<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ವೆನೆಜುವೆಲಾ ಭೂಕಂಪ ದುರಂತ : 5,000ಕ್ಕೂ ಹೆಚ್ಚು ಸಾವು ಎನ್ನುವ ವರದಿ - ಡೆಲ್ಸಿ ರೊಡ್ರಿಗಸ್ ಪ್ರತಿಕ್ರಿಯೆ

ವೆನೆಜುವೆಲಾ ಭೂಕಂಪ ದುರಂತ : 5,000ಕ್ಕೂ ಹೆಚ್ಚು ಸಾವು ಎನ್ನುವ ವರದಿ - ಡೆಲ್ಸಿ ರೊಡ್ರಿಗಸ್ ಪ್ರತಿಕ್ರಿಯೆ
Summary: The death toll from the devastating earthquake that struck Venezuela on June 24 has risen to 5,069. The death toll is likely to rise further as rescue operations continue. The earthquake has caused widespread damage and left thousands of people stranded.

BELAGVI NEWS:

ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪ : 5,069ಕ್ಕೆ ಏರಿದ ಸಾವಿನ ಸಂಖ್ಯೆ, IMF ನಿಂದ 346 ಮಿಲಿಯನ್ ಡಾಲರ್ ನೆರವು ಕ್ಯಾರಕಾಸ್: ಕಳೆದ ತಿಂಗಳು ವೆನೇಜುವೆಲಾವನ್ನು ಅಪ್ಪಳಿಸಿದ ಅವಳಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 5,069 ಕ್ಕೆ ಏರಿಕೆಯಾಗಿದೆ ಎಂದು ಹಂಗಾಮಿ ಅಧ್ಯಕ್ಷೇ ಡೆಲ್ಲಿ ರೋಡ್ರಿಗಸ್ ತಿಳಿಸಿದ್ದಾರೆ.

ಅಧ್ಯಕ್ಷೆಯ ಮಾಹಿತಿ ಪ್ರಕಾರ, ಜೂನ್ 24ರಂದು 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ್ದವು. ಈ ಭೂಕಂಪಗಳ ತೀವ್ರ ಪರಿಣಾಮ ಕ್ಯಾರಕಾಸ್ ನ ಉತ್ತರ ಭಾಗದಲ್ಲಿರುವ ಕರಾವಳಿ ರಾಜ್ಯ ಲಾ ಗುಯಿರಾದಲ್ಲಿ ಕಂಡು ಬಂದಿದ್ದು, ವ್ಯಾಪಕ ಪ್ರಮಾಣದ ಹಾನಿ ಉಂಟಾಗಿದೆ.

ಟೆಲಿಗ್ರಾಮ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಡೆಲ್ಸಿ ರೊಡ್ರಿಗಸ್, ಈ ದುರಂತದಲ್ಲಿ 5,069 ಮಂದಿ ಮೃತಪಟ್ಟಿದ್ದು, ಹೆಚ್ಚಿನ ಸಾವು ನೋವುಗಳು ಕರಾವಳಿ ಪ್ರದೇಶಗಳಲ್ಲಿ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಗಾಯಳುಗಳ ಸಂಖ್ಯೆ 16,740 ರಷ್ಟಿದ್ದು , ಬಹುತೇಕ ಗಾಯಾಳುಗಳು ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಬೆಂಬಲವಾಗಿ "ಅಂತರ್ರಾಷ್ಟ್ರೀಯ ಹಣಕಾಸು ನಿಧಿ" ಯಿಂದ ೩೪೬ ಮಿಲಿಯನ್ ಅಮೆರಿಕನ್ ಡಾಲರ್ ನೆರವು ದೊರೆಯಲಿದೆ ಎಂದು ಹಂಗಾಮಿ ಅಧ್ಯಕ್ಷತೆ ತಿಳಿಸಿದ್ದಾರೆ. ಈ ನೆರವನ್ನು ಪುನರ್ವಸತಿ, ಮೂಲಸೌಕರ್ಯಗಳ ದುರಸ್ತಿ ಹಾಗೂ ಪರಿಹಾರ ಕಾರ್ಯಗಳಿಗೆ ಬಳಸಲಾಗುವುದು ಎಂದು ಹೇಳಲಾಗಿದೆ.

