<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಸುದೀಪ್ ಅಕ್ಕನ ಮಗನ ಸಿನಿಮಾ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್

ಸುದೀಪ್ ಅಕ್ಕನ ಮಗನ ಸಿನಿಮಾ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್
Summary: The release date of Sudeep's elder son's new movie 'Mango Paccha' has been officially announced. As the release date of this movie was announced, there was a lot of curiosity and excitement among the fans.

belagavi news

ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಬಹು ನಿರೀಕ್ಷಿತ 'ಮ್ಯಾಂಗೋ ಪಚ್ಚ' ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಸಿನಿಮಾ ಮೊದಲಿಗೆ 2026ರ ಜನೆವರಿ 15ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗಡೆ ಮುಂದೂಡಲಾಯಿತ್ತು. ಹಾಗಾಗಿ ಸುದೀಪ್ ಅಕ್ಕನ ಮಗನ ಚೊಚ್ಚಲ ಚಿತ್ರ ಯಾವಾಗ ತೆರೆ ಕಾಣಲಿದೆ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರೇಕ್ಷಕರರಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ 'ಮ್ಯಾಂಗೋ ಪಚ್ಚ 'ಸಿನಿಮಾ ಇದೇ ಸಾಲಿನ ಜೂನ್ 5 ರಂದು ರಾಜ್ಯದದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ.

ಈಗಾಗಲೇ ಟೀಸರ್, ಸಾಂಗ್ ,ರೆಟ್ರೋ ಲುಕ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಸಂಚಿತ ಸಂಜೀವ್ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಕಾರತದಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಹಿರಂಗವಾಗಿದ್ದು, ಸಂಚಿತ್ ಮೊದಲ ಬಾರಿಗೆ ಹಿರಿತೆರೆ ಮೇಲೆ ಮಿಂಚು ಹರಿಸುವ ಸಜ್ಜಾಗಿದ್ದಾರೆ. ಈ ಮೂಲಕ ಸಂಚಿತ ಸಿನಿಮಾ ರಂಗದಲ್ಲಿ ಮಾವನ ಲಗಸೆಯನ್ನು ಮುಂದುವರಿಸಲಿದ್ದಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಮ್ಯಾಂಗೋ ಪಚ್ಚ'ಚಿತ್ರವನ್ನು ವಿವೇಕ ಅವರ ನಿರ್ದೇಶನದಲ್ಲಿ ನಿರ್ಮಿಸಲಾಗಿದ್ದು, ಇದು ಅವರ ಚೊಚ್ಚಲ ನಿರ್ದೇಶನ ಪ್ರಯತ್ನವಾಗಿದೆ. ನಟನಾಗಿ ಹಾಗೂ ನಿರ್ದೇಶಕರಾಗಿ ಮೊದಲ ಬಾರಿ ಸ್ವಾತಂತ್ರವಾಗಿ ಕೆಲಸ ಮಾಡುತ್ತಿರುವ ವಿವೇಕ್ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಎಂಟ್ರಿ ನೀಡಿದ್ದಾರೆ.

Sponsored

ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಈಗಾಗಲೇ ಕೆಲಸ ಮಾಡಿದ ಅನುಭವ ಹೊಂದಿರುವ ವಿವೇಕ್ ಆ ಅನುಭವವನ್ನು 'ಮ್ಯಾಂಗೋ ಪಚ್ಚ 'ಮೂಲಕ ಬಳಕೆ ಮಾಡಿದ್ದಾರೆ. ಅವರು ಈ ಚಿತ್ರಕ್ಕೆ ಕೇವಲ ನಿರ್ದೇಶನ ಮಾತ್ರವಲ್ಲದೆ ಕಥೆ ಹಾಗೂ ಚಿತ್ರಕಥೆಯನ್ನು ಬರೆದು ಬಹುಮುಖ ಜವಾಬ್ದಾರಿಯನ್ನು ವಿವರಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ವಿಭಿನ್ನಕಥನ ಶೈಲಿ ಹಾಗೂ ಹೊಸದಾದ ನಿರೂಪಣೆಯ ಮೂಲಕ ಗಮನ ಸೆಳೆಯುವ ನಿರೀಕ್ಷೆಮುಡಿದು ಚಿತ್ರರಂಗದಲ್ಲಿ ವಿವೇಕ ಅವರ ಎಂಟ್ರಿ ಕುರಿತು ಕುತುಹಲ ಹೆಚ್ಚಾಗಿದೆ.

