belagavi news:
ಐಪಿಎಲ್ ಪಂದ್ಯದಲ್ಲಿ ದೆಹಲಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಅರುಣ್ ಜೇಟ್ಲಿ ಕ್ರೀಡಾಂಗಣ ದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಸಮೀರ್ ನಾಲ್ವತ್ತು ರನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ 38 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಗಳಾದರು.
ಚೆನ್ನೈ ಬಾಲಿಂಗ್ ನಲ್ಲಿ ನೂರ್ ಅಹ್ಮದ್ ಎರಡು ವಿಕೆಟ್ ಪಡೆದು ಮಿಂಚಿದರು. ಗುರ್ಜಪ್ರೀತ್ ಸಿಂಗ್, ಜಮೀನ್ ಓವರ್ಟನ್, ಮುಕೇಶ್ ಚೌದರಿ ಮತ್ತು ಅಕೀಲ್ ಹುಸೇನ್ ತಲಾ 1 ವಿಕೆಟ್ ಪಡೆದರು. 156 ರನ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ 17. 3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವು ಸಾಧಿಸಿತು. ಸಂಜು ಸ್ಯಾಂಸಂಗ್ 87 ರನ್ ಹಾಗೂ ಕಾರ್ತಿಕ್ ಶರ್ಮ 41 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಡೆಲ್ಲಿ ಪರ ಇಂಗ್ಲೆಂಡ್ ಮೂಲದ ಆಟಗಾರ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.ಪಂದ್ಯದಲ್ಲಿ ಚೆನ್ನೈ ತಂಡದ ಅಧಿಪತ್ಯ ಸ್ಪಷ್ಟವಾಗಿ ಕಂಡುಬಂದಿತು.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡದ ಗೆಲುವುಗಳೊಂದಿಗೆ ಪಾಯಿಂಟ್ಸ ಟೇಬಲ್ ನಲ್ಲಿ ಸ್ಥಿತಿಗತಿ ಬದಲಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಚೆನ್ನೈಗೆ ಇದು 10 ಪಂದ್ಯಗಳಲ್ಲಿ 5ನೇ ಜಯವಾಗಿದೆ. ಒಟ್ಟು 10 ಅಂಕಗಳಲ್ಲಿ ತಂಡವು ಪ್ರಸ್ತುತ ಆರನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪ್ಟನ್ ತಂಡಕ್ಕೆ ಇದು 10 ಪಂದ್ಯಗಳಲ್ಲಿ ಆರನೇ ಸೋಲು. ತಂಡ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿ ಮುಂದುವರೆದಿದೆ. ಈ ಹಂತದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿ ಪ್ರತಿಯೊಂದು ಪಂದ್ಯವು ಮಹತ್ವ ಪಡೆದುಕೊಂಡಿದ್ದು, ಮುಂದಿನ ಪಂದ್ಯಗಳು ಎರಡು ತಂಡಗಳ ಪ್ಲೇ ಆಫ್ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇತ್ತೀಚಿನ ಆಟಗಾರರ ಪಟ್ಟಿ ಹೀಗಿದೆ: ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್, ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ,ಡೆವಾಲ್ಡ್ ಬ್ರೆವಿಸ್, ಜೇಮೀ ಓವರ್ಟನ್, ಅಖಿಲ್ ಹೊಸೇನ್, ನೂರ ಅಹ್ಮದ್, ಅಂಕುಶ್ ಕಾಂಬೋಜ್, ಮುಖೇಶ್ ಚೌದರಿ, ಗುರ್ಜ್ ಪ್ರೀತ್ ಸಿಂಗ್, ಶಿವಂ ದುಬೆ, ಪ್ರಶಾಂತ್ ವೀರ್, ಮ್ಯಾಟ್ henri, ರಾಹುಲ್ ಚಹಾರ್, ಸ್ಪೆನ್ಸರ್ ಜಾನ್ಸನ್, ಅಮರ್ ಖಾನ್, ಜಕಾರಿ ಫೌಲ್ಕ್ಸ್.
ಈ ಪಟ್ಟಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್, ಬ್ಯಾಟಿಂಗ್ ಮತ್ತು ಆಲ್ ರೌಂಡರ್ ವಿಭಾಗಗಳಲ್ಲಿ ಇರುವ ಪ್ರಮುಖ ಆಟಗಾರರನ್ನು ಒಳಗೊಂಡಿದೆ.
ಡೆಲ್ಲಿ ಕ್ಯಾಪಿಟಲ್ ತಂಡದ ಇತ್ತೀಚಿನ ಆಟಗಾರರ ಪಟ್ಟಿ ಹೀಗಿದೆ: ಕೆ.ಎಲ್.ರಾಹುಲ್, ಪಾತುಮ್ ನಿಸ್ಸಾಂಕ, ಕರುಣ್ ನಾಯರ್, ಟ್ರಿಸ್ಟಾನ್ ಸ್ಟಬ್ಸ್, ನಿತೀಶ್ ರಾಣಾ,ಅಕ್ಷರ್ ಪಟೇಲ್, ಅಶುತೋಷ್ ಶರ್ಮಾ,ಮಿಚೆಲ್ ಸ್ಟಾರ್ಕ್ ,ಕುಲದೀಪ್ ಯಾದವ್,ಲುಂಗಿ ಇನ್ಗಿಡಿ, ಟಿ.ನಟರಾಜನ್ ,ವಿಪ್ರಜ್ ನಿಗಮ್, ಸಮೀರ್ ರಿಜ್ವಿ, ಅಭಿಷೇಕ್ ಪೊರೆಲ್, ಔಕಿಬ್ ನಬಿ ದಾರ್, ಡೇವಿಡ್ ಮಿಲ್ಲರ್, ದುಷ್ಮಂತ ಚಮೀರ್ ,ಮುಖೇಶ್ ಕುಮಾರ್, ಅಜಯ್ ಜಾದವ್ ಮಂಡಲ್, ಪೃಥ್ವಿ ಶಾ, ರೆಹಾನ್ ಅಹಮದ್, ತ್ರಿಪುರಾಣ ವಿಜಯ, ಸಾಹಿಲ್ ಪರಾಖ್, ಮಾಧವ್ ತಿವಾರಿ, ಕೈಲ್ ಜೆಮಿಸನ್ ಈ ತಂಡದಲ್ಲಿ ಬ್ಯಾಟಿಂಗ್, ಆಲ್ರೌಂಡಿಂಗ್ ಹಾಗೂ ವೇಗ ಸ್ಪಿನ್ ಬೌಲಿಂಗ್ ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಮತ್ತು ಭಾರತೀಯ ಆಟಗಾರರ ಸಮತೋಲನ ಕಂಡುಬರುತ್ತದೆ.
Also Read: