belagavi news:
ನಾಸಿಕ್ (ಮಹಾರಾಷ್ಟ್ರ) ನಾಸಿಕ್ ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯಲ್ಲಿ ನಡೆದ ಬಲವಂತದ ಮತಾಂತರ ಹಾಗೂ ಕಿರುಕುಳ ಪ್ರಕಟಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಿದಾ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿದ್ದ ಆಯ್ಕೆಯನ್ನು ಛತ್ರಪತಿ ಸಂಭಾಜಿ ನಗರದಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ನಾಸಿಕ್ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಾಸಿಕ್ ಟಿವಿಎಸ್ ಶಾಖೆಯಲ್ಲಿ ಒಂದು ಕೋಮಿನ್ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ, ದೌರ್ಜನ್ಯ ಹಾಗೂ ಬಲವಂತದ ಮತಾಂತರಕ್ಕೆ ಯತ್ನ ನಡೆದಿದೆ ಎಂದು ಒಂಬತ್ತು ಉದ್ಯೋಗಿಗಳು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ನಾಸಿಕ್ ಪೊಲೀಸರು ವಿಶೇಷ ತನಿಖಾ ತಂಡ (SIT ) ರಚಿಸಿ ತನಿಖೆ ಮುಂದುವರಿಸಿದ್ದಾರೆ.
ನರೇಗಾಂವ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಅಡುಗೆಕೊಂಡಿದ್ದಾಳೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಿಂದ ಕಾರ್ಯಾಚರಣೆ ನಡೆಸಿ ನಿಧಾ ಖಾನ್ ಅವರನ್ನು ಬಂಧಿಸಿದ್ದಾರೆ. ಬಳಿಕ ಅವರನ್ನು ನಾಸಿಕ್ ಜಿಲ್ಲಾ ನ್ಯಾಯಾಲಯದ ವಿಶೇಷ ಕೋಶದ ಮುಂದೆ ಹಾಜರುಪಡಿಸಲಾಗಿದೆ.
ಈ ಪ್ರಕರಣದಲ್ಲಿ ಓರ್ವ ಮಹಿಳಾ ಉದ್ಯೋಗಿ ಸೇರಿ ಈಗಾಗಲೇ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ತಕ್ಷಣ ನಿದಾ ಖಾನ್ ತಲೆ ಮರೆಸಿಕೊಂಡಿದ್ದರಿಂದ ಆಕೆಯನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡ (SIT) ತೀವ್ರ ಶೋಧ ಕಾರ್ಯ ನಡೆಸುತ್ತಿತ್ತು.
ಎಫ್ ಐ ಆರ್ ನಲ್ಲಿ ಉಲ್ಲೇಖಿಸಿರುವ ಪ್ರಕಾರ, ನಿದಾ ಖಾನ್ ವಾಟ್ಸಪ್ ಗುಂಪಿನ ಮೂಲಕ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಇಸ್ಲಾಂ ಧಾರ್ಮಿಕ ಪ್ರಾರ್ಥನೆಗಳನ್ನು ಪಾಲಿಸಲು ಹಾಗೂ ದನದ ಮಾಂಸಾಹಾರ ಸೇವಿಸಲು ಒತ್ತಡ ಹೇರುತ್ತಿದ್ದಳು ಎಂದು ಆರೋಪಿಸಲಾಗಿದೆ. ಜೊತೆಗೆ ಮಹಿಳಾ ಉದ್ಯೋಗಿಗಳಿಗೆ ಮುಸ್ಲಿಂ ಸಾಂಪ್ರದಾಯಿಕದಂತೆ ಉಡುಗೆ ತೊಡಲು ಮತ್ತು ಆಚಾರ- ವಿಚಾರಗಳನ್ನು ಅನುಸರಿಸಲು ಬಲವಂತ ಮಾಡುತ್ತಿದ್ದಳು ಎಂಬುದು ದಾಖಲಾಗಿದೆ.
ಈ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಿದಾ ಖಾನ್ ನಾಸಿಕ್ ನ್ಯಾಯಾಲಯವನ್ನು ಸಂಪರ್ಕಿಸಿ, ತಾನು ಗರ್ಭಿಣಿ ಯಾಗಿರುವುದನ್ನು ಕಾರಣವಾಗಿ ಉಲ್ಲೇಖಿಸಿ ನಿರೀಕ್ಷಣಾ ಜಾಮೀನು ಹಾಗೂ ಮಧ್ಯಂತರ ರಕ್ಷಣೆಯನ್ನು ಕೋರಿದ್ದಳು .ಆದರೆ ಮೇ 2ರಂದು ನ್ಯಾಯಾಲಯದ ಆಯ್ಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು ಎಂದು ತಿಳಿದುಬಂದಿದೆ.
ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಟಿಸಿಎಸ್ ಪ್ರತಿಕ್ರಿಯಿಸಿ, ಯಾವುದೇ ರೀತಿಯ ಕಿರುಕುಳದ ಬಗ್ಗೆ ಕಂಪನಿಯ ಶೂನ್ಯ ಸಹಿಷ್ಣುತಾ ನೀತಿ ಅಳವಡಿಸಿಕೊಂಡಿದೆ ಎಂಬುದಾಗಿ ಸ್ಪಷ್ಟಪಡಿಸಿ ಈ ಆರೋಪದಲ್ಲಿ ಭಾಗಿಯಾದ ಉದ್ಯೋಗಿಗಳನ್ನು ಅಮಾನತು ಮಾಡಿದ್ದಾಗಿ ತಿಳಿಸಿತ್ತು.
Also Read:
ಪಶ್ಚಿಮ ಬಂಗಾಳಕ್ಕೆ ಇಂದು ಸಿಎಂ ಅಭ್ಯರ್ಥಿ ಘೋಷಣೆ: ನಾಡಿದ್ದು ಕೇರಳ ಸಿಎಂ ಘೋಷಣೆ ಎಂದ ಕಾಂಗ್ರೆಸ್.