ವೆನೆಜುವೆಲಾ ಭೂಕಂಪ ದುರಂತ: 20,000 ಮಂದಿ ಇನ್ನು ಪರಿಹಾರ ಶಿಬಿರಗಳಲ್ಲಿ, ವಿಶ್ವಸಂಸ್ಥೆಯಿಂದ 300 ಮಿಲಿಯನ್ ಡಾಲರ್ ನೆರವು ಕ್ಯಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಅವಳಿ ಭೂಕಂಪದ ಬಳಿಕ ಸಾವಿರಾರು ಕುಟುಂಬಗಳು ಇನ್ನೂ ಸಂಕಷ್ಟದಲ್ಲಿವೆ. ಅಧಿಕೃತ ಮಾಹಿತಿಯ ಪ್ರಕಾರ, ಸುಮಾರು 20 ಸಾವಿರ ಮಂದಿ ನಿರಾಶ್ರಿತರು ಸರ್ಕಾರ ಹಾಗೂ ಪರಿಹಾರ ಸಂಸ್ಥೆಗಳು ಸ್ಥಾಪಿಸಿರುವ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಆದರೆ, ಈ ಶಿಬಿರಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತಾ ಸೌಲಭ್ಯಗಳು ಹಾಗೂ ಸಮರ್ಪಕ ನೈರ್ಮಲ್ಯ ವ್ಯವಸ್ಥೆಗಳ ಕೊರತೆ ಇದೆ ಎಂದು ಆರೋಪಿಗಳು ಕೇಳಿ ಬಂದಿವೆ. ಸಂತ್ರಸ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಮಾನವೀಯ ಸಂಸ್ಥೆಗಳು ಆಗ್ರಹಿಸಿವೆ.

ಭೂಕಂಪದ ಬಳಿಕ ತುರ್ತು ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ವಿಶ್ವಸಂಸ್ಥೆ ಈಗಾಗಲೇ 300 ಮಿಲಿಯನ್ ಅಮೆರಿಕನ್ ಡಾಲರ್ ಮನವಿಯ ನೆರವು ಘೋಷಿಸಿದೆ. ಈ ನೆರವನ್ನು ಆಹಾರ, ವೈದ್ಯಕೀಯ ಸೇವೆ, ತಾತ್ಕಾಲಿಕ ವಸತಿ, ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒದಗಿಸಲಾಗುತ್ತಿದೆ.

ಭೂಕಂಪದಿಂದ ಅಗತ್ಯ ಹೆಚ್ಚು ಹಾನಿಗೊಳಗಾದ ಲಾ ಗುಯಿರಾ ಕರಾವಳಿ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ವರದಿಗಳ ಪ್ರಕಾರ, 800ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿದ್ದವು, 190 ಕಟ್ಟಡಗಳು ಸಂಪೂರ್ಣವಾಗಿ ಕುಸಿದಿವೆ. ರಕ್ಷಣಾ ಮತ್ತು ಪುನರ್ ನಿರ್ಮಾಣ ಕಾರ್ಯಾಚರಣೆಗಳು ಇನ್ನು ಮುಂದುವರಿದಿವೆ.

