<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಮೈಸೂರು ಗ್ರಾಮ ಒಂದರಲ್ಲಿ ನೀರಿನ ಹಾಹಾಕಾರ : ಗೋಳೂರು ಹಾಡಿಯಲ್ಲಿ ಜನರ ಅಳಲು ಕೇಳುವವರಿಲ್ಲ

ಮೈಸೂರು ಗ್ರಾಮ ಒಂದರಲ್ಲಿ ನೀರಿನ ಹಾಹಾಕಾರ : ಗೋಳೂರು ಹಾಡಿಯಲ್ಲಿ ಜನರ ಅಳಲು ಕೇಳುವವರಿಲ್ಲ
Summary: The tribals in Golur Hadi in HD Kote taluk of Mysore district are facing a severe drinking water problem. The lack of basic facilities is making life difficult for the people and they have expressed their demand for a clean water system.

Belagavi news:

ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಗೋಳೂರು ಹಾಡಿಯಲ್ಲಿ ಆದಿವಾಸಿಗಳು ತೀವ್ರ ಕುಡಿಯುವ ನೀರಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನೀರಿಗಾಗಿ ಪರದಾಡುತ್ತಿದ್ದಾರೆ. ಈ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನ ಜೀವನ ಅತಂತ್ರವಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಆಕ್ರೋಶ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ತಲೆತಲಾಂತರದಿಂದ ಕಾಡಿನೊಳಗೆ ಜೀವನ ಸಾಗಿಸುತ್ತಿರುವ ಈ ಸಮುದಾಯಕ್ಕೆ ಶುದ್ಧ ಕುಡಿಯುವ ನೀರಿನ ಸೌಲಭ್ಯವೇ ಇಲ್ಲದಂತಾಗಿದೆ. ಹಾಡಿಯ ಜನರು ಗುಂಡಿ ತೋಡಿ ಅದರಲ್ಲಿ ಸೋಸಿ ನಿಂತ ನೀರನ್ನು ಸಂಗ್ರಹಿಸಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆರೋಗ್ಯದ ಅಪಾಯವು ಹೆಚ್ಚಾಗುತ್ತಿದೆ.

ಸ್ಥಳೀಯ ನಿವಾಸಿಗಳು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. "ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ " ಎಂಬುದು ಜನರ ಅರಣ್ಯ ರೋಧನವಾಗಿದೆ.

Sponsored

ವೃದ್ಧೆಯೊಬ್ಬರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ,"ಕೊಳೆ ನೀರಾನೆ ಕುಡಿಯುತ್ತಿದ್ದೇವೆ, ಮಕ್ಕಳು, ಬಾಣಂತಿಯರು ಎಲ್ಲರೂ ಇದೇ ನೀರು ಬಳಸುತ್ತಿದ್ದಾರೆ. ನಮಗೆ ಆರೋಗ್ಯ ಸಮಸ್ಯೆ ಉಂಟಾದರೆ ಯಾರು ನೋಡಿಕೊಳ್ಳುತ್ತಾರೆ?" ಎಂದು ಕಣ್ಣೀರಿನಿಂದ ಪ್ರಶ್ನಿಸುತ್ತಿದ್ದಾರೆ.

ಈ ಪರಿಸ್ಥಿತಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದ್ದು, ತಕ್ಷಣ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹ ಸ್ಥಳೀಯರಿಂದ ಹೆಚ್ಚಾಗುತ್ತಿದೆ. ಸರ್ಕಾರ ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕೆಂಬ ಒತ್ತಾಯ ತೀವ್ರವಾಗಿದೆ.

ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಗೋಳೂರು ಹಾಡಿಯಲ್ಲಿ ಕುಡಿಯುವ ನೀರಿನ ತೀವ್ರ ಸಂಕಷ್ಟ ಮುಂದುವರೆದಿದ್ದು, ಆದಿವಾಸಿಗಳ ಅಳಲು ಹೆಚ್ಚಾಗಿದೆ. ಶುದ್ಧ ನೀರಿನ ಕೊರತೆಯಿಂದ ಜನರು ಹಳ್ಳ ಹಾಗೂ ಹರಿಯುವ ಕೊಳಕು ನೀರನ್ನು ಸಂಗ್ರಹಿಸಿ ಕುಡಿಯುವ ಪರಿಸ್ಥಿತಿ ತಲುಪಿದ್ದಾರೆ.

ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾ,"ಹಳ್ಳದಲ್ಲಿ ನೀರು ತೆಗೆದುಕೊಳ್ಳುವವರು, ಹರಿವ ನೀರನ್ನು ಕೊಡದಲ್ಲಿ ತುಂಬಿಕೊಳ್ಳುವವರು ಇಂತಹ ನೀರು ಕುಡಿದು ನಾವೇ ಜೀವಿಸಬೇಕೆ? ಚುನಾವಣೆ ಬಂದಾಗ ರಾಜಕಾರಣಿಗಳು ಕಾಲಿಗೆ ಬೀಳುತ್ತಾರೆ. ಈಗ ಅವರೆಲ್ಲ ಎಲ್ಲಿದ್ದಾರೆ? ಅಧಿಕಾರಿಗಳು ನಮ್ಮ ಸಮಸ್ಯೆ ಪರಿಹರಿಸಲು ಬರುತ್ತಿಲ್ಲ ಎಂದು ತಮ್ಮ ಸಂಕಷ್ಟವನ್ನು ಹೊರಹಾಕಿದ್ದಾರೆ.

