<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಫಲಿತಾಂಶದ ಬಳಿಕ ರಾಜಕೀಯ ತಿರುಗು: ನಸೀರ್ ಅಹ್ಮದ್, ಅಬ್ದುಲ್ ಜಬ್ದಾರ್ ಕ್ರಮಕ್ಕೆ ಸಮರ್ಥನೆ

ಫಲಿತಾಂಶದ ಬಳಿಕ ರಾಜಕೀಯ ತಿರುಗು: ನಸೀರ್ ಅಹ್ಮದ್, ಅಬ್ದುಲ್ ಜಬ್ದಾರ್ ಕ್ರಮಕ್ಕೆ ಸಮರ್ಥನೆ
Summary: A big debate has started in the political circles after the results of Davangere South constituency were announced. It seems that the action taken against Nasir Ahmed and Abdul Jabdar as a result of this election result has now found justification in the political circles.

belagavi news :

ದಾವಣಗೆರೆ ದಕ್ಷಿಣ ಫಲಿತಾಂಶದ ಪರಿಣಾಮ ಇದೀಗ ಕಾಂಗ್ರೆಸ್ ಪಾಳೆಯಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹಿನ್ನಲೆ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯತೆಯಿಂದ ವಜಾ ಮಾಡಿರುವುದು ಹಾಗೂ ಅಬ್ದುಲ್ ಜಬ್ದಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತು ಮಾಡಿರುವ ಕ್ರಮಕ್ಕೆ ಇದೀಗ ಪಕ್ಷದೊಳಗೆ ಸಮರ್ಥನೆ ಸಿಕ್ಕಂತಾಗಿದೆ.

ಸಿದ್ದರಾಮಯ್ಯ ಅವರು ಸ್ವತಃ ಕೆಪಿಸಿಸಿ ಕೈಗೊಂಡ ಕ್ರಮ ಸರಿಯಾಗಿದೆ ಎಂದು ಒಪ್ಪಿಕೊಂಡಿರುವುದು ಈ ವಿಚಾರಕ್ಕೆ ಮತ್ತಷ್ಟು ಮಹತ್ವ ನೀಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತೆಗೆದುಕೊಂಡ ಈ ನಿರ್ಧಾರ ರಾಜಕೀಯವಾಗಿ ಅಗತ್ಯ ಕ್ರಮವಾಗಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದೇ ವೇಳೆ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕ್ರಮವಾಗಿತ್ತು ಎಂಬ ಅಭಿಪ್ರಾಯವು ವ್ಯಕ್ತವಾಗಿದೆ. ಇದೇ ವೇಳೆ, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಪಕ್ಷದೊಳಗಿನ ಕೆಲವರಿಂದಲೇ ಷಡ್ಯಂತ್ರ ನಡೆದಿತ್ತು ಎಂಬ ಆರೋಪಗಳು ಕೂಡ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಎಲ್ಲಾ ಬೆಳವಣಿಗೆಗಳು ಜಿಲ್ಲೆ ಹಾಗೂ ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಡುತ್ತಿವೆ.

ದಾವಣಗೆರೆ ದಕ್ಷಿಣ ಫಲಿತಾಂಶ ಇದೀಗ ಕಾಂಗ್ರೆಸ್ ಪಕ್ಷದೊಳಗೆ ಶೀಘ್ರ ಚರ್ಚೆಗೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಸಮರ್ಥ್ ಕೆಲವು ಸಾಧಿಸಿದ್ದರು, ಕಾಂಗ್ರೆಸ್ಗೆ ಬರಬೇಕಾಗಿದ್ದ ಮತಗಳಲ್ಲಿ ಉಂಟಾದ ವಿಭಜನೆ ಆಂತರಿಕವಾಗಿ ಹಲವು ಪ್ರಶ್ನೆಗಳು ಎಬ್ಬಿಸಿದೆ. ದಾವಣಗೆರೆಯಲ್ಲಿ ಅಸ್ತಿತ್ವವಿಲ್ಲದ ಎಸ್ ಡಿ ಪಿ ಐ ಗೆ 18,975 ಮತಗಳು ಬಂದಿರುವುದು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಈ ಮತ ವಿಭಜನೆ ಹಿಂದೆ ಕಾಂಗ್ರೆಸ್ ನ "ಕಾಣದ ಕೈಗಳು"ಇದ್ದವು ಎಂಬ ಆರೋಪ ಈಗ ಬಲ ಸಿಕ್ಕಂತಾಗಿದೆ.

