Belagavi news:
ಎಲುಬುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದು, ಇದರ ಹಿಂದೆ ಹಲವು ಕಾರಣಗಳಿರಬಹುದು, ವೈದ್ಯಕೀಯ ತಜ್ಞರ ಪ್ರಕಾರ, ಪ್ರಮುಖ ಕಾರಣಗಳಲ್ಲಿ ಒಂದಾಗಿ ವಿಟಮಿನ್ ಕೊರತೆ, ವಿಶೇಷವಾಗಿ ವಿಟಮಿನ್ ಡಿ ಕೊರತೆ ಎಂದು ಗುರುತಿಸಲಾಗುತ್ತದೆ.
ವಿಟಮಿನ್ ಡಿ ಎಂಬುದು ಎಲುಬುಗಳ ಆರೋಗ್ಯ ಕಾಪಾಡಲು ಅತ್ಯಂತ ಅಗತ್ಯವಾಗಿದ್ದು, ಇದರ ಕೊರತೆಯಿಂದ ಎಲುಬುಗಳು ದುರ್ಬಲವಾಗುವುದು, ನೋವು, ಕಠಿಣತೆ ಹಾಗೂ ದೌರ್ಬಲ್ಯ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ದೀರ್ಘಕಾಲ ವಿಟಮಿನ್ ಕೊರತೆ ಇದ್ದರೆ ಎಲುಬು ಸಂಬಂಧಿತ ಗಂಭೀರ ಸಮಸ್ಯೆಗಳಿಗೂ ಕಾರಣವಾಗುಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಈ ಸಮಸ್ಯೆಯನ್ನು ತಡೆಗಟ್ಟಲು ಕೆಲವು ಸರಳ ವಿಧಾನಗಳನ್ನು ಅನುಸರಿಸುವುದು ಸಹಾಯಕವಾಗಬಹುದು. ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಕೆಲ ಸಮಯ ಕಳೆಯುವುದು ವಿಟಮಿನ್ ಡಿ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಹಾಲು, ಮೊಟ್ಟೆ, ಮೀನು, ಹಾಗೂ ವಿಟಮಿನ್ ಡಿ ಸಮೃದ್ಧ ಆಹಾರಗಳನ್ನು ಆಹಾರದಲ್ಲಿ ಸೇರಿಸುವುದು ಗೆಲುವುಗಳ ಬಲವನ್ನು ಹೆಚ್ಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಅನೇಕರು ಎಲುಬು ನೋವು ಹಾಗೂ ದೇಹದ ದುರ್ಬಲತೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಹುತೇಕರು ಇದನ್ನು ಸಾಮಾನ್ಯ ದಣಿವು ಅಥವಾ ವಯಸ್ಸಿನ ಪರಿಣಾಮ ಎಂದು ನಿರ್ಲಕ್ಷಿಸುತ್ತಿದ್ದಾರೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ದೇಹದಲ್ಲಿ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಕೂಡ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿರಬಹುದು.
ವಿಶೇಷವಾಗಿ ವಿಟಮಿನ್ ಡಿ ಕೊರತೆಯು ಎಲುಬು ನೋವಿಗೆ ಪ್ರಮುಖ ಕಾರಣವೆಂದು ತಜ್ಞರು ತಿಳಿಸಿದ್ದಾರೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಇದು ಎಲುಬುಗಳನ್ನು ಬಲಿಷ್ಠ ಮತ್ತು ಆರೋಗ್ಯಕರವಾಗಿಡಲು ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ.
ವಿಟಮಿನ್ ಡಿ ಕೊರತೆಯಿಂದ ಎಲುಬುಗಳಲ್ಲಿ ನೋವು, ದುರ್ಬಲತೆ, ಗಟ್ಟಿತನ ಹಾಗೂ ಚಲನೆಯಲ್ಲಿನ ಅಸೌಕರ್ಯಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಕಾಲ ಈ ಕೊರತೆಯನ್ನು ನಿರ್ಲಕ್ಷಿಸಿದರೆ ಎಲುಬು ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ಈ ಕೊರತೆಯನ್ನು ತಡೆಗಟ್ಟಲು ತಜ್ಞರು ಕೆಲವು ಸರಳ ವಿಧಾನಗಳನ್ನು ಸೂಚಿಸಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯುವುದು ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಗೆ ಸಹಾಯ ಮಾಡುತ್ತದೆ. ಜೊತೆಗೆ ಹಾಲು,ಮೊಟ್ಟೆ, ಮೀನು ಹಾಗೂ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.
