<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ನಟ ವಿಜಯ್ ಬಗ್ಗೆ ತ್ರಿಶಾ ಕೃಷ್ಣನ್ ಶಾಪಿಂಗ್ ಕಾಮೆಂಟ್

ನಟ ವಿಜಯ್ ಬಗ್ಗೆ ತ್ರಿಶಾ ಕೃಷ್ಣನ್ ಶಾಪಿಂಗ್ ಕಾಮೆಂಟ್
Summary: Actress Trisha Krishnan's statement on actor Vijay has now caused a huge debate on social media. Did Trisha say, "I don't always like that quality of Vijay"? See full updates here

Belagavi News:

ತಮಿಳು ನಟ ದಳಪತಿ ವಿಜಯ್ ರಾಜಕೀಯ ಅಕಾಡದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆನ್ನಲ್ಲೇ, ನಟಿ ತ್ರಿಶಾ ಕೃಷ್ಣನ್ ಹಿಂದೆ ವಿಜಯ್ ಬಗ್ಗೆ ಆಡಿದ್ದ ಮಾತುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಪಿವಿಕೆ ಪಕ್ಷ ೧೦೮ ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ, ಅವರ ವ್ಯಕ್ತಿತ್ವಕ್ಕೆ ಕುರಿತ ಚರ್ಚೆಗಳು ಮತ್ತೆ ಜೋರಾಗಿದೆ.

ಕಾಲಿವುಡ್ ನ ಹಿಟ್ ಜೋಡಿ ಎಂದೇ ಗುರುತಿಸಿಕೊಂಡಿರುವ ವಿಜಯ್ ಮತ್ತು ತ್ರಿಶಾ ಸ್ನೇಹಕ್ಕೆ ಎರಡು ದಶಕಗಳ ಇತಿಹಾಸವಿದೆ. ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿರುವ ಅಭಿಮಾನಿಗಳಲ್ಲಿ ವಿಶೇಷ ಮೆಚ್ಚುಗೆ ಪಡೆದಿದೆ. ಇದೀಗ ವಿಜಯ್ ರಾಜಕೀಯ ಗೆಲುವಿನ ಬೆನ್ನಲ್ಲೇ, ತ್ರಿಶಾ ಹೇಳಿದ್ದ ಹಳೆಯ ಸಂದರ್ಶನದ ವಿಡಿಯೋಗಳು ಮತ್ತೆ ವೈರಲ್ ಆಗುತ್ತಿವೆ.

ಒಂದು ಸಂದರ್ಶನದಲ್ಲಿ ತ್ರಿಶಾ, "ವಿಜಯ್ ತುಂಬಾ ಸೈಲೆಂಟ್ ವ್ಯಕ್ತಿ. ಅವರ ಆ ಮೌನಗುಣ ನನಗೆ ಯಾವಾಗಲೂ ಇಷ್ಟ ಆಗಲ್ಲ. ಆದರೆ ಅದೇ ಅವರ ಶಕ್ತಿ ಕೂಡ" ಎಂದು ಹೇಳಿದ್ದರು. ಅಲ್ಲದೆ ವಿಜಯ್ ಅವರನ್ನು "ಸೈಲೆಂಟ್ ಕಿಲ್ಲರ್" ಎಂದು ವರ್ಣಿಸಿದ್ದ ತ್ರಿಶಾ, ಕಡಿಮೆ ಮಾತನಾಡಿದರು ಕೆಲಸದ ಮೂಲಕ ಎಲ್ಲರ ಗಮನ ಸೆಳೆಯುವ ಗುಣ ಅವರದ್ದು ಎಂದು ಹೇಳಿಕೊಂಡಿದ್ದರು.

