belagavi news:
ಶನಿವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ ಹೇಗಿದೆ:
ಪಂಚಾಂಗ:
ದಿನಾಂಕ: 02-05-2026
ವಾರ: ಶನಿವಾರ
ಸಂವತ್ಸರ: ಶ್ರೀ ಪರಾಭವನಾಮ
ಆಯನ: ಉತ್ತರಾಯಣ
ಪಕ್ಷ: ಕೃಷ್ಣ
ತಿಥಿ: ಪ್ರತಿಪದಾ
ನಕ್ಷತ್ರ: ವಿಶಾಖಾ
ಸೂರ್ಯೋದಯ: ಮುಂಜಾನೆ 05:56 ಗಂಟೆಗೆ
ಅಮೃತ ಕಾಲ: ಬೆಳಗ್ಗೆ 05:56 ರಿಂದ 7:31 ರವರೆಗೆ
ದುರ್ಮುಹೂರ್ತ: ಬೆಳಗ್ಗೆ 7:32 ರಿಂದ 8:20ರವರೆಗೆ
ರಾಹುಕಾಲ: ಬೆಳಿಗ್ಗೆ 09:05 ರಿಂದ 10:40 ರವರೆಗೆ
ಸೂರ್ಯಾಸ್ತ: ಸಂಜೆ 06:33 ಗಂಟೆಗೆ
ರಾಶಿ ಭವಿಷ್ಯ:
ಮೇಷ ರಾಶಿ: ಇಂದು ನಿಮ್ಮ ಪ್ರೀತಿ ಪಾತ್ರರನ್ನು ಪ್ರಭಾವಿಸಲು ಹೆಚ್ಚಿನ ಪ್ರಯತ್ನ ಮಾಡುತ್ತೀರಿ. ಸ್ಪಷ್ಟ ಕಾರಣಗಳಿಲ್ಲದೆ ಸ್ನೇಹಿತರು ಹಾಗೂ ಬಂಧುಗಳ ಬಗ್ಗೆ ಅಸಮಾಧಾನ ಉಂಟಾಗಬಹುದು. ಆದರೂ ದಿನಾಂತ್ಯದಲ್ಲಿ ಜನರೊಂದಿಗೆ ಬೆರೆಯುವ ಅವಕಾಶಗಳು ಸಿಗುತ್ತವೆ ಮತ್ತು ಹೊಸ ಸ್ನೇಹ ಗಳನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ.
ವೃಷಭ ರಾಶಿ: ಈ ದಿನ ಅ ನಿರೀಕ್ಷಿತ ಘಟನೆಗಳಿಂದ ಸ್ವಲ್ಪ ನಿರಾಸೆ ಮೂಡಿಸಬಹುದು. ನೀವು ಯೋಚಿಸಿದಂತೆ ಕೆಲಸಗಳು ನಡೆಯದಿರಬಹುದು. ತಕ್ಷಣ ತಿರುವುಗಳು ಎದುರಾಗಬಹುದು ಮತ್ತು ದಿನಪೂರ್ತಿ ಸವಾಲುಗಳು ಇರಬಹುದು. ಆದರೆ ನೀವು ಶಾಂತವಾಗಿ ಸ್ಥಿರ ಮನೋಭಾವದಿಂದ ಮುಂದುವರೆದರೆ ಪರಿಸ್ಥಿತಿಯನ್ನು ನಿಭಾಯಿಸಬಹುದು.
ಮಿಥುನ ರಾಶಿ: ನೀವು ಇಷ್ಟಪಡುವ ಕೆಲಸಗಳಲ್ಲಿ ತೊಡಗಿ ದಿನವನ್ನು ಸಂತೋಷವಾಗಿ ಕಳೆಯುವಿರಿ. ಇತರರ ಕಷ್ಟಗಳಿಗೆ ಸ್ಪಂದಿಸಿ ಸಹಾಯ ಮಾಡುವ ಮನೋಭಾವ ಹೆಚ್ಚಿರುತ್ತದೆ. ನಿಮ್ಮ ಸೇವಾ ಮನಸ್ಸು ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಿ ಆತ್ಮ ಗೌರವವನ್ನು ಹೆಚ್ಚಿಸುತ್ತದೆ.
