<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ನೈವೇದ್ಯ ತಡವಾದರೆ ಕೃಷ್ಣನ ಮೂರ್ತಿ ಸಣ್ಣಗಾತ್ತೆ! ವಿಜ್ಞಾನಕ್ಕೂ ಸವಾಲಾದ ತಿರುವಾರಪ್ಪು ಕೃಷ್ಣ ದೇವಾಲಯದ ರಹಸ್ಯ

ನೈವೇದ್ಯ ತಡವಾದರೆ ಕೃಷ್ಣನ ಮೂರ್ತಿ ಸಣ್ಣಗಾತ್ತೆ! ವಿಜ್ಞಾನಕ್ಕೂ ಸವಾಲಾದ ತಿರುವಾರಪ್ಪು ಕೃಷ್ಣ ದೇವಾಲಯದ ರಹಸ್ಯ
Summary: The famous Thiruvarappu Krishna Temple in Kerala has attracted attention across the country due to the faith of the devotees and strange traditions. It is believed that if the offering to Krishna is delayed, the size of the idol becomes smaller. For this reason, offerings are made in the temple many times at a fixed time.

belagavi news :

ಭಾರತವು ತನ್ನ ಪ್ರಾಚೀನ ಸಂಸ್ಕೃತಿ, ಭವ್ಯ ಇತಿಹಾಸ ಮತ್ತು ನಿಗೂಡ ದೇವಾಲಯಗಳಿಗೆ ಜಗತ್ಪ್ರಸಿದ್ಧಿಯಾಗಿದೆ. ನಮ್ಮ ದೇಶದಲ್ಲಿ ಇಂದಿಗೂ ಹಲವು ದೇವಾಲಯಗಳ ಚಮತ್ಕಾರ ಹಾಗೂ ರಹಸ್ಯಗಳು ವಿಜ್ಞಾನಕ್ಕೆ ಸವಾಲಾಗಿವೆ. ಅಂತಹದೇ ಒಂದು ಅಪರೂಪದ ಮತ್ತು ವಿಸ್ಮಯಕಾರಿ ದೇವಾಲಯದ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿದೆ. ಇದು ಭಗವಾನ್ ಶ್ರೀ ಕೃಷ್ಣನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ.

ಇಲ್ಲಿನ ನಂಬಿಕೆಯ ಪ್ರಕಾರ, ದೇವರಿಗೆ ಒಂದು ದಿನ ನೈವೇದ್ಯ ಅರ್ಪಿಸದಿದ್ದರೂ ಸಹ ಇಲ್ಲಿರುವ ಕೃಷ್ಣನ ವಿಗ್ರಹವು ದಿನದಿಂದ ದಿನಕ್ಕೆ ಸಣ್ಣಗಾಗುತ್ತಾ ಹೋಗುತ್ತದೆ. ಇದೇ ಕಾರಣದಲ್ಲಿ ಇಲ್ಲಿ ದಿನದ 24 ಗಂಟೆಯು ಸಮಯಕ್ಕೆ ಸರಿಯಾಗಿ ಪೂಜೆ, ನೈವೇದ್ಯ ನಡೆಯುತ್ತದೆ. ರಾತ್ರಿ 9:00ಗೆ ಮುಚ್ಚುವ ದೇವಸ್ಥಾನದ ಬಾಗಿಲನ್ನು ಮಧ್ಯರಾತ್ರಿ ಎರಡು ಗಂಟೆಗೆ ತರಲಾಗುತ್ತದೆ ಮತ್ತು ಮುಂಜಾನೆ ಮೂರು ಗಂಟೆಗೆ ದೇವರಿಗೆ ಆಹಾರವನ್ನು ಅರ್ಪಿಸಲಾಗುತ್ತದೆ. ಈ ವಿಶಿಷ್ಟ ದೇವಾಲಯದ ರೋಚಕ ಕಥೆ ಇಲ್ಲಿದೆ.

ಸಾಮಾನ್ಯವಾಗಿ ಸೂರ್ಯ ಗ್ರಹ ಅಥವಾ ಚಂದ ಗ್ರಹದ ಸಂದರ್ಭದಲ್ಲಿ ದೇಶದ ಹಲವಾರು ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಗ್ರಹಣ ಮುಂದುವರೆಯುವವರಿಗೆ ಯಾವುದೇ ಪೂಜೆ, ನೈವೇದ್ಯ ಅಥವಾ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವುದಿಲ್ಲ. ಆದರೆ ಕೇರಳದ ತಿರುವರಪ್ಪು ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ಮಾತ್ರ ನಿಯಮಗಳಿಗಾಗಿ ಅಪವಾದವಿದೆ.

