<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಬಾಲ್ಯ ವಿವಾಹ ತಡೆದು ಮಾದರಿಯಾದ ಅಕ್ಕ.... ಬೆಳಗಾವಿಯಲ್ಲಿ ಕಮಿಷನರ್ ಮೆಚ್ಚುಗೆ

ಬಾಲ್ಯ ವಿವಾಹ ತಡೆದು ಮಾದರಿಯಾದ ಅಕ್ಕ.... ಬೆಳಗಾವಿಯಲ್ಲಿ ಕಮಿಷನರ್ ಮೆಚ್ಚುಗೆ
Summary: Akkapade in Belgaum, a smart operation, has caught the attention of the society by preventing two child marriages within two days. In addition to creating awareness in the society for the abolition of child marriage, the team's work in protecting the rights of children has been appreciated.

belagavi news :

ಬೆಳಗಾವಿನಲ್ಲಿ ಅಕ್ಕಪಡೆ ಕೇವಲ ಎರಡು ದಿನಗಳ ಅಂತರದಲ್ಲಿ ಎರಡು ಬಾಲ ವಿವಾಹಗಳನ್ನು ತಡೆದು ಅಪ್ರಾಪ್ತ ಬಾಲಕಿಯರ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಬಾಲ್ಯ ವಿವಾಹ ಕಾನೂನು ಬಾಹಿರ ಮತ್ತು ಅಪರಾಧ ಎಂಬ ಅರಿವು ಇದ್ದರು ಕೆಲ ಪೋಷಕರು ಮದುವೆಗೆ ಮುಂದಾಗಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಅಲರ್ಟ್ ಆದ ಅಕ್ಕ ಪಡೆ ತಕ್ಷಣ ಕಾರ್ಯಾಚರಣೆ ನಡೆಸಿ 13 ಮತ್ತು 17 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದೆ.

ಸಮಯೋಚಿತ ಕ್ರಮದಿಂದ ಎರಡು ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ತಂಡ ಯಶಸ್ವಿಯಾಗಿದ್ದು, ಬಾಲಕಿಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಅಕ್ಕಪಳೆಯ ಈ ಕಾರ್ಯವನ್ನು ಭೂಷಣ್ ಬೊರಸೆ ಪ್ರಶಂಸಿಸಿದ್ದು,ತಂಡದ ಜಾಗೃತ ಹಾಗೂ ತ್ವರಿತ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಅಕ್ಕಪಡೆ ಕಾರ್ಯನಿರ್ವಹಿಸುತ್ತಿದ್ದು, ಫೆಬ್ರುವರಿ 17 ರಿಂದ ವಿಶೇಷ ತಂಡ ಫೀಲ್ಡ್ ಗೆ ಇಳಿದಿದೆ. ಶಾಲೆ ಕಾಲೇಜುಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕಪಡೆ ಕಟ್ಟುನಿಟ್ಟಿನ ನಿಗ ವಹಿಸುತ್ತಿದ್ದು, ಕಿಡಿಗೇಡಿಗಳಿಗೆ ಭೀತಿ ಹುಟ್ಟಿಸಿದೆ.

Sponsored

ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಈ ಕುರಿತು ಪ್ರತಿಕ್ರಿಯಿಸಿ, ಅಕ್ಕಪಡೆ ಎರಡು ಶಿಫ್ಟ್ಗಳಲ್ಲಿ ನಗರಾಧ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಒಬ್ಬ ಪಿಎಸ್ಐ ಹುದ್ದೆಯ ಅಧಿಕಾರಿ ನೇತೃತ್ವದ ತಂಡದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಸೇರಿದ್ದು, ಶಾಲೆ, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ವಿವರಿಸಿದರು. ಇದೇ ವೇಳೆ, ಕೇವಲ ಎರಡು ದಿನಗಳಲ್ಲೇ ಎರಡು ಬಾಲ್ಯ ವಿವಾಹಗಳನ್ನು ತಡೆದು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸುವ ಅಕ್ಕಪಡೆಯ ಕಾರ್ಯವನ್ನು ಅವರು ಶ್ಲಾಘಿಸಿದರು.

Also Read:

ಯುವಕರಿಗೆ ಸುವರ್ಣಾವಕಾಶ! ಸ್ಟ್ರೈಡ್ಸ್ pharmaa ದಲ್ಲಿ ಕೆಲಸದ ಜೊತೆಗೆ ಪದವಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online