ಕರ್ಕಾಟಕ ರಾಶಿ: ನೀವು ಅನಗ್ಯತ ಘಟನೆಗಳು ಮತ್ತು ಸನ್ನಿವೇಶಗಳನ್ನು ಎದುರಿಸಬಹುದು ಇದರ ಫಲಿತಾಂಶದಿಂದ ನೀವು ದುಃಖಿತರಾಗುತ್ತಿರಿ. ಆದರೂ ನೀವು ನಿಮ್ಮ ಸಾಮರ್ಥ್ಯದಿಂದ ಹೊರ ಬರುತ್ತಿರಿ. ಅದೇನಕೆ ಪ್ರಯತ್ನಗಳನ್ನು ಹಾಕಿರಿ ಯಶಸ್ಸಿನಲ್ಲಿ ವಿಧಿಯ ಪಾತ್ರ ಶೇಕಡ ಒಂದರಷ್ಟು ಮತ್ತು ಪ್ರಯತ್ನ ಶೇಕಡ 99 ರಷ್ಟು ಎಂದು ನೆನಪಿಟ್ಟುಕೊಳ್ಳಿ.
ಸಿಂಹ ರಾಶಿ: ಹಳೆಯ ಸಹೋದ್ಯೋಗಿಗಳೊಂದಿಗೆ ಸಮೀಕರಣಕ್ಕೆ ಮತ್ತು ಹೊಸ ಸಂಪರ್ಕಗಳನ್ನು ಸಾಧಿಸಲು ಇದು ಒಳ್ಳೆಯ ದಿನ. ನಿಮ್ಮ ಬಂಧುಗಳು ನಿಮ್ಮನ್ನು ಭೇಟಿ ಮಾಡುವ ಸಂಭವನೀಯತೆ ಇದೆ. ನಿಮ್ಮ ಮನೆಯಲ್ಲಿ ಆನಂದದಾಯಕ ಒಲವು ನಿಮ್ಮ ಮನೆಯಲ್ಲಿ ಹರಡುತ್ತದೆ. ನೀವು ನಿಮ್ಮ ಅತಿಥಿಗಳಿಗೆ ಅದ್ಭುತ ಕಾರ್ಯಕ್ರಮ ಆಯೋಜಿಸುತ್ತಿರಿ.
ಕನ್ಯಾ ರಾಶಿ: ವ್ಯಾಪರ ಹಾಗೂ ವೈಯಕ್ತಿಕ ಸಂತೋಷಗಳನ್ನು ಸಮತೋಲನದಲ್ಲಿ ಇಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇಂದು ಸಂಭ್ರಮದ ವಾತಾವರಣದಲ್ಲಿ ಸಮಯ ಕಳೆಯುವ ಸಾದ್ಯತೆ ಇದೆ. ಆದರೆ ಹೊರ ಹೋಗುವ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಕರ್ಚಿನಲ್ಲಿ ಎಚ್ಚರಿಕೆ ಅಗತ್ಯ ಅನಾವಶ್ಯಕ ಚಿಂತೆ ಬೇಡ ಸಮತೋಲನ ಕಾಪಾಡಿಕೊಳ್ಳಿ.
ತುಲಾ ರಾಶಿ: ಇಂದು ನೀವು ನಾಟಕೀಯ ಶೈಲಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತೀರಿ. ಕೆಲಸದಲ್ಲಿ ಬದ್ಧತೆ ಮತ್ತು ಕುಟುಂಬದ ಕಡೆ ನಿಷ್ಠೆ ಎರಡನ್ನು ಸಮರ್ಥವಾಗಿ ನಿರ್ವಹಿಸುತ್ತಿರಿ. ನಿಮಗೆ ನೀಡಲಾದ ಜವಾಬ್ದಾರಿಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ಸಿನಂತ ಮುನ್ನಡೆಯುತ್ತಿರಿ ನಿಮ್ಮ ಕಾರ್ಯಪಟುತೆಯಿಂದ ಆರ್ಥಿಕ ಲಾಭವು ಸಾಧ್ಯ.
ವೃಶ್ಚಿಕ ರಾಶಿ: ಸಂಬಂಧಗಳು ಇಂದು ನಿಮ್ಮ ಜೀವನದ ಕೇಂದ್ರವಾಗಿರುತ್ತವೆ. ನಿಮ್ಮ ಸುತ್ತಲಿನವರು ನಿಮ್ಮ ಬಗ್ಗೆ ಹೇಗೆ ಭಾವಿಸುತ್ತಾರೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಯಾರಾದರೂ ಒಬ್ಬರನ್ನು ವಿಶೇಷವಾಗಿ ಭಾವಿಸುವಂತೆ ಮಾಡಿರಿ. ಯಾವುದೇ ತಪ್ಪು ಅರ್ಥೈಸಿಕೆಗಳಿದ್ದರೆ ಅದನ್ನು ಸರಿಪಡಿಸಲು ಮುಂದಾಗಿರಿ. ಸ್ನೇಹಿತರ ಅಥವಾ ಕುಟುಂಬದವರನ್ನು ಪ್ರಭಾವಿಸಲು ಅತಿಯಾದ ಪ್ರಯತ್ನಿಸುವ ಅಗತ್ಯವಿಲ್ಲ.