ಕೇರಳದ ಸುಂದರ ಮೀನಾಚಿಲ್ ನದಿಯ ದಡದಲ್ಲಿ ನೆಲೆಸಿರುವ ಈ ಪುರಾತನ ದೇವಾಲಯವು ತನ್ನ ಭವ್ಯ ವಾಸ್ತುಶಿಲ್ಪ ಮತ್ತು ವಿಶಿಷ್ಟ ಆಚರಣೆಗಳಿಂದ ಪ್ರಸಿದ್ಧಿಯಾಗಿದೆ. ಇಲ್ಲಿನ ಭಕ್ತರ ನಂಬಿಕೆ ಯ ಪ್ರಕಾರ, ಶ್ರೀ ಕೃಷ್ಣನಿಗೆ ನಿಗದಿತ ಸಮಯಕ್ಕೆ ನೈವೇದ್ಯ ಅರ್ಪಿಸಲೇಬೇಕು. ಯಾವುದೇ ಕಾರಣಕ್ಕೂ ಅದರಲ್ಲಿ ವ್ಯತ್ಯಯವಾಗಬಾರದು.

ಸ್ಥಳೀಯ ಪುರಾಣದ ಪ್ರಕಾರ, ಹಲವು ವರ್ಷಗಳ ಹಿಂದೆ ಸೂರ್ಯ ಗ್ರಹದ ಸಂದರ್ಭದಲ್ಲಿ ಇತರ ದೇವಾಲಯಗಳಂತೆ ಈ ದೇವಾಲಯದ ಬಾಗಿಲನ್ನು ಮುಚ್ಚಲಾಗಿತ್ತು. ಗ್ರಹಣ ಮುಗಿದ ಬಳಿಕ ಮರುದಿನ ಆರ್ಚಕರು ಗರ್ಭಗುಡಿಯನ್ನು ತೆರೆದಾಗ ಅಚ್ಚರಿಯ ಘಟನೆ ಒಂದು ನಡೆದಿತ್ತು ಎಂದು ಹೇಳಲಾಗುತ್ತದೆ. ನೈವೇದ್ಯ ಸಿಗದೇ ಇದ್ದ ಕಾರಣ ಶ್ರೀ ಕೃಷ್ಣ ಮೂರ್ತಿಯು ಸಾಮಾನ್ಯಕಿಂತ ತೀರ ಸಣ್ಣದಾಗಿ ಹಾಗೂ ಕೃಶವಾಗಿ ಕಾಣಿಸಿಕೊಂಡಿತೆಂದು ಭಕ್ತರು ಇಲ್ಲಿ ನಂಬುತ್ತಾರೆ.

ಈ ಘಟನೆ ಬಳಿಕ ದೇವರಿಗೆ ಹಸಿವಾಗಬಾರದು ಎಂಬ ಕಾರಣದಿಂದ ಗ್ರಹಣದ ಸಮಯದಲ್ಲೂ ದೇವಾಲಯದ ಪೂಜೆ ಹಾಗೂ ನೈವೇದ್ಯ ಸಂಪ್ರದಾಯಗಳಲ್ಲಿ ವ್ಯತ್ಯಯ ತರದಂತೆ ವಿಶೇಷ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ತಿರುವರಪ್ಪು ಶ್ರೀ ಕೃಷ್ಣ ದೇವಾಲಯವು ದೇಶದ ಇತರ ದೇವಾಲಯಗಳಿಗಿಂತ ವಿಭಿನ್ನವಾಗಿದ್ದು, ಅದರ ಈ ವಿಶಿಷ್ಟ ನಂಬಿಕೆ ಭಕ್ತರಲ್ಲಿ ಅಪಾರಭಕ್ತಿ ಭಾವ ಮತ್ತು ಕುತೂಹಲವನ್ನು ಮೂಡಿಸಿದೆ.

ಕೃಷ್ಣನಿಗೆ ನೈವೇದ್ಯ ಅರ್ಪಿಸುವುದು ಏಕೆ? ಅಷ್ಟು ಕಡ್ಡಾಯ?

ಪುರಾಣಗಳ ಪ್ರಕಾರ, ಈ ದೇವಾಲಯದಲ್ಲಿ ಅರ್ಪಿಸಲಾದ ಶ್ರೀ ಕೃಷ್ಣನ ಮೂರ್ತಿಯು ಕಂಸನನ್ನು ವಧಿಸಿದ ನಂತರದ ರೂಪವನ್ನು ಬಿಂಬಿಸುತ್ತದೆ. ಮಹಾ ಯುದ್ಧದ ನಂತರ ಶ್ರೀ ಕೃಷ್ಣನಿಗೆ ತೀವ್ರವಾದ ಹಸಿವು ಉಂಟಾಗಿತ್ತು ಎನ್ನಲಾಗಿದೆ. ಆದ್ದರಿಂದಲೇ ಇಂದಿನ ಕೃಷ್ಣನಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದು ಅತ್ಯಂತ ಕಡ್ಡಾಯವಾಗಿದೆ. ಇಲ್ಲದಿದ್ದರೆ ಮೂರ್ತಿ ಕರಗಲು ಆರಂಭವಾಗುತ್ತದೆ. ಎಂಬುವುದು ಭಕ್ತರ ಗಾಢ ನಂಬಿಕೆ.