Sponsored

ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮಸ್ಯೆ ಪರಿಹಾರಕ್ಕೆ ಬರುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಆದಿವಾಸಿಗಳ ಜೀವನ ಇನ್ನಷ್ಟು ಕಷ್ಟಕರವಾಗಿದೆ.

ಖಾಸಗಿ ಮಾಧ್ಯಮ ಒಂದರಲ್ಲಿ ಮಾತನಾಡಿದ ಆದಿವಾಸಿ ಮುಖಂಡ ವಿಜಯ್ ಕುಮಾರ್, ಗೋಳೂರು ಹಾಡಿ ಸೇರಿದಂತೆ ಅನೇಕ ಹಾಡಿಗಳಲ್ಲಿ ಇದೇ ಸಮಸ್ಯೆ ಇದೆ. ನಾವು ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದು ಹೇಳಿದರು.

ಈ ಪರಿಸ್ಥಿತಿಯಿಂದಾಗಿ ಗ್ರಾಮಸ್ಥರಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಶುದ್ಧ ಕುಡಿಯುವ ನೀರಿನ ತಕ್ಷಣದ ವ್ಯವಸ್ಥೆಗೆ ಆಗ್ರಹ ಹೆಚ್ಚುತ್ತಿದೆ.

ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಗೋಳೂರು ಹಾಡಿಯಲ್ಲಿರುವ ಜನರು ಕಲುಷಿತ ನೀರನ್ನು ಕುಡಿಯುವ ಪರಿಸ್ಥಿತಿ ಬಂದಿದೆ. ಅದೇ ನೀರನ್ನು ಕುಡಿದರೆ ಮಾತ್ರ ತಾವು ಜೀವಿಸುತ್ತೇವೆ ಎಂಬ ಸಂಕಷ್ಟಕ್ಕೆ ಅವರು ತಲುಪಿದ್ದಾರೆ. ಟೀ ಕುರಿತು ಪರಿಶಿಷ್ಟ ವರ್ಗಗಳ ಅಧಿಕಾರಿ ಮಲ್ಲೇಶ್ ಪ್ರತಿಕ್ರೀಯಿಸಿ, ತಾಲೂಕಿನ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯರಲ್ಲಿ ಶಾಶ್ವತ ಪರಿಹಾರದ ನೀರಿಕ್ಷೆ ಇನ್ನು ಉಳಿದಿದೆ. ಇದೇ ವೇಳೆ ರಾಜ್ಯದಲ್ಲಿ ಕುಡಿಯುವ ನೀರಿನ ಯೋಜನೆಗಳ ಕುರಿತು ದೊಡ್ಡ ಮಟ್ಟದ ಪ್ರಗತಿ ನಡೆಯುತ್ತಿರುವುದಾಗಿ ಸರ್ಕಾರ ಹೇಳಿದೆ. ಕೇಂದ್ರ ಜಲ ಶಕ್ತಿ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯೋಗದಲ್ಲಿ ಜಲಜೀವನ ಮಿಷನ್ 2.0 ಸಂಬಂಧಿತ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

Sponsored

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಹಲವು ಭಾಗಗಳಲ್ಲಿ ನೀರಿನ ಆರ್ಸೆನಿಕ್ ಹಾಗೂ ಫ್ಲೋರೈಡ್ ಮಿಶ್ರಣದ ಸಮಸ್ಯೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ಶುದ್ದ ಕುಡಿಯುವ ನೀರು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಜಲಮೂಲಗಳ ಸುಧಾರಣೆ ಹಾಗೂ ಬೃಹತ್ ನೀರು ಸರಬರಾಜು ವ್ಯವಸ್ಥೆ ಅಭಿವೃದ್ಧಿಗೆ ಸರ್ಕಾರ ವಿಷಯ ಗಮನ ನೀಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಆದರೆ ಮತ್ತೊಂದು ನಡೆ ಗೋಳೂರು ಹಾಡಿ ಅಂತಹ ಅರಣ್ಯ ಪ್ರದೇಶಗಳಲ್ಲಿ ಇನ್ನೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಮುಂದುವರೆದಿರುವುದು ಯೋಜನೆಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಆದಿವಾಸಿಗಳು ಮೂಲ ಸೌಲಭ್ಯಕ್ಕಾಗಿ ಹೋರಾಟ ಮುಂದುವರಿಸುತ್ತಿದ್ದು, ತಕ್ಷಣ ಶಾಶ್ವತ ಪರಿಹಾರ ಅಗತ್ಯವೆಂಬ ಒತ್ತಾಯ ಹೆಚ್ಚಾಗಿದೆ.

ಆದಷ್ಟು ಬೇಗನೆ, ಆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಗೋಳೂರು ಹಾಡಿಯಲ್ಲಿರುವಂತಹ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಿ ಅಲ್ಲಿರುವಂತಹ ಪ್ರತಿಯೊಬ್ಬ ಜನರಿಗೂ ಕೂಡ ನೀರು ಸಿಗುವಂತಾಗಲಿ ಎಂದು ನಾವು ಅಂದರೆ H16 ವಾಹಿನಿಯ ಮೂಲಕ ಸರ್ಕಾರಕ್ಕೆ ಮನವಿಯನ್ನು ಮಾಡುತ್ತಿದ್ದೇವೆ.

Also Read:

Sponsored

ಹವಾಮಾನ ಎಚ್ಚರಿಕೆ : ಮೇ ಮಧ್ಯ ಭಾಗದಲ್ಲಿ ಮುಂಗಾರು ಎಂಟ್ರಿ ಸೂಚನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online