<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಬಹುನಿರೀಕ್ಷಿತ 'ಫೌಜಿ' ಬಿಡುಗಡೆ ದಿನಾಂಕ ಘೋಷಣೆ : ಪ್ರಭಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್

ಬಹುನಿರೀಕ್ಷಿತ 'ಫೌಜಿ' ಬಿಡುಗಡೆ ದಿನಾಂಕ ಘೋಷಣೆ : ಪ್ರಭಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್
Summary: The release date of darling Prabhas' much-awaited film 'Fauji' has been announced. The information about when this film, which has already created curiosity among Prabhas fans, will hit the screens has been revealed and has caught the attention of movie lovers. Fans are eagerly waiting for more details about the film's story, cast and production.

BELAGAVI NEWS :

ಭಾರತೀಯ ಚಿತ್ರರಂಗದ ಡಾರ್ಲಿಂಗ್ ನಟ ಪ್ರಭಾಸ್ ಅಭಿನಯದ ಹಾಗೂ ಖ್ಯಾತ ನಿರ್ದೇಶಕ ಹನು ರಾಘವಪುಡಿ ಅವರ ಬಹು ನಿರೀಕ್ಷಿತ ಸಿನಿಮಾ ' ಫೌಜಿ' ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ.

' ಅಜ್ಞಾತ ಪರ್ವ ಎಂಡ್ಸ್ 'ಎಂಬ ಕುತೂಹಲಕಾರಿ ಘೋಷಣೆಯೊಂದಿಗೆ ಚಿತ್ರತಂಡ ' ದಿ ರೆಬೆಲಿಯನ್ ಬಿಗಿನ್ಸ್ 'ಎಂಬ ಟ್ಯಾಗ್ ಲೈನ್ ನೀಡಿದ್ದು,ಚಿತ್ರದ ಕಥೆಯ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟರ್ ನಲ್ಲಿ ಚಿತ್ರದ ಗಂಭೀರ ವಾತಾವರಣವನ್ನು ತೋರಿಸಲಾಗಿದೆ.ರಕ್ತ ಸಿಕ್ತ ಉಡುಪಿನಲ್ಲಿ,ಸುತ್ತಲೂ ಶವಗಳ ನಡುವೆ ಕಲ್ಲಿನ ಮೇಲೆ ಕುಳಿತು ಗನ್ ಹಿಡಿದಿರುವ ಪ್ರಭಾಸ್ ಅವರ ವಿಭಿನ್ನ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಹನು ರಾಘವಪುಡಿ ಅವರ ನಿರ್ದೇಶನ ಮತ್ತು ಪ್ರಭಾಸ್ ಅವರ ಭಿನ್ನಪಾತ್ರದ ನಿರೀಕ್ಷೆಯಿಂದ ' ಫೌಜಿ 'ಸಿನಿಮಾ ಬಿಡುಗಡೆಗೂ ಮುನ್ನವೇ ಬಾರೀ ಚರ್ಚೆಗೆ ಕಾರಣವಾಗಿದೆ ಸಿನಿಮಾ ಪ್ರೇಮಿಗಳು ಚಿತ್ರದ ಟ್ರೈಲರ್ ಹಾಗೂ ಹೆಚ್ಚಿನ ಅಪ್ಡೇಟ್ಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

'ಬಾಹುಬಲಿ'ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ನಟ ಪ್ರಭಾಸ್,ಇದೀಗ ಮತ್ತೊಂದು ಭರ್ಜರಿ ಪಿರಿಯಡ್ ಡ್ರಾಮಾ ಕಥೆಯೊಂದಿಗೆ ಬೆಳ್ಳಿ ತೆರೆಗೆ ಮರಳಲು ಸಜ್ಜಾಗಿದ್ದಾರೆ. ಹನು ರಾಘವಪುಡಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ' ಫೌಜಿ'ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

'ಬೆಟಾಲಿಯನ್ ಹೂ ಫೈಟ್ಸ್ ಅಲೋನ್' ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಸಿನಿಮಾ, ಬಾಬಾನಾತ್ಮಕ ಕಥಾ ಹೊಂದಿರದ ಜೊತೆಗೆ ಅದ್ದೂರಿ ದೃಶ್ಯ ವೈಭವವನ್ನು ನೀಡುವ ಬರವಸೆ ಮೂಡಿಸಿದೆ. ಪ್ರಭಾಸ್ ಅವರ ವೃತ್ತಿ ಜೀವನದ ಮತ್ತೊಂದು ಮಹತ್ವದ ಹಾಗೂ ಬೃಹತ್ ಪ್ರಾಜೆಕ್ಟ್ಗಳಲ್ಲಿ ಒಂದಾಗಿ ಈ ಸಿನಿಮಾ ಗುರುತಿಸಿಕೊಂಡಿದೆ.

