<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ

ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ
Summary: ಅಮೇರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವಾದರೂ ಅದರ ಮೇಲೆ ಆಮದು ಸುಂಕವನ್ನು ಹೆಚ್ಚಿಸಲಾಗುವುದು ಎಂದು ಶ್ವೇತ ಭವನ ತಿಳಿಸಿದೆ. ಇದರಿಂದ ಈ ಕ್ರಮವು ಅಮೆರಿಕಾದ ಅಂತರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ . ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರ ಹಿತಾಸಕ್ತಿಗಳಿಗೆ ಇರಾನ್ ನೀಡುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಆದ ಕಾರಣ ಅಮೆರಿಕ ಇದನ್ನು ನಿಯಂತ್ರಿಸಲು ನಿರಂತರ ಮತ್ತು ತೀವ್ರವಾದ ಪ್ರಕ್ರಿಯೆಯ ಅಗತ್ಯದಿಂದ ಈ ತೀರ್ಮಾನವನ್ನುತೆಗೆದುಕೊಂಡಿದೆ. ಈ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

BELAGAVI NEWS

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರದಂದು ಇರಾನ್ ಜೊತೆ ವ್ಯಾಪಾರ ಮುಂದುವರಿಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಆದೇಶಕ್ಕೆ ಅವರು ಸಹಿ ಹಾಕಿದರು ಎಂದು ಶ್ವೇತ ಭವನ ಹೇಳಿಕೆಯನ್ನು ನೀಡಿದೆ. ವಾಷಿಂಗ್ಟನ್ ಗೆ ಅವಕಾಶ ನೀಡಲಾಗಿದೆ: ಆರ್ಥಿಕ ಸಂಬಂಧಗಳನ್ನು ಯಾರು ಕಾಯ್ದುಕೊಳ್ಳುತ್ತಾರೋ ಆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ವಿಧಿಸಲು ತಿಳಿಸಲಾಗಿದೆ. ಯಾವ ದೇಶಗಳು ಇರಾನಿನ ಪರೋಕ್ಷ ಸರಕು ಅಥವಾ ಸೇವೆಗಳನ್ನು ಖರೀದಿಸುತ್ತದೆ ಮತ್ತು ಆಮದು ಮಾಡಿಕೊಳ್ಳುವ ಅಥವಾ ಪಡೆದುಕೊಳ್ಳುತ್ತವೆಯೋ ಅಂತ ದೇಶಗಳಿಗೆ ಅಮೆರಿಕವು ಹೆಚ್ಚುವರಿ ಸುಂಕವನ್ನು ವಿಧಿಸುತ್ತದೆ ಎಂದು ತಿಳಿಸಿದೆ.

ಪ್ರತೀಕಾರಕ್ಕೆ ಪ್ರತಿಕ್ರಿಯೆಯಾಗಿ ಪರಿಸ್ಥಿತಿಗಳು ಹೇಗೆ ಬದಲಾಗುತ್ತವೆ ಅಥವಾ ಇರಾನ್ ಇಲ್ಲವೇ ಪೀಡಿತ ದೇಶಗಳ ರಾಷ್ಟ್ರದ ಭದ್ರತೆಗಳು ಮತ್ತು ಆರ್ಥಿಕ ವಿಷಯಗಳಲ್ಲಿ ಅಮೆರಿಕಾದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬಂದರೆ ಆಗ ಅಮೆರಿಕಾದ ಅಧ್ಯಕ್ಷರೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಶ್ವೇತ ಭವನ ತಿಳಿಸಿದೆ. ಟೆಹ್ರಾನ್‌ನ ಪರಮಾಣು ಸಾಮರ್ಥ್ಯಗಳ ಅನ್ವೇಷಣೆ, ಭಯೋತ್ಪಾದನೆಗೆ ಬೆಂಬಲ, ಪ್ರಾದೇಶಿಕ ಅಸ್ತಿರತೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿ ಸೇರಿದಂತೆ ಕುರಿತು ಇತರ ವಿಚಾರಗಳ ಬಗ್ಗೆ ತಿಳಿಸಿವೆ.

ದೇಶಿಯ ಅಗತ್ಯಗಳ ಬದಲಿಗೆ ಪರಮಾಣು ಮತ್ತು ಕ್ಷಿಪಣಿ ಕಾರ್ಯಗಳ ಕಡೆಗೆ ಸಂಪನ್ಮೂಲಗಳನ್ನು ಬಳಕೆ ಮಾಡುತ್ತಿವೆ ಮತ್ತು ಇರಾನ್ ಆಡಳಿತವು ಮತ್ತೆ ಮಧ್ಯ ಪ್ರಾಂತ್ಯದಾದ್ಯಂತ ಪ್ರಾಕ್ಸಿ ಉಗ್ರಗಾಮಿ ಗುಂಪುಗಳು ಬೆಂಬಲಿಸುತ್ತಿದೆ. ಇರಾನ್ ನ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.ಡೊನಾಲ್ಡ್ ಟ್ರಂಪ್ ಇರಾನ್ ಪರಮಾಣು ಒಪ್ಪಂದ ಅಮೆರಿಕವನ್ನು ಹಿಂದೆ ಸರಿವಂತೆ ಮಾಡಿದರು ಮತ್ತು ಇರಾನ್ ಮೇಲಿನ ನಿರ್ಬಂಧವನ್ನು ಇನ್ನಷ್ಟು ಹೆಚ್ಚಿಸಿದರು.

