<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಮದುವೆ ಮಂಟಪದಲ್ಲೇ ಕಳ್ಳತನ!

ಮದುವೆ ಮಂಟಪದಲ್ಲೇ ಕಳ್ಳತನ!
Summary: A thief broke into a wedding hall and stole gold and silver ornaments before fleeing the scene. The entire theft was captured on CCTV. The incident has caused panic among the locals.

belagavi news:

ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ಬ್ಯಾಗನಲ್ಲಿ ಇರಿಸಿದ್ದ ಚಿನ್ನ, ಬೆಳ್ಳಿ ಆಭರಣಗಳು, ನಗದು ಹಾಗೂ ಮೊಬೈಲ್ ಗಳನ್ನು ಕಳ್ಳನೊಬ್ಬ ದೋಚಿರುವ ಘಟನೆ ನಡೆದಿದೆ. ಬ್ಯಾಗ್ ಸಮೇತ ಕಳ್ಳ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನೆ ನಡೆದು ಎರಡು ದಿನಗಳಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಸ್ಥಳೀರರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವಿಜಯನಗರ ದೇವನಹಳ್ಳಿ, ಮೇ 6, ಮದುವೆ ಮಂಟಪಕ್ಕೆ ನುಗ್ಗಿದ್ದ ಕಳ್ಳನೊಬ್ಬ ವಧುವಿಗೆ ಹಾಕಬೇಕಿದ್ದ ಬಂಗಾರ ಹಾಗೂ ಬೆಳ್ಳಿ ಆಭರಣಗಳಿಂದ ಬ್ಯಾಗ್ ಕಳ್ಳತನ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬ್ಯಾಗ್ ಸಮೇತ ಕಳ್ಳ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸರಿಯಾಗಿದ್ದು,ಮೇ 4 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Sponsored

ಘಟನೆಯಲ್ಲಿ ಸುಮಾರು 40 ಗ್ರಾಮ ಚಿನ್ನದ ಸರ, ಅರ್ಧ ಕಿಲೋ ಬೆಳ್ಳಿ, 10,000 ನಗದು ಹಾಗೂ ಎರಡು ಮೊಬೈಲ್ ಫೋನುಗಳನ್ನು ಖದೀಮ ದೋಚಿದ್ದಾನೆ ಎನ್ನಲಾಗಿದೆ.

ಮದುವೆ ಮಂಟಪಕ್ಕೆ ನುಗ್ಗಿ ಬಂಗಾರ- ಬೆಳ್ಳಿ ಕದ್ದ ಕಳ್ಳ

ಹೊಸಪೇಟೆಯ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ಘಟನೆ

ಕಳ್ಳ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

Sponsored

ಕಳ್ಳತನ ನಡೆದಿರುವ ಬಗ್ಗೆ ವಿನೋದ್ ಎಂಬವರು ದೂರು ನೀಡಲು ಮುಂದಾದರು ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಂದೇ ಬಿಲ್ ನಲ್ಲಿ ನಾಲ್ಕು ಐಟಂಗಳಿದ್ದು, ಅದರಲ್ಲಿ ಎರಡು ಐಟಂಗಳು ಕಳ್ಳತನವಾಗಿವೆ ಎಂದು ಹೇಳಿದ್ದೀರಿ. ಉಳಿದೆರಡು ಐಟಂಗಳನ್ನು ತೆಗೆದುಕೊಂಡು ಬನ್ನಿ, ನಂತರ ದೂರು ದಾಖಲಿಸುತ್ತೇವೆ ಎಂದು ಪೊಲೀಸರು ಹೇಳಿರುವುದಾಗಿ ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ ಘಟನೆ ನಡೆದು ಎರಡು ದಿನಗಳಾದರೂ ಚಿತ್ತವಾಡ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ದೂರು ದಾಖಲಾಗಿಲ್ಲ ಎಂಬುದು ತಿಳಿದು ಬಂದಿದೆ.

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವು:

ತಡರಾತ್ರಿ ಬಂದ ಕಳ್ಳರು ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಕದ್ದೊಯ್ದಿರುವ ಘಟನೆ ಹೊಸಪೇಟೆ ನಗರದ ನಂದಶ್ರೀ ಕಲ್ಯಣ್ ಮಂಟಪದ ಬಳಿ ನಡೆದಿದೆ. ಬೈಕಿನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಈ ಕೃತ್ಯ ಎಸೆಗಿದ್ದು, ಸ್ಕೂಟಿ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸರಿಯಾಗಿದೆ.

Sponsored

ವ್ಹೀಲಿಂಗ್ ಮಾಡುತ್ತಿದ್ದ ಪುಂಡರು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಆರೋಪಿಗಳು ಬಂದಿದ್ದ ಬೈಕಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ ಎಂದು ತಿಳಿದುಬಂದಿದೆ. ಜೊತೆಗೆ ಬೈಕ್ ನಲ್ಲಿ ಮಾಡಿಫಿಕೇಶನ್ ಮಾಡಲಾಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ. ಸ್ಕೂಟಿಯ ಹ್ಯಾಂಡಲ್ ಲಾಕ್ ಅನ್ನು ಕಾಲಿನಿಂದ ಮುರಿದು ಕಳ್ಳತನ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಘಟನೆ ಹೊಸಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Also Read:

ಪಂಜಾಬ್ ನಲ್ಲಿ ಹೈ ಅಲರ್ಟ್: ಜಲಂದರ್ ನ ಬಿಎಸ್ಎಫ್ ಕಚೇರಿ 2 ಸ್ಥಳಗಳಲ್ಲಿ ಬಾರಿ ಸ್ಪೋಟ, ಗ್ರೈನೆಡ್ ದಾಳಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online