<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಾಕ್: ಪಶ್ಚಿಮ ಬಂಗಾಳ ಪ್ರತ್ಯೇಕ ರಾಷ್ಟ್ರದ ಬಗ್ಗೆ ಚರ್ಚೆ

ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಾಕ್: ಪಶ್ಚಿಮ ಬಂಗಾಳ ಪ್ರತ್ಯೇಕ ರಾಷ್ಟ್ರದ ಬಗ್ಗೆ ಚರ್ಚೆ
Summary: A demand from a foreigner to declare West Bengal as an independent nation has sparked a fresh controversy in state politics. The statement is being widely debated and the focus has increased on the Mamata Banerjee government.

Belagavi News:

ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಹೊಸ ವಿವಾದ ಉಂಟಾಗಿದೆ. ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಬಾಂಗ್ಲಾದೇಶ ಒಬ್ಬ ನಾಯಕ ನೀಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳದ ರಾಜಕೀಯ ಭವಿಷ್ಯ ಹಾಗೂ ಪ್ರತ್ಯೇಕ ರಾಷ್ಟ್ರದ ಕುರಿತು ಉಲ್ಲೇಖಗಳು ಇದ್ದವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ವಿಷಯದ ಸತ್ಯಾಸತ್ಯತೆ ಪರಿಶೀಲಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದೆ ಯಾವುದೇ ಪ್ರಚೋದನೆಗಳು ಅಥವಾ ಹೇಳಿಕೆಗಳ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯಿಂದ ತನಿಖೆ ನಡೆಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

Sponsored

ಈ ಘಟನೆ ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಅಧಿಕೃತ ಪ್ರಶ್ನೆಗಾಗಿ ನಿರೀಕ್ಷೆ ವ್ಯಕ್ತವಾಗಿದೆ.

ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಹೊಸ ವಿವಾದ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋ ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಬಾಂಗ್ಲಾದೇಶದ ವ್ಯಕ್ತಿ ಎಂದು ಹೇಳಲಾಗುತ್ತಿರುವ ಮಹಮ್ಮದ್ ನೂರುಲ್ ಹುಡಾ ಎಂಬುವವರು, ಪಶ್ಚಿಮ ಬಂಗಾಳವನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸುವಂತೆ ಹಾಗೂ ದೆಹಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿರುವುದಾಗಿ ಹೇಳಲಾಗುತ್ತಿದೆ.

ಈ ವಿಡಿಯೋ ಹೊರ ಬಿದ್ದ ಹಿನ್ನೆಲೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ರಾಷ್ಟ್ರಧ್ವತೆ ಮತ್ತು ಪ್ರಾದೇಶಿಕ ರಾಜಕೀಯದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ರಾಜಕೀಯ ಪರಿಸ್ಥಿತಿಯನ್ನು ಗುರಿಯಾಗಿಸಿಕೊಂಡು ವಲಯಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ತೀವ್ರವಾಗಿ ಹರಡುತ್ತಿವೆ.

ವೈರಲ್ ವಿಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ, ಪಶ್ಚಿಮ ಬಂಗಾಳದ ಜನರನ್ನು ಪ್ರತ್ಯೇಕ ರಾಷ್ಟ್ರದ ಪರವಾಗಿ ಒಗ್ಗೂಡಿಸಲು ಕರೆ ನೀಡುತ್ತಿರುವಂತೆ ಕಾಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಕುರಿತು ಉಲ್ಲೇಖ ಮಾಡುತ್ತಾ, ಕೇಂದ್ರ ಸರ್ಕಾರದ ವಿರುದ್ಧ ನಿಲುವು ತಾಳಬೇಕೆಂಬ ಪ್ರಚೋದನೆ ನೀಡಿರುವುದಾಗಿ ಹೇಳಲಾಗುತ್ತಿದೆ.

