<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Health

ಮಲಗುವ ಮುನ್ನ ಈ ಆಹಾರಗಳಿಗೆ ಹೇಳಿ ಬೈಬೈ: ತಜ್ಞರಿಂದ ಮಹತ್ವದ ಎಚ್ಚರಿಕೆ

ಮಲಗುವ ಮುನ್ನ ಈ ಆಹಾರಗಳಿಗೆ ಹೇಳಿ ಬೈಬೈ: ತಜ್ಞರಿಂದ ಮಹತ್ವದ ಎಚ್ಚರಿಕೆ
Summary: Experts have warned that some foods consumed at night may have adverse effects on health. Some foods can cause digestive problems, insomnia, weight gain and other health problems. Experts have given important tips on which foods to avoid and which foods to choose at dinner for a healthy lifestyle.

h2> Belagavi news:

ರಾತ್ರಿ ವೇಳೆ ಆಹಾರ ಸೇವನೆ ಬಗ್ಗೆ ಎಚ್ಚರಿಕೆ: ಆರೋಗ್ಯ ತಜ್ಞರ ಸಲಹೆ

ರಾತ್ರಿ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸದೀರುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕರು ತಡರಾತ್ರಿ ಊಟ ಮಾಡುವುದಲ್ಲದೆ, ಟಿವಿ ವೀಕ್ಷಣೆ, ಮೊಬೈಲ್ ಬಳಕೆ ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಾ ಮಧ್ಯರಾತ್ರಿ ತಿಂಡಿಗಳನ್ನು ಸೇವಿಸುವ ಅಭ್ಯಾಸ ಹೊಂದಿದ್ದಾರೆ.

Sponsored

ವಿಶೇಷವಾಗಿ ಬಿಸ್ಕೆತ್, ಚಿಪ್ಸ್ ಹಾಗೂ ಇತರ ತಿಂಡಿಗಳನ್ನು ರಾತ್ರಿ ವೇಳೆ ಪದೇ ಪದೇ ಸೇವಿಸುವುದು ಜೀರ್ಣಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾದ್ಯತೆ ಇದೆ. ದೇಹ ವಿಶ್ರಾಂತಿಗೆ ಸಜ್ಜಾಗುವ ಸಮಯದಲ್ಲಿ ಆಹಾರ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇಂತಹ ಅಭ್ಯಾಸಗಳು ಹೆಚ್ಚುವರಿ ಕೊಬ್ಬು ಮತ್ತು ಕ್ಯಾಲೊರಿಗಳ ಸಂಗ್ರಹಕ್ಕೆ ಕಾರಣವಾಗಬಹುದು. ಪರಿಣಾಮವಾಗಿ ತೂಕ ಹೆಚ್ಚಳ, ಅಜೀರ್ಣ, ನಿದ್ರಾಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ರಾತ್ರಿ ಸಮಯದಲ್ಲಿ ಆಹಾರ ಸೇವನೆಗೆ ಮಿತಿ ಇಡುವುದು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಅಗತ್ಯವಾಗಿದೆ.

ತಜ್ಞರ ಪ್ರಕಾರ, ಕೆಲವು ನಿರ್ದಿಷ್ಟ ಆಹಾರಗಳನ್ನು ತಡರಾತ್ರಿ ಸೇವಿಸುವುದನ್ನು ತಪ್ಪಿಸುವುದರಿಂದ ಉತ್ತಮ ನಿದ್ರೆ ಸುಗಮ ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಸಿಹಿ ತಿಂಡಿಗಳಿಂದ ದೂರವಿರಿ: ತಜ್ಞರ ಎಚ್ಚರಿಕೆ

Sponsored

ಸಿಹಿ ತಿಂಡಿಗಳನ್ನು ಸೇವಿಸುವುದು ನಿದ್ರೆಗೆ ಸಹಾಯ ಮಾಡುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇದರ ಪರಿಣಾಮವಾಗಿ ಕೆಲವರು ಮಲಗುವ ಮುನ್ನ ಚಾಕೋಲೇಟ್, ಐಸ್ ಕ್ರೀಮ್ ಅಥವಾ ಇತರ ಸಿಹಿತಿಂಡಿಗಳನ್ನು ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರಗಳು ನಿದ್ರೆಯ ಗುಣಮಟ್ಟಕ್ಕೆ ಅಡ್ಡಿಪಡಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾತ್ರಿ ವೇಳೆ ಇಂತಹ ಸಿಹಿ ಆಹಾರಗಳನ್ನು ಸೇವಿಸುವುದು, ದೇಹದ ಶಕ್ತಿಯ ಮಟ್ಟವನ್ನು ಅಸ್ಥಿರಗೊಳಿಸಿ, ನಿದ್ರಾಹೀನತೆ ಹಾಗೂ ಅಶಾಂತ ನಿದ್ರೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಲಗುವ ಮುನ್ನ ಸಿಹಿ ತಿಂಡಿಗಳನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