Sponsored

ಈ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಖಾನ್ ಅವರನ್ನು ವಜಾ ಮಾಡಿರುವುದು ಹಾಗೂ ಅಬ್ದುಲ್ ಜಬ್ದಾರ್ ವಿರುದ್ಧ ಕೈಗೊಂಡ ಕ್ರಮಕ್ಕೆ ಪಕ್ಷದೊಳಗೆ ಸಮರ್ಥನೆ ದೊರಕುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ, ದಾವಣಗೆರೆ ದಕ್ಷಿಣ ಫಲಿತಾಂಶ ಕೇವಲ ಚುನಾವಣಾ ಫಲಿತಾಂಶ ವಾಗಿರದೆ, ಕಾಂಗ್ರೆಸ್ ಒಳಗಿನ ರಾಜಕೀಯ ಸಮೀಕರಣಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.

ದಾವಣಗೆರೆ ದಕ್ಷಿಣ ರಾಜಕೀಯದಲ್ಲಿ ಎಸ್ ಡಿ ಪಿ ಐ ಜೊತೆ ಹೊಂದಾಣಿಕೆ ನಡೆದಿದೆ ಎಂಬ ಆರೋಪ ಈಗ ಮತ್ತೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಕೆಲ ಕಾಂಗ್ರೆಸ್ ನಾಯಕರು ಎಸ್ ಡಿ ಪಿ ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಸ್ವತಃ ಪಕ್ಷದ ಕೆಲ ನಾಯಕರೇ ಹಿಂದಿ ಮಾಡಿದಿದ್ದರು. ಈ ಬೆಳವಣಿಗೆಗಳು ದಾವಣಗೆರೆ ದಕ್ಷಿಣ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹಾಗೂ ಆಂತರಿಕ ಸಂಘರ್ಷದ ತರ್ತೆಗೆ ಕಾರಣವಾಗಿದ್ದು, ಪಕ್ಷದೊಳಗಿನ ಒಡಕುಗಳು ಮತ್ತೊಮ್ಮೆ ಮುನ್ನಡೆಗೆ ಬಂದಿದೆ. ಆದರೆ ಈ ಆರೋಪಗಳು ಬಂಡಾಯ ಕಾಂಗ್ರೆಸ್ ನಾಯಕರೇ ಸ್ಪಷ್ಟವಾಗಿ ನಿರಾಕರಿಸಿದ್ದರು. ಇದೀಗ ಚುನಾವಣಾ ಮತ ಹಂಚಿಕೆಗಳನ್ನು ಗಮನಿಸಿದಾಗ ಎಸ್ ಡಿ ಪಿ ಐ ಗೆ ಬಂದಿರುವ ಮತ ಪ್ರಮಾಣದ ಹಿಂದೆ ಕಾಂಗ್ರೆಸ್ ನ ಒಳಗಿನ ಬಂಡಾಯ ಗುಂಪಿನ ಪಾತ್ರವಿದೆ ಎಂಬ ಆರೋಪಕ್ಕೆ ಮತ್ತೊಮ್ಮೆ ಬಲ ಸಿಕ್ಕಂತಾಗಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಮುಸ್ಲಿಂ ಬಾಹುಲ್ಯ ಹೊಂದಿರುವ ಕ್ಷೇತ್ರವಾಗಿದ್ದು, ಇಲ್ಲಿ ಸುಮಾರು 57000 ಅಧಿಕೃತ ಮುಸ್ಲಿಂ ಮತದಾರರು ಇದ್ದಾರೆ. ಈ ಮತದಾರರ ರಾಜಕೀಯ ನಡೆ ಈ ಬಾರಿ ಚುನಾವಣೆಯಲ್ಲಿ ವಿಶೇಷ ಗಮನ ಸೆಳೆದಿದೆ. ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಈ ಪೈಕಿ ಸುಮಾರು 23 ಸಾವಿರ ಮತಗಳು ಎಸ್ ಡಿ ಪಿ ಐ ಹಾಗೂ ಇತರ ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳ ಪಾಲಾಗಿವೆ. ಮತ್ತೊಂದೆಡೆ, ಸುಮಾರು 35 ಸಾವಿರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗಿರುವುದು ಗಮನಾರ್ಹವಾಗಿದೆ. ಎಸ್ ಡಿ ಪಿ ಐ ಗೆ ಬಂದಿರುವ ಮತ ಪ್ರಮಾಣವು ಕೆಲವೊಂದು ಮತದಾರರ ಅಸಮಾಧಾನ ಮತ್ತು ರಾಜಕೀಯ ಆಕ್ರೋಶದ ಪ್ರತಿಫಲನ ವಾಗಿರಬಹುದು ಎಂಬ ವಿಶ್ಲೇಷಣೆಯು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ದಾವಣಗೆರೆ ದಕ್ಷಿಣದ ಈ ಮತದಾನ ಪ್ಯಾಟರ್ನ್ ರಾಜ್ಯ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುತ್ತಿದೆ.