Sponsored

ಇದೀಗ ವಿಜಯ್ ಅವರ ರಾಜಕೀಯ ಯಶಸ್ಸಿನ ಬಳಿಕ, ಅವರ ಇದೇ ನಿಗೂಢ ಹಾಗೂ ಮೌನ ವ್ಯಕ್ತಿತ್ವ ಜನರನ್ನು ತಡೆಯಲು ಕಾರಣವಾಗಿದೆಯೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಅಭಿಮಾನಿಗಳು ತ್ರಿಷಾ ಹೇಳಿದ ಮಾತುಗಳನ್ನು ಮತ್ತೆ ಹಂಚಿಕೊಳ್ಳುತ್ತಿದ್ದು, "ವಿಜಯ್ ಯಶಸ್ಸಿನ ಗುಟ್ಟು ಇದೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯ್ ಮತ್ತು ತ್ರಿಶಾ ಸ್ನೇಹ, ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹಾಗೂ ಈಗ ವೈರಲ್ ಆಗಿರುವ ಹೇಳಿಕೆಗಳು ಕಾಲಿವುಡ್ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಕಾಲಿವುಡ್ ಜನಪ್ರಿಯ ಜೋಡಿ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಕುರಿತ ಹಳೆಯ ಸಂದರ್ಶನದ ಒಂದು ಹೇಳಿಕೆ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಪಿವಿಕೆ ಪಕ್ಷದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ತ್ರಿಷಾ ವಿಜಯ್ ಅವರ ವ್ಯಕ್ತಿತ್ವದ ಬಗ್ಗೆ ಹೇಳಿದ್ದ ಮಾತುಗಳು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ವಿಜಯ್ ಮತ್ತು ತ್ರಿಶಾ 'ಗಿಲ್ಲಿ', 'ಕುರುವಿ', 'ಲಿಯೋ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಇಬ್ಬರ ಆನ್ ಸ್ಕ್ರೀನ್ ಕೆಮೆಸ್ಟ್ರಿ ಮಾತ್ರವಲ್ಲ, ಆಫ್ ಸ್ಕ್ರೀನ್ ಸಾಕಷ್ಟು ಬಾರಿ ಸುದ್ದಿಯಾಗಿತ್ತು.

Sponsored

ಹಲವು ವರ್ಷಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ತ್ರಿಶಾ, ವಿಜಯ್ ಅವರಲ್ಲಿ ತಮಗೆ ಇಷ್ಟವಾಗದ ಒಂದು ಗುಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. "ವಿಜಯ್ ಸೆಟ್ ನಲ್ಲಿ ತುಂಬಾ ಸೈಲೆಂಟ್ ಆಗಿರುತ್ತಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಎಲ್ಲರೂ ಹರಟೆ ಹೊಡೆಯುತ್ತಿದ್ದರೆ, ಇವರು ಮಾತ್ರ ಯಾವುದೋ ಮೂಲೆಯಲ್ಲಿ ಗೋಡೆ ಮುಖ ಮಾಡಿ ಗಂಟೆಗಟ್ಟಲೆ ಕುಳಿತಿರುತ್ತಾರೆ. ಆರಂಭದಲ್ಲಿ ಅವರ ಈ ಮೌನ ಸ್ವಭಾವ ನನಗೆ ಅಸಹನಿಯ ಎನಿಸುತ್ತಿತ್ತು. ಅವರ ಬಗ್ಗೆ ತಪ್ಪು ಕಲ್ಪನೆಯೂ ಮೂಡಿಸಿತ್ತು ಎಂದು ತ್ರಿಷಾ ಹೇಳಿಕೊಂಡಿದ್ದರು.

ಆದರೆ ನಂತರ ವಿಜಯ್ ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡ ಬಳಿಕ, ಅವರ ಮೌನವೇ ಅವರ ವಿಶೇಷತೆ ಎಂಬುದು ತಿಳಿಯಿತು ಎಂದು ತ್ರಿಷಾ ಹೇಳಿದ್ದಾರೆ. ಕಡಿಮೆ ಮಾತನಾಡಿ ಕೆಲಸದ ಮೂಲಕ ಎಲ್ಲರ ಗಮನ ಗೆಲ್ಲುವ ಗುಣ ವಿಜಯ್ ಅವರದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ವಿಜಯ್ ರಾಜಕೀಯ ಕ್ಷೇತ್ರದಲ್ಲೂ ದೊಡ್ಡ ಯಶಸ್ಸು ಕಂಡ ಹಿನ್ನೆಲೆ, ಅವರ ಈ ಸೈಲೆಂಟ್ ವ್ಯಕ್ತಿತ್ವವೇ ಜನರನ್ನು ಸೆಳೆದಿದೆಯೇ ಎಂಬ ಚರ್ಚೆ ಅಭಿಮಾನಿಗಳ ನಡುವೆ ಜೋರಾಗಿದೆ. ತ್ರಿಶಾ ಹೇಳಿದ್ದ ಹಳೆಯ ಮಾತುಗಳು ಮತ್ತೆ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.

