belagavi news:
ಇರಾನ್ ಮುಂದಿಟ್ಟಿರುವ ಹೊಸ ಶಾಂತಿ ಪ್ರಸ್ತಾಪವನ್ನು ಅಮೆರಿಕ ಸ್ವೀಕರಿಸುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಬ್ಬರು ನಡುವಿನ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವದ ಪಡೆದುಕೊಂಡಿದೆ.
ವೆಸ್ಟ್ ಪಾಮ್ ಬೀಚ್ (ಯುಎಸ್ಎ) : ಇರಾನ್ ಸಲ್ಲಿಸಿರುವ ಹೊಸ ಶಾಂತಿ ಪ್ರಸ್ತಾಪವನ್ನು ಪರಿಶೀಲಿಸಲಾಗುತ್ತದೆ. ಆದರೆ ಅದನ್ನು ಸ್ವೀಕರಿಸುವ ಸಾಧ್ಯತೆ ಕಡಿಮೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ಇದರ ಮಧ್ಯೆ ಇರಾನ್ ಮತ್ತು ಅಮೆರಿಕ ನಡುವಿನ ಹೊಸ ಸಂಘರ್ಷ ಸಂಭವಿಸುವ ಸಾಧ್ಯತೆ ಇದೆ ಎಂದು ಇರಾನ್ ನ ಹಿರಿಯ ಸೈನಿಕ ಅಧಿಕಾರಿ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಟೆಹ್ರಾನ್ 14 ಅಂಶಗಳ ಶಾಂತಿ ಪ್ರಸ್ತಾವನೆ ಸಲ್ಲಿಸಿದೆ ಎಂದು ಇರಾನ್ ನ ತಸ್ನಿಮ ಹಾಗೂ ಫಾರ್ಸ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ ಈ ವರದಿಗಳ ನಂತರವೇ ಟ್ರಂಪ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
ಈ ಪ್ರಸ್ತಾವನೆಯಲ್ಲಿ ಎಲ್ಲ ರಂಗಗಳಲ್ಲಿ ಸಂಘರ್ಷವನ್ನು ಕೊನೆಗೊಳಿಸುವುದು ಹಾಗೂ ಮಹತ್ವದ ಹಾರ್ಮುಜ್ ಜ ಲಸಂದಿಗೆ ಹೊಸ ಚೌಕಟ್ಟನು ಜಾರಿಗೆ ತರುವ ಅಂಶಗಳನ್ನು ಸೇರುವೆ ಎಂದು ತಸ್ಮಿಮ್ ಸುದ್ದಿ ಸಂಸ್ಥೆ ತಿಳಿಸಿದೆ.
ಇರಾನ್ ಕಳುಹಿಸಿರುವ ಶಾಂತಿ ಪ್ರಸ್ತಾಪವನ್ನು ಶೀಘ್ರದಲ್ಲೇ ಪರಿಶೀಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆದರೆ, ಕಳೆದ 47 ವರ್ಷಗಳಲ್ಲಿ ಇರಾನ್ ನ ನಡೆ ಮಾನವೀಯತೆ ಮತ್ತು ಜಗತ್ತಿನ ಹಿತ ಶಕ್ತಿಗಳಿಗೆ ಅನುಕುಲಕರವಾಗಿರಲಿಲ್ಲ ಎಂದು ಟೀಕಿಸಿದ ಅವರು ಈ ಪ್ರಸ್ತಾಪ ಸ್ವೀಕಾರಾರ್ಹವಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ವೇದಿಕೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದು ಇರಾನ್ ಇನ್ನೂ ತನ್ನ ಕ್ರಮಗಳಿಗೆ ತಕ್ಕ ಬೆಲೆ ಪಾವತಿಸಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಫ್ಲೋರಿಡಾದ ವೇಸ್ಟ್ ಫಾರ್ಮ್ ಬೀಚ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದವರು ಇರಾನ್ ತಪ್ಪು ಕ್ರಮಗಳನ್ನು ಕೈಗೊಂಡರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ."ಅವರು ಏನಾದರೂ ತಪ್ಪಾಗಿ ವರ್ತಿಸಿದರೆ ಅದರ ಪರಿಣಾಮಗಳನ್ನು ನೋಡಬೇಕಾಗುತ್ತದೆ ಅದು ಸಂಭವಿಸುವ ಸಾಧ್ಯತೆ ಇದೆ". ಎಂದು ಅವರು ಹೇಳಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಆರಂಭಿಸಿದ ಯುದ್ಧ ಏಪ್ರಿಲ್ ಎಂಟರಿಂದ ಸ್ಥಗಿತಗೊಂಡಿತು ಪಾಕಿಸ್ತಾನದಲ್ಲಿ ನಡೆದ ಒಂದು ಸುತ್ತಿನ ಶಾಂತಿ ಮಾತುಕತೆ ವಿಫಲವಾಗಿದೆ.
ಇರಾನ್ ಮಿಲಿಟರಿಯ ಕೇಂದ್ರ ಕಮಾಂಡನ್ ಹಿರಿಯ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದೀ ಅವರು, ಇರಾನ್ ಮತ್ತು ಅಮೆರಿಕ ನಡುವೆ ಹೊಸ ಸಂಘರ್ಷ ಉಂಟಾಗುವ ಸಾದ್ಯತಿದೆ ಎಂದು ಶನಿವಾರ ಹೇಳಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಯಾವುದೇ ಭರವಸೆಗಳು ಅಥವಾ ಒಪ್ಪಂದಗಳಿಗೆ ಬದ್ಧವಾಗಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ ಎಂದವರು ತಿಳಿಸಿದ್ದಾರೆ ಎಂದು ಫಾರ್ಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ ಟೆಹ್ರಾನ್ ನಲ್ಲಿ ಮಾತನಾಡಿದ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ , ರಾಜ ತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡುವುದು ಅಥವಾ ಮುಖಾಮುಖಿ ವಿಧಾನವನ್ನು ಮುಂದುವರಿಸುವುದು, ಅಮೆರಿಕಾದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. ಇರಾನ್ ಎರಡು ಪರಿಸ್ಥಿತಿಗಳಿಗೆ ಸಿದ್ಧವಾಗಿದೆ ಎನ್ನುವರು ಸ್ಪಷ್ಟಪಡಿಸಿದ್ದಾರೆ.
Also Read:
ಮಂಡ್ಯ ವಿಶ್ವವಿದ್ಯಾಲಯ ವಿವಾದ ತೀವ್ರ : ಸಚಿವರ ವಿರುದ್ಧ ಶಾಸಕ ಕಿಡಿಗಾರಿಕೆ