ಇದರ ಜೊತೆಗೆ ನಿಯಮಿತ ವ್ಯಾಯಾಮ , ದೇಹ ಚಲನೆಯಲ್ಲಿಡುವುದು ಮತ್ತು ಆರೋಗ್ಯಕರ ಜೀವನ ಶೈಲಿ ಗೆಲುವುಗಳನ್ನು ಗಟ್ಟಿಯಾಗಿಡಲು ಸಹಾಯಕವಾಗುತ್ತದೆ. ಅಗತ್ಯವಿದ್ದರೆ ವೈದ್ಯರ ಸಲಹೆ ಮೇರೆಗೆ ಪೂರಕ ವಿಟಮಿನ್ ಸೇವನೆ ಕೂಡ ಮಾಡಬಹುದು.
ತಜ್ಞರ ಪ್ರಕಾರ, ಆರಂಭದಲ್ಲಿ ಈ ಲಕ್ಷಣಗಳನ್ನು ಗುರುತಿಸಿ ಸರಿಯಾದ ಕ್ರಮ ಕೈಗೊಂಡರೆ ಎಲುಬು ನೋವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಮತ್ತು ದೀರ್ಘಕಾಲದ ಆರೋಗ್ಯವನ್ನು ಕಾಪಾಡಬಹುದು.
ಇತ್ತೀಚಿನ ದಿನಗಳಲ್ಲಿ ಎಲುಬು ನೋವು, ಸಂದಿ ನೋವು ಮತ್ತು ದೇಹದ ದೌರ್ಬಲ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿದ್ದು, ಇದಕ್ಕೆ ಪ್ರಮುಖ ಕಾರಣಗಳಲ್ಲಿ ವಿಟಮಿನ್ ಮತ್ತು ಖನಿಜಗಳ ಕೊರತೆ ಕೂಡ ಸೇರಿದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಬಹುತೇಕರು ಈ ಲಕ್ಷಣಗಳನ್ನು ಸಾಮಾನ್ಯ ದಣಿವು ಮತ್ತು ನಿರ್ಲಕ್ಷಿಸುವುದು ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ.
ವೈದ್ಯರ ಪ್ರಕಾರ, ವಿಟಮಿನ್ ಡಿ ಜೊತೆಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ12 ಕೊರತೆಯು ಎಲುಬುಗಳ ಹಾಗೂ ಸ್ನಾಯುಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಕೊರತೆಯಿಂದ ಎಲುಬುಗಳು ದುರ್ಬಲವಾಗುವುದು, ದೇಹದಲ್ಲಿ ದಣಿವು ಹೆಚ್ಚಾಗುವುದು ಮತ್ತು ಚಲನೆಯಲ್ಲಿನ ತೊಂದರೆಗಳು ಕಾಣಿಸಿಕೊಳ್ಳಬಹುದು.
ಅದೇ ರೀತಿ ವಿಟಮಿನ್ ಸಿ ಕೊರತೆಯಿಂದ ದೇಹದಲ್ಲಿ ದೌರ್ಬಲ್ಯ, ಸಂದೀನು ಮತ್ತು ನಿರಂತರದಣಿವು ಉಂಟಾಗುವ ಸಾಧ್ಯತೆ ಇದೆ. ಈ ಎಲ್ಲಾ ಪೋಷಕಾಂಶಗಳ ಕೊರತೆ ದೀರ್ಘದಲ್ಲಿ ಮುಂದುವರೆದರೆ ಎಲುಬುಗಳು ಹೆಚ್ಚು ದುರ್ಬಲವಾಗಿ, ಮುರಿತದ ಅಪಾಯವು ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ವಿಟಮಿನ್ ಕೊರತೆಯನ್ನು ಪೂರೈಸುವುದು ಹೇಗೆ? ಇಲ್ಲಿದೆ ನೋಡಿ ಸೂಕ್ತ ಪರಿಹಾರ:
ತಜ್ಞರ ಸಲಹೆ ಪ್ರಕಾರ, ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದೆ. ಹಾಲು, ಮೊಸರು, ಮೊಟ್ಟೆ, ಹಸಿ ತರಕಾರಿ, ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಬಹುದು.
