ಕೆಲಸ ಕುಟುಂಬ ಅಥವಾ ಸ್ನೇಹಿತರ ಜೊತೆಗಿನ ಸಂಭಾಷಣೆಯಲ್ಲಿ ವಿವೇಕ ಮತ್ತು ಶಾಂತತೆ ಪಾಲಿಸುವುದು ಉತ್ತಮ. ಅಗತ್ಯವಿದ್ದಷ್ಟೇ ಮಾತನಾಡಿ, ಭಾವನಾತ್ಮಕವಾಗಿ ಪ್ರತಿಕ್ರಿಯೆಸುವುದನ್ನು ತಪ್ಪಿಸಿದರೆ ದಿನ ಸುಗಮವಾಗಿರುತ್ತದೆ.
ಇಂದಿನ ದಿನ ಸಹನಶೀಲತೆ ಮತ್ತು ಸಂಯಮವೇ ಯಶಸ್ವಿನ ಮಂತ್ರ ಎಂದು ರಾಶಿ ಭವಿಷ್ಯ ಸೂಚಿಸುತ್ತದೆ.
ಜನೆವರಿ 18/ 2026 ದ್ವಾದಶ ರಾಶಿ ಭವಿಷ್ಯ ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ
ಖ್ಯಾತ ಜ್ಯೋತಿಷಿ ಡಾ.ಬಸವರಾಜ್ ಗುರೂಜಿಯವರು ಜನೆವರಿ 118/ 2026 ರ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ವಿವರವಾಗಿ ಪ್ರಸ್ತುತಪಡಿಸಿದ್ದಾರೆ. ಈ ದಿನ ಭಾನುವಾರವಾಗಿದ್ದು, ವಿಶ್ವಾವಸು ನಾಮ ಸಂವತ್ಸರ , ಮಾಘ ಮಾಸದ ಆರಂಭ, ಶಿಶಿರ ಋತು , ಹಾಗೂ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯೊಂದಿಗೆ ಅತ್ಯಂತ ವಿಶೇಷವಾಗಿದೆ.
ಇಂದು ಪೂರ್ವಷಾಡ ನಕ್ಷತ್ರ ಹರ್ಷನ ಯೋಗ ಮತ್ತು ಚತುಷ್ಪಥ ಕರಣ ಇರುವುದರಿಂದ ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಮಹತ್ವ ಪಡೆದ ದಿನವಾಗಿದೆ. ಈ ದಿನವನ್ನು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ,ಪೂರ್ವಜರ ಆಶೀರ್ವಾದ ಪಡೆಯಲು ಮತ್ತು ದೃಷ್ಟ ಶಕ್ತಿಗಳನ್ನು ದೂರ ಮಾಡಲು ಅತ್ಯಂತ ಶುಭಕರವೆಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಇಂಥ ಪವಿತ್ರ ದಿನದಲ್ಲಿ ರಾಶಿ ಭವಿಷ್ಯವನ್ನು ತಿಳಿದುಕೊಂಡರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಾಧ್ಯವೆಂದು ಹೇಳಲಾಗಿದೆ.
ಜನೆವರಿ 18 / 2026 ಅಮಾವಾಸ್ಯೆ ದಿಂದ ದ್ವಾದಶ ರಾಶಿ ಭವಿಷ್ಯ
ಖ್ಯಾತ ಜ್ಯೋತಿಷ್ ಡಾ. ಬಸವರಾಜ್ ಗುರೂಜಿ ಅವರು ತಿಳಿಸಿರುವಂತೆ , ಅಮಾವಾಸ್ಯೆಯ ದಿನ ಮಂತ್ರ ಜಪ ಮತ್ತು ದೇವತಾರಾಧನೆ ಮಾಡುವುದರಿಂದ ರೋಗ ನಿವಾರಣೆ ಹಾಗೂ ಶುಭ ಫಲ ಪಡೆಯಬಹುದು ಈ ದಿನ ಸೂರ್ಯನು ಮಕರ ರಾಶಿಯಲ್ಲಿ ಚಂದ್ರನು ಧನುಷ ರಾಶಿಯ ಪೂರ್ವಾಷಾಡ ನಕ್ಷತ್ರದಲ್ಲಿ ಸಂಚರಿಸುತ್ತಾರೆ.
ಜನ್ಮದಿನ ವಿಹಾರ ವಾರ್ಷಿಕೋತ್ಸವಗಳನ್ನು ಈ ದಿನ ಆಚರಿಸುವವರಿಗೆ ವಿಶೇಷ ಶುಭವಾಗಿದ್ದು ಗುರೂಜಿ ಶುಭಹಾರೈಸಿ.
ಮೇಷದಿಂದ ಮೀನಿನವರೆಗೆ ಹನ್ನೆರಡು ರಾಶಿಗಳು ಈ ದಿನದಂದು ನಮ್ಮ ಆರ್ಥಿಕ ಸ್ಥಿತಿ ಆರೋಗ್ಯ ವೃತ್ತಿ ಸಂಬಂಧಗಳು ಮತ್ತು ಪ್ರಯಾಣ ಕುರಿತಂತೆ ವಿವರವಾದ ಜ್ಯೋತಿಷ್ಯ ಫಲವನ್ನು ಡಾ ಬಸವರಾಜ್ ಗುರೂಜಿ ನೀಡಿದ್ದಾರೆ. ಇದರಿಂದ ದಿನದಿಂದಿನ ಯೋಜನೆಗಳು ಹಾಗೂ ನಿರ್ಧಾರಗಳಲ್ಲಿ ಮಾರ್ಗದರ್ಶನ ಪಡೆಯಬಹುದು.
ಇನ್ನಷ್ಟು ಓದಿರಿ:
ಅಮೆರಿಕ -ಉಕ್ರೇನ್ ಸಂವಾದ: ಶಾಂತಿ ಒಪ್ಪಂದ ಹಾಗೂ ಭದ್ರತಾ ಖಾತರಿ ವಿಷಯ