<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಯುಎಇ ಪೂಜೈರಾ ಟಾರ್ಗೆಟ್: ಇರಾನ್ ಡ್ರೋನ್ ದಾಳಿ, ಮೂರು ಭಾರತೀಯರಿಗೆ ಗಾಯ

ಯುಎಇ ಪೂಜೈರಾ ಟಾರ್ಗೆಟ್: ಇರಾನ್ ಡ್ರೋನ್ ದಾಳಿ, ಮೂರು ಭಾರತೀಯರಿಗೆ ಗಾಯ
Summary: Peace talks between Iran and the US are not yielding any tangible results. Tensions have further increased as the US has rejected peace proposals put forward by Iran. Amidst this diplomatic stalemate, the situation has taken a serious turn, with Iran reportedly carrying out another drone attack on the UAE.

belagavi news :

ಯುಎಇಯ ಪೂಜೈರಾದ ಪೆಟ್ರೋಲಿಯಂ ಕೈಗಾರಿಕಾ ವಲಯದಲ್ಲಿ ಸೋಮವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂರು ಭಾರತೀಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಇರಾನ್ ನಡೆಸಿದ ಡ್ರೋನ್ ದಾಳಿಯಿಂದ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಯುಎಇ ಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಗಾಯಾಳುಗಳಿಗೆ ಸೂಕ್ತ ಹಾಗೂ ಸಮರ್ಪಕ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದ ದಲ್ಲಿರುವುದಾಗಿ ತಿಳಿಸಿದೆ.

ಡ್ರೋನ್ ದಾಳಿಯ ಪರಿಣಾಮ FOIZ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಪೂಜೈರಾ ನಾಗರಿಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳು ಮುಂದುವರೆದಿರುವುದಾಗಿ ಪೂಜೈರ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಿಪಣಿ ಮತ್ತು ಡ್ರೋನ್ ಗಳನ್ನು ಬಳಸಿಕೊಂಡು ಇರಾನ ನಡೆಸುತ್ತಿರುವ ಪ್ರಚೋದಿತ ದಾಳಿಗಳನ್ನು ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರಕಟಿಸಿದ ಹೇಳಿಕೆಗಳಲ್ಲಿ"ಈ ದಾಳಿಗಳು ಅತ್ಯಂತ ಅಪಾಯಕಾರಿ ಹಾಗೂ ಒಪ್ಪಲಾಗದ ಅಕ್ರಮಣಕಾರಿ ಕೃತ್ಯಗಳಾಗಿವೆ. ಇವು ಯುಎಇಯ ಭದ್ರತೆ, ಸ್ಥಿರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ನೇರ ಬೆದರಿಕೆಯನ್ನು ಉಂಟುಮಾಡುತ್ತವೆ. ಜೊತೆಗೆ ಇವು ಅಂತರಾಷ್ಟ್ರೀಯ ಕಾನೂನುಗಳು ಹಾಗೂ ವಿಶ್ವಸಂಸ್ಥೆಯ ಚಾರ್ಟರ್ ಉಲ್ಲಂಘನೆ" ಎಂದು ಸಚಿವಾಲಯ ತಿಳಿಸಿದೆ.

Sponsored

ತೈಲ ಸ್ಥಾವರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂಜೈರಾಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಖಲೀಜ್ ಟೈಮ್ಸ್ ವರದಿ ಮಾಡಿದೆ. ಇದಕ್ಕೆ ಜೊತೆಯಾಗಿ, ದೇಶದ ವಿವಿಧ ಭಾಗಗಳಲ್ಲಿ ಇರಾನ್ ನಾಲ್ಕು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಯುಎಇಯ ರಕ್ಷಣಾ ಸಚಿವಾಲಯವು ತನ್ನ x ಖಾತೆಯಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ ತಿಳಿಸಿದೆ.

ಇರಾನ್ ಅಮೇರಿಕಾ ಸಂಘರ್ಷದಲ್ಲಿ ಬೆಳವಣಿಗೆಗಳು:

• ಇರಾನ್ ಅಮೆರಿಕ ನಡುವೆ ಮತ್ತೆ ಸಂಘರ್ಷದ ಸಾಧ್ಯತೆ: ಎನ್ ಎನ್ ವರದಿ ಎಚ್ಚರಿಕೆ

• ಹಾರ್ಮುಜ್ ಜಲಸಂದಿ ಮೂಲಕ ಹಡಗುಗಳು ಸುರಕ್ಷಿತವಾಗಿ ಸಾಗಲು ಇರಾನ್ಗೆ ಯಾವುದೇ ರೀತಿಯ ಶುಲ್ಕ ಪಾವತಿಸಿದರೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕವು ಹಡಗು ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.

Sponsored

• ಓಮಾನ್ ಕೊಲ್ಲಿ ಹಾಗೂ ಸುತ್ತಮುತ್ತಲಿನ ಸಮುದ್ರ ಮಾರ್ಗಗಳಲ್ಲಿ ಅಮೆರಿಕಾದ ದಿಗ್ಬಂದನ ಕ್ರಮಗಳಿಂದ ಇರಾನ್ ಗೆ ಸುಮಾರು ನಾಲ್ಕು ಪಾಯಿಂಟ್ ಎಂಟು ಬಿಲಿಯನ್ ಡಾಲರ್ ತೈಲ ಆದಾಯ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಈ ನಷ್ಟವು ಟ್ರೆಹಾನ್ ಮೇಲಿನ ಆರ್ಥಿಕ ಒತ್ತಡವನ್ನು ಗಮನಾರವಾಗಿ ಹೆಚ್ಚಿಸಿದೆ ಎಂದು ಪೆಂಟ್ ಗನ್ ಅಂದಾಜಿಸಿದೆ ಎಂದು ವರದಿಗಳು ಸೂಚಿಸುತ್ತಿವೆ.

• ಇದಕ್ಕೂ ಮೊದಲು ಇರಾನ್ ಮತ್ತು ಅಮೆರಿಕ ನಡುವೆ ಹೊಸ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ ಎಂದು ಇರಾನಿನ ಹಿರಿಯಸೇನಾಧಿಕಾರಿಯೊಬ್ಬರು ತಿಳಿಸಿದರು.

• ಇರಾನ್ ಸಲ್ಲಿಸಿರುವ ಹೊಸ ಶಾಂತಿ ಪ್ರಸ್ತಾವನೆಯನ್ನು ಪರಿಶೀಲಿಸುಲಾಗುವುದು, ಆದರೆ ಅದನ್ನು ಸ್ವೀಕರಿಸುವ ಸಾಧ್ಯತೆ ಕಡಿಮೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

Also Read:

Sponsored

ಇಸ್ರೋ ಆವರಣದಲ್ಲಿ ಡ್ರೋನ್ ಹಾರಾಟ ಪ್ರಕರಣ: ಎಫ್ ಐಆರ್ ದಾಖಲು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online