Belagavi news:
ನಿರ್ಮಾಪಕೀಯಾಗಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿರುವ ಶಿಲ್ಪ ಗಣೇಶ್ ಅವರು ಇದೀಗ ಗಾಯಕಿಯಾಗಿ ಕೂಡ ಸಿನಿಮಾ ರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಿರುವ 'ಪಿಚ್ಚರ್' ಸಿನಿಮಾವನ್ನು ಶಿಲ್ಪಾ ಗಣೇಶ ಅವರೇ ನಿರ್ಮಾಣ ಮಾಡಿದ್ದು, ಈ ಚಿತ್ರದ ಮೂಲಕ ಅವರು ಮತ್ತೊಂದು ಹೊಸ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಸಾಮಾನ್ಯವಾಗಿ ಪ್ರಚಾರದಿಂದ ದೂರವಿರುವ ಶಿಲ್ಪ ಗಣೇಶ್ ಅವರು ಈಗ ತಮ್ಮ ಹೊಸ ಪ್ರಯತ್ನದ ಮೂಲಕ ಸುದ್ದಿಯಲ್ಲಿದ್ದಾರೆ. ತುಳು ಭಾಷೆ ತನ್ನ ಮಾತೃಭಾಷೆ ಆಗಿರುವ ಕಾರಣ, ಅಭಿಭಾಷೆಯಲ್ಲಿ ಸಿನಿಮಾ ನಿರ್ಮಿಸಬೇಕೆಂಬ ಹಂಬಲವನ್ನು ಅವರು ಈ ಯೋಜನೆಯ ಮೂಲಕ ಈಡೇರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಈಗಾಗಲೇ ತಮ್ಮದೇ ಆದ ಗುರುತು ಮೂಡಿಸಿರುವ ಶಿಲ್ಪ ಗಣೇಶ್ ಅವರು, ಈ ಬಾರಿ ತುಳು ಚಿತ್ರರಂಗಕ್ಕೂ ದೊಡ್ಡ ಕೊಡುಗೆ ನೀಡುತ್ತಿದ್ದಾರೆ.
ವಿಶೇಷವೆಂದರೆ, "ಪಿಚ್ಚರ್ " ಸಿನಿಮಾದ ಒಂದು ಹಾಡಿಗೆ ಶಿಲ್ಪ ಗಣೇಶ್ ಅವರು ಸ್ವಂತ ಧ್ವನಿ ನೀಡಿದ್ದಾರೆ. ಇದರಿಂದ ಅವರು ಮೊದಲ ಬಾರಿಗೆ ಗಾಯಕಿಯಾಗಿ ಸಿನಿಪ್ರಿಯರ ಮುಂದೆ ಪರಿಚಯವಾಗುತ್ತಿದ್ದಾರೆ. ನಿರ್ಮಾಣದ ಜೊತೆಗೆ ಗಾಯನದಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿರುವುದು ಚಿತ್ರತಂಡದಲ್ಲಿ ಸಂತೋಷ ಮೂಡಿಸದೆ.
ತುಳು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾ ಜುಲೈ 24ರಂದು ತೆರಿಗೆ ಬರಲು ಸಜ್ಜಾಗಿದೆ. ಕಥಾ ಹೊಂದಿರ ಮತ್ತು ಸ್ಥಳೀಯ ಸಂಸ್ಕೃತಿಕ ಅಂಶಗಳನ್ನು ಒಳಗೊಂಡಿರುವ ಪಿಚ್ಚರ್ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ನಿರ್ಮಾಪಕೀ ಮತ್ತು ಈಗ ಗಾಯಕಿಯಾಗಿ ಹೊಸ ಪ್ರಯೋಗದ ಮೂಲಕ ಗಮನಸೆಳೆಯುತ್ತಿರುವ ಶಿಲ್ಪ ಗಣೇಶ್ ಅವರ ಈ ಸಿನಿಮಾ ಬಿಡುಗಡೆಗೆ ತಿನ್ನಿ ಪ್ರಿಯರು ಕಾಯುತ್ತಿದ್ದಾರೆ.