Sponsored

ಅಮೆರಿಕವು ಇರಾನಿನ ಕೆಲವು ವಿಷಯಗಳಿಗೆ ನಿರ್ಬಂಧವನ್ನು ಹೇರಿದೆ. ಸೇವಾ ಕಾರ್ಯಾಚರಣೆ, ವಿಮಾನ ರದ್ದತಿ ಮತ್ತು ಸಂವಹನದ ಮೇಲಿನ ರಾಷ್ಟ್ರವಾಪಿ ಮತ್ತು ಇಂಟರ್ನೆಟ್ ಅಡಚಣೆಗಳು ಬಗ್ಗೆ ನಿರ್ಬಂಧವನ್ನು ಹೇರಲಾಗುವುದು ಎಂದು ಅಮೆರಿಕ ಎಚ್ಚರಿಕೆಯನ್ನು ನೀಡಿದೆ. ಇರಾನ್ ನಲ್ಲಿ ವಾಸವಿರುವ ಅಮೆರಿಕಾದ ನಾಗರಿಕರಿಗೆ ಈ ಕ್ಷಣವೇ ಇರಾನ್ ಬಿಟ್ಟು ಹೋಗಬೇಕು ಎಂದು ಸೂಚಿಸಿದೆ. ಸ್ವಿಟ್ಜರ್ಲೆಂಡ್, ಟೆಹ್ರಾನ್ನಲ್ಲಿರುವ ತನ್ನ ರಾಯಭಾರಿ ಕಚೇರಿಯ ಮೂಲಕ, ದೇಶದಲ್ಲಿ ಯುಎಸ್ ಹಿತಾಸಕ್ತಿಗಳಿಗೆ ರಕ್ಷಣಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ದೇಶದಲ್ಲಿ ಯುಎಸ್ ಹಿತಾಸಕ್ತಿಗಳಿಗೆ ರಕ್ಷಣೆ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಲಹಾ ಸಂಸ್ಥೆ ತಿಳಿಸಿದೆ.

ಇದರ ಮೂಲಕ ಅಮೆರಿಕ ಇರಾನ್ಗೆ ಎಚ್ಚರಿಕೆಯನ್ನು ನೀಡಿದೆ. ಶ್ವೇತ ಭವನದ ಪ್ರಕಾರ ಟೆಹ್ರಾನ್ನ ಪರಮಾಣು ಸಾಮರ್ಥ್ಯಗಳ ಅನ್ವೇಷಣೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿ ಮತ್ತು ಭಯೋತ್ಪಾದನೆಗೆ ಬೆಂಬಲ, ಪ್ರಾದೇಶಿಕ ಅಸ್ತಿರತೆ ಸೇರದಂತೆ ಹಲವು ವಿಚಾರಗಳ ಬಗ್ಗೆ ತಿಳಿಸಿವೆ. ವಾಣಿಜ್ಯ ಕಾರ್ಯದರ್ಶಿ ಮತ್ತು ಅಮೆರಿಕ ಸಯುಕ್ತ ಸಂಸ್ಥಾನದ ವ್ಯಾಪಾರದ ಪ್ರತಿನಿಧಿಗೆ ಸುಂಕ ವ್ಯವಸ್ಥೆ ಮತ್ತು ಸಂಬಂಧಿತ ಕ್ರಮಗಳನ್ನು ಜಾರಿಗೆ ತರಲು ಮಾರ್ಗ ಸೂಚಿಯನ್ನು ನೀಡುವುದು ಮತ್ತು ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅಧಿಕಾರವನ್ನು ವಹಿಸಿದೆ. ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಇರಾನ್ ಬೆದರಿಕೆ ಒಡ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಇದನ್ನು ತೆಗೆದು ಹಾಕಲು ತೀವ್ರವಾದ ಪ್ರತಿಕ್ರಿಯೆ ಅಗತ್ಯವಿದೆ ಮತ್ತು ನಿಯಂತ್ರಣ ಮಾಡುವ ಅವಶ್ಯಕತೆ ಇದೆ ಎಂದು ಯುಎಸ್ ಪ್ರತಿಪಾದಿಸಿದೆ.

ಇನ್ನಷ್ಟು ಓದಿರಿ:

ಭಾರತ- ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online