ಹುಬ್ಬಳ್ಳಿಯಲ್ಲಿ ಜನವರಿ 24ರಂದು ರಾಜ್ಯ ಸರ್ಕಾರದ ಮಹತ್ವದ ಮನೆ ಹಂಚಿಕೆ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಕುಟುಂಬಗಳ ಸ್ವಯಂ ಮನೆ ಕನಸು ನನಸಾಗಲಿದೆ. ರಾಜ್ಯಾಧ್ಯಂತ ನಿರ್ಮಿಸುತ್ತಿರುವ ೪೨,೦೦೦ ಕ್ಕೂ ಹೆಚ್ಚು ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ಸಾಕ್ಷಿಯಾಗಲಿದೆ.
ವಿಶೇಷವಾಗಿ, ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಿರ್ಮಿಸಿರುವ ಸಾವಿರಾರು ಸ್ಲಂ ಬೋರ್ಡ್ ಮನೆಗಳು ಈ ದಿನ ಫಲಾನುಭವಿಗಳಿಗೆ ಅಧಿಕೃತ ಹಸಂತರವಾಗಲಿವೆ. ಇದರಿಂದ ಮನೆ ಇಲ್ಲದವರ ಬದುಕಿಗೆ ಹೊಸ ಆಶಾಕಿರಣ ಮೂಡಲಿದೆ ಎಂದು ಸರ್ಕಾರ ತಿಳಿಸಿದೆ.
ಈ ಭರ್ಜರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಗಣ್ಯ ನಾಯಕರು ಭಾಗವಹಿಸಲಿದ್ದು, ಯೋಜನೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಸಾವಿರಾರು ಫಲಾನುಭವಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿರುವ ನಿರೀಕ್ಷೆ ಇದೆ.
ರಾಜ್ಯ ಸರ್ಕಾರದ ಗೃಹ ಯೋಜನೆ ಅಡಿ ನಿರ್ಮಿಸಿರುವ ಈ ಮನೆಗಳು ಬಡ ಹಾಗೂ ಅತಿ ಬಡ ವರ್ಗದ ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸುವ ಗುರಿಯನ್ನು ಹೊಂದಿದ್ದು, ಸಾಮಾಜಿಕ ಭದ್ರತೆ ಮತ್ತು ಗೌರವಯುತ ಜೀವನಕ್ಕೆ ದಾರಿ ಮಾಡಿಕೊಡಲಿದೆ.
ಸ್ವಂತ ಮನೆ ಹೊಂದಬೇಕು ಎಂಬುದು ಬಡ ಹಾಗೂ ಮಧ್ಯಮ ವರ್ಗದ ದೊಡ್ಡ ಕನಸು. ಈ ಕನಸನ್ನು ಈಡೇರಿಸಲು ರಾಜ್ಯ ಸರ್ಕಾರ ಗಂಭೀರ ಹೆಜ್ಜೆ ಇಟ್ಟು, ರಾಜ್ಯಾದ್ಯಂತ 42 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಜನವರಿ 24ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.
ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಿರ್ಮಿಸಿರುವ ಸಾವಿರಾರು ಸ್ಲಂ ಬೋರ್ಡ್ ಮನೆಗಳನ್ನು ಸೇರಿದಂತೆ , ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸಿದ ಮನೆಗಳನ್ನು ಒಂದೇ ಸಮಯದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಯೋಜನೆ ಇದಾಗಿದೆ. ಇದರಿಂದ ಮನೆ ಇಲ್ಲದ ಕುಟುಂಬಗಳಿಗೆ ಶಾಶ್ವತ ನೆಲೆ ದೊರೆಯಲಿದ್ದು, ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
ರಾಜ್ಯ ಸರ್ಕಾರದ ಗೃಹ ಯೋಜನೆ ಅಡಿ ನಿರ್ಮಿಸಿರುವ ಈ ಮನೆಗಳು ಬಡ ಹಾಗು ಮಾಧ್ಯಮ ವರ್ಗದ ಕುಟುಂಬಗಳಿಗೆ ಸಾಮಾಜಿಕ ಭದ್ರತೆ, ಗೌರವಯುತ ಜೀವನ ಮತ್ತು ಸ್ಥಿರತೆ ಒದಗಿಸುವ ಉದ್ದೇಶ ಹೊಂದಿವೆ. ಸರ್ಕಾರದ ಈ ಕ್ರಮವು ಜನಪರ ಆಡಳಿತಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ನೀಡುವುದಕ್ಕೆ ಒಂದು ವರ್ಷ ಕಾಯಿಸಿದ ಸರ್ಕಾರ:
ಹುಬ್ಬಳ್ಳಿ ನಗರದ ಮಂಟೂರು ರಸ್ತೆಯಲ್ಲಿ ಸ್ಲಂ ಬೋರ್ಡ್ ವತಿಯಿಂದ ಜಿ+೩ ಮಾದರಿಯಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಮನೆಗಳಿಗೆ ಕಳೆದು ಒಂದು ವರ್ಷದಿಂದ ಉದ್ಘಾಟನೆಯ ಬಗ್ಗೆ ಸಿಕ್ಕಿರಲಿಲ್ಲ ಎಂಬುದು ಫಲಾನುಭವಿಗಳಿಗೆ ಅಸಮಾಧಾನಕ್ಕೆ ಕಾರಣವಾಗಿದೆ.
