<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಸಲ್ಮಾನ್ ಖಾನ್ ಜೀವನ ಶೈಲಿ : ಕೋಟ್ಯಾಧಿಪತಿ ಆಗಿದ್ದರೂ 1 BHK ಮನೆಯಲ್ಲಿ ವಾಸ ಏಕೆ ?

ಸಲ್ಮಾನ್ ಖಾನ್ ಜೀವನ ಶೈಲಿ : ಕೋಟ್ಯಾಧಿಪತಿ ಆಗಿದ್ದರೂ 1 BHK ಮನೆಯಲ್ಲಿ ವಾಸ ಏಕೆ ?
Summary: Bollywood actor Salman Khan has been living in just a 1 BHK house for the past 52 years, which has sparked curiosity. The reason behind his simple lifestyle is now being debated.

Belagavi News :

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಐತಿಹಾಸಿಕ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಅನ್ನು ಬಿಡಲಿದ್ದಾರೆ ಎಂಬ ವರದಿಗಳು ಇದೀಗ ಭಾರಿ ಕುತೂಹಲ ಮೂಡಿಸಿವೆ. ಕಳೆದ 52 ವರ್ಷಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿರುವ ಸಲ್ಮಾನ್ ಖಾನ್ ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾವಿರಾರು ಕೋಟಿ ಆಸ್ತಿಯ ಮಾಲೀಕರಾಗಿದ್ದರೂ, ಸಲ್ಮಾನ್ ಖಾನ್ ಅವರು ಇಂದಿಗೂ ಸರಳವಾಗಿ ಕೇವಲ 1 BHK ಫ್ಲಾಟ್ ನಲ್ಲೇ ವಾಸಿಸುತ್ತಿರುವುದು ಅವರ ಜೀವನಶೈಲಿಯ ವಿಶೇಷತೆಯಾಗಿದೆ. ಈ ಮನೆಯ ಕೇವಲ ನಿವಾಸವಲ್ಲ, ಅವರ ಕುಟುಂಬದ ಹೋರಾಟ ಮತ್ತು ಯಶಸ್ಸಿನ ಸಂಕೇತವಾಗಿದೆ.

ಮಾಹಿತಿಯ ಪ್ರಕಾರ, ಈ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಅನ್ನು ಸಲ್ಮಾನ್ ಅವರ ತಂದೆ, ಖ್ಯಾತ ಚಿತ್ರಕಥೆಗಾರ ಸಲೀಂ ಖಾನ್, ಇಂದು ನಿಂದ ಮುಂಬೈಗೆ ಬಂದು ತಿಂಗಳಿಗೆ ಕೇವಲ 55 ರೂಪಾಯಿ ಬಾಡಿಗೆ ಕೋಣೆಯಲ್ಲಿ ವಾಸಿಸಿದ್ದ ಕಾಲದಿಂದ ಹೋರಾಟ ನಡೆಸಿ ಪಡೆದಿದ್ದಾರೆ. ಆ ಬಳಿಕ ಈ ಮನೆಯಲ್ಲಿ ಖಾನ್ ಕುಟುಂಬವು ದಶಕಗಳಷ್ಟು ಸಮಯ ಕಳೆದಿದೆ.

ಗ್ಯಾಲಕ್ಸಿ ಅಪಾರ್ಟ್ಮೆಂಟ್ ಕೇವಲ ಒಂದು ಕಟ್ಟಡವಲ್ಲ, ಅದು ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರ ಸ್ಟಾರ್ ಡಮ್ ಗೆ ಸಾಕ್ಷಿಯಾದ ಐತಿಹಾಸಿಕ ಸ್ಥಳವಾಗಿದೆ. ಈಗ ಅವರು ಈ ಮನೆಯನ್ನು ಬಿಟ್ಟು ಬೇರೆ ಕಡೆ ಸ್ಥಳಾಂತರ ವಾಗುವ ಸಾಧ್ಯತೆ ಇದೆ ಎಂಬ ವರದಿಗಳು ಹೊರ ಬಿದ್ದಿದ್ದು, ಅಭಿಮಾನಿಗಳಲ್ಲಿ ಬಾವುಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮನೆ ಸಲ್ಮಾನ್ ಖಾನ್ ಅವರ ಯಶಸ್ಸಿನ ಜೊತೆಗೆ ಕುಟುಂಬದ ಹೋರಾಟದ ಪ್ರತೀಕವಾಗಿದ್ದು, ಅದರೊಂದಿಗೆ ಅವರ ಭಾವನಾತ್ಮಕ ಬಂದವು ಬಹಳ ಗಟ್ಟಿಯಾಗಿರುವುದಾಗಿ ಹೇಳಲಾಗುತ್ತಿದೆ.