ವೆನೆಜುವೆಲಾದ ಭೀಕರ ಅವಳಿ ಭೂಕಂಪದ ಬಳಿಕ ಮಾನವೀಯ ದುರಂತದ ಚಿತ್ರಣಗಳು ಇನ್ನು ಮುಂದುವರೆದಿವೆ. ಲಾ ಗುಯಿರಾ ನಗರದ ಪ್ಲಾಯಾ ಗ್ರಾಂಡೆ ಪ್ರದೇಶದಲ್ಲಿ ಸಿರೋ ಒಕಾಂಡೊ ಎಂಬ ವ್ಯಕ್ತಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ತನ್ನ ಪುತ್ರರಿದ್ದ ಸ್ಥಳವನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ. ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದ್ದರು, ತಮ್ಮ ಪ್ರೀತಿ ಪಾತ್ರರಿಗಾಗಿ ಕುಟುಂಬಸ್ಥರು ಇನ್ನೂ ಅವಶೇಷಗಳ ನಡುವೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಜೂನ್ 24ರಂದು ಕ್ಯಾರಕಾಸ್ ನ ಉತ್ತರ ಭಾಗದಲ್ಲಿ ಕೇವಲ ಒಂದು ನಿಮಿಷದ ಅಂತರದಲ್ಲಿ 7.5 ಮತ್ತು 7.2 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿ ಬಾರಿ ಪ್ರಮಾಣದ ಜೀವ ಹಾನಿ ಮತ್ತು ಆಸ್ತಿ ನಷ್ಟ ಉಂಟಾಯಿತು. ರಕ್ಷಣಾ ತಂಡಗಳು ಇನ್ನೂ ಅವಶೇಷಗಳನ್ನು ತೆರವುಗೊಳಿಸಿ ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿವೆ.

ಮೆಕ್ಸಿಕೋ-ಗ್ವಾಟೆಮಾಲಾ ಗಡಿಯಲ್ಲಿ 7.3 ತೀವ್ರತೆಯ ಭೂಕಂಪ: ಮೆಕ್ಸಿಕೋ ನಗರದಲ್ಲಿ ಎಲ್ ಸಾಲ್ವಡಾರ್ ವರೆಗೆ ಕಂಪನದ ಅನುಭವ ಮೆಕ್ಸಿಕೋ: ಮೆಕ್ಸಿಕೋ- ಗ್ವಾಟೆಮಾಲಾ ಗಡಿ ಪ್ರದೇಶದಲ್ಲಿ ಶುಕ್ರವಾರ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಅಕ್ವಿಲ್ಸ್ ಸೆರ್ಡಾನ್ ನಿಂದ ನೈರುತ್ಯಕ್ಕೆ ಸುಮಾರು 48 ಕಿಲೋಮೀಟರ್ ದೂರದಲ್ಲಿತ್ತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಮಾಹಿತಿ ನೀಡಿದೆ.

ದಕ್ಷಿಣ ಮೆಕ್ಸಿಕೋದ ಫೆಸಿಪಿಕ್ ಕರಾವಳಿ ಭಾಗದಲ್ಲಿ ಸಂಭವಿಸಿದ ಈ ಭೂಕಂಪದ ಕಂಪನಿಗಳು ಮೆಕ್ಸಿಕೋ ನಗರದಿಂದ ಎಲ್ ಸಾಲ್ವಡಾರ್ ವರೆಗೆ ಅನುಭವವಾಗಿದೆ. ಭೂಕಂಪದ ತೀವ್ರತೆಯಿಂದ ಜನರಲ್ಲಿ ಆತಂಕ ಉಂಟಾದರೂ, ಸದ್ಯದ ಮಾಹಿತಿಯ ಪ್ರಕಾರ ಯಾವುದೇ ದೊಡ್ಡ ಪ್ರಮಾಣದ ಹಾನಿ ಅಥವಾ ಸಾವು ನೋವುಗಳ ವರದಿ ಲಭ್ಯವಾಗಿಲ್ಲ.

ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ತುರ್ತು ಸೇವೆಗಳ ತಂಡಗಳು ಹಾನಿಯ ಸಾಧ್ಯತೆಗಳ ಬಗ್ಗೆ ನಿಗಾ ವಹಿಸಿವೆ. ಭೂಕಂಪದ ಬಳಿಕ ಪರಿಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online