ಧನು ರಾಶಿ: ನೀವು ನಿರಾತಂಕದ ಎಳೆಯ ವಯಸ್ಸಿಗೆ ಹಿಂದಿರುಗುವ ಭಾವನೆ ಹೊಂದುತ್ತಿರಿ. ನೀವು ಯೋಜಿಸದ ನಗರದ ಹೊರವಲಯದಲ್ಲಿ ಪ್ಲೆಷರ್ ಟ್ರಿಪ್ ಕೂಡ ಕೈಗೊಳ್ಳುತ್ತಿರಿ. ಅಲ್ಲದೆ ಹಳೆಯ ಗೆಳೆಯನ ಭೇಟಿಯಿಂದ ನಿಮ್ಮ ಹಿಂದಿನ ದಿನಗಳನ್ನು ನೆನೆಯುವುದು ಸಂತೋಷ ನೀಡುತ್ತದೆ.
ಮಕರ ರಾಶಿ: ನೀವು ನಿಮ್ಮ ಕೆಲಸಕ್ಕೆ ಇಂದು ಗುರುತಿಸಲ್ಪಡುತ್ತೀರಿ ಮತ್ತು ಬಹಳಷ್ಟು ಸನ್ನಿವೇಶಗಳಲ್ಲಿ ಅಲ್ಲದೆ ನಿಮ್ಮ ಸಹ ಕೆಲಸಗಾರರು ನಿಮ್ಮ ಸಂಪತ್ತಿನ ಕುರಿತು ಅಸೂಯೇ ಹೊಂದುವುದಿಲ್ಲ. ಅವರು ನಿಮಗೆ ತುಂಬು ಹೃದಯದ ಬೆಂಬಲ ನೀಡುತ್ತಾರೆ. ಉದ್ಯೋಗಗಳನ್ನು ಬದಲಿಸುವ ಬಯಕೆಯುಳ್ಳವರು ಕೊಂಚ ಕಾಳ ಆಲೋಚನೆಯನ್ನು ತಡೆಹಿಡಿಯಿರಿ, ಇದು ಸೂಕ್ತ ಸಮಯವಲ್ಲ.
ಕುಂಭ ರಾಶಿ: ಜೀವನದಲ್ಲಿ ಕಷ್ಟಗಳ ಜೊತೆಗೆ ಸಂತೋಷ ಬರುತ್ತದೆ ಎಂಬುದನ್ನು ಇಂದು ನೀವು ಅನುಭವಿಸುತ್ತಿರಿ. ದಿನವನ್ನು ನೀವು ಮಾಡಬೇಕಾದ ಕೆಲಸಗಳ ಪಟ್ಟಿಯೊಂದಿಗೆ ಆರಂಭಿಸುತ್ತೀರಿ ಮತ್ತು ಅದೃಷ್ಟವಶಾತ ಅವುಗಳನ್ನು ಒಂದರ ಹಿಂದೆ ಒಂದಾಗಿ ಪೂರ್ಣಗೊಳಿಸುವ ಯಶಸ್ವಿಯಾಗುತ್ತಿರಿ. ದಿನದ ಅಂತ್ಯಕ್ಕೆ ಸ್ವಲ್ಪ ದಣಿವು ಉಂಟಾಗಬಹುದು. ಆದರಿಂದ ಬಿಸಿ ನೀರಿನ ಸ್ನಾನ ಮಾಡಿ ವಿಶ್ರಾಂತಿ ಪಡೆಯುವುದು ಉತ್ತಮ.
ಮೀನ ರಾಶಿ: ನೀವು ಸಾಮಾನ್ಯವಾಗಿ ಅಸೂಯೇ ಅಥವಾ ಕಿರಿಕಿರಿಗೆ ಒಳಗಾಗುವವರಲ್ಲ. ಆದರೆ ಇಂದು ಈ ಭಾವನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾರಾದರೂ ನಿಮ್ಮ ಘನತೆ ಅಥವಾ ಹೆಸರು ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಬಹುದು. ಇಂತಹ ಸಂದರ್ಭಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಂಡು ಯಾವುದೇ ಪ್ರಚೋದನೆಗೆ ಒಳಗಾಗದೆ ನಿಮ್ಮ ದಿನಚರಿಯನ್ನು ಶಾಂತವಾಗಿ ಮುಂದುವರಿಸುವುದು ಅತ್ಯುತ್ತಮ ಮಾರ್ಗ.
Also Read:
ಮಕ್ಕಳಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಲು ಕಾರಣವೇನು? ಇಲ್ಲಿದೆ ಸರಿಯಾದ ಪರಿಹಾರ