<?= $pageTitle ?>
Logo
ಮುಖಪುಟ ಓದುವುದು ಕೇಳು
Politics

RJD ನಾಯಕ ಲಾಲು ಪ್ರಸಾದ್ ಯಾದವ್ ಇಂದು ಏಮ್ಸ್ ಗೆ ದಾಖಲು

RJD ನಾಯಕ ಲಾಲು ಪ್ರಸಾದ್ ಯಾದವ್ ಇಂದು ಏಮ್ಸ್ ಗೆ ದಾಖಲು
Summary: RJD leader Lalu Prasad Yadav is being admitted to AIIMS in Delhi today following fluctuations in his health. He was admitted to the Indira Gandhi Institute of Medical Sciences in Patna on Friday evening after his blood pressure fluctuated. On the advice of doctors, he is now being shifted to AIIMS in Delhi for further tests and specialist monitoring.

BELAGAVI NEWS :

ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಶನಿವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲಾಗುತ್ತಿದೆ ಎಂದು ಅವರು ಹಿರಿಯ ಪುತ್ರಿ ಹಾಗೂ ಆರ್‌ಜೆಡಿ ಸಂಸದೆ ವೀಸಾ ಭಾರ್ತಿ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಲಾಲು ಪ್ರಸಾದ್ ಯಾದವ್ ಅವರ ರಕ್ತದೊತ್ತಡದಲ್ಲಿ ಏರಿತ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಪಾಟ್ನಾದ" ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ" ದಾಖಲಿಸಲಾಗಿತ್ತು. ವೈದ್ಯರು ತಕ್ಷಣವೇ ಆರೋಗ್ಯ ತಪಾಸನೆ ನಡೆಸಿ ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಿಸಾ ಭಾರ್ತಿ, "ರಕ್ತದೊತ್ತಡದಲ್ಲಿ ಏರಿಳಿತ ಕಂಡು ಬಂದ ಕಾರಣ ಲಾಲು ಪ್ರಸಾದ್ ಯಾದವ್ ಅವರನ್ನು ಐಜಿಐಎಂಎಸ್‌ಗೆ ದಾಖಲಿಸಲಾಗಿತ್ತು. ವೈದ್ಯರು ವಿವರವಾದ ಪರೀಕ್ಷೆ ನಡೆಸಿದ ನಂತರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದರಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಹೆಚ್ಚಿನ ವೇದಿಕೆಯ ಪರೀಕ್ಷೆ ಮತ್ತು ತಜ್ಞರ ಸಲಹೆಗಾಗಿ ಶನಿವಾರ ಅವರನ್ನು ದೆಹಲಿಯ ಏಮ್ಸ್ ಗೆ ಕರೆದೊಯ್ಯಲಾಗುತ್ತದೆ" ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್ ಯಾದವ್ ನಿಯಮಿತವಾಗಿ ವೈದ್ಯಕೀಯ ತಪಾಸನೆಗೆ ಒಳಗಾಗುತ್ತಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿರಂತರ ನಿಗಾ ವಹಿಸಿದ್ದಾರೆ.

ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ದೆಹಲಿಗೆ ಪ್ರಯಾಣಿಸುವ ಮೊದಲು ಮನೆಯಲ್ಲಿಯೇ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಅವರ ಪುತ್ರಿ ಹಾಗೂ ಆರ್‌ಜೆಡಿ ಸದಸ್ಯ ಮೀಸಾ ಭಾರ್ತಿ ತಿಳಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರು ದೆಹಲಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಲ್ಲಿ ನಿಯಮಿತವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ಮತ್ತು ಆರೋಗ್ಯ ತಪಾಸನೆ ಪಡೆಯಲಿದ್ದಾರೆ ಎಂದು ಮಿಸಾ ಭಾರ್ತಿ ಹೇಳಿದ್ದಾರೆ. ಶುಕ್ರವಾರ ರಕ್ತದೊತ್ತಡದಲ್ಲಿ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಪಾಟ್ನಾದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು.

ಇದೆ ವೇಳೆ, ಲಾಲು ಪ್ರಸಾದ್ ಯಾದವ್ ಇತ್ತೀಚಿಗೆ ಸ್ಥಳಾಂತರಗೊಂಡಿರುವ ಕೌಟಿಲ್ಯ ನಗರ ಪ್ರದೇಶದ ನೈರ್ಮಲ್ಯ ಸಮಸ್ಯೆಗಳ ಬಗ್ಗೆಯೂ ಮೀಸಾ ಭಾರ್ತಿ ಪ್ರತಿಕ್ರಿಯಿಸಿದ್ದಾರೆ. "ಈ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ದೊಡ್ಡ ಸಮಸ್ಯೆಯಾಗಿದೆ.ಈ ವಿಚಾರವನ್ನು ಪ್ರಸ್ತಾಪಿಸಿದರೆ ಜನರು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು" ಎಂದೂ ಅವರು ಹೇಳಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ,ವೈದ್ಯಕೀಯ ಮತ್ತು ಕೌಟಿಲ್ಯ ನಗರದ ನೈರ್ಮಲ್ಯ ಸಮಸ್ಯೆ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಯ ವಿಷಯವಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online