2001 ರಿಂದ 2011ರವರೆಗೆ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿವೆ ಸಂಪೂರ್ಣ ಸಿನಿಮಾ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿದೆ ಅದರಲ್ಲೂ ಬಹುತೇಕ ಚಿತ್ರಿಕರಣವನ್ನು ಮೈಸೂರಿನಲ್ಲಿ ನಡೆಸಲಾಗಿದೆ.

ಚಿತ್ರದ ಮತ್ತೊಂದು ಪ್ರಮುಖ ವಿಶ್ಲೇಷಣೆ ಎಂದರೆ'ಅರಗಿಣಿಯೇ'ಎಂಬ ಹಾಡು. ಈ ಹಾಡಿಗೆ ಸುದೀಪ್ ಪುತ್ರಿ ಸಾನ್ವಿ ದನಿ ನೀಡಿದ್ದು , ಇದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮೇಲೋಡಿ ಶೈಲಿಯ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾನ್ವಿ ಸುದೀಪ ಜೊತೆಗೆ ಕಪಿಲ್ ಕಪಿಲನ್ ಅವರ ಕಂಠಸಿರಿ ಕೂಡ ಈ ಹಾಡಿಗೆ ಜೀವ ತುಂಬಿದೆ. ಇದಲ್ಲದೆ,

ಈ ಹಾಡಿಗೆ ಹರ್ಷ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ದೃಶ್ಯಮಾಧುರ್ಯ ಹಾಗೂ ನೃತ್ಯ ಸಂಯೋಜನೆಯಿಂದ ಹಾಡು ಇನ್ನಷ್ಟು ಆಕರ್ಷಕವಾಗಲಿದೆ ಎಂಬ ನಿರೀಕ್ಷೆ ಇದೆ. ಈ ಹಾಡು ಈಗಾಗಲೇ ಪ್ರೇಕ್ಷಕರರಲ್ಲಿ ಕುತೂಹಲ ಮೂಡಿಸಿದ್ದು ಚಿತ್ರಕ್ಕೆ ದೊಡ್ಡ ಪ್ಲಸ್ ಆಗುವ ಸಾಧ್ಯತೆ ಇದೆ.

Sponsored

ಕೆ ಆರ್ ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಯುವ ಪ್ರತಿಭೆಗಳಿಗೆ ಕೆ ಆರ್ ಜಿ ಭರವಸೆಯ ನಿರ್ಮಾಣ ಶಾಂತಿಯಾಗಿದೆ ಎಂದರೆ ತಪ್ಪಾಗಲ್ಲ. ಏಕೆಂದರೆ ಯುವರಾಜಕುಮಾರ್, ಸಂಚಿತ ಅಂತಹ ಸ್ಯಾಂಡಲ್ ವುಡನ್ ಭವಿಷ್ಯದ ಸ್ಟಾರ್ ಗಳಿಗೆ ಕೆಆರ್ಜಿ ಭದ್ರ ಬುನಾದಿ ಹಾಕುತ್ತಿದೆ.

ಕೆಆರ್ ವಿ ಸಂಸ್ಥೆ ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಅತ್ಯಂತ ಸೆಲೆಕ್ಟಿವ್ ಆಗಿ ಕಾರ್ಯನಿರ್ವಹಿಸುತ್ತಿದೆ ಉತ್ತಮ ಗುಣಮಟ್ಟದ ಕಥಾಹಂದರ ಮತ್ತು ವಿಭಿನ್ನ ವಿಷಯವಿರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರಿಗೆ ನೀಡುತ್ತಿರುವುದು ಸಂಶಯ ವಿಶೇಷತೆ. ಈ ಕಾರಣದಿಂದ ಕೆ ಆರ್ ಜಿ ನಿರ್ಮಾಣ ಸಂಸ್ಥೆಯಲ್ಲಿ ಅಭಿಮಾನಿಗಳು ಹಾಗೂ ಸಿಮಿಪ್ರಿಯರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಜೊತೆಗೆ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸುವ ಮೂಲಕ ಸಂಸ್ಥೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ.

ಅಂದಹಾಗೆ ಸಂಚಿತ ಸಂಜೀವ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಾರಾ ಗಣದಲ್ಲಿ ಮಯೂರ್ ಪಟೇಲ್, ಭವನಾ, ಹರಿಣಿ ಶ್ರೀಕಾಂತ್, ವಿಜಯ್ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್ ಸೇರಿದಂತೆ ಅನೇಕರಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಸಿನಿಮಾಗಿದ್ದು ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

Also Read:

Sponsored

Infosys Hiring: ಇನ್ಫೋಸಿಸ್ ಬೃಹತ್ ನೇಮಕಾತಿ ಘೋಷಣೆ: 20,000 ಫ್ರೆಶರ್ಸ್ ಗೆ ಉದ್ಯೋಗವಕಾಶ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online