ಮನೆ ಹಂಚಿಕೆ ಕಾರ್ಯಕ್ರಮವು ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು, ಸೇರಿದಂತೆ ಹಿರಿಯ ನಾಯಕರು ಸಮಯಾವಕಾಶ ಲಭ್ಯವಾಗದ ಕಾರಣ ಪದೇ ಪದೇ ಮುಂದೂಡಲ್ಪಟ್ಟಿತ್ತು, ಈ ವಿಳಂಬ ದಿಂದಾಗಿ ಫಲಾನುಭವಿಗಳಿಗೆ ತೀವ್ರ ನಿರೀಕ್ಷೆಯಲ್ಲಿ ಇದ್ದರು.
ಈ ಮನೆಗಳಿಗೆ 2013-18ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಕಾಲದಲ್ಲಿ ಮಂಜೂರಾತಿ ದೊರೆತಿತ್ತು. ಆದರೆ ಕಾಮಗಾರಿಯ ನಿಧಾನಗತಿಯ ಕಾರಣ ಯೋಜನೆ ಪೂರ್ಣಗೊಳ್ಳಲು ವರ್ಷಗಳು ಬೇಕಾಯಿತು. ಕಳೆದ ವರ್ಷವೇ ಮನೆಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದರು, ಉದ್ಘಾಟನೆ ಮತ್ತು ಹಂಚಿಕೆ ಆಗದೆ ಮನೆಗಳು ಖಾಲಿಯೇ ಉಳಿದಿದ್ದವು.
ಇದೀಗ ಕೊನೆಗೂ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿದ್ದು, ಜನವರಿ 24ರಂದು ಹುಬ್ಬಳ್ಳಿಯಲ್ಲಿ ಭರ್ಜರಿ ಸಮಾರಂಭದೊಂದಿಗೆ ಫಲಾನುಭವಿಗಳಿಗೆ ಮನೆಗಳ ಕೀಲಿ ಕೈ ಹಸ್ತಾಂತರವಾಗಲಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳ ಕಾಯುವಿಕೆ ಅಂತ್ಯಗೊಂಡು, ಸ್ವಂತ ಸೂರಿನ ಕನಸು ನನಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ನಿಗೃತ್ವದಲ್ಲಿ ಮನೆ ಹಂಚಿಕೆ ಕಾರ್ಯಕ್ರಮ:
ರಾಜ್ಯದಲ್ಲಿ ಮನೆ ಇಲ್ಲದವರ ಕನಸನ್ನು ನನಸಾಗಿಸಲು ವಸತಿ ಸಚಿವ ಜಮೀರ್ ಅಹ್ಮದ್ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆಯುವ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜನೆವರಿ 24ರಂದು ನಡೆಯಲಿರುವ ಈ ಮಹತ್ವದ ಕಾರ್ಯಕ್ರಮದಲ್ಲಿ ಸಾವಿರಾರು ಫಲಾನುಭವಿಗಳಿಗೆ ಮನೆಗಳ ಇಲಿ ಕೈ ಹಸ್ತಾಂತರ ಮಾಡಲಾಗುತ್ತದೆ.
ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೇರಿದಂತೆ ಹಲವು ಸಚಿವರು ಶಾಸಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಜನರ ಸುಗಮ ಆಗಮನಕ್ಕಾಗಿ ಬಸ್ ವ್ಯವಸ್ಥೆ ಮತ್ತು ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.
ಅನೇಕ ವರ್ಷಗಳಿಂದ ಸ್ವಂತ ಮನೆ ಕನಸು ಕಂಡಿದ್ದ ಸಾವಿರಾರು ಕುಟುಂಬಗಳಿಗೆ ಈ ಕಾರ್ಯಕ್ರಮ ಹೊಸ ಜೀವನದ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಸತಿ ಇಲಾಖೆ ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಪ್ರಮುಖ ಜನಪರ ಯೋಜನೆಗಾಗಿ ರೂಪಿಸಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸುವ ಗುರಿ ಹೊಂದಿದೆ.
ಈ ಮನೆ ಹಂಚಿಕೆ ಸಮಾರಂಭವು ಸರಕಾರದ ಸಾಮಾಜಿಕ ನ್ಯಾಯ ಮತ್ತು ಜನಕಲ್ಯಾಣದ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುವ ಮಹತ್ವದ ಕಾರ್ಯಕ್ರಮ ಆಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಓದಿರಿ:
RRB railway Jobs : 10th ಪಾಸಾದವರಿಗೆ ಸರ್ಕಾರಿ ಉದ್ಯೋಗ ಅವಕಾಶ.