ಉಡುಪಿ ಶಿರೂರು ವೇದವರ್ಧನ ಶ್ರೀಗಳ ಮೊದಲ ಪರ್ಯಾಯ ಉತ್ಸವವು ಭಾನುವಾರ ಬೆಳಿಗ್ಗೆ ಉಡುಪಿಯಲ್ಲಿ ಅತಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಈ ಸನ್ನಿಧಾನದಲ್ಲಿ ನಡೆದ ಈ ಭವ್ಯ ಶೋಭಾಯಾತ್ರೆ ನಗರದಲ್ಲಿ ಧಾರ್ಮಿಕ ಸಂಭ್ರಮವನ್ನು ಮೂಡುವಂತೆ ಮಾಡಿತು. ಈ ಐತಿಹಾಸ ಕ್ಷಣಕ್ಕೆ ಸಾಕ್ಷಿಯಾಗಲು ವಿವಿಧ ಜಿಲ್ಲೆಗಳಿಂದ ಭಕ್ತರು ಉಡುಪಿಗೆ ಆಗಮಿಸಿದರು. ವೇದವರ್ಧನ ಶ್ರೀಗಳ ಮೊದಲ ಪರ್ಯಾಯ ಮಹೋತ್ಸವವು ಧಾರ್ಮಿಕ ಸ್ಪರ್ಧೆ, ಸಂಸ್ಕೃತಿ ಹಾಗೂ ಸಾಂಪ್ರದಾಯಗಳ ಅನನ್ಯ ಸಮಾಗಮವಾಗಿ ಎಲ್ಲರ ಗಮನ ಸೆಳೆಯಿತು. ಕಾಪು ದಂಡ ತೀರ್ಥದಲ್ಲಿ ಮಧ್ಯರಾತ್ರಿ ಪುಣ್ಯ ಸ್ನಾನವನ್ನು ಮುಗಿಸಿದ ಯತಿಗಳು ಬಳಿಕ ಪಟ್ಟದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಿಗದಿತ ಸಮಯವಾದ ಬೆಳಿಗ್ಗೆ ೨ :೩೦ ಜೋಡುಕಟ್ಟಿಗೆ ಆಗಮಿಸಿದ ಶ್ರೀಗಳು ಪರಂಪರೆಯಂತೆ ಪರ್ಯಾಯ ಉತ್ಸವದ ವಿಧಾನಗಳನ್ನು ನೆರವೇರಿಸಿದರು. ಅದಾದ ನಂತರ ವೈಭವೋಪೇತ ಮೆರವಣಿಗೆ ಆರಂಭಗೊಂಡಿತು ಕೋರ್ಟ್ ರಸ್ತೆ, ಹಳೆಯ ಡಯಾನ ಸರ್ಕಲ್, ಇಂಡಿಯನ್ ಸರ್ಕಲ್ ಮತ್ತು ತೆಂಕಪೇಟೆ ಮಾರ್ಗದಲ್ಲಿ ರಥ ಬೀದಿಗೆ ಆಗಮಿಸಿತು ಮತ್ತು ಪುರೋಹಿತ ವೇದಘೋಷ ವಾದ್ಯ ಮೇಳಗಳ ನಾದ ಭಕ್ತರ ಜಯ ಘೋಷಗಳು ಅತಿ ವಿಜ್ರಂಭಣೆಯಿಂದ ಶೋಭಾಯಾತ್ರೆಯಲ್ಲಿ ಮೆರಗನ್ನು ನೀಡಿದವು. ಉಡುಪಿಯೊಂದಿಗೆ ರಾಜ್ಯದ ನಾನಾ ಜಿಲ್ಲೆಗಳ ಮೂಲೆ ಮೂಲೆಗಳಲ್ಲಿ ಗಳಿಂದ ಆಗಮಿಸಿದ ಸಾವಿರಾರು ಭಕ್ತರು ಪರ್ಯಾಯದ ಅದ್ದೂರಿ ತನ ಹಾಗೂ ವೈಭವಕ್ಕೆ ಸಾಕ್ಷಿಯಾದರು. ಭಾನುವಾರ ಮುಂಜಾನೆ ಸುಮಾರು 2:30ಕ್ಕೆ ಜೋಳಕಟ್ಟೆಯಿಂದ ಆರಂಭಗೊಂಡ ಪರ್ಯಾಯ ಮೆರವಣಿಗೆ ಸುಮಾರು 2 ಕಿಲೋಮೀಟರ್ ದೂರ ಸಾಗಿ ಐತಿಹಾಸಿಕ ರಥ ಬೀದಿಯಲ್ಲಿ ವಿಜೃಂಭಣೆಯಿಂದ ಪೂರ್ಣಗೊಂಡಿತು. ಮುಂಜಾನೆಯ ಸಮಯವನ್ನು ಲೆಕ್ಕಿಸದೆ ಜನರು ಮೆರವಣಿಗೆ ವೀಕ್ಷಣೆಗೆ ಪ್ರೋತ್ಸಾಹದಿಂದ ರಸ್ತೆಯ ಎರಡು ಕಡೆ ಸೇರಿದ್ದರು. ಶಿರೂರು ವೇದವರ್ಧನ ಶ್ರೀಗಳ ಚೊಚ್ಚಲ ಪರ್ಯಾಯ ಮಹೋತ್ಸವ ದ ಅಂಗವಾಗಿ ನಡೆದ ಈ ಮೆರವಣಿಗೆ ಉಡುಪಿ ಅಲ್ಲೊಂದು ಅದ್ಭುತ ಧಾರ್ಮಿಕ ದೃಶ್ಯವನ್ನು ಸೃಷ್ಟಿಸಿತು ಇದಲ್ಲದೆ ರಸ್ತೆಯ ಇಕ್ಕೆಲಗಳು ಬೃಹತ್ ಕಟ್ಟಡಗಳ, ಮಾಳಿಗೆಗಳು ಕಾಂಪೌಂಡ್, ಗೋಡೆಗಳ ಮೇಲೆಯೂ ಕುರಿತು ಭಕ್ತರು ಪರ್ಯಾಯ ಮೆರವಣಿಗೆಯ ಸೊಬಗನ್ನು ಅತ್ಯಂತ ಖುಷಿಯಿಂದ ವೀಕ್ಷಣೆ ಮಾಡಿದರು. ಉಡುಪಿ ನಗರವೇ ಎಚ್ಚರದಿಂದಿದ್ದು. ಪರಂಪರೆ, ಭಕ್ತಿ ಹಾಗೂ ವೈಭವದ ಅನನ್ಯ ಸಂಗಮವನ್ನು ಸಾಕ್ಷಿಯಾಗಿ ಕಂಡರು. ಮೆರವಣಿಗೆಯಲ್ಲಿ ಚಂಡೆ ಬಳಗ, ಕುಣಿತ ಭಜನೆ, ಗೊರವರ ಕುಣಿತ, ಕೊಂಬು ಕಹಳೆಗಳಿಂದ ಪ್ರದರ್ಶಿಸಲಾದ ಮರಕಾಲು ಕುಣಿತ ,ಗಂಗಲು ನೃತ್ಯ, ನಾಸಿಕ ಬ್ಯಾಂಡ್, ಗೊಂಬೆ ನೃತ್ಯ ಸೇರಿದಂತೆ ವಿವಿಧ ತಂಡ ಕಲಾತಂಡಗಳು ಭಾಗವಹಿಸಿ ವಿಶೇಷ ಆಕರ್ಷಣೆಯಾಗಿದ್ದವು. ಈ ಎಲ್ಲಾ ಪ್ರದೇಶಗಳು ಉಡುಪಿಯ ರಸ್ತೆಗಳ ಜನಪದ. ಪರ್ಯಾಯ ಮೆರವಣಿಗೆಯ ಈ ಅಪರೂಪದ ದೃಶ್ಯವು ಭಕ್ತರ ಮನಸ್ಸಿನಲ್ಲಿ ಶಾಶ್ವತ ಸ್ಮರಣೆಯಾಗಿ ಉಳಿಯುವಂತದ್ದು ಹತ್ತಾರು ಟ್ಯಾಬ್ಲೆಗಳು ಮತ್ತು ಕಲಾತಂಡಗಳೊಂದಿಗೆ ಶಿರೂರು ಮಠಾಧೀಶರಾದ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು ಸೇರಿದಂತೆ ಅಷ್ಟಮಠಗಳ ಯತಿಗಳು ವಾಹನಗಳಲ್ಲಿ ಅಳವಡಿಸಲಾದ ಭವ್ಯ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಪ್ರದರ್ಶನ ದರ್ಶನಕ್ಕಾಗಿ ಸಾವಿರಾರು