ಸಲೀಂ ಖಾನ್ ಹೋರಾಟದ ದಿನಗಳು - ಇಂದೋರ್ ನಿಂದ ಮುಂಬೈಗೆ, ತಿಂಗಳಿಗೆ 55 ರೂ ಬಾಡಿಗೆಯ ಕೋಣೆಯಿಂದ ಆರಂಭ :

ಬಾಲಿವುಡ್ ಚಿತ್ರರಂಗದ ಖ್ಯಾತ ಚಿತ್ರಕಥೆಗಾರ ಸಲೀಂ ಖಾನ್ ಅವರ ಯಶಸ್ಸಿನ ಹಿಂದೆ ದೊಡ್ಡ ಹೋರಾಟದ ಕಥೆ ಇದೆ. ಇಂದೋರ್ ನಿಂದ ಮುಂಬೈಗೆ ದೊಡ್ಡ ಕನಸು ಹೊತ್ತು ಬಂದ ಸಲೀಂ ಖಾನ್ ಅವರ ಆರಂಭದ ದಿನಗಳು ಬಹಳಷ್ಟು ಕಷ್ಟಕರವಾಗಿದ್ದವು.

ಆರಂಭದಲ್ಲಿ ಸಲೀಂ ಖಾನ್ ಪ್ರೇಮಪತ್ರಗಳನ್ನು ಬರೆಯುವ ಕೆಲಸ ಮಾಡುತ್ತಿದ್ದರು. ಇಂದೋರ್ ನಲ್ಲಿ ನಡೆದ ಮದುವೆ ಒಂದರಲ್ಲಿ ಮುಂಬೈನ ನಿರ್ಮಾಪಕ ಕೆ.ಅಮರನಾಥ್ ಅವರ ಗಮನಕ್ಕೆ ಬಂದ ಸಲೀಂ ಅವರಿಗೆ ಸಿನಿಮಾದಲ್ಲಿ ಅವಕಾಶ ದೊರಕಿತು. ನಂತರ ಅವರು 1960ರಲ್ಲಿ ಬಿಡುಗಡೆಯಾದ 'ಬರಾತ್ ' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರು.

ಮುಂಬೈನಲ್ಲಿ ಆರಂಭದ ದಿನಗಳಲ್ಲಿ ಸಲೀಂ ಖಾನ್ ಅವರ ಜೀವನ ಸುಲಭವಾಗಿರಲಿಲ್ಲ. ಅವರು ಮರೀನಾ ಗೆಸ್ಟ್ ಹೌಸ್ ನಲ್ಲಿ ತಿಂಗಳಿಗೆ 55 ರೂಪಾಯಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಆ ಕೋಣೆಯಲ್ಲಿ ಇಬ್ಬರು ಒಟ್ಟಿಗೆ ವಾಸಿಸಬೇಕಾಗಿತ್ತು. ಜೊತೆಯಲ್ಲಿದ್ದ ವ್ಯಕ್ತಿಯ ಜೋರಾದ ಕೊರತೆಯಿಂದ ನಿದ್ರೆ ಕೂಡ ಕಷ್ಟವಾಗುತ್ತಿತ್ತು ಎಂದು ಅವರು ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಲೀಂ ಖಾನ್ ಅವರ ಮೊದಲ ಗುರಿ ಸ್ವಂತವಾಗಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆಯುವುದಾಗಿತ್ತು. ಆದರೆ ಅದರಿಗೂ ಅವರು ಕುಟುಂಬದ ಸಹಾಯ ಕೇಳದೆ, ಸ್ವತಃ ಹೋರಾಡಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದರು.

ಈ ಹೋರಾಟವೇ ಮುಂದಿನ ದಿನಗಳಲ್ಲಿ ಬಾಲಿವುಡ್ ನ ಯಶಸ್ವಿ ಚಿತ್ರಕಥೆಗಾರರಾಗಿ ರೂಪಗೊಳ್ಳಲು ಬುನಾದಿ ಹಾಕಿತು ಎಂಬುದು ಚಿತ್ರರಂಗದ ಅಭಿಪ್ರಾಯವಾಗಿದೆ.