ಕೇರಳದ ತಿರುವರಪ್ಪು ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ತನ್ನ ವಿಶಿಷ್ಟ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಆಚರಣೆಗಳಿಂದ ಪ್ರಸಿದ್ಧವಾಗಿದ್ದು, ಇಲ್ಲಿ ನೀಡಲಾಗುವ ಪ್ರಸಾದಕ್ಕೂ ವಿಶೇಷ ಮಹತ್ವವಿದೆ. ಭಕ್ತರು ದೇವಸ್ಥಾನಕ್ಕೆ ಬಂದ ನಂತರ ಪ್ರಸಾದವನ್ನು ಸ್ವೀಕರಿಸದೆ ವಾಪಸ್ ಹೋಗಬಾರದು ಎಂಬ ನಂಬಿಕೆ ಬಲವಾಗಿ ಪಾಲಿಸಲಾಗುತ್ತದೆ.

ಸ್ಥಳೀಯ ಭಕ್ತರ ನಂಬಿಕೆಯ ಪ್ರಕಾರ, ಈ ಪ್ರಸಾದವನ್ನು ಸೇವಿಸುವುದರಿಂದ ನವಗ್ರಹ ದೋಷ, ಗ್ರಹಣದೋಷ, ಸಂತಾನ ದೋಷ, ಸರ್ಪದೋಷ ಹಾಗೂ ವಿವಾಹ ಸಂಬಂಧಿತ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ಹೇಳಲಾಗುತ್ತದೆ.ಅಲ್ಲದೆ, ಬ್ರಹ್ಮಹತ್ಯೆಯಂತಹ ಮಹಾ ಪಾಪಗಳ ಪರಿಣಾಮವು ಶಮನವಾಗುತ್ತದೆ ಎಂಬ ಭಕ್ತಿಯ ನಂಬಿಕೆ ಎಲ್ಲಿದೆ.

ದೇವಾಲಯದ ಮತ್ತೊಂದು ಆಕರ್ಷಣೆ ಎಂದರೆ ಅದರ ವಿಶಿಷ್ಟ ವಾಸ್ತುಶಿಲ್ಪ ಮತ್ತು ಅವರ ವಿನ್ಯಾಸ. ಗರ್ಭಗುಡಿಯ ಸುತ್ತಲಿನ ನಾಲ್ಕು ದಿಕ್ಕುಗಳು ಗೋಡೆಗಳಲ್ಲಿ ವಿವಿಧ ದೇವತೆಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.ಪೂರ್ವ ದಿಕ್ಕಿನಲ್ಲಿ ಕೊಚಂಬಲಂ ಜಿ ದೇವಸ್ಥಾನದ ಸನ್ನಿಧಿ ಇದ್ದರೆ, ಉತ್ತರ ದಿಕ್ಕಿನಲ್ಲಿ ಶಿಶು ಮತ್ತು ನರಸಿಂಹ ಸ್ವಾಮಿಗಳ ಮೂರ್ತಿಗಳು ಕಾಣುತ್ತವೆ.

ಪಶ್ಚಿಮ ದಿಕ್ಕಿನಲ್ಲಿ ಗಣಪತಿ, ಸುಬ್ರಹ್ಮಣ್ಯ ಹಾಗೂ ಅಯ್ಯಪ್ಪ ದೇವತೆಗಳ ಸನ್ನಿಧಿ ಇದ್ದರೆ, ದಕ್ಷಿಣ ದಿಕ್ಕಿನಲ್ಲಿ ಯಕ್ಷ ಮತ್ತು ಗಂಧರ್ವ ಉಪಸ್ಥಿತಿ ದೇವಾಲಯದ ಆಧ್ಯಾತ್ಮಿಕ ವೈಭವವನ್ನು ಹೆಚ್ಚಿಸುತ್ತದೆ. ಈ ರೀತಿಯ ದಿಕ್ಕುಧಾರಿತ ದೇವತಾ ವ್ಯವಸ್ಥೆ ದೇವಾಲಯದ ಪವಿತ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಭಕ್ತರು ನಂಬುತ್ತಾರೆ.

ಭಕ್ತಿ, ನಂಬಿಕೆ ಮತ್ತು ವಾಸ್ತುಶಿಲ್ಪದ ಈ ವಿಶಿಷ್ಟ ಸಂಯೋಜನೆಯೇ ಈ ದೇವಾಲಯವನ್ನು ವಿಶೇಷ ಮತ್ತು ಆಕರ್ಷಕ ತೀರ್ಥಕ್ಷೇತ್ರವನ್ನಾಗಿ ಮಾಡಿದೆ.

Also Read:

ಭಾರತೀಯ ನೌಕಾಪಡೆಯ ಸಾಹಸ: ತೈಲ ಟ್ಯಾಂಕರ್ ನಿಂದ ಸ್ಪೋಟಗೊಳ್ಳದ ಕ್ಷಿಪಣಿ ಸುರಕ್ಷಿತ ತೆರವು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online