ್ಬರೋ ಇಬ್ಬರೋ ತಪ್ಪು ಮಾಡ್ತಾರೆ ಅಂತ ಮೂಗನ್ನೇ ಕೊಯ್ಯೋದಿಕ್ಕಾಗುತ್ತಾ ?"ಎಂದು ಕಿಡಿ ಕಾರಿದರು.
ಸಿಎಂ ಮುಂದುವರೆಸಿ,"ರಾಜ್ಯದ 6000 ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರಿಡಬೇಕು ಎಂಬ ಸಲಹೆ ಬಂದಿದೆ. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ", ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ರೈತರ, ಕಾರ್ಮಿಕರ ಹಕ್ಕು ಹಾಗೂ ಪಂಚಾಯಿತಿ ಅಧಿಕಾರಗಳನ್ನು ಕಸಿಯುತ್ತಿದೇ ಎಂದು ಆರೋಪಿಸಿದವರು,"ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯತಿಯಲ್ಲಿ ನರೇಗಾ ಕಾರ್ಮಿಕರನ್ನು ಸೇರಿಸಿಕೊಂಡು, ತಾಲೂಕು ಮಟ್ಟದಲ್ಲಿ 5 km ಪಾದಯಾತ್ರೆ ನಡೆಸಲಾಗುತ್ತದೆ. ಈ ಪಾದಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಪರಿಷತ್ ಸದಸ್ಯರು ನೇತೃತ್ವ ವಹಿಸಲಿದ್ದಾರೆ,"ಎಂದು ಹೇಳಿದರು.
ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಮಾತನಾಡಿ,"ಬಿಜೆಪಿ ಸರ್ಕಾರ ಬಡವರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಹಾಗೂ ದಲಿತರ ಕೆಲಸ ಕಸಿದುಕೊಳ್ಳುತ್ತಿದೆ. ಬಡವರ ಅನ್ನಕ್ಕೆ ಕನ್ನ ಹಾಕಿದೆ. ಮನರೇಗಾ ಯೋಜನೆಯಿಂದ ಹಳ್ಳಿಗಳ ಜನರಿಗೆ ಕೆಲಸ ಮಾಡುವ ಹಕ್ಕು ಸಿಕ್ಕಿತ್ತು, ಆದರೆ ಈಗ ಅದನ್ನೇ ಕಸಿದುಕೊಳ್ಳಲಾಗಿದೆ. ಹೊಸ ಕಾಯ್ದೆಯಂತೆ ರಾಜ್ಯ ಸರ್ಕಾರವೇ 40% ಹಣ ನೀಡಬೇಕು ಎಂಬುದು ಅನ್ಯಾಯ", ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಕಾರ್ಮಿಕರು ಧರಿಸುವ ಟವಲ್ ನ್ನು ತಲೆಗೆ ಕಟ್ಟಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿ, ನರೇಗಾ ಕಾರ್ಮಿಕರ ಜೊತೆಗಿನ ಒಗ್ಗಟ್ಟನ್ನು ಪ್ರದರ್ಶಿಸಿದರು.
ಈ ಪ್ರತಿಭಟನೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೂ, ಗ್ರಾಮೀಣ ಉದ್ಯೋಗ ಮತ್ತು ಪಂಚಾಯಿತಿ ಸ್ವಯಕ್ತತೆ ವಿಚಾರಕ್ಕೆ ತೀವ್ರ ತಿರುವು ನೀಡಿದೆ.
ರಾಜ್ಯಪಾಲರಿಗೆ ಮನವಿ ಸಲ್ಲಿಕೆ :
ನರೇಗಾ ಯೋಜನೆ ವಿರುದ್ಧ ಕೇಂದ್ರ ಸರ್ಕಾರ ತಿದ್ದುಪಡಿ ಹಾಗೂ ಗ್ರಾಮೀಣ ಉದ್ಯೋಗ ಪಂಚಾಯಿತಿ ಅಧಿಕಾರ ಕಸಿತದ ವಿರುದ್ಧ ನಡೆದ ಭಾರಿ ಪ್ರತಿಭಟನೆಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರು ಹಾಗೂ ಹಿರಿಯ ನಾಯಕರು ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮೆಮೋರಾಂಡಮ್ ಸಲ್ಲಿಸಿದರು.
ಹೈಕೋರ್ಟ್ ನಲ್ಲಿ ಈ ವಿಷಯ ಸಂಬಂಧ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅನುಮತಿ ನೀಡಲಾಗಿರಲಿಲ್ಲ. ಆದ್ದರಿಂದ ಕಾನೂನು ನಿಯಮಗಳನ್ನು ಗೌರವಿಸಿ, ಕೆಲವೇ ಮಂದಿ ನಾಯಕರು ಬಸ್ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮೆಮೊರಾಂಡಮ್ ನಲ್ಲಿ , ಕೇಂದ್ರ ಸರ್ಕಾರದ ಹೊಸ ಕಾಯ್ದೆಯಿಂದ ನರೇಗಾ ಯೋಜನೆ ದುರ್ಬಲಗೊಳ್ಳುತ್ತಿದೆ, ಗ್ರಾಮ ಪಂಚಾಯಿತಿಗಳ ಅಧಿಕಾರ ದಿಲ್ಲಿಗೆ ವರ್ಗಾವಣೆ ಯಾಗುತ್ತಿದೆ, ಬಡವರು, ಕಾರ್ಮಿಕರು,ದಲಿತರು, ಹಿಂದುಳಿದ ವರ್ಗಗಳ ಉದ್ಯೋಗ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ವಿವರಿಸಲಾಗಿದೆ.
ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು, ಗ್ರಾಮೀಣ ಉದ್ಯೋಗ ಭದ್ರತೆ, ಪಂಚಾಯತ ಸ್ವಾಹಿತ್ಯತೆ ಹಾಗೂ ಬಡವರ ಹಕ್ಕು ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ರಾಜ್ಯಪಾಲರ ಮೂಲಕ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.ಈ ಮನವಿ ಸಲ್ಲಿಕೆಯೊಂದಿಗೆ , ರಾಜ್ಯ ಕಾಂಗ್ರೆಸ್ ಹೋರಾಟ ಇನ್ನೂ ತೀವ್ರ ಗೊಳ್ಳುವ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಪಾದಯಾತ್ರೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಹೋರಾಟಗಳು ನಡೆಯಲಿವೆ ಎಂದು ನಾಯಕರು ತಿಳಿಸಿದ್ದಾರೆ.
ಇನ್ನಷ್ಟು ಓದಿರಿ:
ರಾಜ್ಯಪಾಲ ಗೆಹ್ಲೋಟ್ ಸಂದೇಶ: ಸಂವಿಧಾನ ನಿರ್ಮಾತೃಗಳ ಕನಸು ಹಾಗೂ ಒಕ್ಕೂಟ ವ್ಯವಸ್ಥೆ ರಚನೆ