belagavi news :
ಯುನೈಟೆಡ್ ಸ್ಟೇಟ್ಸ್ ಇಂದು ಇರಾನ್ ಎದುರು ಹೊಸ ಕದನ ವಿರಾಮ ಪ್ರಸ್ತಾಪವನ್ನು ಮುಂದಿಟ್ಟಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಅಮೇರಿಕಾದ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಹೆಕ್ಸೆತ್ ಮತ್ತು ಜನರಲ್ ಡಾನ್ ಕೇನ್ ಈ ಸಂದರ್ಭದಲ್ಲೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ನ್ಯೂಸ್ ಮ್ಯಾಕ್ಸ್ ವರದಿಗಾರರು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಎದುರು "ಶರಣಾಗಿದ್ದಾರೆ"ಎಂದು ಈ ರೀತಿ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಟ್ರಂಪ್ 14 ಅಂಶಗಳನ್ನು ಒಳಗೊಂಡ ಕದನ ವಿರಾಮದ ರೂಪ ರೇಖೆಯನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿಯು ಹೊರ ಬಂದಿದೆ. ಈ ಪ್ರಸ್ತಾಪದ ವಿವರಗಳು ಅಧಿಕೃತವಾಗಿ ಬಹಿರಂಗವಾಗಿಲ್ಲದಿದ್ದರೂ, ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಇರಾನ್ ಅಮೇರಿಕಾ ನಡುವಿನ ಈ ಬೆಳವಣಿಗೆ ಅಂತರಾಷ್ಟ್ರೀಯ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ.
ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಎದುರು ಕಠಿಣ ನಿಲುವು ಮತ್ತು ಮಾತುಕತೆ ಎರಡು ಸಮಾಂತರವಾಗಿ ಮುಂದುವರಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಅವರು ಇರಾನ್ ಅನ್ನು"ಮಂಡಿಯೂರುವಂತೆ ಮಾಡಲಾಗಿದೆ"ಎಂದು ಹೇಳಿಕೊಳ್ಳುತ್ತಿದ್ದರು, ಮತ್ತೊಂದೆಡೆ ಶಾಂತಿ ಒಪ್ಪಂದಕ್ಕಾಗಿ ಹೊಸ ಪ್ರಸ್ತಾಪಗಳನ್ನು ಕಳುಹಿಸಿದ್ದು,ಯುದ್ಧವನ್ನು ಅಂತ್ಯಗೊಳಿಸುವುದರ ಜೊತೆಗೆ ಮಹತ್ವದ ಸಮುದ್ರ ಮಾರ್ಗವಾದ ಸ್ಟ್ರೈಟ್ ಆಫ್ ಹಾರ್ಮುಜ್ ಅನ್ನು ತೆರೆಯುವ ಷರತ್ತುಗಳನ್ನು ಅಮೇರಿಕಾ ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಲು ಇರಾನ್ಗೆ 48 ಗಂಟೆಗಳ ಕಾಲಾವಕಾಶಗಳ ನೀಡಿದೆ ತಿಳಿದುಬಂದಿದೆ. ಈ ಗುಡುವ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಗಮನ ಸೆಳೆದಿದ್ದು, ಮುಂದಿನ ಬೆಳವಣಿಗೆಗಳು ಎರಡು ದೇಶಗಳ ಸಂಬಂಧಗಳ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದೆ.
ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಶಾಂತಿ ಮಾತುಕತೆ ಆರಂಭವಾದಾಗಿನಿಂದಲೂ ಇರಾನ್ ತನ್ನ ಪ್ರಮುಖ ಶರತುಗಳಿಂದ ಹಿಂದೆ ಸರಿದಿಲ್ಲ ಎಂಬ ಮಾಹಿತಿ ಹೊರ ಬಂದಿದೆ. ಈ ಹಿನ್ನೆಲೆಯಲ್ಲಿ, ಅಮೆರಿಕ ನೀಡಿದ ಇಂದಿನ ಶಾಂತಿ ಪ್ರಸ್ತಾಪಗಳನ್ನು ಇರಾನ್ ತಿರಸ್ಕರಿಸಿದ್ದರಿಂದ ಈಗಿನ ಹೊಸ 14 ಅಂಶಗಳ ರೂಪರೇಖೆ ಹೆಚ್ಚಿನ ಗಮನ ಸೆಳೆಯುತ್ತಿದೆ. ಈ ಪ್ರಸ್ತಾಪವನ್ನು ಇರಾನ್ ಈಗ ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ. ಮಧ್ಯ ಪ್ರಾಂತ್ಯದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನತೆಯ ನಡುವೆ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಮಹತ್ವ ಪಡೆದುಕೊಂಡಿದೆ
ಇರಾನ್ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾ,"ನ್ಯಾಯಯುತ" ವಾದ ಶರತುಗಳನ್ನು ಮಾತ್ರ ಸ್ವೀಕರಿಸುವುದಾಗಿ ಹೇಳಿದೆ. ಈ ಬೆಳವಣಿಗೆಗಳ ನಡುವೆ, ಎರಡು ದೇಶಗಳು ಸಮಾಧಾನಕರ ಪರಿಹಾರಕ್ಕೆ ಮುಂದಾಗುತ್ತವೆ ಅಥವಾ ಉದ್ಘ್ನತೆ ಮುಂದುವರೆಯುತ್ತದೆ ಎಂಬ ಎಂಬುದರ ಮೇಲೆ ಅಂತಾರಾಷ್ಟ್ರೀಯ ಸಮುದಾಯದ ಕಣ್ಣು ನೆಟ್ಟಿದೆ.
ಅಮೆರಿಕ ಮುಂದಿನ ಎರಡು ದಿನಗಳಲ್ಲಿ ಇರಾನ್ ಪ್ರತಿಕ್ರಿಯೆ ನೀಡುತ್ತದೆ ಎಂದು ನಿರೀಕ್ಷಿಸುತ್ತಿದೆ. ಆದರೆ ಇನ್ನು ಅಂತಿಮ ಒಪ್ಪಂದಕ್ಕೆ ಎರಡು ಕಡೆ ಅವರು ಬಂದಿಲ್ಲ ಎಂದು ವರದಿಯಾಗಿದೆ. ಆಕ್ಸಿಯೋಸ್ ವರದಿಯ ಪ್ರಕಾರ, ಫೆಬ್ರುವರಿ 28ರಂದು ಯುದ್ಧ ಆರಂಭವಾದ ನಂತರ ನಡೆಯುತ್ತಿರುವ ಮಾತುಕತೆಗಳು ಈಗ ಒಂದು ನಿರ್ಣಾಯಕ ಹಂತಕ್ಕೆ ತಲುಪಿರುವಂತೆ ಕಾಣುತ್ತದೆ. ಈ ನಡುವೆ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ ನಲ್ಲಿ ಅವರು, ಟ್ರೆಹಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಹೆಚ್ಚಿನ ಬಾಂಬ್ ದಾಳಿ ನಡೆಸ ಲಾಗುವುದು ಎಂದು ಹೇಳಿದ್ದಾರೆ. ಸ್ಟ್ರೈಟ್ ಆಫ್ ಹಾರ್ಮುಜ್ ಕುರಿತು ಉಲ್ಲೇಖಿಸಿದ ಟ್ರಂಪ್, ಇರಾನ್ ಒಪ್ಪಂದವನ್ನು ಸ್ವೀಕರಿಸುವುದರ ಮೇಲೆ ಯುದ್ಧದ ಅಂತ್ಯ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ."ಅವರು ಒಪ್ಪದಿದ್ದರೆ ಬಾಂಬ ದಾಳಿ ಆರಂಭವಾಗುತ್ತದೆ"ಎಂದು ಅವರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.
Also Read:
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಾಕ್: ಪಶ್ಚಿಮ ಬಂಗಾಳ ಪ್ರತ್ಯೇಕ ರಾಷ್ಟ್ರದ ಬಗ್ಗೆ ಚರ್ಚೆ