Belagavi news:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಯುಎಇ ಸೇರಿದಂತೆ ಐದು ದೇಶಗಳ ಮಹತ್ವದ ರಾಜತಾಂತ್ರಿಕ ಪ್ರವಾಸವನ್ನು ಆರಂಭಿಸಲಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಮುಂದುವರೆದಿರುವ ಯುದ್ಧದ ಭೀತಿಯ ನಡುವೆಯೇ ಈ ಭೇಟಿ ಅತಂತ್ಯ ಮಹತ್ವ ಪಡೆದಿದೆ.
ಈ ಪ್ರವಾಸದ ಪ್ರಮುಖ ಉದ್ದೇಶಗಳಲ್ಲಿ ಇಂಧನ ಭದ್ರತೆಯನ್ನು ಖಚಿತ ಪಡಿಸಿಕೊಳ್ಳುವುದು, ರಕ್ಷಣಾ ಸಹಕಾರವನ್ನು ವಿಸ್ತರಿಸುವುದು ಹಾಗೂ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವುದು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರ ಈ ಪ್ರವಾಸದಲ್ಲಿ ಇಟಲಿ, ನಾರ್ವೆ, ಸ್ವೀಡನ್ ಮತ್ತು ನೆದರ್ಲ್ಯಾಂಡ್ ಸೇರಿದಂತೆ ಯುರೋಪಿನ ಪ್ರಮುಖ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆಗಳು ನಡೆಯಲಿವೆ. ತಂತ್ರಜ್ಞಾನ ಹೂಡಿಕೆ ಮತ್ತು ಹಸಿರು ಇಂಧನ ಕೇಂದ್ರಗಳಲ್ಲಿ ಸಹಕಾರ ಹೆಚ್ಚಿಸುವ ಸಾಧ್ಯತೆ ಇದೆ.
ಜಾಗತಿಕ ರಾಜಕೀಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಪ್ರವಾಸವನ್ನು ಭಾರತ ತನ್ನ ರಾಜ ತಾಂತ್ರಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ನೋಡಲಾಗುತ್ತಿದೆ.
ನವದೆಹಲಿಯಲ್ಲಿರುವ ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಇದು ದೇಶಗಳ ಮಹತ್ವದ ರಾಜತಾಂತ್ರಿಕ ಪ್ರವಾಸವನ್ನು ಆರಂಭಿಸಲಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮುಂದುವರಿದಿರುವ ಈ ಸಂದರ್ಭದಲ್ಲಿ ಈ ಪ್ರವಾಸವು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಕುತೂಹಲವನ್ನು ಹುಟ್ಟುಹಾಕಿದೆ.
ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಮೋದಿ ಇಂದು ಯುಎಇಗೆ ಭೇಟಿ ನೀಡಲಿದ್ದಾರೆ. ಬಳಿಕ ಅವರು ಕ್ರಮವಾಗಿ ನೆದರ್ಲ್ಯಾಂಡ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ತೆರಳಿಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಭೇಟಿಯ ಮೂಲಕ ಇಂಧನ ಭದ್ರತೆ, ರಕ್ಷಣಾ ಸಹಕಾರ, ಹೂಡಿಕೆ ಹಾಗೂ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ. ಜೊತೆಗೆ ಯುರೋಪಿಯನ್ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷಿಯ ಸಂಬಂಧಗಳನ್ನು ವಿಸ್ತರಿಸುವತ್ತವೂ ಈ ಪ್ರವಾಸ ಗಮನ ಸೆಳೆಯಲಿದೆ.
ಮುಖ್ಯಾಂಶಗಳು;
*ಪ್ರಧಾನಿ ಮೋದಿ ಅವರಿಂದ ಯುಎಇ ಮತ್ತು ನಾಲ್ಕು ಯುರೋಪ್ ರಾಷ್ಟ್ರಗಳ ಐತಿಹಾಸಿಕ ಪ್ರವಾಸ.
*ನಾರ್ವೆಯಲ್ಲಿ ನಡೆಲಿರುವ ಮೂರನೇ ಭಾರತ- ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಮೋದಿ.
*ಇಂಧನ ಭದ್ರತೆ, ರಕ್ಷಣೆ ಮತ್ತು ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷಯ ಬಾಂಧವ್ಯ ವೃದ್ಧಿಗೆ ಆದ್ಯತೆ.
ಯುಎಇ ಭೇಟಿ, ಯಾವುದರ ಕುರಿತು ಚರ್ಚೆ?
ಯುಎಇ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಇತ್ತೀಚಿಗೆ ಫುಜೈರಾದ ಪೆಟ್ರೋಲಿಯಂ ಸಂಕೀರ್ಣದ ಮೇಲೆ ನಡೆದ ದಾಳಿಯನ್ನು ಮೂವರು ಭಾರತೀಯರು ಗಾಯಗೊಂಡಿರುವ ಘಟನೆ ಹಿನ್ನೆಲೆ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಘಟನೆಯ ನಂತರ ಭಾರತ - ಯುಎಇ ನಡುವೆ ಭದ್ರತಾ ಸಹಕಾರದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದೇ ವೇಳೆ, ಯುಎಇ ಒಪೆಕ್ ನಿಂದ ಹೊರ ಬಂದಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತಕ್ಕೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ವಿಷಯವು ಪ್ರಮುಖ ಅಜೆಂಡಾದಲ್ಲಿದೆ ಎಂದು ಹೇಳಲಾಗುತ್ತಿದೆ.