ಇದರ ಜೊತೆಗೆ ಪ್ರತಿದಿನವೂ ಕೆಲವು ಸಮಯ ಸೂರ್ಯನ ಬೆಳಕಿನಲ್ಲಿ ಕಳೆಯುವುದರಿಂದ ವಿಟಮಿನ್ ಡಿ ಪಡೆಯಲು ಸಹಾಯಕವಾಗುತ್ತದೆ. ಕೊರತೆ ಹೆಚ್ಚು ಇದ್ದರೆ ವೈದ್ಯರ ಸಲಹೆ ಮೇರೆಗೆ ಪೂರಕ ವಿಟಮಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು.
ತಜ್ಞರು ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಕೂಡ ಅಗತ್ಯ ಎಂದು ಹೇಳುತ್ತಾರೆ. ಆರಂಭದಲ್ಲೇ ಕೊರತೆಯನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಪಡೆದರೆ ಎಲುಬು ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು.
ಎಲುಬು ಗಟ್ಟಿಯಾಗಿರಲು ಏನು ಮಾಡಬೇಕು? ಎಂಬುದರ ಬಗ್ಗೆ ಪರಿಹಾರ ಇಲ್ಲಿದೆ:
ಎಲುಬುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ಪದ್ಧತಿಯ ಜೊತೆಗೆ ಜೀವನಶೈಲಿಯಲ್ಲೂ ಕೆಲವು ಬದಲಾವಣೆಗಳನ್ನು ಮಾಡುವುದು ಅತ್ಯಂತ ಮುಖ್ಯ ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲುಬು ನೋವು ಮತ್ತು ದುರ್ಬಲತೆ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆ, ಮೊನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿವೆ.
ತಜ್ಞರ ಪ್ರಕಾರ, ಪ್ರತಿ ದಿನ ನಿಯಮಿತವಾಗಿ ನಡೆಯುವುದು, ರಘು ವ್ಯಾಯಮ ಮತ್ತು ದೇಹವನ್ನು ಸಕ್ರಿಯವಾಗಿಡುವುದು ಎಲುಬುಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ವ್ಯಾಯಾಮದಿಂದ ಎಲುಬುಗಳಿಗೆ ಶಕ್ತಿ ದೊರೆಯುವುದರ ಜೊತೆಗೆ ಸ್ನಾಯುಗಳ ಆರೋಗ್ಯವು ಉತ್ತಮವಾಗುತ್ತದೆ.
ಆಹಾರದಲ್ಲಿ ಪೌಷ್ಟಿಕಾಂಶ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಲು, ಹಸಿರು ತರಕಾರಿ, ಮೊಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ನಿಯಮಿತವಾಗಿ ಸೇವಿಸುವುದು ಎಲುಬುಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳನ್ನು ಒದಗಿಸುತ್ತದೆ.
ಇದರ ಜೊತೆಗೆ ಧೂಮಪಾನ ಮತ್ತು ಹೆಚ್ಚು ಜಂಕ್ ಫುಡ್ ಸೇವನೆಯನ್ನು ತಪ್ಪಿಸುವುದು ಎಲುಬು ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಇಂತಹ ಅಭ್ಯಾಸಗಳು ದೀರ್ಘಕಾಲದಲ್ಲಿ ಎಲುಬುಗಳನ್ನು ದುರ್ಬಲಗೊಳಿಸಬಹುದು.
ಒಟ್ಟಾರೆ ದೇಹದಲ್ಲಿ ಅಗತ್ಯ ವಿಟಮಿನ್ ಮತ್ತು ಖನಿಜಗಳ ಸಮತೋಲನ ಕಾಪಾಡಿಕೊಳ್ಳುವುದರಿಂದ ಗೆಲುವು ನೋವು ಮತ್ತು ದುರ್ಬಲತೆ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ತಜ್ಞರು ತಿಳಿಸುತ್ತಿದ್ದಾರೆ.
Also Read: