<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಖಡಕ್ ಎಚ್ಚರಿಕೆ: ಪಕ್ಷ ಬಿಡುವ ಮುನ್ನ ರಾಜೀನಾಮೆ ಕೊಡಿ

ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಖಡಕ್ ಎಚ್ಚರಿಕೆ: ಪಕ್ಷ ಬಿಡುವ ಮುನ್ನ ರಾಜೀನಾಮೆ ಕೊಡಿ
Summary: Amidst the ongoing rebellion talks in the Shiv Sena, senior party leader Sanjay Raut has issued a direct challenge to the rebel MPs. If they intend to join another party, they should first resign from their MP seats and go before the people. This statement by Rawat has created a new stir in Maharashtra politics and has increased curiosity about the political developments within the Shiv Sena.

BELAGAVI NEWS :

ನವದೆಹಲಿ, ಜೂನ್ 17: ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೊಂದು ಬಂಡಾಯದ ಭೀತಿ ಎದುರಾಗಿರುವ ಬೆನ್ನಲ್ಲೇ, ಉದ್ದವ್ ಠಾಕ್ರೆ ಬಣದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವ ದೆಹಲಿಯಲ್ಲಿ ತುರ್ತು ಪ್ರತಿಕಾಗೋಷ್ಠಿ ನಡೆಸಿ ಬಂಡಾಯಗಾರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

"ಪಕ್ಷಾಂತರ ಮಾಡುವ ಉದ್ದೇಶ ಇರುವವರು ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಲಿ. ಜನರ ಮತ ಪಡೆದು ಗೆದ್ದವಳಿಕ ಪಕ್ಷ ಬದಲಾಯಿಸುವುದು ಸರಿಯಲ್ಲ," ಎಂದು ಅವರು ಬಹಿರಂಗ ಸವಾಲು ಹಾಕಿದ್ದಾರೆ.

ಶಿವಸೇನೆ (ಯುಬಿಟಿ) ಯ ಕೆಲ ಸಂಸದರು ಬಣ ಬದಲಾಯಿಸುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲೇ ರಾವತ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಈ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳ ಕುರಿತು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಸೇನೆ (ಯುಬಿಟಿ) ಪಕ್ಷದೊಳಗಿನ ಮತ್ತೆ ಬಂಡಾಯದ ವದಂತಿಗಳು ಜೋರಾಗಿರುವ ಬೆನ್ನೆಲ್ಲೇ, ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ಬಳಿಕ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ UBT ಮತ್ತೆ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಾವತ್, ಪಕ್ಷದ ಸಂಸದರನ್ನು ಸೆಳೆಯಲು ತಲಾ 50 ಕೋಟಿ ರೂಪಾಯಿ ಆಮಿಷ ಒಡ್ಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

"ಪಕ್ಷಾಂತರ ಮಾಡಲು ಯತ್ನಿಸುವವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಮುಂದೆ ಹೋಗಬೇಕು"ಎಂದು ಅವರು ಸವಾಲು ಹಾಕಿದ್ದು, ಈ ಹೇಳಿಕೆ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಬಂಡಾಯದ ಊಹಾಪೋಹಗಳು, ಹಣದ ಆಮಿಷದ ಆರೋಪಗಳು ಹಾಗೂ ಪಕ್ಷದೊಳಗಿನ ಬೆಳವಣಿಗೆಗಳು ಈಗ ರಾಜ ರಾಜಕೀಯದ ಪ್ರಮುಖ ಚರ್ಚಾ ವಿಷಯವಾಗಿವೆ.

ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಬಂಡಾಯದ ವದಂತಿಗಳು ಜೋರಾಗಿರುವ ನಡುವೆಯೇ, ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಸಂಸದರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

"ಶಿವಸೇನೆ ಠಾಕ್ರೆ ಬಣದ ಕಾರ್ಯಕರ್ತರು ಮತ್ತು ನಾಯಕರು ಹಗಲಿರುಳು ಶ್ರಮಿಸಿ ಈ ಸಂಸದರನ್ನು ಲೋಕಸಭೆಗೆ ಗೆಲ್ಲಿಸಿದ್ದಾರೆ. ಉದ್ದವ್ ಠಾಕ್ರೆ ಅವರ ನಾಯಕತ್ವ ಮತ್ತು ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರುವವರು ಈಗ ಪಕ್ಷದಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ, ಮೊದಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗಬಹುದು" ಎಂದು ಅವರು ಗುಡುಗಿದ್ದಾರೆ.