ಫೌಜಿ ಚಿತ್ರದ ಮತ್ತೊಂದು ವಿಶೇಷತೆ ಎಂದರೆ, ದಕ್ಷಿಣ ಭಾರತದ ಪ್ರಮುಖ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮತ್ತು ಖ್ಯಾತ ನಿರ್ದೇಶಕ ಹನು ರಾಘವಪುಡಿ ಅವರ ಮೊದಲ ದೊಡ್ಡ ಮಟ್ಟದ ಸಹಯೋಗವಾಗಿದೆ. ಈ ಕಾಂಬಿನೇಷನ್ ಭಾರತೀಯ ಚಿತ್ರರಂಗದಲ್ಲಿ ಬಾರಿ ನಿರೀಕ್ಷೆ ಹುಟ್ಟು ಹಾಕಿದೆ.

ಪ್ರಭಾಸ್ 'ಫೌಜಿ' ಸಿನಿಮಾ, ಬಿಡುಗಡೆ ದಿನಾಂಕ, ಹನು ರಾಘವಪುಡಿ ನಿರ್ದೇಶನ ಹಾಗೂ ಅದ್ದೂರಿ ಚಿತ್ರಗಳ ಸಾಲಿಗೆ ಸೇರುವ ಈ ಸಿನಿಮಾ, ಭವ್ಯ ಸೆಟ್ ಗಳು ,ಬಲಿಷ್ಠ ಕಥೆ ಮತ್ತು ಪ್ರಭಾಸ್ ಅವರ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುವ ನಿರೀಕ್ಷೆಯಿದೆ.

ಪ್ರಭಾಸ್ 'ಫೌಜಿ' ಸಿನಿಮಾ, ಬಿಡುಗಡೆ ದಿನಾಂಕ, ಹನು ರಾಘವಪುಡಿ ನಿರ್ದೇಶನ ಹಾಗೂ ಚಿತ್ರದ ಹೊಸ ಅಪ್ ಡೇಟ್ ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಫೌಜಿ' ಬಿಡುಗಡೆಗೆ ಸಜ್ಜಾಗುತ್ತಿದೆ. ಅದ್ದೂರಿ ಪಿರಿಯಡ್ ಡ್ರಾಮಾ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನವೀನ್ ಯಾರ್ನೆನಿ ಮತ್ತು ವೈ.ರವಿ ಶಂಕರ್ ಅವರು ಟಿ - ಸೀರೀಸ್ ಫಿಲ್ಮ್ಸನ್ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸಿದ್ದಾರೆ.

ಉನ್ನತ ಮಟ್ಟದ ತಾಂತ್ರಿಕ ಗುಣಮಟ್ಟ, ಭವ್ಯ ದೃಶ್ಯ ವೈಭವ ಮತ್ತು ಭಾವನಾತ್ಮಕ ಕಥಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆ ಇದೆ. ಚಿತ್ರತಂಡ ಈಗಾಗಲೇ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದು, ಅಭಿಮಾನಿಗಳು ಈ ಐತಿಹಾಸಿಕ ಪ್ರಯಾಣವನ್ನು ಕಣ್ತುಂಬಿಕೊಳ್ಳಲು ಡಿಸೆಂಬರ್ 3ರವರೆಗೆ ಕಾಯಬೇಕಿದೆ

ಹನು ರಾಘವಪುಡಿ ನಿರ್ದೇಶನದ 'ಫೌಜಿ' ಪ್ರಭಾಸ್ ಅವರ ವೃತ್ತಿಜೀವನದ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಆಗಿದ್ದು, ಚಿತ್ರದ ಕಥೆ, ಪಾತ್ರ ಹಾಗೂ ನಿರ್ಮಾಣದ ಬಗ್ಗೆ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ

ಪ್ರಭಾಸ್ ಮುಂದಿನ ಸಿನಿಮಾಗಳು:

' ಫೌಜಿ' ಬಳಿಕವು ಪ್ರಭಾಸ್ ಕೈಯಲ್ಲಿ ಹಲವು ಬೃಹತ್ ಸಿನಿಮಾಗಳಿವೆ. ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ 'ಸ್ಪಿರಿಟ್ ಚಿತ್ರದ ಕೆಲಸಗಳು ನಡೆಯುತ್ತಿವೆ. ಇದರ ಜೊತೆಗೆ ಯಶಸ್ವಿ ಫ್ರೆಂಚೈಸಿಗಳಾದ 'ಕಲ್ಕಿ 2' ಸಿನಿಮಾಗಳ ಬಗ್ಗೆಯೂ ಬಾರಿ ನಿರೀಕ್ಷೆ ಇದೆ.

ಬ್ಯಾಕ್ ಟು ಬ್ಯಾಕ್ ದೊಡ್ಡ ಸಿನಿಮಾಗಳ ಮೂಲಕ ಪ್ರಭಾಸ್ ಭಾರತೀಯ ಚಿತ್ರರಂಗದಲ್ಲಿ ತಮ್ಮ ಸ್ಟಾರ್ ಪವರ್ ಮುಂದುವರಿಸುತ್ತಿದ್ದು, ಅವರ ಮುಂದಿನ ಚಿತ್ರಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online