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಬ್ದುಲ್ ಜಬ್ದಾರ ಹಾಗೂ ನಸೀರ್ ಅಹ್ಮದ್ ವಿರುದ್ಧ ಕೆಪಿಸಿಸಿ ಕ್ರಮ ಕೈಗೊಂಡಿತ್ತು. ಈ ಕ್ರಮಕ್ಕೆ ಆರಂಭದಲ್ಲಿ ಮುಸ್ಲಿಂ ಸಮುದಾಯದ ಕೆಲವು ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮುಸ್ಲಿಮರನ್ನು ಗುರಿಯಾಗಿಸಲಾಗಿದೆ ಎಂಬ ಆರೋಪವು ಕೇಳಿಬಂದಿತ್ತು. ಈ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಿರಿಗೆಟು ನೀಡುವ ಉದ್ದೇಶದಿಂದ ಅವರ ಆಪ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಅದೇ ವೇಳೆ ಶಾಸಕರಾದ ಮತ್ತು ಸಲೀಂ ಅಹ್ಮದ್ ಮತ್ತು ಸಲೀಂ ಅಹ್ಮದ್ ಸೇರಿದಂತೆ ಕೆಲ ನಾಯಕರು ಸಡ್ಯಂತ್ರ ನಡೆದಿದೆ ಎಂಬ ಆರೋಪಕ್ಕೆ ಸಾಕ್ಷಿ ಇದೆ ಎಂದು ಹೇಳಿದರು, ಯಾವುದೇ ಅಧಿಕೃತ ದಾಖಲೆಗಳನ್ನು ಬಹಿರಂಗಪಡಿಸಲಿಲ್ಲ.

Sponsored

ಇದೀಗ ಚುನಾವಣಾ ಫಲಿತಾಂಶ ಮತ್ತು ಎಸ್ ಡಿ ಪಿ ಐ ಪಡೆದ ಮತ ಪ್ರಮಾಣವನ್ನು ಗಮನಿಸಿದಾಗ, ಬಂಡಾಯ ಗುಂಪಿನ ತಂತ್ರ ಒಂದು ಹಂತಕ್ಕೆ ಪರಿಣಾಮ ಬೀರಿದಂತೆ ರಾಜಕೀಯ ವಿಶ್ಲೇಷಣೆಗಳು ಹೇಳುತ್ತಿವೆ. ಮತ್ತೊಂದೆಡೆ, ಸಾಧಿಕ್ ಪೈಲ್ವಾನ್ ಬಂಡಾಯವನ್ನು ಶಮನ ಮಾಡುವಲ್ಲಿ ಕಾಂಗ್ರೆಸ್ ನಾಯಕತ್ವ ಯಶಸ್ವಿಯಾದುದು ಗೆಲುವಿಗೆ ಸಹಕಾರ ನೀಡಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಒಟ್ಟಾರೆ, ದಾವಣಗೆರೆ ದಕ್ಷಿಣ ರಾಜಕೀಯವು ಪಕ್ಷದೊಳಗಿನ ಸಂಘರ್ಷ, ಸಮುದಾಯ ರಾಜಕೀಯ ಮತ್ತು ಚುನಾವಣಾ ತಂತ್ರಗಳ ಸಂಪರ್ಕ ಚಿತ್ರಣವನ್ನು ಮತ್ತೊಮ್ಮೆ ಹೊರ ತರುತ್ತಿದೆ.

ದಾವಣಗೆರೆ ದಕ್ಷಿಣ ಚುನಾವಣೆಯ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳು ಸರಿಯೇ ಎಂಬ ಚರ್ಚೆಗೆ ಇದೀಗ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ನಸೀರ್ ಅಹಮದ್ ಹಾಗೂ ಅಬ್ದುಲ್ ಜಬ್ದಾರ್ ವಿರುದ್ಧ ತೆಗೆದುಕೊಂಡ ಸುತ್ತಿನ ಕ್ರಮ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ಪಕ್ಷದೊಳಗೆ ಎಲ್ಲಿ ತಪ್ಪಾಗಿದೆ ಎಂಬುದು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಯಲ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Also Read:

ಪಂಚಮಸಾಲಿ ಮಠದಲ್ಲಿ ಬಿಗಿ ಭದ್ರತೆ : ಹರಿಹರದಲ್ಲಿ ಗೇಟ್ ಬಂದ್

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online