<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

RCB ಕಪ್ ಗೆಲ್ಲಲಿ ಎಂದು ದಾವಣಗೆರೆಯಲ್ಲಿ ವಿಶೇಷ ಪ್ರಾರ್ಥನೆ

RCB ಕಪ್ ಗೆಲ್ಲಲಿ ಎಂದು ದಾವಣಗೆರೆಯಲ್ಲಿ ವಿಶೇಷ ಪ್ರಾರ್ಥನೆ
Summary: Ahead of the IPL final, fans in Davangere offered special prayers for the victory of the Royal Challengers Bengaluru team. The scenes of devotion and enthusiasm of cricket lovers who prayed to God for RCB to become champions are going viral on social media.

bealagavi news :

ದಾವಣಗೆರೆ: ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಉಸ್ತಾದ ಮನೆ ಮಾಡಿದ್ದು, Royal Challengers Bengaluru ತಂಡದ ಗೆಲುವಿಗಾಗಿ ದಾವಣಗೆರೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇಂದು ಗುಜರಾತಿನ Ahmedabed ನಗರದಲ್ಲಿರುವ Narendra Modi Stadium ನಲ್ಲಿ ಆರ್ಸಿಬಿ ಹಾಗೂ Gujarat Titans ನಡುವಿನ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದ್ದು, ಈ ಹಿನ್ನೆಲೆ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ದಾವಣಗೆರೆಯ ಎಸ್ ಎಸ್ ಬಡಾವಣೆಯಲ್ಲಿರುವ Sharadamba Devi Temple ಬಳಿ ಜಮಾಯಿಸಿದ ಆರ್ಸಿಬಿ ಅಭಿಮಾನಿಗಳು ತಂಡದ ಗೆಲುವಿಗಾಗಿ ವಿಶೇಷ ಪೂಜೆ ನೆರವೇರಿಸಿದರು. ದೇವಾಲಯದಲ್ಲಿ ಆರ್ಸಿಬಿ ಜೆರ್ಸಿಯನ್ನು ಇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳು ತಂಡದ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಕಳೆದ ಬಾರಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದ ಆರ್ ಸಿಬಿ, ಈ ಬಾರಿಯೂ ಚಾಂಪಿಯನ್ ಆಗಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ. ಕಳೆದ ಸೀಸನ್ ನಲ್ಲಿ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಐತಿಹಾಸಿಕ ಗೆಲವು ಸಾಧಿಸಿದ ತಂಡ ಇದೇ ಮೈದಾನದಲ್ಲಿ ಮತ್ತೊಮ್ಮೆ ಫೈನಲ್ ಆಗುತ್ತಿರುವುದು ಅಭಿಮಾನಿಗಳು ಉತ್ಸಾಹವನ್ನು ಮತ್ತಷ್ಟು ಹೆಚ್ಚಾಗಿದೆ.

Sponsored

ತಂಡದ ಪ್ರಮುಖ ವೇಗದ ಬೌಲರ್ Josh Hazlewood ಮತ್ತೊಮ್ಮೆ ಮಿಂಚಿನ ಪ್ರದರ್ಶನ ನೀಡಿ ರ್ಸಿಬಿಗೆ ಗೆಲವು ತಂದು ಕೊಡಲಿದ್ದಾರೆ ಎಂಬ ನಂಬಿಕೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಫೈನಲ್ ಪಂದ್ಯಕೂ ಮುನ್ನ ನಡೆಯದ ಈ ವಿಶೇಷ ಪೂಜೆ ಮತ್ತು ಅಭಿಮಾನಿಗಳ ಉತ್ಸಾಹದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಲಿಯುತ್ತಿವೆ.

ಈ ಕಾರಣಕ್ಕೆ ಈ ಬಾರಿ ಮತ್ತೆ ಆರ್ಸಿಬಿ ಕಪ್ ಗೆಲ್ಲಲಿ ಎಂದು ಪೂಜೆ ನೆರವೇರಿಸುತ್ತಿದ್ದು, ಸಂಜೆ ಬೃಹತ್ ಸ್ಕ್ರೀನ್ ಅಳವಡಿಕೆ ಮಾಡಿ ಅಭಿಮಾನಿಗಳಿಗೆ ಫ್ರೀ ಮ್ಯಾಚ್ ಶೋ ಅಳವಡಿಸುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ. ಈ ಅಭಿಮಾನಿಗಳಾದ ಲಿಖಿತಾ, ರಾಜು, ಪ್ರವೀಣ್ ಜಾದವ್, ಅಜಯ್ ಸ್ಥಳದಲ್ಲಿದ್ದರು.

ಆರ್ ಸಿಬಿ ಗೆಲುವಿಗಾಗಿ ಶಾಸಕರ ನೇತೃತ್ವದಲ್ಲಿ ವಿಶೇಷ ಪೂಜೆ (ಮೈಸೂರು): ಈ ಬಾರಿಯೂ ಐಪಿಎಲ್ ಫೈನಲ್ ತಲುಪಿರುವ RCB ಎರಡನೇ ಬಾರಿ ಗೆಲುವು ಸಾಧಿಸಲಿ ಎಂದು ಮೈಸೂರಿನ ದೇವರಾಜ್ ಮೊಹಲ್ಲಾದ ಶ್ರೀ ಅಮೃತೇಶ್ವರ್ ದೇವಸ್ಥಾನದಲ್ಲಿ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ನಿನ್ನೆ ಹೋಮ ಹಾಗೂ ಪೂಜೆ ಸಲ್ಲಿಸಲಾಗಿತ್ತು.

ಫೈನಲ್ ಪಂದ್ಯದಲ್ಲಿ ಆರ್ಸಿಬಿ ಮತ್ತೊಮ್ಮೆ ಗೆದ್ದು ಟ್ರೋಫಿ ಎತ್ತಿಹಿಡಿಯಲಿ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ವಿಶೇಷ ಪೂಜೆ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಗಮನ ಸೆಳೆಯುತ್ತಿದೆ.

Sponsored

Also Read:

ರಾಜ್ ಬಿ ಶೆಟ್ಟಿ ಹೊಸ ಬಾಲಿವುಡ್ ಸಿನಿಮಾ ವಿವಾದಕ್ಕೆ ಬ್ರೇಕ್;ಮಹಿಳಾ ವಿರೋಧಿ ಆರೋಪಕ್ಕೆ ಸ್ಪಷ್ಟನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online