"ಆನಂದ್ ಆಡಿಯೋ" ಮೂಲಕ ಈಗಾಗಲೇ ಬಿಡುಗಡೆಗೊಂಡಿರುವ 'ಗೋಕುಲದ ರಾಧೆ' ಹಾಡು ಇದೀಗ ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ. ಈ ಹಾಡಿಗೆ ನಿರ್ಮಾಪಕ ಶಿಲ್ಪ ಗಣೇಶ್ ಅವರು ಧ್ವನಿ ನೀಡಿರುವುದು ವಿಶೇಷವಾಗಿದ್ದು, ಇದು ಅವರ ಮೊದಲ ಸಿನಿಮಾ ಗಾಯನ ಪ್ರಯತ್ನವಾಗಿದೆ. ಸ್ಯಾಮುವೆಲ್ ಅಬಿ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಝಸ್ಕರ್ಣ್ ಸಿಂಗ್ ಜೊತೆ ಶಿಲ್ಪ ಗಣೇಶ್ ಅವರು ಕೂಡ ಹಾಡಿದ್ದಾರೆ.
ಹಾಡುವ ಹವ್ಯಾಸವನ್ನು ಹೊಂದಿದ್ದರು, ನಿಮಗಾಗಿ ಮೊದಲ ಬಾರಿಗೆ ದ್ವನಿ ನೀಡಿರುವ ಶಿಲ್ಪ ಗಣೇಶ್ ಅವರ ಕಂಠಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿಲ್ಪ ಗಣೇಶ್ ಅವರು ಕೇವಲ ನಿರ್ಮಾಪಕೀ ಮಾತ್ರವಲ್ಲದೆ, ಕಲೆಯ ವಿವಿಧ ಆಯಾಮಗಳಲ್ಲಿ ಆಸಕ್ತಿ ಹೊಂದಿರುವ ಸೃಜನಶೀಲ ವ್ಯಕ್ತಿ ಎಂದು ಚಿತ್ರತಂಡವು ಪ್ರಶಂಸಿಸಿದೆ.
ವಿಶೇಷವೆಂದರೆ, ತುಳು ಸಿನಿಮಾಗಳಲ್ಲಿ ಬಜೆಟ್ ನಿರ್ಬಂಧಗಳ ಕಾರಣದಿಂದ ಈತನಕ ಕಾಶ್ಮೀರದಲ್ಲಿ ಚಿತ್ರೀಕರಣ ನಡೆದಿರಲಿಲ್ಲ. ಆದರೆ ಪಿಚ್ಚರ್ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ನಿತ್ಯ ಪ್ರಕಾಶ್ ಹಾಗೂ ಅಮೃತ್ ಸುದು ಈ ಹಾಡಿಗೆ ನೃತ್ಯ ಪ್ರದರ್ಶನ ನೀಡಿದ್ದಾರೆ.
ತುಳು ಸಿನಿಮಾ ರಂಗದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಿಶೇಷ ಅತಿಥಿ ಪಾತ್ರದಲ್ಲಿ ಗಣೇಶ್ ಅವರು ಕೂಡ ಕಾಣಿಸಿಕೊಳ್ಳುತ್ತಿರುವುದು ಚಿತ್ರಕ್ಕೆ ಮತ್ತೊಂದು ಆಕರ್ಷಣೆ ನೀಡಿದೆ.
ಹೊಸ ಪ್ರಯೋಗಗಳು ಮತ್ತು ವಿಭಿನ್ನ ಚಿತ್ರೀಕರಣದ ಮೂಲಕ ಗಮನ ಸೆಳೆಯುತ್ತಿರುವ ಪಿಚ್ಚರ್ ಸಿನಿಮಾ ಇದೀಗ ಬಿಡುಗಡೆಯ ಮುನ್ನವೇ ಕುತೂಹಲ ಹೆಚ್ಚಿಸಿದೆ.
ತುಳು ಚಿತ್ರರಂಗಕ್ಕೆ ಗುಣಮಟ್ಟದ ಸಿನಿಮಾಗಳನ್ನು ನೀಡಬೇಕು ಎಂಬುದು ನಿರ್ಮಾಪಕಿ ಶಿಲ್ಪ ಗಣೇಶ್ ಅವರ ಪ್ರಮುಖ ಆಶಯವಾಗಿದೆ. ಇದೇ ಉದ್ದೇಶದೊಂದಿಗೆ ಅವರು ಪಿಚ್ಚರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ತುಳು ಸಿನಿಮಾಗಳಲ್ಲಿ ಅನುಭವ ಹೊಂದಿರುವ ಸಂದೀಪ್ ಬೆದ್ರೆ ಅವರು ಈ ಚಿತ್ರದ ಕಥೆ ರಚನೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಚಿತ್ರದಲ್ಲಿ ನಿತ್ಯ ಪ್ರಕಾಶ್ ಬಂಟ್ವಾಳ ಅವರು ನಾಯಕನಾಗಿ ಅಭಿನಯಿಸಿದ್ದು, ಅವರ ಪಾತ್ರ ಸಿನಿಮಾಕ್ಕೆ ಪ್ರಮುಖ ಆಕರ್ಷಣೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಜೊತೆಗೆ ಹೆಸರಾಂತ ಛಾಯಾಗ್ರಹಕರಾದ ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಅವರು ಈ ಸಿನಿಮಾಕ್ಕೆ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ.
ನಿರ್ಮಾಪಕ ಶಿಲ್ಪಾ ಗಣೇಶ್ ಅವರು ಈಗಾಗಲೇ ಗಣೇಶ್ ನಟನೆಯ "ಮಳೆಯಲಿ ಜೊತೆಯಲಿ" "ಕೂಲ್" , "ಮುಗುಳುನಗೆ" ಮತ್ತು "ಗೀತಾ" ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ವ್ಯವಹಾರದ ಜೊತೆಗೆ ಭಾವನಾತ್ಮಕ ಮೌಲ್ಯ ಇರುವ ಕಥೆಗಳತ್ತ ಅವರು ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂಬುದು ಚಿತ್ರರಂಗದ ಗಮನಾರ್ಹ ಅಂಶವಾಗಿದೆ.
ಈ ಹಿನ್ನೆಲೆಯಲ್ಲಿ ಪಿಚ್ಚರ್ ಸಿನಿಮಾದ ಮೇಲೂ ಪ್ರೇಕ್ಷಕರಲ್ಲಿ ದೊಡ್ಡ ನಿರೀಕ್ಷೆ ಮೂಡಿದೆ. ವಿಭಿನ್ನ ಕಥಾಹಂದರ ಮತ್ತು ತಾಂತ್ರಿಕ ಗುಣಮಟ್ಟದೊಂದಿಗೆ ಸಿನಿಮಾ ಮೂಡಿ ಬರುತ್ತಿರುವುದರಿಂದ ತುಳು ಚಿತ್ರರಂಗದಲ್ಲಿ ಹೊಸ ಹೆಜ್ಜೆಯಾಗಿ ಕಾಣಿಸುತ್ತಿದೆ.
ಕನ್ನಡ ಸಿನಿಮಾಗಳ ಜೊತೆಗೆ ವರ್ಷಕ್ಕೆ ಕನಿಷ್ಠ ಒಂದು ತುಳು ಸಿನಿಮಾ ವನ್ನು ನಿರ್ಮಿಸಲು ಯೋಜನೆಯನ್ನು ಶಿಲ್ಪ ಗಣೇಶ್ ಹೊಂದಿದ್ದಾರೆ. ಈ ನಿರಂತರ ಪ್ರಯತ್ನಗಳು ತುಳು ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.
Also Read:
SSLC- 2 ಪರೀಕ್ಷೆಯಲ್ಲಿ ನಿಯಮ ವಿವಾದ: ಹಿಜಾಬ್ ಧರಿಸಿ ಬಂದವರಿಗೆ ಅವಕಾಶ ಇಲ್ಲ!