<?= $pageTitle ?>
Logo
ಮುಖಪುಟ ಓದುವುದು ಕೇಳು
Business

ರಷ್ಯಾ ಹೇಳಿಕೆ: ಭಾರತ ಯಾವ ದೇಶದಿಂದ ಬೇಕಾದರೂ ತೈಲ ಖರೀದಿಸಬಹುದು

ರಷ್ಯಾ ಹೇಳಿಕೆ: ಭಾರತ ಯಾವ ದೇಶದಿಂದ ಬೇಕಾದರೂ ತೈಲ ಖರೀದಿಸಬಹುದು
Summary: ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಯಾವುದೇ ದೇಶದಿಂದಳು ತೈಲ ಖರೀದಿಸಲು ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.
belagavi news:
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ರಾಜಕೀಯ ಒತ್ತಡಗಳ ನಡುವೆಯೂ ಭಾರತದ ಸ್ವಾತಂತ್ರ್ಯ ಖರೀದಿ ನೀತಿಗೆ ರಷ್ಯಾ ಬೆಂಬಲ ವ್ಯಕ್ತಪಡಿಸಿದೆ. ಈ ಹೇಳಿಕೆ ಅಂತರಾಷ್ಟ್ರೀಯ ಮಠದಲ್ಲಿ ಮಹತ್ವದ ಚಾರ್ಜೆಗೆ ಕಾರಣವಾಗಿದ್ದು ಭಾರತದ ಇಂಧನ ಭದ್ರತೆ ಹಾಗೂ ಆರ್ಥಿಕ ತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಮುಕ್ತವಾಗಿದೆ ಎಂದರೆ ರಷ್ಯಾ ಹೇಳಿಕೆ.

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಮತ್ತು ಅಮೆರಿಕ ಹಾಗೂ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸಲು ಒಪ್ಪಿಕೊಂಡಿದ್ದಾರೆ, ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಕುರಿತ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.


ಭಾರತ ಯಾವಾಗಲೂ ಈ ತರ ದೇಶಗಳಿಂದ ಈ ಉತ್ಪನ್ನಗಳನ್ನು ಖರೀದಿಸಿದೆ ಆದ್ದರಿಂದ ನಾವು ಇಲ್ಲಿ ಹೊಸವನ್ನೇನೂ ಕಾಣುತ್ತಿಲ್ಲ, ಎಂದು ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಬುಧವಾರ ತಿಳಿಸಿದರು. ರಷ್ಯಾ ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಒಬ್ಬನೇ ಪೂರೈಕೆದಾರನಲ್ಲ. ಈ ವಿಚಾರ ನಮಗೆ ಮತ್ತು ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಿಗೂ ಚೆನ್ನಾಗಿ ಗೊತ್ತಿದೆ. ಇದಕ್ಕೆ ಒಂದು ದಿನ ಮೊದಲು, ನಮ್ಮಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತದಿಂದ ಯಾವುದೇ ಹೇಳಿಕೆ ಬಂದಿಲ್ಲ ಎಂದು ಪೆಸ್ಲೋವ್ ಹೇಳಿದ್ದರು.

ಭಾರತ ತನ್ನ ಕಚ್ಚಾ ತೈಲದ ಸುಮಾರು ಶೇ.88 ರಷ್ಟನ್ನು ವಿವಿಧ ದೇಶಗಳಿಂದ ಖರೀದಿಸುತ್ತದೆ. ಇದನ್ನು ನಂತರ ಪೆಟ್ರೋಲ್ ಮತ್ತು ಡೀಸೆಲ ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ.

ಇದರಲ್ಲಿ ರಷ್ಯಾದ ಇಂಧನ ಕರೆದಿಗಾಗಿಯೇ ಶೇಕಡ 25ರಷ್ಟು ಸುಂಕ ಹಾಕಿದ್ದಾರೆ. ಭಾರತದ ವಿರುದ್ಧ ಟ್ರಂಪ ಹಳೆದ ವರ್ಷ ಶೇ. 50ರಷ್ಟು ಸುಂಕ ವಿಧಿಸಿದ್ದರು.

ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಇದು ವಿಶೇಷ ಕೊಡುಗೆ ನೀಡುತ್ತದೆ. ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಾಖರೋವ ಅವರು ಪ್ರತಿಕ್ರಿಯೆಸುತ್ತಾ, ಹೈಡ್ರೋಕಾರ್ಬನ್ ವ್ಯಾಪಾರವು ಭಾರತ ಮತ್ತು ರಷ್ಯಾ ಎರಡು ದೇಶಗಳಿಗೂ ಪ್ರಯೋಜನಕಾರಿ. ಭಾರತದಲ್ಲಿನ ತಮ್ಮ ಪಾಲುದಾರರೊಂದಿಗೆ ಈ ಕ್ಷೇತ್ರದಲ್ಲಿ ನಿಕಟ ಸಹಕಾರವನ್ನು ಮುಂದುವರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

2022ರ ಫೆಬ್ರುವರಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾ ವನ್ನು ದೂರವಿಟ್ಟವು. 2021ರವರೆಗೆ ಭಾರತ ಆಮದು ಮಾಡಿಕೊಂಡ ಎಲ್ಲಾ ಕಚ್ಚಾ ತೈಲನಲ್ಲಿ ರಷ್ಯಾದಿಂದ ಆಮದಾದ ತೈಲದ ಪ್ರಮಾಣ ಕೇವಲ ಶೇ. 0.2 ರಷ್ಟಿತ್ತು. ಆದರೆ ಇದಾದ ನಂತರ ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಪೂರೈಸುತ್ತಿತ್ತು. ಇದರ ಪರಿಣಾಮ ಭಾರತವು ರಷ್ಯಾದ ಅತಿ ದೊಡ್ಡ ಕಚ್ಚಾ ತೈಲ ಖರೀದಿ ದಾರನಾಯಿತು.

ಇದಕ್ಕೆ ಹಿಂದಿನ ತಿಂಗಳಲ್ಲಿ ಸರಾಸರಿ 1.21 ಮಿಲಿಯನ್ ಬಿಪಿಡಿ ಮತ್ತೆ 2015ರ ಮಧ್ಯ ಭಾಗದಲ್ಲಿ ಎರಡು ಮಿಲಿಯನ್ ಬಿಪಿಡಿ ಆಮದಾಗುತ್ತಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಒಂದು ದತ್ತಾಂಶದ ಪ್ರಕಾರ ಜನೆವರಿಯ ಮೊದಲ ಮೂರು ವಾರಗಳಲ್ಲಿ ಭಾರತ ರಷ್ಯಾದಿಂದ ಖರೀದಿಸಿದ ಕಚ್ಚಾ ತೈಲ ಆಮದು ದಿನಕ್ಕೆ ಸುಮಾರು 1.1 ಮಿಲಿಯನ್ ಬ್ಯಾರೆಲ್ ( ಬಿಪಿಟಿ)ಗಳಿಗೆ ಇಳಿದಿದೆ.


ಇನ್ನಷ್ಟು ಓದಿರಿ:
ಶುಕ್ರವಾರದ ರಾಶಿ ಭವಿಷ್ಯ: ಸಂಗಾತಿ ಹುಡುಕಾಟದಲ್ಲಿ ರುವವರಿಗೆ ಅದೃಷ್ಟದ ದಿನ ಇಂದು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online