H16 News
Logo

By Samreen | Published on November 19, 2025

Image Not Found
Business / November 19, 2025

ಆಸ್ತಿ ತೆರಿಗೆ ಬಾಕಿ: ಬೆಂಗಳೂರಿನ ಮಂತ್ರಿಮಾಲ್ಗೆ ಮತ್ತೆ ಬೀಗ

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಬಿಬಿಎಂಪಿ ಮತ್ತೆ ಬೀಗ ಜಡಿದಿದೆ. 30 ಕೋಟಿಗೂ ಅಧಿಕ ತೆರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಹಲವಾರು ಬಾರಿ ತೆರಿಗೆ ಪಾವತಿಸದೆ ಮಾಲ್ ಸೀಜ್ ಆಗಿತ್ತು. ತೆರಿಗೆ ಕಟ್ಟದ ಕಾರಣ ಮಾಲ್ ಸಿಬ್ಬಂದಿ ಹಾಗೂ ಮಾಲೀಕರು ಕಂಗಾಲಾಗಿದ್ದು, ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಬೆಂಗಳೂರು ನಗರದ ಪ್ರತಿಷ್ಠಿತ ಮಾಲ್ಗಳಲ್ಲಿ ಒಂದಾದ ಮಂತ್ರಿಮಾಲ್ಗೆ ಮತ್ತೆ ಬೀಗ ಬಿದ್ದಿದೆ (Mantri Mall closed again). ಈ ಹಿಂದೆಯೂ ಕೋಟ್ಯಂತರ ತೆರಿಗೆ ಪಾವತಿಸದ ಸಲುವಾಗಿ ಹಲವು ಬಾರಿ ಮಾಲ್ ಅನ್ನು ಸೀಜ್ ಮಾಡಲಾಗಿತ್ತು. ಈ ಬಾರಿಯೂ 30 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಬಾಕಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಮಂತ್ರಿ ಮಾಲ್ಗೆ ಬೀಗ ಬಿದ್ದಿತ್ತು. ಈ ಬಾರಿಯೂ ಬರೋಬ್ಬರಿ 30,81,45,600 ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಅಧಿಕಾರಿಗಳು ಇಂದು ಬೆಳಗ್ಗೆ ಮಾಲ್ ಅನ್ನು ಸೀಜ್ ಮಾಡಿ ನೋಟಿಸ್ ಕಳುಹಿಸಿದ್ದಾರೆ. ಬೀಗ ಹಾಕಿದ್ದರಿಂದ ಮಾಲ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಇತ್ತ ಮಾರ್ಷಲ್ಸ್ ಮತ್ತು ಪೊಲೀಸರು ಮಾಲ್ ಬಳಿಯೇ ಬೀಡುಬಿಟ್ಟಿದ್ದಾರೆ. ಹಲವು ಬಾರಿ ಮಾಲ್ಗೆ ಬೀಗ: 2023ರಲ್ಲಿ 32 ಕೋಟಿ ವರೆಗೂ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ಗೆ ಪಾಲಿಕೆ ಒನ್ ಟೈಂ ಪೇಮೆಂಟ್ಗೆ ಅವಕಾಶ ಕೊಟ್ಟಿತ್ತು. ಆದರೆ ಸೆಟಲ್ ಆಗದಿರುವ ಕಾರಣ ಮಾಲ್ಗೆ ಬೀಗ ಜಡಿದಿತ್ತು. ಮತ್ತೊಮ್ಮೆ 2024ರಲ್ಲಿಯೂ ಇದೇ ತಪ್ಪು ಮಾಡಿದ್ದ ಮಂತ್ರಿ ಮಾಲ್, ಸುಮಾರು 50 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಹಿನ್ನಲೆ ಮಂತ್ರಿ ಮಾಲ್ನ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಬೋರ್ಡ್ ಹಾಕಿ, ಪಾಲಿಕೆ ಅಧಿಕಾರಿಗಳು ಸೀಜ್ ಮಾಡಿದ್ದರು. ಇದೀಗ ಮತ್ತೊಮ್ಮೆ ತೆಗಿ ವಿಷಯದಲ್ಲಿಯೇ ಮಾಲ್ಗೆ ಬೀಗ ಬಿದ್ದಿದೆ. 2020 ರಲ್ಲಿ ಬರೋಬ್ಬರಿ 42,63,40,874 ರೂ ಆಸ್ತಿ ತೆರಿಗೆ ಕಟ್ಟದೇ ಇದ್ದಿದ್ದಕ್ಕೆ ಮತ್ತು BBMP ಗೆ ಕೊಟ್ಟ 10 ಕೋಟಿ ರೂ. ಚೆಕ್ ಬೌನ್ಸ್ ಆಗಿದ್ದಕ್ಕೆ ಮಂತ್ರಿ ಮಾಲ್ಗೆ ಬೀಗ ಹಾಕಲಾಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ಆಡಳಿತವು ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ. ಅಂತೆಯೇ 2021 ರಲ್ಲಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಇದ್ದ ಕಾರಣ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಇನ್ನಷ್ಟು ಓದಿರಿ: ಚಿತ್ತಾಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ಕೇಸ್ ಪ್ರಕರಣ ಹಿಂಪಡೆದಿದ್ದ ಸರ್ಕಾರಕ್ಕೆ ಹಿನ್ನಡೆ
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy