ವಾಷಿಂಗ್ಟನ್ (ಅಮೆರಿಕ): ಐಸಿಸ್ ಉಗ್ರರ ತಾಣ ಸಿರಿಯಾದ ಮೇಲೆ ಅಮೆರಿಕ ಸೇನೆ ಶನಿವಾರ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದೆ. 35 ಉಗ್ರ ನೆಲೆಗಳ ಮೇಲೆ ನಡೆದ ದಾಳಿಯಲ್ಲಿ ಹಲವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಸೇನೆ ತಿಳಿಸಿದೆ.ವೈಮಾನಿಕ ದಾಳಿಯಲ್ಲಿ ಬಾಂಬ್ಗಳು ಹಲವು ತಾಣಗಳನ್ನು ಉಡೀಸ್ ಮಾಡಿದ ವಿಡಿಯೋವನ್ನು ಸೇನೆಯು ಹಂಚಿಕೊಂಡಿದೆ. ಆದರೆ, ಆ ಸ್ಥಳಗಳು ಯಾವ ಪ್ರದೇಶದಲ್ಲಿವೆ ಎಂಬುದರ ಮಾಹಿತಿ ನೀಡಿಲ್ಲ. ಇದು 'ಆಪರೇಷನ್ ಹಾಕೈ'ನ ಭಾಗ. ಪಾಲ್ಮಿರಾದಲ್ಲಿ ಅಮೆರಿಕ ಮತ್ತು ಸಿರಿಯನ್ ಪಡೆಗಳ ಮೇಲೆ ನಡೆದ ದಾಳಿಗೆ ಪ್ರತೀಕಾರ ಎಂದು ಸೆಂಟ್ರಲ್ ಕಮಾಂಡ್ ಪೋಸ್ಟ್ನಲ್ಲಿ ತಿಳಿಸಿದೆ.ಕಳೆದ ತಿಂಗಳು ಐಸಿಸ್ ಉಗ್ರರು ಮೂವರು ಅಮೆರಿಕನ್ನರನ್ನು ಹತ್ಯೆ ಮಾಡಿದ ಘಟನೆಗೆ ಪ್ರತಿಯಾಗಿ ಈ ದಾಳಿ ಮಾಡಲಾಗಿದೆ ಎಂದು ಅಮೆರಿಕನ್ ಪಡೆಗಳ ಉಸ್ತುವಾಗಿ ಹೊತ್ತಿರುವ ಸೆಂಟ್ರಲ್ ಕಮಾಂಡ್ (CENTCOM) ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ."ನಾವು ಎಂದಿಗೂ ಆ ದಾಳಿಯನ್ನು ಮರೆಯುವುದಿಲ್ಲ ಮತ್ತು ಉಗ್ರವಾದವನ್ನು ಮಣಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ತಿಳಿಸಿದ್ದಾರೆ.
ಜನವರಿ 3 ರಂದು, ಅಮೆರಿಕದ ಜೊತೆಗೆ ಬ್ರಿಟನ್ ಮತ್ತು ಫ್ರಾನ್ಸ್ ಐಸಿಸ್ ಉಗ್ರರ ಭೂಗತ ನೆಲೆಗಳನ್ನು ಗುರಿಯಾಗಿಸಿಕೊಂಡು ಜಂಟಿ ದಾಳಿ ನಡೆಸುವುದಾಗಿ ಘೋಷಿಸಿದವು. ಆ ನೆಲೆಗಳಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಬಳಸುತ್ತಿರಬಹುದು ಎಂದು ತಿಳಿಸಿದ್ದವು.ಇದಕ್ಕೂ ಮೊದಲು ಕಳೆದ ತಿಂಗಳು ಅಮೆರಿಕ ಮತ್ತು ಜೋರ್ಡಾನ್ ಸೇನೆಗಳು ಜಂಟಿಯಾಗಿ ದಾಳಿ ನಡೆಸಿದ್ದವು. ಈ ವೇಳೆ 70 ತಾಣಗಳನ್ನು ನೆಲಸಮ ಮಾಡಲಾಗಿತ್ತು. ಸಿರಿಯನ್ ಯುದ್ಧ ವೀಕ್ಷಣಾಲಯದ ಪ್ರಕಾರ, ಆ ದಾಳಿಯಲ್ಲಿ ಕನಿಷ್ಠ 5 ಐಸಿಸ್ ಉಗ್ರರು ಹತರಾಗಿದ್ದರು. ಅದರಲ್ಲಿ ಒಬ್ಬ ಕಮಾಂಡರ್ ಕೂಡ ಇದ್ದ ಎಂದು ತಿಳಿಸಿದೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯಾದಲ್ಲಿ ಅಮೆರಿಕದ ಸೇನೆಯನ್ನು ಇಡಲು ನಿರಾಕರಿಸಿದ್ದರು. ತಮ್ಮ ಮೊದಲ ಅವಧಿಯಲ್ಲಿ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದ್ದರು. ಆದರೆ, ಅಮೆರಿಕದ ಪಡೆಗಳನ್ನು ದೇಶದಲ್ಲಿಯೇ ಉಳಿಯಲು ಬಿಟ್ಟಿದ್ದರು. ಬಳಿಕ ಸಿಬ್ಬಂದಿ ಸಂಖ್ಯೆಯನ್ನು ಅರ್ಧಕ್ಕೆ ಇಳಿಸುವುದಾಗಿ ತಿಳಿಸಿದ್ದರು. 2025ರ ಜೂನ್ನಲ್ಲಿ ಸಿರಿಯಾಕ್ಕೆ ಅಮೆರಿಕದ ರಾಯಭಾರಿ ಟಾಮ್ ಬರಾಕ್ ಭೇಟಿಯ ಬಳಿಕ ಸಿರಿಯಾದಲ್ಲಿ ತನ್ನ ಸೇನಾ ನೆಲೆಗಳನ್ನು ಒಂದಕ್ಕೆ ಇಳಿಸಲು ನಿರ್ಧರಿಸಿದ್ದರು. ಎಂದು ತಿಳಿಸಿದ್ದಾರೆ.
ಇನ್ನಷ್ಟು ಓದಿರಿ:
ಶತಮಾನೋತ್ಸವ ಆಚರಣೆ : ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾದ ಹೆಣ್ಣುಮಕ್ಕಳ ಶಾಲೆಗೆ ಸಲ್ಮಾನ