'ಸೈಲೆಂಟ್ ಕಿಲ್ಲರ್' ವಿಜಯ ಬಗ್ಗೆ ತ್ರಿಶಾ ಹೇಳಿದ್ದ ಮಾತು ವೈರಲ್:

Sponsored

ತಮಿಳು ನಟ ದಳಪತಿ ವಿಜಯ್ ರಾಜಕೀಯ ಅಖಾಡದಲ್ಲಿ ಭರ್ಜರಿ ಸಾಧನೆ ಮಾಡಿದ ಬೆನ್ನಲ್ಲೇ ನಟಿ ತ್ರಿಶಾ ಕೃಷ್ಣನ್ ಈ ಹಿಂದೆ ಹೇಳಿದ್ದ ಮಾತುಗಳು ಮತ್ತೆ ವೈರಲ್ ಆಗಿವೆ. ವಿಜಯ್ ಅವರನ್ನು ಸೈಲೆಂಟ್ ಕಿಲ್ಲರ್ ಎಂದು ಕರೆದಿದ್ದ ತ್ರಿಶಾ, ಅವರು ಏನನ್ನು ಹೇಳದೇ ತಮ್ಮನಿಗೂಡ ಆಕರ್ಷಣೆಯಿಂದ ಎಲ್ಲರನ್ನು ಸೆಳೆಯಬಲ್ಲರು ಎಂದು ಬಣ್ಣಿಸಿದ್ದರು. ಇದೀಗ ಅದೇ ಮಾತುಗಳು ರಾಜಕೀಯ ಬೆಳವಣಿಗೆಗಳ ನಡುವೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡು ರಾಜಕೀಯದಲ್ಲಿ ವಿಜಯ ಅವರ ಟಿವಿಕೆ ಪಕ್ಷ 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೊದಲ ರಾಜಕೀಯ ಪ್ರವೇಶದಲ್ಲೇ ಈ ಮಟ್ಟದ ಯಶಸ್ಸು ಸಾಧಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿಜಯ್ ಅವರ ಮೌನ ಸರಳ ವ್ಯಕ್ತಿತ್ವ, ಮತ್ತು ಜನರನ್ನ ಸೆಳೆಯುವ ಶೈಲಿಯೇ ಈ ಗೆಲುವಿಗೆ ಕಾರಣ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ತ್ರಿಶಾ ಹೇಳಿದಂತೆ, ವಿಜಯ್ ಕಡಿಮೆ ಮಾತನಾಡಿ ತಮ್ಮ ಕೆಲಸದ ಮೂಲಕವೇ ಪ್ರಭಾವ ಬೀರುವ ವ್ಯಕ್ತಿ. ಇದೀಗ ರಾಜಕೀಯದಲ್ಲಿ ಅವರು ಅದೇ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ " ಸೈಲೆಂಟ್ ಆಗಿಯೇ ವಿಜಯ್ ಕ್ರಾಂತಿ ಮಾಡಿದ್ದಾರೆ" ಎಂಬ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಆದರೆ ಬಹುಮತಕ್ಕೆ ಅಗತ್ಯವಿರುವ 118 ಸ್ಥಾನಗಳಿಗಿಂತ ಟಿವಿಕೆ ಪಕ್ಷಕ್ಕೆ ಇನ್ನೂ 10 ಸ್ಥಾನಗಳ ಕೊರತೆ ಇರುವುದರಿಂದ ಸರ್ಕಾರ ರಚನೆ ಬಗ್ಗೆ ಕುತೂಹಲ ಮುಂದುವರೆದಿದೆ. ಈ ಹಿನ್ನೆಲೆ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಅವರು ಪ್ರಮಾಣ ವಚನ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ವಡ್ಡಿದ್ದಾರೆ ಎನ್ನಲಾಗಿದೆ.

Sponsored

ರಾಜಕೀಯ ಬಿಕ್ಕಟ್ಟಿನ ನಡುವೆ ವಿಜಯ್ ಮೌನವಾಗಿಯೇ ಮುಂದಿನ ರಾಜಕೀಯ ಪ್ಲಾನ್ ರೂಪಿಸುತ್ತಿದ್ದಾರಾ ಎಂಬ ಪ್ರಶ್ನೆ ಕೂಡ ಮೂಡಿದೆ. ಅಭಿಮಾನಿಗಳು ಮಾತ್ರ 'ಸೈಲೆಂಟ್ ಕಿಲ್ಲರ್ ಮತ್ತೆ ಮ್ಯಾಜಿಕ್ ಮಾಡಬಹುದು' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Also Read:

Russia -Ukraine War : ಯುದ್ಧದ ಭೀತಿಯಿಂದ ನಿವಾಸ ಬಿಟ್ಟು ಭದ್ರತಾ ವಲಯದಲ್ಲಿ ಪುಟ್ಟಿನ್ ವಾಸ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online