ಭಕ್ತರು ರಸ್ತೆಗಳ ಎರಡು ಬದಿಗಳಲ್ಲಿ ಸೇರಿದ್ದರು ಮೆರವಣಿಗೆಯಲ್ಲಿ ಉಡುಪಿಯ ಶಾಸಕ ಯಶ್ವಾನ್ ಸುವರ್ಣ, ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ರಘುಪತಿ ಭಟ್ ,ಪ್ರಮೋದ್ ಮಧ್ವರಾಜ, ಕಾಂಗ್ರೆಸ್ ಮುಖಂಡ ಮುನಿಯಾಳು, ಉದಯ್ ಕುಮಾರ್ ಶೆಟ್ಟಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಮತ್ತು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು, ರತ್ನಾಕರ್ ಹೆಗಡೆ. ವೀಣಾ ಶೆಟ್ಟಿ. ನಯನ ಗಣೇಶ್ ಮೊದಲಾದ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳ ಪ್ರಮುಖ ಗಣ್ಯರು ಭಾಗವಹಿಸಿ ಉತ್ಸವಕ್ಕೆ ವಿಶೇಷ ಗೌರವ ನೀಡಿದರು. ಈ ಮೂಲಕ ಶಿರೂರು ವೇದವರ್ಧನ ಶ್ರೀಗಳ ಮೊದಲ ಪರ್ಯಾಯ ಮಹೋತ್ಸವವು ಧಾರ್ಮಿಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಏಕತೆಯ ಪ್ರತೀಕವಾಗಿ ಮೂಡಿ ಬಂದಿತು ಪರ್ಯಾಯ ಮೆರವಣಿಗೆಯ ಈ ವೈಭವವು ಉಡುಪಿ ಅಷ್ಟಮಠ ಪರಂಪರೆಯ ಶ್ರೀಮತ ಸಂಸ್ಕೃತಿಯನ್ನು ಮತ್ತೊಮ್ಮೆ ಪ್ರಸ್ತುತಪಡಿಸಿ ಧಾರ್ಮಿಕ ಉತ್ಸವಕ್ಕೆ ವಿಶೇಷ ಮೆರಗು ತಂದಿತು.ಉಡುಪಿ ಶಿರೂರು ಮಠದ ಶ್ರೀ ಮದರ್ ಜಗದ್ಗುರು ಶಿರೂರು ವೇದವರ್ಧನ ಶ್ರೀಗಳ ಮೊದಲ ಪರ್ಯಾಯ ಉತ್ಸವದ ಶೋಭಾಯಾತ್ರೆ ಅತಿ ವಿಜ್ರಂಭಣೆಯಿಂದ ನಡೆಯಿತು ಆದ್ದರಿಂದ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಒಂದು ಧಾರ್ಮಿಕ ಆಚರಣೆಯಾಯಿತು.
ಇನ್ನಷ್ಟು ಓದಿರಿ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ : ಕಾಂಗ್ರೆಸ್ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