ಸಲೀಂ ಖಾನ್ ಗ್ಯಾಲಕ್ಸಿ ಫ್ಲಾಟ್ ಖರೀದಿ ಕಥೆ - 100 ಕೋಟಿ ಆಸ್ತಿ, ಸಲ್ಮಾನ್ ಖಾನ್ ಇನ್ನೂ 1 BHK ಮನೆಯಲ್ಲೇಕೆ ? :

ಬಾಲಿವುಡ್ ಚಿತ್ರರಂಗದ ಖ್ಯಾತ ಕಥೆಗಾರ ಸಲೀಂ ಖಾನ್ ಅವರ ಯಶಸ್ಸಿನ ಬಳಿಕದ ಜೀವನ ಮತ್ತು ಕುಟುಂಬದ ಕಥೆ ಇದೀಗ ಮತ್ತೆ ಚರ್ಚೆಯಲ್ಲಿದೆ. ನಟನೆಯಲ್ಲಿ ಭವಿಷ್ಯವಿಲ್ಲ ಎಂದು ತಿಳಿದ ಬಳಿಕ ಬರವಣಿಗೆ ಎತ್ತ ಮುಖ ಮಾಡಿದ ಸಲೀಂ ಖಾನ್ ಅವರು , ಜಾವೇದ್ ಅಖ್ತರ್ ಅವರೊಂದಿಗೆ ಸೇರಿ ಬರೆದ 'ಜಂಜೀರ್ ' (1973) ಸಿನಿಮಾ ಭಾರಿ ಯಶಸ್ಸು ಕಂಡು ಬಾಲಿವುಡ್ ಗೆ ಹೊಸ ದಿಕ್ಕು ನೀಡಿತು.

'ಜಂಜೀರ್ ' ಯಶಸ್ಸಿನ ಬಳಿಕ ಮುಂಬೈನಲ್ಲಿ ಸುಮಾರು 14 ವರ್ಷಗಳ ಹೋರಾಟದ ನಂತರ ಸಲೀಂ ಖಾನ್ ಅವರು ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ಮೊದಲ ಪ್ಲಾಟ್ ಖರೀದಿಸಿದರು. ಆಗ ಫ್ಲಾಟ್ ನ ಮೌಲ್ಯ ಸುಮಾರು 50 ಸಾವಿರದಿಂದ 1.5 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಇಂದು ಈ ಸಂಪೂರ್ಣ ಆಸ್ತಿಯ ಮೌಲ್ಯ 100 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಈ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಕೇವಲ ಒಂದು ಮನೆ ಅಲ್ಲ, ಅದು ಖಾನ್ ಕುಟುಂಬದ ಯಶಸ್ಸು ಮತ್ತು ಹೋರಾಟದ ಪ್ರತೀಕವಾಗಿದೆ.

ಇದೇ ಮನೆಯಲ್ಲಿ ಬೆಳೆದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಇಂದು ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಮಾಲೀಕರಾಗಿದ್ದರೂ, ಇನ್ನೂ ಮೊದಲ ಮಹಡಿಯಲ್ಲಿರುವ 1 BHK ಮನೆಯಲ್ಲಿ ವಾಸ್ತುತಿದ್ದಾರೆ. ಅವರ ತಂದೆ - ತಾಯಿ ಮೇಲಿನ ಮಹಡಿಯಲ್ಲಿ ವಾಸವಾಗಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಮನೆಗೆ ವಿಶೇಷ ಭಾವನಾತ್ಮಕ ಸಂಬಂಧವಿದ್ದು, ಅವರು ಇದನ್ನು ತಮ್ಮ 'ಲಕ್ಕಿ ಹೋಮ್ ' ಎಂದು ಪರಿಗಣಿಸುತ್ತಾರೆ. ಅದೇ ಕಾರಣದಿಂದ ದೇಶದ ಅತಿ ದೊಡ್ಡ ಸೂಪರ್ ಸ್ಟಾರ್ ಆಗಿದ್ದರು ಅವರು ಈ ಮನೆಯನ್ನು ಬಿಟ್ಟು ಹೋಗಿಲ್ಲ.

ಇಂದಿಗೂ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಬಾಲಿವುಡ್ ಇತಿಹಾಸದಲ್ಲಿ ಕುಟುಂಬದ ಯಶಸ್ಸು ಮತ್ತು ಹೋರಾಟದ ಸಂಕೇತವಾಗಿ ಉಳಿದಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online