' ಸೈನ್ಸ್ ಡೈರೆಕ್ಟ' ವರದಿ ಪ್ರಕಾರ ಎನರ್ಜಿ ಡ್ರಿಂಕ್ಸ್ ಹಾಗೂ ಸಕ್ಕರೆ ಪಾನೀಯಗಳನ್ನು ನಿಯಮಿತವಾಗಿ ಅಥವಾ ಹೆಚ್ಚಾಗಿ ಸೇವಿಸುವುದು ನಿದ್ರೆಯ ಗುಣಮಟ್ಟವನ್ನು ಕುಗ್ಗಿಸುತ್ತದೆ ಆದ್ದರಿಂದ ಉತ್ತಮ ನಿದ್ರೆಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಅಗತ್ಯವಾಗಿದೆ.

ಹೆಚ್ಚು ಕೊಬ್ಬಿನ ಆಹಾರಗಳು ಒಳ್ಳೆಯದಲ್ಲ:

Sponsored

ಕೇಕ್, ಐಸ್ ಕ್ರೀಮ್, ಬರ್ಗರ್ ಹಾಗೂ ಪಿಜ್ಜಾ ದಂತಹ ಹೆಚ್ಚಿನ ಕೊಬ್ಬಿನ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಆಹಾರ ಸರಿಯಾಗಿ ಜೀರ್ಣವಾಗುವುದನ್ನು ತಡೆಯುತ್ತದೆ. ಇದು ಮರುದಿನ ಬೆಳಿಗ್ಗೆ ಆಲಸ್ಯಕ್ಕೆ ಕಾರಣವಾಗಬಹುದು ರಾತ್ರಿಯಲ್ಲಿ ಅಂತಹ ಆಹಾರಗಳನ್ನು ತಪ್ಪಿಸಬೇಕಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.

ಹೆಚ್ಚಿನ ಕೆಫೀನ್ ಮತ್ತು ಆಮ್ಲೀಯ ಆಹಾರಗಳಿಂದ ಎಚ್ಚರಿಕೆ: ತಜ್ಞರ ಸಲಹೆ

ರಾತ್ರಿ ವೇಳೆ ಹೆಚ್ಚು ಕೆಫೀನ್ ಹಾಗೂ ಅಮ್ಲೀಯ ಗುಣಲಕ್ಷಣಗಳಿರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ತಂಪು ಪಾನೀಯಗಳು ಹಾಗೂ ಸಿಟ್ರಸ್ ಹಣ್ಣುಗಳ ರಸಗಳಂತಹ ಹೆಚ್ಚು ಆಮ್ಲೀಯ ಆಹಾರಗಳು, ಜೀರ್ಣಕ್ರಿಯೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹೊಟ್ಟೆ ಅಸಹಣೆ ಅಜೀರ್ಣ ಹಾಗೂ ನಿದ್ರೆಯ ವ್ಯತ್ಯಯ ಉಂಟಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಹಲವರು ಒತ್ತಡ ಅಥವಾ ದಣಿಯು ನಿವಾರಣೆಗೆ ಹೆಚ್ಚು ಪ್ರಮಾಣದಲ್ಲಿ ಕಾಫಿ ಅಥವಾ ಚಹಾ ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾಕರವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಕೆಫೀನ್ ದೇಹವನ್ನು ಜಾಗೃತ ಸ್ಥಿತಿಯಲ್ಲಿ ಇಡುವುದರಿಂದ ನಿದ್ರೆ ಗುಣಮಟ್ಟ ಕುಗ್ಗುವ ಸಾಧ್ಯತೆ ಇದೆ.