ಇಂಧನ ಭದ್ರತೆ, ವ್ಯಾಪಾರ ಸಂಬಂಧಗಳ ವಿಸ್ತರಣೆ ಹಾಗೂ ಪ್ರಾದೇಶಿಕ ಸ್ಥಿರತೆ ಕುರಿತಂತೆ ಉಭಯ ನಾಯಕರು ಮಹತ್ವದ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ಯುರೋಪ್ ರಾಷ್ಟ್ರಗಳ ಪ್ರವಾಸದ ಮುಖ್ಯಾಂಶಗಳು;
ನೆದರ್ಲ್ಯಾಂಡ್ಸ್ (ಮೇ 15-17) : ಪ್ರಧಾನಿ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ ಮೋದಿ ಅಲ್ಲಿನ ರಾಜ ವಿಲ್ಲೆಮ್ - ಅಲೆಕ್ಸಾಂಡರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಭಾರತ ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ (FTA) ಬಗ್ಗೆ ಚರ್ಚೆ ನಡೆಯಲಿದೆ.
ಸ್ವೀಡನ್ (ಮೇ 17): ಗೊಥೆನ್ ಬರ್ಗ್ ನಲ್ಲಿ ಸ್ವೀಡನ್ ಪ್ರಧಾನಿ ಅವರೊಂದಿಗೆ ವ್ಯಾಪಾರ, ಹಸಿರು ತಂತ್ರಜ್ಞಾನ ಮತ್ತು AI ಕುರಿತು ಮೋದಿ ಮಾತು ಕತೆ ನಡೆಸಲಿದ್ದಾರೆ. ಅಲ್ಲದೆ, 'ಯುರೋಪಿಯನ್ ರೌಂಡ್ ಟೇಬಲ್ ಫಾರ್ ಇಂಡಸ್ಟ್ರಿ ' ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಾರ್ವೆ (ಮೇ 18-19): ಕಳೆದ ನಾಲ್ಕು ದಶಕಗಳಲ್ಲಿ ನಾರ್ವೆಗೆ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಓಸ್ಲೋದಲ್ಲಿ ನಡೆಯಲಿರುವ 3ನೇ ಭಾರತ - ನಾರ್ಡಿಕ್ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಬ್ಲೂ ಎಕಾನಮಿ ( ಸಮುದ್ರ ಚಟುವಟಿಕೆಗಳ ಕುರಿತ ಆರ್ಥಿಕತೆ) ಮತ್ತು ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಇಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಇಟಲಿ (ಮೇ 19 - 20): ಪ್ರವಾಸದ ಅಂತಿಮ ಹಂತವಾಗಿ ರೋಮ್ ಗೆ ಭೇಟಿ ನೀಡಲಿರುವ ಮೋದಿ, ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷಿಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ( FAO) ಪ್ರಧಾನ ಕಚೇರಿ ಅವರ ಭೇಟಿ ನೀಡಲಿದ್ದಾರೆ.
ವ್ಯಾಪಾರ ಮತ್ತು ರಕ್ಷಣೆ:
ಈ ಇಡೀ ಪ್ರವಾಸದ ಪ್ರಮುಖ ಉದ್ದೇಶವ ರಕ್ಷಣೆ ತಂತ್ರಜ್ಞಾನ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವುದಾಗಿದೆ.
2025ರಲ್ಲಿ ಸಹಿ ಹಾಕಲಾದ ಭಾರತ EFTA TEPA ಒಪ್ಪಂದದ ನಂತರ ನಡೆಯುತ್ತಿರುವ ಈ ಮಹತ್ವದ ರಾಜತಾಂತ್ರಿಕ ಪ್ರವಾಸವು ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವುದರ ಜೊತೆಗೆ ಹೂಡಿಕೆ ಅವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆಯನ್ನು ಮೂಡಿಸಿದೆ.
ಈ ಒಪ್ಪಂದದ ಅನುಷ್ಠಾನದಿಂದ ಭಾರತದ ಆರ್ಥಿಕತೆಗೆ ಹೊಸ ವೇಗ ದೊರೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಜೊತೆಗೆ ಯುರೋಪಿಯನ್ ರಾಷ್ಟ್ರಗಳೊಂದಿಗೆ ತಂತ್ರಜ್ಞಾನ ವಿನಿಮಯ ಮತ್ತು ರಕ್ಷಣಾ ಸಹಕಾರವು ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ಇದೆ.
Also Read:
NEET Re-Exam Date Announced: ಜೂನ್ 21ರಂದು ಮರು ಪರೀಕ್ಷೆ