Sponsored

ಆದರೆ, ಈ ವಿಡಿಯೋ ನಿಜವಾಗಿಯೂ ಇತ್ತೀಚಿನದೇಯೇ? ಅದರಲ್ಲಿ ಕಾಣಿಸುತ್ತಿರುವ ವ್ಯಕ್ತಿ ಯಾರು? ಹೇಳಿಕೆಗಳ ಪೂರ್ಣ ಹಿನ್ನೆಲೆ ಏನು? ಎಂಬುದರ ಕುರಿತು ಇನ್ನು ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಬಾಂಗ್ಲಾದೇಶದ ಮೂಲದ ವ್ಯಕ್ತಿ ಒಬ್ಬರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಹೇಳಲಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ದೇಶದ ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಮಾತನಾಡುತ್ತಿರುವ ವ್ಯಕ್ತಿ ತನ್ನನ್ನು " ನೂರುಲ್ ಹುಡಾ " ಎಂದು ಪರಿಚಯಿಸಿಕೊಂಡು, " ಯಾವುದೇ ಕಾರಣಕ್ಕೂ ಸೋಲಪ್ಪಬೇಡಿ. ಪಶ್ಚಿಮ ಬಂಗಾಳವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ. ದೆಹಲಿಯ ವಿರುದ್ಧ ಯುದ್ಧ ಆರಂಭಿಸಿ. ನಿಮ್ಮ ಬೆನ್ನಿಗೆ 17 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ನಿಲ್ಲುತ್ತಾರೆ" ಎಂದು ಹೇಳುತ್ತಿರುವುದು ಕೇಳಿ ಬರುತ್ತಿದೆ. ಈ ಹೇಳಿಕೆಗಳು ಭಾರತದ ಏಕೈಕ, ಅಖಂಡತೆಯ ಮತ್ತು ಸಾರ್ವಭೌಮತಕ್ಕೆ ನೇರ ಸವಾಲು ಎಸೆಯುವಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ವಿಡಿಯೋ ವೈರಲ್ ಆದ ಬೆನ್ನೆಲೆ ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ಮತ್ತು ಗುಪ್ತಚರ ವಿಭಾಗಗಳು ಎಚ್ಚರಗೊಂಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯ ನಿಜವಾದ ಗುರುತು ಹಾಗೂ ಹಿನ್ನೆಲೆಯ ಕುರಿತು ಪರಿಶೀಲನೆ ಆರಂಭಿಸುವ ಮಾಹಿತಿ ಲಭ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವ್ಯಕ್ತಿಯನ್ನು ಬಾಂಗ್ಲಾದೇಶದ ರಾಜಕೀಯ ನಾಯಕ ಎಂದು ಬಿಂಬಿಸಲಾಗುತ್ತಿದ್ದರು, ಆತ ನಿಜವಾಗಿ ಯಾವ ಸಂಘಟನೆ ಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬುದರ ಬಗ್ಗೆ ಗೊಂದಲ ಮುಂದುವರೆಸಿದೆ. ಆಟ ಬಾಂಗ್ಲಾದೇಶದ ಇಸ್ಲಾಮಿಕ್ ಕಟ್ರ್ ರ ಸಂಘಟನೆಗಳಿಗೆ ಹತ್ತಿರ ಬರುವ ವ್ಯಕ್ತಿಯಾಗಿರಬಹುದು ಎಂದು ಶಂಕಿಸುತ್ತೇವೆ. ವಿಶೇಷವಾಗಿ ಪ್ರತ್ಯೇಕವಾಗಿ ಗುಂಪುಗಳ ಬೆಂಬಲಿಗ ಆಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಪಶ್ಚಿಮ ಬಂಗಾಳ ರಾಜಕೀಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ವಿಡಿಯೋಗಳು ಮತ್ತು ಸಂದೇಶಗಳು ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಬಾರಿ ಬಹುಮತದೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿದೆ ಎಂಬ ಹೇಳಿಕೆಗಳ ನಡುವೆ,"ಸ್ವತಂತ್ರ ಬಂಗಾಳ" ಕುರಿತ ಘೋಷಣೆಗಳು ಕೇಳಿ ಬಂದಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಚುನಾವಣಾ ಫಲಿತಾಂಶಗಳು ಅಥವಾ ಸರ್ಕಾರಿ ದೃಢೀಕರಣ ಲಭ್ಯವಾಗಿಲ್ಲ.

Sponsored

ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೋಗಳಲ್ಲಿ ಗಡಿಯಾತ್ರೆಯ ಶಕ್ತಿಗಳು ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿವೆ ಎಂಬ ಆರೋಪವು ವ್ಯಕ್ತವಾಗಿದೆ.

ಇದರಿಂದಾಗಿ ರಾಷ್ಟ್ರೀಯ ಭದ್ರತೆ ಮತ್ತು ಕೋಮು ಸೌಹಾರ್ದತೆ ಕುರಿತು ಚರ್ಚೆಗಳು ಜೋರಾಗಿವೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಗುಪ್ತಚರ ಸಂಸ್ಥೆಗಳು ವೈರಲ್ ವಿಷಯಗಳ ಮೂಲ ಮತ್ತು ಅದರ ಹಿಂದಿರುವ ವ್ಯಕ್ತಿಗಳು ಅಥವಾ ಸಂಘಟನೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಮೂಲಗಳು ಸೂಚಿಸುತ್ತೇವೆ. ಆದರೆ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಪ್ರಕಟಣೆ ಇನ್ನು ಹೊರ ಬಂದಿಲ್ಲ.

ರಾಜಕೀಯ ತಜ್ಞರ ಅಭಿಪ್ರಾಯದಂತೆ, ಚುನಾವಣಾ ರಾಜಕೀಯದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪ್ರಚೋದನಾತ್ಮಕ ಸಂದೇಶಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಬಹುದು. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಫಲಿತಾಂಶಗಳನ್ನು ಶಾಂತಿಯುತವಾಗಿ ಸ್ವೀಕರಿಸುವುದು ಅತ್ಯಂತ ಮುಖ್ಯವಾಗಿದ್ದು, ಯಾವುದೇ ರೀತಿಯ ವಿಭಜನಾ ಅಥವಾ ದೇಶ ವಿರೋಧಿ ಹೇಳಿಕೆಗಳು ರಾಷ್ಟ್ರದ ಏಕೈತೆಗೆ ಧಕ್ಕೆ 8 ಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

Also Read:

Sponsored

ರಾಜಕೀಯಕ್ಕೆ ಬರುತ್ತಾರಾ ಶಿವಣ್ಣ? ದಳಪತಿ ವಿಜಯ್ ಹಾದಿ ಬಗ್ಗೆ ಉತ್ತರವೇನು?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online