Sponsored

' ಕ್ಲೀವ್ ಲ್ಯಾಂಡ್ ಕ್ಲಿನಿಕ್ ' ಪ್ರಕಾರ ನಿದ್ರೆಗೆ ಅಡ್ಡಿಪಡಿಸುವುದಲ್ಲದೆ ದೀರ್ಘಾವಧಿಯಲ್ಲಿ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು. ಆದ್ದರಿಂದ ಇಂತಹ ಪಾನೀಯಗಳನ್ನು ಮಿತವಾಗಿ ಅಥವಾ ರಾತ್ರಿ ಸಮಯದಲ್ಲಿ ತಪ್ಪಿಸುವುದು ಆರೋಗ್ಯಕರ ಜೀವನ ಶೈಲಿಗೆ ಸಹಾಯಕವಾಗಿದೆ.

ಅಧಿಕ ಪ್ರೋಟೀನ್ ಆಹಾರಗಳಿಂದ ರಾತ್ರಿ ವೇಳೆ ಎಚ್ಚರಿಕೆ:

ರಾತ್ರಿ ಮಲಗುವ ಮುನ್ನ ಹೆಚ್ಚು ಪ್ರಮಾಣದ ಪ್ರೊಟೀನ್ ಸಮೃದ್ಧ ಆಹಾರಗಳನ್ನು ಸೇವಿಸುವುದು ಆರೋಗ್ಯಕರ ಅಭ್ಯಾಸವಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ. ಕೆಲವರು ಕೋಳಿ, ಕುರಿಮರಿ ಅಥವಾ ಇತರೆ ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ಮಲಗುವ ಮುನ್ನ ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಆದರೆ ಇದು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸಿ ಅಜೀರ್ಣ ಹಾಗೂ ಅಸಹನೆಗೆ ಕಾರಣವಾಗಬಹುದು.

ಇದೇ ರೀತಿ, ಅಧಿಕ ಮಸಾಲೆಯುಕ್ತ ಆಹಾರಗಳನ್ನು ರಾತ್ರಿ ವೇಳೆ ತಪ್ಪಿಸುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ. ರೋಚೆಸ್ಟರ್ ಮೆಡಿಸಿನ್ ವಿಶ್ವವಿದ್ಯಾಲಯದ ಶಿಫಾರಸು ಪ್ರಕಾರ, ಮಾಂಸ, ಚೀಸ್, ಡೈರಿ ಉತ್ಪನ್ನಗಳು ಹಾಗೂ ಮೊಟ್ಟೆಗಳನ್ನು ರಾತ್ರಿ ಸಮಯದಲ್ಲಿ ಮಿತವಾಗಿ ಅಥವಾ ತಪ್ಪಿಸುವುದು ಒಳಿತು. ಇವುಗಳನ್ನು ಜೀರ್ಣಿಸಲು ದೇಹಕ್ಕೆ ಹೆಚ್ಚಿನ ಆಮ್ಲ ಮತ್ತು ನೀರಿನ ಅವಶ್ಯಕತೆ ಇರುವುದರಿಂದ ಜೀರ್ಣಕ್ರಿಯೆಗೆ ಒತ್ತಡ ಉಂಟಾಗಬಹುದು.

Sponsored

ಇಲ್ಲದೆ, ರಾತ್ರಿ ವೇಳೆ ಮೊಸರನ್ನು ಸೇವಿಸುವುದು ಕೆಲವೊಮ್ಮೆ ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೆಚ್ಚಿನ ಸಕ್ಕರೆ ಅಥವಾ ಅಸಮತೋಲನ ಪೋಷಕಾಂಶಗಳು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ ಆದ್ದರಿಂದ ಮನೆಯಲ್ಲಿ ತಯಾರಿಸಿದ ತಾಜಾ ಮೊಸರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

ಓದುಗರಿಗೆ ಸೂಚನೆ:

ಈ ವರದಿಯಲ್ಲಿ ನೀಡಿರುವ ಆರೋಗ್ಯ ಮಾಹಿತಿ ಸಾಮಾನ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆಹಾರ ಪದ್ಧತಿ ಅಥವಾ ಆರೋಗ್ಯ ಸಂಬಂಧಿತ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೊದಲು ಪರಿನಿತ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ.

Also Read :

Sponsored

ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಚರ್ಚೆ; ಮುಸ್ಲಿಂ ಪ್ರಾತಿನಿಧ್ಯದ ಬಗ್ಗೆ ಜಾರಕಿಹೊಳಿ ಮಾತು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online