ಇದೇ ವೇಳೆ, ಉದ್ದವ್ ಠಾಕ್ರೆ ಬಣದ 9 ಲೋಕಸಭಾ ಸಂಸದರ ಪೈಕಿ ಕೇವಲ ಮೂವರು ಅರವಿಂದ್ ಸಾವಂತ್, ಅನಿಲ್ ದೇಸಾಯಿ ಹಾಗೂ ರಾಜಾಭಾವು ವಾಜೆ - ಮಾತ್ರ ಸಂಜಯ್ ರಾವತ್ ಅವರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಚಾರವೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉಳಿದ ಸಂಸದರ ಗೈರುಹಾಜರಿ ಬಂಡಾಯದ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ ಎನ್ನಲಾಗುತ್ತಿದೆ.

ಶಿವಸೇನೆ (ಯುಬಿಟಿ) ಪಕ್ಷದ ಸಂಸದರನ್ನು ಸೆಳೆಯಲು ವಿರೋಧಿ ಬಣಗಳು ಮತ್ತು ತೃತೀಯ ಶಕ್ತಿಗಳು ಭಾರಿ ಪ್ರಮಾಣದ ಆಮಿಷಗಳನ್ನು ಓಡ್ಡುತ್ತಿವೆ ಎಂದು ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.

"ನಮ್ಮ ಪಕ್ಷದ ಸಂಸದರನ್ನು ಖರೀದಿಸಲು ತಲಾ 50 ಕೋಟಿ ರೂಪಾಯಿ ನೀಡುವ ಪ್ರಸ್ತಾಪಗಳಿವೆ ಎಂಬ ಖಚಿತ ಮಾಹಿತಿ ನಮಗೆ ಲಭ್ಯವಾಗಿದೆ. ಕೇವಲ ಹಣ ಮಾತ್ರವಲ್ಲ, ಈ ತರೆ ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ," ಎಂದು ಅವರು ಹೇಳಿದ್ದಾರೆ.

ಇನ್ನೂ ಮುಂದೆ ಆರೋಪ ಮುಂದುವರಿಸಿದ ರಾವತ್, " ಕೆಲವು ಸಂಸದರನ್ನು ರಹಸ್ಯವಾಗಿ ಬೇರೆಡೆಗೆ ಕರೆದೊಯ್ಯಲು ಈಗಾಗಲೇ ವಿಶೇಷ ಚಾರ್ಟಡ್ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿಯು ನಮಗೆ ಬಂದಿದೆ," ಎಂದು ದೂರಿದ್ದಾರೆ.

ಈ ಆರೋಪಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಶಿವಸೇನೆ (ಯುಬಿಟಿ) ಯೊಳಗಿನ ಬಂಡಾಯದ ಚರ್ಚೆಗಳಿಗೆ ಮತ್ತಷ್ಟು ವೇಗ ನೀಡಿವೆ. ರಾಜಕೀಯ ಸಮೀಕರಣಗಳು ಬದಲಾಗುವ ಸಾಧ್ಯತೆಗಳ ನಡುವೆ ರಾವತ್ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ' ವಿಪ್ ' ಈಗಲೂ ಜಾರಿಯಲ್ಲಿದೆ. ಪಕ್ಷದ ಅಸ್ತಿತ್ವದ ಕಾನೂನು ಹೋರಾಟ ಮುಂದುವರಿದಿದ್ದು, ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕುರಿತು ಲೋಕಸಭಾ ಸ್ಪೀಕರ್ ಅವರಿಗೆ ಅಧಿಕೃತ ಪಾತ್ರ ಬರೆಯಲಾಗಿದೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.

Also Read:

ಖರ್ಗೆ ವಿರುದ್ಧ ಈಶ್ವರಪ್ಪ ಗುಡುಗು : ಆರ್ ಎಸ್ ಎಸ್ ಲೆಕ್ಕ ಕೇಳಲು ನೀವ್ಯಾರು?"

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online